ಕ್ರೈಂ

ಕಾರು – ಹಾಲಿನ ಟ್ಯಾಂಕರ್ ಡಿಕ್ಕಿ ಇಬ್ಬರು ಮಹಿಳೆಯರು ಸಾವು

ಸಮಗ್ರ ನ್ಯೂಸ್: ಹಾಲಿನ ಟ್ಯಾಂಕರ್ ಗೆ ಕಾರು ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಯುವತಿಯರು ಸಾವನ್ನಪ್ಪಿರುವ ಘಟನೆ ಮೈಸೂರಿನ ರಂಗಯ್ಯನ ಕೊಪ್ಪಲು ಬಳಿ ನಡೆದಿದೆ. 25 ವರ್ಷದ ಜೀವಿತ ಹಾಗೂ 26 ವರ್ಷದ ಪ್ರತ್ಯೂಷ ಮೃತಪಟ್ಟವರು. ಇವರು ಬರುತ್ತಿದ್ದ ಕಾರು ಎದುರಿನಿಂದ ಬರುತ್ತಿದ್ದ ಹಾಲಿನ ಟ್ಯಾಂಕರ್ ಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸ್ಥಳದಲ್ಲೇ ಜೀವಿತಾ ಮೃತಪಟ್ಟರೆ, ಪ್ರತ್ಯೂಷ ಮೈಸೂರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕಾರು – ಹಾಲಿನ ಟ್ಯಾಂಕರ್ ಡಿಕ್ಕಿ ಇಬ್ಬರು ಮಹಿಳೆಯರು ಸಾವು Read More »

ಭೀಕರ ರಸ್ತೆ ದುರಂತ| ಧರ್ಮಸ್ಥಳಕ್ಕೆ ಹೊರಟಿದ್ದ ತಂದೆ‌-ಮಗ ದಾರುಣ ಸಾವು

ಸಮಗ್ರ ನ್ಯೂಸ್: ಕ್ಯಾಂಟರ್ ಹಾಗೂ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಂದೆ ಹಾಗೂ ಮಗ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ನಡೆದಿದೆ. ತಮಿಳುನಾಡು ಮೂಲದ ಅಂಜನಪ್ಪ (40), ಕಾರ್ತಿಕ್ (17) ಮೃತ ದುರ್ದೈವಿಗಳು. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಭೀಕರ ರಸ್ತೆ ಅಪಘಾತವಾಗಿದ್ದು, ಆಲೂರು ತಾಲೂಕಿನ ಆಲೂರು-ಈಶ್ವರಹಳ್ಳಿ ಕೂಡಿಗೆ ಸಮೀಪ ಈ ಘಟನೆ ನಡೆದಿದೆ. ಧರ್ಮಸ್ಥಳಕ್ಕೆಂದು 2 ಕಾರಿನಲ್ಲಿ 10 ಜನ ತೆರಳುತ್ತಿದ್ದರು. ಅದರಲ್ಲಿ ಒಂದು ಕಾರಿಗೆ ಕ್ಯಾಂಟರ್ ಡಿಕ್ಕಿಯಾಗಿ, ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು

ಭೀಕರ ರಸ್ತೆ ದುರಂತ| ಧರ್ಮಸ್ಥಳಕ್ಕೆ ಹೊರಟಿದ್ದ ತಂದೆ‌-ಮಗ ದಾರುಣ ಸಾವು Read More »

