ರಾಷ್ಟ್ರೀಯ

ಬಾಂಗ್ಲಾಕ್ಕೆ ಮರಳುವುದಾಗಿ ಘೋಷಿಸಿದ ಶೇಕ್ ಹಸೀನಾ

ಸಮಗ್ರ ನ್ಯೂಸ್: ಬಾಂಗ್ಲಾದೇಶದ ಮಾಜಿ ಪ್ರಧಾನಮಂತ್ರಿ ಶೇಖ್ ಹಸೀನಾ ಅವರು ತಮ್ಮ ಪ್ರಾಣ ಉಳಿಸಿಕೊಳ್ಳಲು ಆಗಸ್ಟ್ 5. 2024 ರಂದು ಭಾರತಕ್ಕೆ ಆಗಮಿಸಿದ್ದರು. ಅಂದಿನಿಂದ ಅವರು ಭಾರತದಲ್ಲೇ ನೆಲೆಸಿದ್ದಾರೆ. ಆದರೆ, ಈಗ ತಾವು ಮತ್ತೆ ತಾಯ್ನಾಡಿಗೆ ಮರಳುವುದಾಗಿ ಸ್ವತಃ ಘೋಷಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳನ್ನು ಕಟುವಾಗಿ ಟೀಕಿಸಿದ ಅವರು, ತಮ್ಮ ‘ಆವಾಮಿ ಲೀಗ್’ ಪಕ್ಷಕ್ಕೆ ಆಗಿರುವ ಅನ್ಯಾಯದ ಬಗ್ಗೆಯೂ ಧ್ವನಿ ಎತ್ತಿದ್ದಾರೆ. ಢಾಕಾದಲ್ಲಿ ನಡೆದ ಆವಾಮಿ ಲೀಗ್ ಪಕ್ಷದ ಕೆಲವು ನಾಯಕರ ಸಭೆಯಲ್ಲಿ ಹಸೀನಾ ಅವರು […]

ಬಾಂಗ್ಲಾಕ್ಕೆ ಮರಳುವುದಾಗಿ ಘೋಷಿಸಿದ ಶೇಕ್ ಹಸೀನಾ Read More »

ರಿಚಾರ್ಜ್ ಮುಗಿದರೆ ಇನ್ ಕಮಿಂಗ್ ಕಾಲ್ ಕಟ್ ಯಾಕೆ? ಸಂಸದ ರಾಘವ್ ಚಡ್ಡಾ ಪ್ರಶ್ನೆಗೆ ಭಾರೀ ಬೆಂಬಲ

ಸಮಗ್ರ ನ್ಯೂಸ್: ಮೊಬೈಲ್ ಡೇಟಾ, ರೀಚಾರ್ಜ್ ಬೆಲೆ ದುಬಾರಿಯಾಗಿದೆ. ಇಷ್ಟೇ ಅಲ್ಲ ಉಚಿತವಾಗಿ ನೀಡಿದ ಎಲ್ಲಾ ಯೋಜನೆಗಳ ಅಸಲು ಬಡ್ಡಿಯನ್ನು ಟೆಲಿಕಾಂ ಕಂಪನಿಗಳು ಮರಳಿ ಪಡೆಯುತ್ತಿದೆ. ಈ ಪೈಕಿ ರೀಚಾರ್ಜ್ ಮಾಡದಿದ್ದರೆ,ಅದೇ ದಿನ ಔಟ್‌ಗೋಯಿಂಗ್ ಕಾಲ್ ಮಾತ್ರವಲ್ಲ ಇನ್‌ಕಮಿಂಗ್ ಕೂಡ ಕಡಿತಗೊಳ್ಳುತ್ತಿದೆ. ಇದರ ವಿರುದ್ದ ಆಪ್ ಸಂಸದ ರಾಘವ್ ಚಡ್ಡಾ ಗಮನಸೆಳೆದಿದ್ದಾರೆ.  ಟೆಲಿಕಾಂ ಆಪರೇಟರ್ ವಿರುದ್ದ ರಾಘವ್ ಚಡ್ಡ ಸಂಸತ್ತಿನಲ್ಲಿ ಎತ್ತಿದ್ದಾರೆ. ಹಲವರು ತಮ್ಮ ಅಗತ್ಯದ ಸಂವಹನಕ್ಕಾಗಿ, ಉದ್ಯೋಗದ ಕಾರಣದಿಂದ ಮೊಬೈಲ್ ಬಳಸುತ್ತಾರೆ. ಬಡವರು ಹಲವು ಬಾರಿ

