ರಾಷ್ಟ್ರೀಯ

ಕೇಂದ್ರೀಯ ವಿದ್ಯಾಲಯದ ಆರ್ ಟಿ ಇ ಸೀಟುಗಳಿಗೆ ಅರ್ಜಿ ಆಹ್ವಾನ/ ಏಪ್ರಿಲ್15 ಕೊನೆಯ ದಿನ

ಸಮಗ್ರ ನ್ಯೂಸ್: ಕೇಂದ್ರೀಯ ವಿದ್ಯಾಲಯದಲ್ಲಿರುವ ಶೇ.25 ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಆನ್‌ಲೈನ್ ಮೂಲಕ ಮಾತ್ರ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಏ.15 ಕೊನೆಯ ದಿನವಾಗಿದೆ. ಕೇಂದ್ರೀಯ ವಿದ್ಯಾಲಯದಲ್ಲಿನ 5 ಕಿಮೀ ವ್ಯಾಪ್ತಿಯಲ್ಲಿನ ಅಭ್ಯರ್ಥಿಗಳು ಹಾಗೂ ಬಿಪಿಎಲ್ ಕಾರ್ಡುದಾರರು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುತ್ತಾರೆ. ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆkvsanghathan.nic.in ಅಥವಾ kvonlineadmission.kvs.gov.in ಸಂಪರ್ಕಿಸಬಹುದು.

ಕೇಂದ್ರೀಯ ವಿದ್ಯಾಲಯದ ಆರ್ ಟಿ ಇ ಸೀಟುಗಳಿಗೆ ಅರ್ಜಿ ಆಹ್ವಾನ/ ಏಪ್ರಿಲ್15 ಕೊನೆಯ ದಿನ Read More »

ಜಬಲಪುರದಲ್ಲಿ‌ ಮೋದಿ‌ ರೋಡ್ ಶೋ/ ಕುಸಿದ ವೇದಿಕೆ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಗೆ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಎ. 7ರಂದು ಮಧ್ಯಪ್ರದೇಶದ ಜಬಲಪುರದಲ್ಲಿ ಆಯೋಜಿಸಿದ್ದರು ಪ್ರಧಾನಿ ಮೋದಿ ಬಹತ್ ರೋಡ್ ಶೋ ವೇಳೆ ವೇದಿಕೆ ಕುಸಿದು ಕೆಲವರಿಗೆ ಗಾಯಗಳಾಗಿವೆ. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಭಾರೀ ಸಂಖ್ಯೆಯಲ್ಲಿ ಜನ ಸೇರಿದ್ದರು. ನಿಗದಿತ ಸಂಖ್ಯೆಗಿಂತ ಹೆಚ್ಚು ಜನರು ವೇದಿಕೆಗೆ ಸೇರಿದ ಕಾರಣ ವೇದಿಕೆ ಕುಸಿದು ಬಿದ್ದಿದೆ ಎನ್ನಲಾಗಿದೆ. ಈ ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಧಾನಿ ಮೋದಿಯವರ ರೋಡ್

ಜಬಲಪುರದಲ್ಲಿ‌ ಮೋದಿ‌ ರೋಡ್ ಶೋ/ ಕುಸಿದ ವೇದಿಕೆ Read More »

ಲೋಕಸಭಾ ಚುನಾವಣೆ/ ಮಣಿಪುರದಲ್ಲಿ ಚುನಾವಣಾ ನಡೆಸುವುದು ಆಯೋಗಕ್ಕೆ ಸವಾಲು

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯನ್ನು ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಸುಸೂತ್ರವಾಗಿ ಆಯೋಜಿಸುವುದು ಚುನಾವಣಾ ಆಯೋಗಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ‘ಸ್ಥಳಾಂತರಗೊಂಡ 24,500ಕ್ಕೂ ಹೆಚ್ಚು ಜನರು ಮತದಾನದ ಹಕ್ಕಿಗೆ ಅರ್ಹರಾಗಿದ್ದಾರೆ. ಅವರಿಗೆ ಆಶ್ರಯ ಶಿಬಿರಗಳಿಂದಲೇ ತಮ್ಮ ಮತದಾನದ ಹಕ್ಕು ಚಲಾಯಿಸಲು ವಿಶೇಷ ವ್ಯವಸ್ಥೆ ಮಾಡಲಾಗಿದೆ’ ಎಂದು ಮುಖ್ಯ ಚುನಾವಣಾಧಿಕಾರಿ ಪ್ರದೀಪ್ ಕುಮಾ‌ರ್ ಝಾ ತಿಳಿಸಿದ್ದಾರೆ. ಲೋಕಸಭೆ ಚುನಾವಣೆಗಾಗಿ ರಾಜ್ಯದಲ್ಲಿ ಒಟ್ಟು 2,955 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಇವುಗಳಲ್ಲಿ ಶೇ 50ರಷ್ಟು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಸ್ಥಳಾಂತರಗೊಂಡ ಜನರಿಗೆ ಮತದಾನ