ನಟ ಸತೀಶ್ ವಜ್ರ ಹತ್ಯೆ ಪ್ರಕರಣ| ಬಾವನಿಗೇ ಸ್ಕೆಚ್ ಹಾಕಿ ಕೊಂದ ಬಾಮೈದ

ಸಮಗ್ರ ನ್ಯೂಸ್: ಯುವ ನಟ ಸತೀಶ್ ವಜ್ರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಮೈದ ಸುದರ್ಶನ್ ಹಾಗೂ ನಾಗೇಂದ್ರ ಎಂಬುವರನ್ನ ಪೊಲೀಸರು ಬಂಧಿಸಿದ್ದಾರೆ. ಸತೀಶ್ ಬಾಮೈದ ಸುದರ್ಶನ್ ನಿಂದಲೇ ಕೊಲೆ ನಡೆದಿದ್ದು, ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ಆರ್.ಆರ್ ನಗರ ಪೊಲೀಸರು ಬಂಧಿಸಿದ್ದಾರೆ. ಕೆಲ ತಿಂಗಳ ಹಿಂದೆ ಹೃದಯ ಸಂಬಂಧಿ ಖಾಯಿಲೆಯಿಂದ ಮೃತ ಸತೀಶ್ ಪತ್ನಿ ಸಾವನ್ನಪ್ಪಿದ್ದರು. ತಂಗಿಗೆ ಸರಿಯಾಗಿ ಚಿಕಿತ್ಸೆ ಕೊಡಿಸಿಲ್ಲ ಅಂತಾ ಬಾವನ ಮೇಲೆ ಕೋಪಗೊಂಡಿದ್ದ ಸುದರ್ಶನ್. ಅಲ್ಲದೆ ಸತೀಶ್ ಪತ್ನಿ ಸಾವನ್ನಪ್ಪಿದ ಮೇಲೆ ಮಗು

ನಟ ಸತೀಶ್ ವಜ್ರ ಹತ್ಯೆ ಪ್ರಕರಣ| ಬಾವನಿಗೇ ಸ್ಕೆಚ್ ಹಾಕಿ ಕೊಂದ ಬಾಮೈದ Read More »

ಮಾಜಿ ಸಚಿವ ಎಂ.ರಘುಪತಿ ನಿಧನ

ಸಮಗ್ರ ನ್ಯೂಸ್: ಜನತಾ ಪರಿವಾರದ ಹಿರಿಯ ಕೊಂಡಿ ಹಾಗೂ ಮಾಜಿ ಸಚಿವ ಎಂ.ರಘುಪತಿ ಅವರು ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಮಲ್ಲೇಶ್ವರಂನಲ್ಲಿರುವ ಅವರ ನಿವಾಸದಲ್ಲಿ ಮುಂಜಾನೆ 3 ಗಂಟೆಗೆ ರಘುಪತಿ ಅವರು ಕೊನೆಯುಸಿರೆಳೆದರೆಂದು ಕುಟುಂಬದ ಮೂಲಗಳು ತಿಳಿಸಿದ್ದು, ಮೃತರ ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ತಿಳಿದುಬಂದಿದೆ. ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಅವರು ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊಂಚ

ಮಾಜಿ ಸಚಿವ ಎಂ.ರಘುಪತಿ ನಿಧನ Read More »

ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆ ಬಳಿ ತೆರಳಿದ ಜೋಡಿ| ಯುವತಿ ನೀರಿಗೆ ಹಾರಿದ‌ ಮೇಲೆ‌ ವಾಪಾಸ್ಸು ಬಂದ‌ ಯುವಕ| ನೀರಿನಿಂದ ಈಜಿ‌ ಬಂದು ಕೇಸ್ ಕೊಟ್ಟ ಯುವತಿ