ರಿಚಾರ್ಜ್ ಮುಗಿದರೆ ಇನ್ ಕಮಿಂಗ್ ಕಾಲ್ ಕಟ್ ಯಾಕೆ? ಸಂಸದ ರಾಘವ್ ಚಡ್ಡಾ ಪ್ರಶ್ನೆಗೆ ಭಾರೀ ಬೆಂಬಲ Read More »

ಭಾರೀ ಕುಸಿತ ಕಾಣಲಿದೆಯಾ ಬಂಗಾರದ ದರ? ಇಲ್ಲಿದೆ ಆಭರಣ ಪ್ರಿಯರಿಗಾಗಿ ಗುಡ್ ನ್ಯೂಸ್!!

ಸಮಗ್ರ ನ್ಯೂಸ್: ಅನಿಶ್ಚಿತ ಪರಿಸ್ಥಿತಿಯ ನಡುವೆಯೇ, ಮುಂದಿನ ದಿನಗಳಲ್ಲಿ ಚಿನ್ನ ಖರೀದಿಸಬೇಕೆಂದು ಕೊಂಡವರಿಗೆ ನೆಮ್ಮದಿ ಸುದ್ದಿ ಸಿಕ್ಕಿದೆ. ಬಂಗಾರದ ದರವು ಎಂಟು ಗ್ರಾಂಗೆ 80,000 ರೂ.ಗಿಂತಲೂ ಕಡಿಮೆ ಆಗಲಿದೆ. ಇಂದು ಫೆಬ್ರವರಿ 17ರಂದು 22ಕ್ಯಾರಟ್ ಎಂಟು ಗ್ರಾಂ ದರ 1,13,080 ರೂಪಾಯಿ ಹಾಗೂ 24 ಕ್ಯಾರಟ್ ಚಿನ್ನದ 8 ಗ್ರಾಂ ಬೆಲೆ 1,23,360 ರೂಪಾಯಿ ಇದೆ. ಇದು ದಾಖಲೆಯ ಹಂತದಲ್ಲಿ ಇಳಿಕೆ ಆಗಲಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ. ಇದು ಖರೀದಾರರಿಗೆ ಖುಷಿ ತಂದರೆ, ಹೂಡಿಕೆದಾರರನ್ನು

ಭಾರೀ ಕುಸಿತ ಕಾಣಲಿದೆಯಾ ಬಂಗಾರದ ದರ? ಇಲ್ಲಿದೆ ಆಭರಣ ಪ್ರಿಯರಿಗಾಗಿ ಗುಡ್ ನ್ಯೂಸ್!! Read More »

ಪುಲ್ವಾಮಾ ದಾಳಿ; ಮರೆಯಲಾಗದ ದುರ್ಘಟನೆಗೆ ಏಳು ವರ್ಷ

ಸಮಗ್ರ ನ್ಯೂಸ್: 2019ರ ಫೆಬ್ರವರಿ 14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೇತಾಪೋರಾ ಪ್ರದೇಶದಲ್ಲಿ ನಡೆದ ಭೀಕರ ಆತ್ಮಾಹುತಿ ಬಾಂಬ್ ದಾಳಿ ಭಾರತವನ್ನು ದುಃಖದ ಸಾಗರದಲ್ಲಿ ಮುಳುಗಿಸಿತು. ಈ ದಾಳಿಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಯ 40 ಯೋಧರು ಹುತಾತ್ಮರಾದರು. ಏಳು ವರ್ಷಗಳು ಕಳೆದರೂ ಆ ದಿನದ ಕಹಿ ನೆನಪು ಭಾರತೀಯರ ಮನಸ್ಸಿನಲ್ಲಿ ಇನ್ನೂ ಹಚ್ಚಹಳಿಯದೇ ಉಳಿದಿದೆ. ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್‌ಪಿಎಫ್ ಯೋಧರ ಕಾಫಿಲಾ ಮೇಲೆ ಸ್ಫೋಟಕಗಳಿಂದ ತುಂಬಿದ ವಾಹನವನ್ನು ಡಿಕ್ಕಿ ಹೊಡೆಸಿ

