ರಾಷ್ಟ್ರೀಯ

ಸಚಿವರಾಗ್ತರಾ ಕುಮಾರಸ್ವಾಮಿ? ಸ್ಪಷ್ಟನೆ ನೀಡಿದ ಮಂಡ್ಯ ಸಂಸದ

ಸಮಗ್ರ ನ್ಯೂಸ್: ಎಚ್.ಡಿ. ಕುಮಾರಸ್ವಾಮಿ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ಮಂತ್ರಿಸ್ಥಾನದ ಆಕಾಂಕ್ಷಿ ಎನ್ನುವ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ. ನನಗೆ ಮಂತ್ರಿ ಸ್ಥಾನ ಬೇಕೆಂದು ನಾನು ಒತ್ತಡ ಹಾಕುವುದಿಲ್ಲ. ನರೇಂದ್ರ ಮೋದಿ ನಾಯಕತ್ವದಲ್ಲಿ ಮತ್ತೆ ಸರ್ಕಾರ ಮುಂದುವರಿಯಲಿದೆ. ಸಚಿವ ಸ್ಥಾನದ ಬಗ್ಗೆ ನನಗೆ ಅಧಿಕೃತ ಮಾಹಿತಿ ಬಂದಿಲ್ಲ. ಆದರೂ ಸ್ಥಳೀಯ ಪಕ್ಷಗಳಿಗೆ ಸಹ ಖಾತೆ ನೀಡುತ್ತಾರೆ. ನಮ್ಮಿಂದ ಒಳ್ಳೆಯ ಕೆಲಸ ಮಾಡಲು ಸಾಧ್ಯವಿದೆ, ಅದನ್ನು ಮಾಡುತ್ತೇನೆ ಎಂದು […]

ಸಚಿವರಾಗ್ತರಾ ಕುಮಾರಸ್ವಾಮಿ? ಸ್ಪಷ್ಟನೆ ನೀಡಿದ ಮಂಡ್ಯ ಸಂಸದ Read More »

ಅತಂತ್ರ ಲೋಕಸಭೆ/ ಬಿಜೆಪಿಗೆ ಬಹುಮತಕ್ಕೆ ಬೇಕಾಗಿದ್ದುದು 6.26 ಲಕ್ಷ ಮತ

ಸಮಗ್ರ ನ್ಯೂಸ್: 18ನೇ ಲೋಕಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿಯೊಂದ ನಿರ್ಮಾಣವಾಗಿದ್ದು, 240 ಸ್ಥಾನಗಳಿಸಿರುವ ಬಿಜೆಪಿ ಬಹುಮತಕ್ಕೆ ಅಗತ್ಯವಾದ 272 ಸ್ಥಾನ ತಲುಪಲು 32 ಸ್ಥಾನಗಳ ಕೊರತೆ ಎದುರಿಸುತ್ತಿದೆ. ಅಚ್ಚರಿಯ ವಿಷಯವೆಂದರೆ ಬಿಜೆಪಿಗೆ ಬಹುಮತಕ್ಕೆ ಕೇವಲ 6.26 ಲಕ್ಷಮತಗಳ ಕೊರತೆಯಾಗಿದೆ. ಕರ್ನಾಟಕದ ಕಲಬುರಗಿ ಹಾಗೂ ದಾವಣಗೆರೆಯೂ ಸೇರಿದಂತೆ ದೇಶದ ವಿವಿಧ ರಾಜ್ಯಗಳ 33 ಕ್ಷೇತ್ರಗಳಲ್ಲಿ ಬಿಜೆಪಿ ಕೂದಲೆಳೆ ಅಂತರದಲ್ಲಿ ಸೋತಿದೆ. ಅಂತಹ ಕ್ಷೇತ್ರಗಳಲ್ಲಿ ಇನ್ನು ಕೇವಲ 6,26,311 ಮತಗಳನ್ನು ಪಡೆದುಕೊಂಡಿದ್ದರೆ ಬಿಜೆಪಿ ಏಕಾಂಗಿಯಾಗಿ ಮ್ಯಾಜಿಕ್ ಸಂಖ್ಯೆ(272) ತಲುಪಬಹುದಾಗಿತ್ತು. ಬಿಜೆಪಿಯು