ಸಮಗ್ರ ನ್ಯೂಸ್; ಲವ್ ಸ್ಟೋರಿ ಮತ್ತು ವಿಚಿತ್ರ ಸುಸೈಡ್ ಕಥೆ ಇದೀಗ ವ್ಯಾಪಕವಾಗಿ ಸುದ್ದಿಯಾಗಿದೆ. ಜೊತೆಯಾಗಿ ಆತ್ಮಹತ್ಯೆ ಮಾಡಿಕೊಳ್ಳದೆ ಪ್ರಿಯಕರ ನನಗೆ ಮೋಸ‌ ಮಾಡಿದ‌ ಎಂದು‌‌ ಯುವತಿಯೋರ್ವಳು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಯುಪಿಯ ಪ್ರಯಾಗ್ ರಾಜ್ ನಲ್ಲಿ‌32 ವರ್ಷದ ವಿವಾಹಿತ ಮಹಿಳೆ 30 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದಳು.‌ ಆದರೆ ಪ್ರೀತಿಗೆ ಎದುರಾದ ಕೌಟುಂಬಿಕ ‌ಕಾರಣದಿಂದ‌ ಇಬ್ಬರು ಕೂಡ ಆತ್ಮಹತ್ಯೆಗೆ ತೀರ್ಮಾನಿಸಿದ್ದರು. ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಮೇಲಿಂದ ಜಿಗಿದುಒಂದೇ ಸಮಯದಲ್ಲಿ ಇಬ್ಬರು ಪ್ರಾಣ ಬಿಡುವುದು ಪ್ರೇಮಿಗಳಿಬ್ಬರ ಬಯಕೆಯಾಗಿತ್ತು.ಅದರಂತೆ

ಆತ್ಮಹತ್ಯೆ ಮಾಡಿಕೊಳ್ಳಲು ಸೇತುವೆ ಬಳಿ ತೆರಳಿದ ಜೋಡಿ| ಯುವತಿ ನೀರಿಗೆ ಹಾರಿದ‌ ಮೇಲೆ‌ ವಾಪಾಸ್ಸು ಬಂದ‌ ಯುವಕ| ನೀರಿನಿಂದ ಈಜಿ‌ ಬಂದು ಕೇಸ್ ಕೊಟ್ಟ ಯುವತಿ Read More »

ಬೆಚ್ಚಿಬಿದ್ದ ಕನ್ನಡ ಚಿತ್ರರಂಗ| ನಟ ಸತೀಶ್ ವಜ್ರ ಬರ್ಬರ ಹತ್ಯೆ

ಸಮಗ್ರ ನ್ಯೂಸ್: ಕನ್ನಡ ಚಿತ್ರರಂಗದ ಯುವ ನಟ ಸತೀಶ್ ವಜ್ರನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಆರ್.ಆರ್.ನಗರದಲ್ಲಿ ನಡೆದಿದೆ. ಮನೆಯಲ್ಲಿಯೇ ದುಷ್ಕರ್ಮಿಗಳು ಸತೀಶ್ ನನ್ನು ಹತ್ಯೆಗೈದಿದ್ದು, ಚಾಕುವಿನಿಂದ ಇರಿದು ಕೊಂದಿದ್ದಾರೆ.ಸ್ಥಳಕ್ಕೆ ಆರ್.ಆರ್.ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸತೀಶ್ ಕನ್ನಡದ ಲಗೋರಿ ಚಿತ್ರದಲ್ಲಿ ನಟಿಸಿದ್ದರು. ಮೂಲತ: ಮದ್ದೂರು ಮೂಲದವರಾದ ಸತೀಶ್ ವಜ್ರ, ಪ್ರೀತಿಸಿ ವಿವಾಹವಾಗಿದ್ದರು. ಮೂರು ತಿಂಗಳ ಹಿಂದಷ್ಟೇ ಸತೀಶ್ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು. ಸತೀಶ್ ಕಿರುಕುಳದಿಂದಲೇ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದರು

ಬೆಚ್ಚಿಬಿದ್ದ ಕನ್ನಡ ಚಿತ್ರರಂಗ| ನಟ ಸತೀಶ್ ವಜ್ರ ಬರ್ಬರ ಹತ್ಯೆ Read More »

