ಸುಳ್ಯ| ಹಳೆ ಕಬ್ಬಿಣ ಸಾಮಾಗ್ರಿ ತೆರವು ವೇಳೆ ಕುಸಿದ ಗೋಡೆ| ಗುಜರಿ ವ್ಯಾಪಾರಿ ದುರ್ಮರಣ

ಸುಳ್ಯ: ಇಲ್ಲಿನ ಗಾಂಧಿನಗರ ಬಳಿಯ ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯ ಹಳೆ ಕಟ್ಟಡದ ಕಬ್ಬಿಣ ಸಮಾಗ್ರಿಗಳನ್ನು ತೆಗೆಯುತ್ತಿದ್ದ ವೇಳೆ ಗೋಡೆ ಕುಸಿದ ಪರಿಣಾಮ ಗುಜರಿ ವ್ಯಾಪಾರಿಯೊಬ್ಬರು ಮೃತಪಟ್ಟ ಘಟನೆ ಇಂದು ನಡೆದಿದೆ. ಮೃತ ವ್ಯಕ್ತಿಯನ್ನು ಸುಳ್ಯದ ಎಪಿಎಂಸಿ ಬಳಿ ಗುಜಿರಿ ವ್ಯಾಪಾರ ನಡೆಸುತ್ತಿದ್ದ ಅಬ್ದುಲ್ ಖಾದರ್ (ಅಂದುಕಾರ್)ಎಂದು ಗುರುತಿಸಲಾಗಿದೆ.

. Ad Widget . Ad Widget

48 ವರ್ಷ ವಯಸ್ಸಿನ ಅಬ್ದುಲ್ ಖಾದರ್ ಹಲವಾರು ವರ್ಷಗಳಿಂದ ಸುಳ್ಯದಲ್ಲಿ ಗುಜರಿ ವ್ಯಾಪಾರ ನಡೆಸುತ್ತಿದ್ದು, ಹಳೆ ಕಟ್ಟಡದ ಕಬ್ಬಿಣ ಸಾಮಾಗ್ರಿಗಳನ್ನು ತೆಗೆಯುವ ವ್ಯಾಪಾರ ನಡೆಸುತ್ತಿದ್ದರು. ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿ ಕಳೆದ ಕಳೆದ ವರ್ಷಗಳಿಂದ ವ್ಯವಹಾರ ಸ್ಥಗಿತಗೊಳಿಸಿದ್ದು, ಹಳೆಯ ಕಟ್ಟಡವನ್ನು ತೆರವುಗೊಳಿಸುವ ಕಾರ್ಯ ಕೈಗೊಂಡಿದ್ದರು. ಅಬ್ದುಲ್ ಖಾದರ್‌ರವರು ತಮ್ಮ ಕೆಲಸದಾಳುಗಳ ಜೊತೆ ಇಂದು ಬೆಳಿಗ್ಗೆ ಗೋಡೆಯ ಮೇಲ್ಭಾಗದಲ್ಲಿದ್ದ ಕಬ್ಬಿಣದ ಟ್ರಸ್‌ನ್ನು ಹಗ್ಗ ಹಾಕಿ ಎಳೆಯುತ್ತಿರುವಾಗ ಗೋಡೆಯು ಮಗುಚಿ ಅಬ್ದುಲ್ ಖಾದರ್‌ರವರ ಮೇಲೆ ಬಿದ್ದುದರಿಂದ ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದುಬಂದಿದೆ.

. Ad Widget . . Ad Widget . Ad Widget

ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.
ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿ ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಿ ವಾರೀಸುದಾರರಿಗೆ ಒಪ್ಪಿಸಲಾಯಿತು.

Leave a Comment

Your email address will not be published. Required fields are marked *