ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್| ಎಲ್ಲಾ ನಿರ್ಬಂಧ ತೆರವುಗೊಳಿಸಿದ ಕೇಂದ್ರ

ಸಮಗ್ರ ನ್ಯೂಸ್: ದೇಶದ ವಾಣಿಜ್ಯ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ದೊಡ್ಡ ನೆಮ್ಮದಿ ನೀಡುವ ಕ್ರಮವಾಗಿ, ಕೇಂದ್ರ ಸರ್ಕಾರ ಎಲ್‌ಪಿಜಿ ಪೂರೈಕೆಯ ಮೇಲಿದ್ದ ಎಲ್ಲಾ ರೀತಿಯ ನಿರ್ಬಂಧಗಳನ್ನು ತಕ್ಷಣದಿಂದಲೇ ಹಿಂತೆಗೆದುಕೊಂಡಿದೆ. ಗೃಹೇತರ ಪ್ಯಾಕೇಜ್ಡ್ ಎಲ್‌ಪಿಜಿ ಪೂರೈಕೆಗೆ ವಿಧಿಸಲಾಗಿದ್ದ ವಲಯವಾರು ಮಿತಿಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಿರುವುದಾಗಿ ಸರ್ಕಾರ ಘೋಷಿಸಿದೆ.

Ad Widget ... .. Ad Widget .

ದೇಶದ ವಾಣಿಜ್ಯ ಹಾಗೂ ಕೈಗಾರಿಕಾ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ಎಲ್‌ಪಿಜಿ (LPG) ಗ್ಯಾಸ್ ಪೂರೈಕೆಯ ಮೇಲಿನ ಎಲ್ಲಾ ನಿರ್ಬಂಧಗಳನ್ನು ತಕ್ಷಣದಿಂದಲೇ ತೆರವುಗೊಳಿಸಿದ್ದು, ಇದರಿಂದ ಹೋಟೆಲ್‌ಗಳು, ಕೈಗಾರಿಕೆಗಳು ಹಾಗೂ ವಾಣಿಜ್ಯ ಸಂಸ್ಥೆಗಳಿಗೆ ಇಂಧನ ಪೂರೈಕೆ ಮತ್ತಷ್ಟು ಸುಗಮವಾಗಲಿದೆ.

Ad Widget

ಇರಾನ್-ಅಮೆರಿಕ ನಡುವಿನ ಉದ್ವಿಗ್ನತೆಯಿಂದ ಉಂಟಾಗಿದ್ದ ಅಂತರರಾಷ್ಟ್ರೀಯ ಬಿಕ್ಕಟ್ಟಿನ ಬಳಿಕ ಎಲ್‌ಪಿಜಿ ಪೂರೈಕೆ ಮೇಲೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿತ್ತು. ಆದರೆ ಇದೀಗ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿರುವುದರಿಂದ, ಬಿಕ್ಕಟ್ಟಿನ ಮುಂಚಿನಂತೆ ಎಲ್‌ಪಿಜಿ ಪೂರೈಕೆ ಪುನಃ ಆರಂಭವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಸರ್ಕಾರ ನಿರ್ಬಂಧಗಳನ್ನು ಸಡಿಲಗೊಳಿಸಿರುವ ಹಿನ್ನೆಲೆಯಲ್ಲಿ, ಬಿಕ್ಕಟ್ಟಿನ ಸಮಯದಲ್ಲಿ ಸ್ಥಗಿತಗೊಂಡಿದ್ದ ಬಲ್ಕ್ ಎಲ್‌ಪಿಜಿ ಪೂರೈಕೆ ದೇಶಾದ್ಯಂತ ಮತ್ತೆ ಆರಂಭವಾಗಿದೆ. ಪ್ರಸ್ತುತ ಇದು ಬಿಕ್ಕಟ್ಟಿನ ಮುಂಚಿನ ಬಳಕೆಯ ಸುಮಾರು 50 ಪ್ರತಿಶತ ಮಟ್ಟಕ್ಕೆ ಮರುಸ್ಥಾಪನೆಯಾಗಿದೆ. ಇದರಿಂದ ಹೋಟೆಲ್‌ಗಳು, ಕೈಗಾರಿಕೆಗಳು ಹಾಗೂ ದೊಡ್ಡ ವಾಣಿಜ್ಯ ಸಂಸ್ಥೆಗಳಿಗೆ ಇಂಧನ ಲಭ್ಯತೆ ಹೆಚ್ಚಾಗಿ ಮಹತ್ತರ ನೆರವು ದೊರೆಯಲಿದೆ.

Leave a Comment

Your email address will not be published. Required fields are marked *