ಲೋಕಸಭಾ ಚುನಾವಣೆ/ ಮಣಿಪುರದಲ್ಲಿ ಚುನಾವಣಾ ನಡೆಸುವುದು ಆಯೋಗಕ್ಕೆ ಸವಾಲು Read More »

ನವದೆಹಲಿ: ಆನ್‌ಲೈನ್ ವಂಚನೆಯಿಂದ 2 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ ಆತ್ಮಹತ್ಯೆ

ಸಮಗ್ರ ನ್ಯೂಸ್ : ಹನ್ನೊಂದನೇ ತರಗತಿಯ ಯುವಕ ತಾಯಿಯ ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದ ವೇಳೆ ವಂಚಕರು ಆ ಮೊಬೈಲ್ ಗೆ ಲಿಂಕ್ ಕಳುಹಿಸಿ ಆತನ ತಂದೆಯ ಬ್ಯಾಂಕ್ ಅಕೌಂಟ್ನಿಂದ ಸುಮಾರು 2 ಲಕ್ಷ ರೂ. ದೋಚಿದ್ದರು. ಇದರಿಂದ ಮನನೊಂದು ಆತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನ ನಲಸೊಪರದ ಯುವಕ ಏಪ್ರಿಲ್ 3 ರಂದು ತನ್ನ ತಾಯಿಯ ಮೊಬೈಲ್ನಲ್ಲಿ ಗೇಮ್ ಆಡುತ್ತಿದ್ದ. ಆ ವೇಳೆ ವಂಚಕರು ಲಿಂಕ್ ಒಂದನ್ನು ಮೊಬೈಲ್ಗೆ ಕಳುಹಿಸಿದ್ದರು. ಆತ ತಪ್ಪಿ ಆ

ನವದೆಹಲಿ: ಆನ್‌ಲೈನ್ ವಂಚನೆಯಿಂದ 2 ಲಕ್ಷ ರೂ. ಕಳೆದುಕೊಂಡ ವಿದ್ಯಾರ್ಥಿ ಆತ್ಮಹತ್ಯೆ Read More »

ಲಡಾಖ್‌: ಹಿಮಪಾತದಲ್ಲಿ ಸಿಲುಕಿದ್ದ 80 ಜನರನ್ನು ರಕ್ಷಿಸಿದ ಭಾರತೀಯ ಸೇನೆ

ಸಮಗ್ರ ನ್ಯೂಸ್‌ : ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಲೇಹ್ ಮತ್ತು ಶ್ಯೋಕ್ ನದಿ ಕಣಿವೆಯ ನಡುವಿನ 17,688 ಅಡಿ ಎತ್ತರದ ಚಾಂಗ್ ಲಾ ಪಾಸ್‌ನಲ್ಲಿ ಹಿಮಪಾತದಲ್ಲಿ ಸಿಲುಕಿದ್ದ ಕನಿಷ್ಠ 80 ಜನರನ್ನು ರಕ್ಷಿಸಲಾಗಿದೆ ಎಂದು ಸೇನೆ ಭಾನುವಾರ ಮಾಹಿತಿ ನೀಡಿದೆ. ತ್ರಿಶೂಲ್ ವಿಭಾಗದ ಸೈನಿಕರು ತಡರಾತ್ರಿ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಭಾರತೀಯ ಸೇನೆಯ ಲೇಹ್ ಮೂಲದ 14 ಕಾರ್ಪ್ಸ್‌ ತಿಳಿಸಿದೆ. ಚಾಂಗ್ ಲಾದ ಹಿಮಾವೃತ ಪ್ರದೇಶದಲ್ಲಿ ಭಾರಿ ಹಿಮಪಾತ ಸಂಭವಿತ್ತು. ಮಾಹಿತಿ ತಿಳಿದ ತ್ರಿಶೂಲ್ ವಿಭಾಗದ ಸೈನಿಕರು

ಲಡಾಖ್‌: ಹಿಮಪಾತದಲ್ಲಿ ಸಿಲುಕಿದ್ದ 80 ಜನರನ್ನು ರಕ್ಷಿಸಿದ ಭಾರತೀಯ ಸೇನೆ Read More »

ಇಂದು ವರ್ಷದ ಮೊದಲ‌ ಸೂರ್ಯಗ್ರಹಣ| ಭಾರತದಲ್ಲಿ ಗೋಚರಿಸುತ್ತಾ?

