ಲೋಕಸಭಾ ಚುನಾವಣೆ/ ಮಣಿಪುರದಲ್ಲಿ ಚುನಾವಣಾ ನಡೆಸುವುದು ಆಯೋಗಕ್ಕೆ ಸವಾಲು
ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯನ್ನು ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸುಸೂತ್ರವಾಗಿ ಆಯೋಜಿಸುವುದು ಚುನಾವಣಾ ಆಯೋಗಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ‘ಸ್ಥಳಾಂತರಗೊಂಡ 24,500ಕ್ಕೂ ಹೆಚ್ಚು ಜನರು ಮತದಾನದ ಹಕ್ಕಿಗೆ ಅರ್ಹರಾಗಿದ್ದಾರೆ. ಅವರಿಗೆ ಆಶ್ರಯ ಶಿಬಿರಗಳಿಂದಲೇ ತಮ್ಮ ಮತದಾನದ ಹಕ್ಕು ಚಲಾಯಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ’ ಎಂದು ಮುಖ್ಯ ಚುನಾವಣಾಧಿಕಾರಿ ಪ್ರದೀಪ್ ಕುಮಾರ್ ಝಾ ತಿಳಿಸಿದ್ದಾರೆ. ಲೋಕಸಭೆ ಚುನಾವಣೆಗಾಗಿ ರಾಜ್ಯದಲ್ಲಿ ಒಟ್ಟು 2,955 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇವುಗಳಲ್ಲಿ ಶೇ 50ರಷ್ಟು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಸ್ಥಳಾಂತರಗೊಂಡ ಜನರಿಗೆ ಮತದಾನ […]
ಲೋಕಸಭಾ ಚುನಾವಣೆ/ ಮಣಿಪುರದಲ್ಲಿ ಚುನಾವಣಾ ನಡೆಸುವುದು ಆಯೋಗಕ್ಕೆ ಸವಾಲು Read More »