ಅತಂತ್ರ ಲೋಕಸಭೆ/ ಬಿಜೆಪಿಗೆ ಬಹುಮತಕ್ಕೆ ಬೇಕಾಗಿದ್ದುದು 6.26 ಲಕ್ಷ ಮತ Read More »

ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲು| ಅಭ್ಯರ್ಥಿ ಲಲ್ಲುಸಿಂಗ್ ತರಾಟೆಗೈದ ಪುತ್ತೂರಿನ ಬಿಜೆಪಿ ಕಾರ್ಯಕರ್ತ

ಸಮಗ್ರ ನ್ಯೂಸ್: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಬಿಜೆಪಿ ಸೋಲು ಬಿಜೆಪಿ ಕಾರ್ಯಕರ್ತರಿಗೆ ಭಾರೀ ದುಃಖ ತಂದಿದ್ದು, ಪುತ್ತೂರಿನ ಬಿಜೆಪಿ ಕಾರ್ಯಕರ್ತರೊಬ್ಬರು ಬಿಜೆಪಿ ಅಭ್ಯರ್ಥಿ ಲಲ್ಲುಸಿಂಗ್ ಅವರಿಗೆ ಕರೆ ಮಾಡಿ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಯೋಧ್ಯೆ ರಾಮಮಂದಿರ ಇರುವ ಫೈಜಾಬಾದ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಲಲ್ಲು ಸಿಂಗ್ ಗೆ ದೂರವಾಣಿ ಕರೆ ಮಾಡಿದ ಪುತ್ತೂರಿನ ಬಿಜೆಪಿ ಕಾರ್ಯಕರ್ತ ಜಗದೀಶ್ ರೈ ಅವರು ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೋಲಿನ ಕಾರಣವನ್ನು ಅಭ್ಯರ್ಥಿಯಲ್ಲಿ ಪ್ರಶ್ನಿಸಿದ ಪುತ್ತೂರಿನ ಬಿಜೆಪಿ ಕಾರ್ಯಕರ್ತ, ಲೋಕಸಭಾ ಸದಸ್ಯರಾಗಿ

ಅಯೋಧ್ಯೆಯಲ್ಲಿ ಬಿಜೆಪಿಗೆ ಸೋಲು| ಅಭ್ಯರ್ಥಿ ಲಲ್ಲುಸಿಂಗ್ ತರಾಟೆಗೈದ ಪುತ್ತೂರಿನ ಬಿಜೆಪಿ ಕಾರ್ಯಕರ್ತ Read More »

HSPR ನಂಬರ್ ಪ್ಲೇಟ್ ಅಳವಡಿಕೆಗೆ ಇನ್ನು 5 ದಿನ ಮಾತ್ರ ಬಾಕಿ

ಸಮಗ್ರ ನ್ಯೂಸ್: ಹಳೇ ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ (HSRP) ಅಳವಡಿಸಲು ಸಾರಿಗೆ ಇಲಾಖೆ ನೀಡಿದ ಗಡುವು ಹೈಕೋರ್ಟ್‌ ಆದೇಶದ ಅನ್ವಯ ಜೂನ್‌ 12ರವರೆಗೆ ಇರಲಿದೆ. ಅದರ ಒಳಗೆ ಎಲ್ಲಾ ವಾಹನಗಳು ಹೊಸ ಫಲಕ ಅಳವಡಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಸೂಚಿಸಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಸುಮಾರು 45 ಲಕ್ಷ ವಾಹನಗಳು ಎಚ್‌ಎಸ್‌ಆರ್‌ಪಿ ಅಳವಡಿಸಿಕೊಂಡಿದ್ದು, 1.55 ಕೋಟಿ ವಾಹನಗಳು ಇನ್ನೂ ಅಳವಡಿಸಿಕೊಂಡಿಲ್ಲ ಎಂದು ಮಾಹಿತಿ ನೀಡಿದೆ. ಸಾರ್ವಜನಿಕರು ಆನ್ ಲೈನ್ ಮೂಲಕ ಹೆಚ್.ಎಸ್.ಆರ್.ಪಿ. ಪಡೆಯಲು ತೊಂದರೆಗಳಾದಲ್ಲಿ ಕೆಳಕಂಡ ದೂರವಾಣಿ