ಸಮಗ್ರ ನ್ಯೂಸ್: ಎಪ್ರಿಲ್ 8, 2024 ರಂದು ಅಂದರೆ ಸೋಮವಾರ ಖಗೋಳ ವಿಜ್ಞಾನವು ವಿಸ್ಮಯಕಾರಿ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದೆ. ವರ್ಷದ ಮೊದಲ ಸೂರ್ಯಗ್ರಹಣ ಗೋಚರವಾಗುತ್ತಿದ್ದು, ಅದರ ಫಲಾಫಲಗಳ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಯುಗಾದಿಗೆ ಮೊದಲು ಸಂಭವಿಸುತ್ತಿರುವ ಈ ಗ್ರಹಣ‌ ಧಾರ್ಮಿಕವಾಗಿ ಹಲವು ‌ಚರ್ಚೆಗೆ ಎಡೆಮಾಡಿಕೊಟ್ಟಿದೆ. ಅಪರೂಪದ ವಿದ್ಯಮಾನವು ಭಾರತದಲ್ಲಿ ಗೋಚರವಾಗದಿದ್ದರೂ, ಇತರೆ ದೇಶಗಳಲ್ಲಿ ಸೂರ್ಯಗ್ರಹಣವನ್ನು ನೋಡಬಹುದಾಗಿದೆ. ಮ್ಯಾಕ್ಸಿಕೋ, ಯುನೈಟೆಡ್ ಸ್ಟೇಟ್, ಕೆನಾಡದಲ್ಲಿ ವರ್ಷದ ಮೊದಲ ಸೂರ್ಯಗ್ರಹಣ ಗೋಚರಿಸುತ್ತದೆ. ಗ್ರಹಣದ ನೆರಳು ಮೊದಲ ಬಾರಿಗೆ ದಕ್ಷಿಣ ಪೆಸಿಫಿಕ್ ಸಮುದ್ರದ

ಇಂದು ವರ್ಷದ ಮೊದಲ‌ ಸೂರ್ಯಗ್ರಹಣ| ಭಾರತದಲ್ಲಿ ಗೋಚರಿಸುತ್ತಾ? Read More »

ಮುಂಬೈ:ನಟಿ ಕಂಗನಾ ರಣಾವತ್ ನನಗೆ ಗೋಮಾಂಸ ಇಷ್ಟ ಅಂದಿದ್ದರು|ಕಾಂಗ್ರೆಸ್ ನಾಯಕ ವಿಜಯ್ ವಾಡೆತ್ತಿವಾರ್

ಸಮಗ್ರ ನ್ಯೂಸ್‌ : ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿಯ ಲೋಕಸಭಾ ಅಭ್ಯರ್ಥಿಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ನನಗೆ ಗೋಮಾಂಸ ಇಷ್ಟ ಅಂದಿದ್ದರು ಎಂದು ಕಾಂಗ್ರೆಸ್ ನಾಯಕ ವಿಜಯ್ ವಾಡೆತ್ತಿವಾರ್ ಹೇಳಿದ್ದಾರೆ. ಅವರು ಮಹಾರಾಷ್ಟ್ರದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ತಾನು ಗೋಮಾಂಸವನ್ನು ಇಷ್ಟಪಡುತ್ತೇನೆ ಮತ್ತು ತಿನ್ನುತ್ತೇನೆ ಎಂದು ಎಕ್ಸ್‌ನಲ್ಲಿ ಬರೆದಿದ್ದ ರಣಾವತ್‌ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ನಾಯಕ ವಿಜಯ್ ವಡೆತ್ತಿವಾರ್ ಅವರ ಮಾತಿಗೆ ಬಿಜೆಪಿ ವಕ್ತಾರ ಕೇಶವ ಉಪಾಧ್ಯೆ

ಮುಂಬೈ:ನಟಿ ಕಂಗನಾ ರಣಾವತ್ ನನಗೆ ಗೋಮಾಂಸ ಇಷ್ಟ ಅಂದಿದ್ದರು|ಕಾಂಗ್ರೆಸ್ ನಾಯಕ ವಿಜಯ್ ವಾಡೆತ್ತಿವಾರ್ Read More »

