ಅಡಿಕೆ ಕದ್ದ ನೆಪದಲ್ಲಿ ಬಾಲಕನಿಗೆ ಹಿಗ್ಗಾಮುಗ್ಗ ಹಲ್ಲೆ ಪ್ರಕರಣ| ಆರೋಪಿಗಳಿಗೆ ಜಾಮೀನು ದಯಪಾಲಿಸಿದ ಕೋರ್ಟ್..!
ಪುತ್ತೂರು: ಅಡಿಕೆ ಕದ್ದ ನೆಪದಲ್ಲಿ ಗುತ್ತಿಗಾರಿನ 16 ವರ್ಷದ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಸಾರ್ವಜನಿಕ ಆಕ್ರೋಶ ಕೇಳಿಬಂದಿದ್ದರಿಂದ ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಮೊದಲಿಗೆ ಸುಮೊಟೊ ಕೇಸು ದಾಖಲಿಸಿದ್ದರು. ಆನಂತರ, ಸ್ವತಃ ಬಾಲಕನೇ ಹೆತ್ತವರ ಜೊತೆಗೆ ಬಂದು ಠಾಣೆಯಲ್ಲಿ ದೂರು ದಾಖಲಿಸಿದ್ದ. ಗುತ್ತಿಗಾರಿನ ಕಡ್ತಲ್ ಕಜೆ ಎಂಬಲ್ಲಿ ಅ.27ರಂದು ಸಂಜೆ 7 ಗಂಟೆ ಸುಮಾರಿಗೆ ಘಟನೆ ನಡೆದಿತ್ತು. ಹಣ್ಣಡಿಕೆಯನ್ನು ಗೋಣಿಯಲ್ಲಿ ತುಂಬಿಸಿ ಒಯ್ಯುತ್ತಿದ್ದ ಬಾಲಕನನ್ನು, ಆತ ಕದ್ದು ತಂದ […]