ಪುಲ್ವಾಮಾ ದಾಳಿ; ಮರೆಯಲಾಗದ ದುರ್ಘಟನೆಗೆ ಏಳು ವರ್ಷ Read More »

ಪುಟಿದೆದ್ದ ಷೇರು ಮಾರುಕಟ್ಟೆ| ಸೆನ್ಸೆಕ್ಸ್, ನಿಪ್ಟಿ ಸೂಚ್ಯಂಕ ಭಾರೀ ಏರಿಕೆ

ಸಮಗ್ರ ನ್ಯೂಸ್: ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಸ್ಪಷ್ಟತೆ, ಬೆಂಬಲಿತ ದೇಶೀಯ ಅಂಶಗಳು ಮತ್ತು ಸಕಾರಾತ್ಮಕ ಜಾಗತಿಕ ಸೂಚನೆಗಳಿಂದ ಪ್ರೇರಿತವಾದ ಭಾವನೆಯನ್ನು ಸುಧಾರಿಸಲು ತಜ್ಞರು ಸೂಚಿಸಿದ್ದರಿಂದ ದೇಶೀಯ ಈಕ್ವಿಟಿ ಮಾರುಕಟ್ಟೆಗಳು ಸೋಮವಾರ ಪ್ರಬಲವಾಗಿ ಪ್ರಾರಂಭವಾದವು. ನಿಫ್ಟಿ 50 ಸೂಚ್ಯಂಕವು 195 ಪಾಯಿಂಟ್ ಅಥವಾ ಶೇಕಡಾ 0.76 ರಷ್ಟು ಏರಿಕೆಯೊಂದಿಗೆ 25,888.70 ಕ್ಕೆ ಪ್ರಾರಂಭವಾದರೆ, ಬಿಎಸ್‌ಇ ಸೆನ್ಸೆಕ್ಸ್ 597.11 ಪಾಯಿಂಟ್ ಅಥವಾ ಶೇಕಡಾ 0.71 ರಷ್ಟು ಏರಿಕೆಯೊಂದಿಗೆ 84,177.51 ಕ್ಕೆ ಪ್ರಾರಂಭವಾಯಿತು. ಅಜಯ್ ಬಗ್ಗಾ ಎಎನ್‌ಐಗೆ ಮಾತನಾಡಿ, “ಕಳೆದ ವರ್ಷದಿಂದ

ಪುಟಿದೆದ್ದ ಷೇರು ಮಾರುಕಟ್ಟೆ| ಸೆನ್ಸೆಕ್ಸ್, ನಿಪ್ಟಿ ಸೂಚ್ಯಂಕ ಭಾರೀ ಏರಿಕೆ Read More »