HSPR ನಂಬರ್ ಪ್ಲೇಟ್ ಅಳವಡಿಕೆಗೆ ಇನ್ನು 5 ದಿನ ಮಾತ್ರ ಬಾಕಿ Read More »

ಉತ್ತರಾಖಂಡ್ ಚಾರಣ ದುರಂತದಲ್ಲಿ ಸಿಲುಕಿದ 13 ಜನ ಕೃಷ್ಣ ಭೈರೇಗೌಡ ನೇತೃತ್ವದಲ್ಲಿ ಬೆಂಗಳೂರಿಗೆ ವಾಪಸ್

ಸಮಗ್ರ ನ್ಯೂಸ್: ಉತ್ತರಾಖಂಡ್ ಗೆ ಚಾರಣಕ್ಕೆಂದು ಕರ್ನಾಟಕದ 21 ಜನರು ತೆರಳಿದ್ದರು. ಈ ವೇಳೆ ಹವಾಮಾನ ವೈಪರೀತ್ಯದಿಂದಾಗಿ ಕರ್ನಾಟಕದ ಚಾರಣಿಗರು ಉತ್ತರಾಖಂಡದ ಸಹಸ್ತ್ರತಲ್‌ನಲ್ಲಿ ಅಪಾಯಕ್ಕೆ ಸಿಲುಕಿದ್ದು, ಆ ಪೈಕಿ 9 ಮಂದಿ ಮೃತಪಟ್ಟಿದ್ದರು. ಇದರಲ್ಲಿ ಬದುಕುಳಿದವರ ರಕ್ಷಣೆಗಾಗಿ ತುರ್ತು ಕಾರ್ಯಾಚರಣೆ ನಡೆಸಿ, ಮೃತಪಟ್ಟ ಕನ್ನಡಿಗರ ಶವಗಳನ್ನು ಬೆಂಗಳೂರಿಗೆ ತರುವ ಬಗ್ಗೆ ಉತ್ತರಾಖಂಡ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ವಿಪತ್ತು ನಿರ್ವಹಣಾ ಇಲಾಖೆ ಕಾರ್ಯದರ್ಶಿ ಜೊತೆ ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಮಾತುಕತೆ ನಡೆಸಿ, ಇದೀಗ

ಉತ್ತರಾಖಂಡ್ ಚಾರಣ ದುರಂತದಲ್ಲಿ ಸಿಲುಕಿದ 13 ಜನ ಕೃಷ್ಣ ಭೈರೇಗೌಡ ನೇತೃತ್ವದಲ್ಲಿ ಬೆಂಗಳೂರಿಗೆ ವಾಪಸ್ Read More »

ಒಡಿಶಾದಲ್ಲಿ ಗೆಲುವು ಸಾಧಿಸಿದ ಬಿಜೆಪಿ/ ಅಂತ್ಯ ಕಂಡ 24 ವರ್ಷಗಳ ಪಟ್ನಾಯಕ್ ಆಡಳಿತ

ಸಮಗ್ರ ನ್ಯೂಸ್: ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಂಡ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠ ನವೀನ್ ಪಟ್ನಾಯಕ್ ಅವರ 24 ವರ್ಷಗಳ ಅಧಿಕಾರ ಅಂತ್ಯಗೊಂಡಿದೆ ಬುಧವಾರ ಮುಂಜಾನೆ ರಾಜ್ಯಪಾಲರಾದ ರಘುವರ್ ದಾಸ್ ಬಳಿ ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ ನವೀನ್, ಪತ್ರಕರ್ತರತ್ತ ಕೈಬೀಸುತ್ತಾ ಹಿಂದಿರುಗಿದರು. 147 ಸ್ಥಾನಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 78 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದ್ದರೆ, ಬಿಜೆಡಿ ಕೇವಲ 51 ಸ್ಥಾನಗಳಿಗೆ ಸೀಮಿತವಾಗಿದೆ.ನವೀನ್ ಪಟ್ನಾಯಕ್ ಮೊದಲ ಬಾರಿಗೆ ಮಾರ್ಚ್ 5, 2000ರಂದು

ಒಡಿಶಾದಲ್ಲಿ ಗೆಲುವು ಸಾಧಿಸಿದ ಬಿಜೆಪಿ/ ಅಂತ್ಯ ಕಂಡ 24 ವರ್ಷಗಳ ಪಟ್ನಾಯಕ್ ಆಡಳಿತ Read More »

ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ರ್‍ಯಾಂಕಿಂಗ್‌/ ಸ್ಥಾನ ಪಡೆದುಕೊಂಡ ಐಐಟಿ ಬಾಂಬೆ’ ಮತ್ತು ‘ಐಐಟಿ ದೆಹಲಿ’

ಸಮಗ್ರ ನ್ಯೂಸ್: ಕ್ವಾಕರಾಲಿ ಸೈಮಂಡ್ಸ್‌ ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ರ್‍ಯಾಂಕಿಂಗ್‌ ಬಿಡುಗಡೆ ಮಾಡಿದ್ದು, ಅದರಲ್ಲಿ ‘ಐಐಟಿ ಬಾಂಬೆ’ ಮತ್ತು ‘ಐಐಟಿ ದೆಹಲಿ’ ಟಾಪ್‌ 150ರೊಳಗೆ ಸ್ಥಾನ ಪಡೆದುಕೊಂಡಿದೆ. ಇದರ ಜೊತೆಗೆ ಬೆಂಗಳೂರಿನ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ (ಐಐಎಸ್‌ಸಿ) 211ನೇ ಸ್ಥಾನ ಪಡೆದುಕೊಂಡಿದೆ. ಪಟ್ಟಿಯಲ್ಲಿ ಕಳೆದ ವರ್ಷ 149ನೇ ಸ್ಥಾನದಲ್ಲಿದ್ದ ಐಐಟಿ ಬಾಂಬೆ ಈ ವರ್ಷ 31 ಸ್ಥಾನ ಏರಿಕೆ ಕಂಡು 118ನೇ ಸ್ಥಾನ ತಲುಪಿದೆ. ಇನ್ನೊಂದೆಡೆ ಐಐಟಿ ದೆಹಲಿ 47 ಸ್ಥಾನ ಏರಿಕೆ ಕಾಣುವ ಮೂಲಕ

ವಿಶ್ವದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ರ್‍ಯಾಂಕಿಂಗ್‌/ ಸ್ಥಾನ ಪಡೆದುಕೊಂಡ ಐಐಟಿ ಬಾಂಬೆ’ ಮತ್ತು ‘ಐಐಟಿ ದೆಹಲಿ’ Read More »

ಉತ್ತರಾಖಂಡ ಚಾರಣಕ್ಕೆ ತೆರಳಿದ 9 ಮಂದಿ ಸಾವು

ಸಮಗ್ರ ನ್ಯೂಸ್: ಉತ್ತರಾಖಂಡದ ಉತ್ತರಕಾಶಿಯ ಸಹಸ್ತ್ರ ತಾಲ್ಗೆ ಚಾರಣಕ್ಕೆ ತೆರಳಿದ್ದ 22 ಸದಸ್ಯರ ತಂಡದ ಪೈಕಿ ಕರ್ನಾಟಕದವರು ಸೇರಿ 9 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ಸ್ಥಳೀಯ ಮಾರ್ಗದರ್ಶಿಗಳನ್ನು ಒಳಗೊಂಡ ತಂಡವು ಮೇ 29 ರಂದು ಸಾಹಸವನ್ನು ಪ್ರಾರಂಭಿಸಿತು, ಜೂನ್ 7 ರೊಳಗೆ ವಾಪಸ್ ಆಗಲು ನಿರ್ಧರಿಸಿತ್ತು. ಮೃತರನ್ನು ಬೆಂಗಳೂರಿನ ಸುಜಾತ (52), ಪದ್ಮಿನಿ ಹೆಗಡೆ (35), ಚಿತ್ರಾ (48), ಸಿಂಧು (45), ವೆಂಕಟೇಶ್ ಪ್ರಸಾದ್ (52), ಅನಿತಾ (61), ಆಶಾ ಸುಧಾಕರ (72), ಪದ್ಮನಾಭನ್

ಉತ್ತರಾಖಂಡ ಚಾರಣಕ್ಕೆ ತೆರಳಿದ 9 ಮಂದಿ ಸಾವು Read More »