ಮೋದಿ ವಿರುದ್ಧ ಆಧಾರ ರಹಿತ ಆರೋಪ/ ಸಿದ್ಧರಾಮಯ್ಯ ವಿರುದ್ಧ ದೂರು

ಸಮಗ್ರ ನ್ಯೂಸ್: ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಆಧಾರ ರಹಿತ ಆರೋಪ ಮಾಡಿರುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸಚಿವರ ವಿರುದ್ಧ ಬಿಜೆಪಿ ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿದೆ. ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ವಕ್ತಾರ ಅಶೋಕ್ ಗೌಡ, ರಾಜ್ಯ ಕಾನೂನು ಆಯೋಗದ ಪ್ರತಿನಿಧಿ ವಸಂತ್ ಕುಮಾರ್ ನೇತೃತ್ವದ ಬಿಜೆಪಿ ನಿಯೋಗ ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದೆ. ಚುನಾವಣಾ ಸಚಿವರ ಸಮಿತಿಗೆ ಒಟ್ಟು ನಾಲ್ಕು

ಮೋದಿ ವಿರುದ್ಧ ಆಧಾರ ರಹಿತ ಆರೋಪ/ ಸಿದ್ಧರಾಮಯ್ಯ ವಿರುದ್ಧ ದೂರು Read More »

ಕೇಜ್ರೀವಾಲ್ ಬಂಧನ/ ಆಮ್ ಆದ್ಮಿ ಕಾರ್ಯಕರ್ತರ ಉಪವಾಸ ಸತ್ಯಾಗ್ರಹ

ಸಮಗ್ರ ನ್ಯೂಸ್: ಅಬಕಾರಿ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಅವರ ಬಂಧನವನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡರು ಮತ್ತು ಕಾರ್ಯಕರ್ತರು ಇಂದು ಜಂತರ್ ಮಂತರ್‍ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ದೆಹಲಿ ಸರ್ಕಾರದ ಸಚಿವ ಗೋಪಾಲ್ ರೈ, ಆಮ್ ಆದ್ಮ ಪಕ್ಷದ ಶಾಸಕರು, ಸಚಿವರು, ಸಂಸದರು ಮತ್ತು ಕೌನ್ಸಿಲರ್‍ಗಳು ದೆಹಲಿಯ ಜಂತರ್ ಮಂತರ್ ಮತ್ತು ಪಂಜಾಬ್‍ನ ಶಾಹೀದ್ ಭಗತ್ ಸಿಂಗ್ ಅವರ ಹಳ್ಳಿಯಾದ ಖತ್ಸರ್ಕಲನ್ನಲ್ಲಿ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಸಾಮೂಹಿಕ ಉಪವಾಸವನ್ನು ನಡೆಸಲಿದ್ದಾರೆ

ಕೇಜ್ರೀವಾಲ್ ಬಂಧನ/ ಆಮ್ ಆದ್ಮಿ ಕಾರ್ಯಕರ್ತರ ಉಪವಾಸ ಸತ್ಯಾಗ್ರಹ Read More »

ಲೋಕಸಭಾ ಚುನಾವಣೆ/ ಮಾಧವಿ ಲತಾ ಮತ್ತು ಸೀತಾ ಸೊರೇನ್ ಗೆ ವೈ ಪ್ಲಸ್ ಭದ್ರತೆ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಹೈದರಾಬಾದ್‌ನ ಕೊಂಪೆಲ್ಲಾ ಮಾಧವಿ ಲತಾ ಹಾಗೂ ಜೆಎಂಎಂ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಸೀತಾ ಸೊರೆನ್ ಅವರಿಗೆ ಕೇಂದ್ರ ಸರ್ಕಾರವು ವೈ ಪ್ಲಸ್ ಭದ್ರತೆಯನ್ನು ಒದಗಿಸಿದೆ. ಕೊಂಪೆಲ್ಲಾ ಮಾಧವಿ ಲತಾ ಅವರನ್ನು ಅಸಾದುದ್ದೀನ್ ಓವೈಸಿ ಎದುರು ಕಣಕ್ಕಿಳಿಸಲಾಗಿದ್ದು, ಅವರಿಗೆ ಬೆದರಿಕೆ ಇದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳ ಗ್ರಹಿಕೆಯ ಹಿನ್ನೆಲೆಯಲ್ಲಿ ಈ ಭದ್ರತೆಯನ್ನು ಒದಗಿಸಲಾಗುತ್ತಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯು ವೈ ಪ್ಲಸ್ ಭದ್ರತೆಯನ್ನು ಒದಗಿಸಿದ್ದು, ವಿಐಪಿ ಭದ್ರತೆಯ

ಲೋಕಸಭಾ ಚುನಾವಣೆ/ ಮಾಧವಿ ಲತಾ ಮತ್ತು ಸೀತಾ ಸೊರೇನ್ ಗೆ ವೈ ಪ್ಲಸ್ ಭದ್ರತೆ Read More »