ಪ್ರಧಾನಿ ಮೇಲೆ ದಾಳಿಗೆ ಕಾಂಗ್ರೆಸ್ ಸಂಚು| ಲೋಕಸಭಾ ಸಚಿವಾಲಯದಿಂದ ಸ್ಪೋಟಕ ಹೇಳಿಕೆ

ಸಮಗ್ರ ನ್ಯೂಸ್: ಸಂಸತ್ತಿನ ಬಜೆಟ್ ಅಧಿವೇಶನದ ಏಳನೇ ದಿನದಂದು ಅಭೂತಪೂರ್ವ ಮತ್ತು ಆಘಾತಕಾರಿ ಘಟನೆಯೊಂದು ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದಾಳಿ ಮಾಡಲು ವಿರೋಧ ಪಕ್ಷಗಳು ಸಂಚು ರೂಪಿಸಿದ್ದವು ಎಂದು ಲೋಕಸಭಾ ಸಚಿವಾಲಯ (Lok Sabha Secretariat) ಸ್ಫೋಟಕ ಹೇಳಿಕೆ ನೀಡಿದೆ. ವಿರೋಧ ಪಕ್ಷದ ಮಹಿಳಾ ಸಂಸದರು ಒಟ್ಟಾಗಿ ಪ್ರಧಾನಿ ಮೋದಿ ಅವರ ಕುರ್ಚಿಯನ್ನು ಮುತ್ತಿಗೆ ಹಾಕಿ ದಾಳಿ ಮಾಡಲು ಯೋಜಿಸಿದ್ದರು ಎಂದು ಸಚಿವಾಲಯ ತಿಳಿಸಿದೆ. ಈ ಪಿತೂರಿಯಲ್ಲಿ ಮಹಿಳಾ ಸದಸ್ಯರನ್ನು ‘ಗುರಾಣಿ’ಯಾಗಿ ಬಳಸಿಕೊಳ್ಳಲಾಗಿತ್ತು

ಪ್ರಧಾನಿ ಮೇಲೆ ದಾಳಿಗೆ ಕಾಂಗ್ರೆಸ್ ಸಂಚು| ಲೋಕಸಭಾ ಸಚಿವಾಲಯದಿಂದ ಸ್ಪೋಟಕ ಹೇಳಿಕೆ Read More »

ಕೇಂದ್ರ ಬಜೆಟ್ 2026| ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಫುಲ್ ಡೀಟೇಲ್ಸ್…

ಸಮಗ್ರ ನ್ಯೂಸ್: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026ರ ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಹಲವು ಸಿಹಿ ಸುದ್ದಿಗಳು ಸಿಕ್ಕಿವೆ. ಮುಖ್ಯವಾಗಿ ‘ಮೇಕ್ ಇನ್ ಇಂಡಿಯಾ’ಗೆ ಒತ್ತು ನೀಡುವ ಮೂಲಕ ಎಲೆಕ್ಟ್ರಾನಿಕ್ಸ್ ಮತ್ತು ಔಷಧಿಗಳ ಬೆಲೆಯನ್ನು ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಏಪ್ರಿಲ್ 1, 2026 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಗೆ ಬರಲಿದ್ದು, ಮದ್ಯದ ಬೆಲೆ ಏರಿಕೆಯಾಗಲಿದೆ.ತೆರಿಗೆಗೆ ಸಂಬಂಧಿಸಿದಂತೆ ಯಾವುದೇ ದೊಡ್ಡ ರಿಯಾಯಿತಿ ಅಥವಾ ವಿಶೇಷ ಘೋಷಣೆಗಳನ್ನು ಮಾಡಿಲ್ಲ.ಕೃಷಿಯಿಂದ ಹಿಡಿದು ರಕ್ಷಣಾ

ಕೇಂದ್ರ ಬಜೆಟ್ 2026| ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಫುಲ್ ಡೀಟೇಲ್ಸ್… Read More »

ಯುಜಿಸಿ ಹೊಸ ನಿಯಮಾವಳಿಗಳಿಗೆ ಸುಪ್ರೀಂ ತಡೆ

ಸಮಗ್ರ ನ್ಯೂಸ್: ಸುಪ್ರೀಂ ಕೋರ್ಟ್ ವಿಶ್ವವಿದ್ಯಾಲಯ ಅನುದಾನ ಆಯೋಗದ (UGC) ನಿಯಮಗಳನ್ನು ತಾತ್ಕಾಲಿಕವಾಗಿ ತಡೆಹಿಡಿದಿದೆ. ಈ ನಿಯಮಾವಳಿಯನ್ನು ಜನವರಿ 23, 2026ರಂದು ಹೊರಡಿಸಲಾಗಿತ್ತು. ಇದನ್ನು ಹಲವು ಅರ್ಜಿದಾರರು ಪ್ರಶ್ನಿಸಿದ್ದರು. ನಿಯಮಾವಳಿ ಅನಿಯಂತ್ರಿತ, ಹೊರಗಿಡುವ, ತಾರತಮ್ಯವಾಗಿದೆ. ಜೊತೆಗೆ ಭಾರತದ ಸಂವಿಧಾನ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗ ಕಾಯ್ದೆ, 1956ರ ವಿಧಿಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ವಾದಗಳನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್‌, ಅಂತಿಮ ತೀರ್ಪು ಹೊರಬರುವವರೆಗೆ ಈ ನಿಯಮಾವಳಿಯ ಜಾರಿಗೆ ತಡೆ ನೀಡುವಂತೆ ಮಹತ್ವದ ಆದೇಶ ಹೊರಡಿಸಿದೆ.