ಮೈತ್ರಿಕೂಟದ ಸಭೆ/ ಪ್ರಬಲ ಪ್ರತಿಪಕ್ಷವಾಗುವತ್ತ ಚಿತ್ತ

ಸಮಗ್ರ ನ್ಯೂಸ್: ಮೈತ್ರಿಕೂಟದ ನಾಯಕರ ಸಭೆಯು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದಿದ್ದು, ಎನ್‍ಡಿಎ ಮೈತ್ರಿಕೂಟ ಸರ್ಕಾರ ರಚನೆಯಾದ ಬಳಿಕ ಪ್ರಬಲ ಪ್ರತಿಪಕ್ಷವಾಗಿ ಕೆಲಸ ಮಾಡುವುದು, ಒಕ್ಕೂಟದ ಸದಸ್ಯ ಪಕ್ಷಗಳ ಮಧ್ಯೆ ಸಮನ್ವಯತೆ, ಒಗ್ಗಟ್ಟು ಸಾಧಿಸುವುದು, ರಚನೆಯಾದ ನೂತನ ಸರ್ಕಾರದ ವಿರುದ್ಧ ಹೋರಾಡುವುದು, ಅದನ್ನು ಇಕ್ಕಟ್ಟಿಗೆ ಸಿಲುಕಿಸುವುದು, ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಲುಪಿಸುವುದು ಸೇರಿ ಹಲವು ರಣತಂತ್ರಗಳ ಕುರಿತು ಚರ್ಚಿಸಲಾಗಿದೆ. ಸಭೆಯಲ್ಲಿ ಮಾತನಾಡಿದ ಖರ್ಗೆ, ನಾವು ಉತ್ತಮವಾಗಿ ಹೋರಾಡಿದ್ದೇವೆ. ಒಗ್ಗಟ್ಟಿನಿಂದ ಹೋರಾಡಿದ್ದೇವೆ, ದೃಢವಾಗಿ

ಮೈತ್ರಿಕೂಟದ ಸಭೆ/ ಪ್ರಬಲ ಪ್ರತಿಪಕ್ಷವಾಗುವತ್ತ ಚಿತ್ತ Read More »

ಎನ್ ಡಿಎ ಸರ್ಕಾರದ ಜೊತೆಗೆ ಮೈತ್ರಿಗೆ ಬೆಂಬಲ ನೀಡಿದ ನಾಯ್ಡು, ನಿತೀಶ್| ನಮೋಗೆ ಬೆಂಬಲ ಪತ್ರ ನೀಡಿದ‌ ನಾಯಕರು

ಸಮಗ್ರ ನ್ಯೂಸ್: ಎನ್‌ ಡಿಎ ಸರ್ಕಾರ ರಚನೆಯ ಬಗ್ಗೆ ಊಹಾಪೋಹಗಳ ಮಧ್ಯೆ, ಆಡಳಿತಾರೂಢ ಮೈತ್ರಿ ಪಾಲುದಾರರಾದ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಬಿಜೆಪಿಗೆ ಬೆಂಬಲ ಪತ್ರವನ್ನು ಹಸ್ತಾಂತರಿಸಿದ್ದಾರೆ. ಈ ಹಿನ್ನಲೆಯಲ್ಲಿ 3ನೇ ಬಾರಿಗೆ ಮೋದಿ ಪ್ರಧಾನ ಮಂತ್ರಿಯಾಗೋದಕ್ಕೆ ಸಜ್ಜಾಗಿದ್ದಾರೆ. ಇಂದೇ 3ನೇ ಅವಧಿಗೆ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಎನ್ ಡಿಎ ರಾಷ್ಟ್ರಪತಿ ಮುರ್ಮು ಭೇಟಿಯಾಗೋ ಸಾಧ್ಯತೆ ಇದೆ ಎಂಬುದಾಗಿ ವರದಿಗಳಿಂದ ತಿಳಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಎನ್ಡಿಎ ಅಂಗಪಕ್ಷಗಳ ನಾಯಕರು ಇಂದು

ಎನ್ ಡಿಎ ಸರ್ಕಾರದ ಜೊತೆಗೆ ಮೈತ್ರಿಗೆ ಬೆಂಬಲ ನೀಡಿದ ನಾಯ್ಡು, ನಿತೀಶ್| ನಮೋಗೆ ಬೆಂಬಲ ಪತ್ರ ನೀಡಿದ‌ ನಾಯಕರು Read More »