ಯುಜಿಸಿ ಹೊಸ ನಿಯಮಾವಳಿಗಳಿಗೆ ಸುಪ್ರೀಂ ತಡೆ Read More »

ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಪತನ| ಡಿಸಿಎಂ ಅಜಿತ್ ಪವಾರ್ ಸೇರಿ 6 ಮಂದಿ‌ ದುರ್ಮರಣ

ಸಮಗ್ರ ನ್ಯೂಸ್: ಮಹಾರಾಷ್ಟ್ರದಲ್ಲಿ ಖಾಸಗಿ ವಿಮಾನ ಪತನಗೊಂಡು, DCM ‘ಅಜಿತ್ ಪವಾರ್’ ಸೇರಿ 6 ಮಂದಿ ದುರ್ಮರಣಕ್ಕೀಡಾಗಿದ್ದಾರೆ ಎಂದು ತಿಳಿದು ಬಂದಿದೆ.ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ (ಹೆಲಿಕಾಪ್ಟರ್) ಅಪಘಾತಕ್ಕೀಡಾಗಿರುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಬಾರಾಮತಿ ಕ್ಷೇತ್ರದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗುವ ಸಮಯದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.ಅಪಘಾತದ ತೀವ್ರತೆಗೆ ಸ್ಥಳದಲ್ಲಿ ಭಾರಿ ಪ್ರಮಾಣದ ಬೆಂಕಿ ಮತ್ತು ದಟ್ಟವಾದ ಹೊಗೆ ಆವರಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮುಂಬೈನಿಂದ ವಿಮಾನ ಹಾರಿದ ಒಂದು

ಮಹಾರಾಷ್ಟ್ರದ ಬಾರಾಮತಿಯಲ್ಲಿ ವಿಮಾನ ಪತನ| ಡಿಸಿಎಂ ಅಜಿತ್ ಪವಾರ್ ಸೇರಿ 6 ಮಂದಿ‌ ದುರ್ಮರಣ Read More »

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನ| ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ

ಸಮಗ್ರ ನ್ಯೂಸ್: ಮಹಾರಾಷ್ಟ್ರದ ಬಾರಾಮತಿಯಲ್ಲಿ ಬುಧವಾರ ಬೆಳಿಗ್ಗೆ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ ಮಹಾರಾಷ್ಟ್ರ DCM ಅಜಿತ್ ಪವಾರ್ ಇದ್ದರು ಎಂದು ವರದಿಯಾಗಿದೆ. ಅಪಘಾತದ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿವೆ. ವಿಮಾನದಲ್ಲಿರುವ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ವೀಕರಿಸಿದ ಮಾಹಿತಿಯ ಪ್ರಕಾರ, ಅಜಿತ್ ಪವಾರ್ ಅವರ ವಿಮಾನವು ಭೀಕರ ಅಪಘಾತಕ್ಕೆ ಒಳಗಾಗಿದೆ. ಅವರು ಮುಂಬೈನಿಂದ ಬೆಳಿಗ್ಗೆ ಬಾರಾಮತಿಗೆ ಹೊರಟಿದ್ದರು. ಸಾಮಾನ್ಯವಾಗಿ ಮುಂಬೈನಿಂದ ಬಾರಾಮತಿಗೆ ಪ್ರಯಾಣ ಮಾಡುವಾಗ ಅವರು ಸಣ್ಣ ವಿಮಾನ ಬಳಸುತ್ತಾರೆ. ಅದೇ ರೀತಿ, ಇಂದು ಅಜಿತ್

ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನ| ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿರುವ ಶಂಕೆ Read More »