ನಟಿ ಸಾಯಿಪಲ್ಲವಿ ವಿರುದ್ದ ದೂರು ನೀಡಿದ ಭಜರಂಗದಳ

ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ನರಮೇಧಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ತಮಿಳು ನಟಿ ಸಾಯಿ ಪಲ್ಲವಿ ವಿರುದ್ಧ ಹೈದರಾಬಾದ್‌ನಲ್ಲಿ ಪ್ರಕರಣ ದಾಖಲಾಗಿದೆ. ಇಲ್ಲಿನ ಸುಲ್ತಾನ್‌ ಬಜಾರ್‌ ಪೊಲೀಸ್‌ ಠಾಣೆಯಲ್ಲಿ ಹೈದರಾಬಾದ್‌ನ ಭಜರಂಗ ದಳದ ಪದಾಧಿಕಾರಿಗಳು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇತ್ತೀಚೆಗಿನ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಅವರು, “”ಹಿಂಸೆ ಎನ್ನುವುದು ಯಾವುದೇ ಪ್ರಕಾರದಲ್ಲಿರಲಿ ಅದು ತಪ್ಪು ಎಂಬುದು ನನ್ನ ಅಭಿಪ್ರಾಯ. ಆ ದೃಷ್ಟಿಯಲ್ಲಿ ಹೇಳುವುದಾದರೆ, ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಎಷ್ಟು ತಪ್ಪೋ,

ನಟಿ ಸಾಯಿಪಲ್ಲವಿ ವಿರುದ್ದ ದೂರು ನೀಡಿದ ಭಜರಂಗದಳ Read More »

ಉಡುಪಿ: ಕಾಣೆಯಾಗಿದ್ದ ತೈಲ ಪ್ಯಾಕ್ಟರಿ ಮಾಲಕ ಶವವಾಗಿ ಪತ್ತೆ

ಸಮಗ್ರ ನ್ಯೂಸ್: ಕಳೆದೆರಡು ದಿನಗಳ ಹಿಂದೆ ಕಾಣೆಯಾಗಿದ್ದ ತೈಲ ಪ್ಯಾಕ್ಟರಿ ಮಾಲಕರೋರ್ವರು ಶವವಾಗಿ ಪತ್ತೆಯಾದ ಘಟನೆ ಉಡುಪಿಜಿಲ್ಲೆಯ ಹಿರಿಯಡ್ಕದಿಂದ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಹಿರಿಯಡ್ಕ ಮಹಾಲಸಾ ಆಯಿಲ್ ಇಂಡಸ್ಟ್ರಿ ಮಾಲಕ ಪ್ರಕಾಶ್ ಪೈ ಎಂದು ಗುರುತಿಸಲಾಗಿದೆ. ಕಳೆದ ಕೆಲ ವರ್ಷಗಳಿಂದ ಪ್ಯಾಕ್ಟರಿ ನಡೆಸುತ್ತಿದ್ದ ಇವರು ಜೂ.14 ರಿಂದ ಕಾಣೆಯಾಗಿದ್ದರು. ಗುರುವಾರ ಹಿರಿಯಡ್ಕದ ಕುಕ್ಕೆಹಳ್ಳಿ ಬಳಿ ಇವರ ಶವ ಪತ್ತೆಯಾಗಿದೆ. ಆರ್ಥಿಕ ನಷ್ಟದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವರದಿ: ಸನತ್ ಹಿರಿಯಡ್ಕ

ಉಡುಪಿ: ಕಾಣೆಯಾಗಿದ್ದ ತೈಲ ಪ್ಯಾಕ್ಟರಿ ಮಾಲಕ ಶವವಾಗಿ ಪತ್ತೆ Read More »

ಸುಳ್ಯ: ಅನ್ಯಜಾತಿಯ ಯುವಕನ ಪ್ರೇಮಿಸಿ ಮದುವೆಯಾದ ಯುವವೈದ್ಯೆ| ವಶೀಕರಣ ಆರೋಪ ಮಾಡಿದ ಯುವತಿಯ ಪೋಷಕರು

ಸಮಗ್ರ ನ್ಯೂಸ್: ಯುವವೈದ್ಯೆಯೋರ್ವಳು ಅನ್ಯ ಜಾತಿಯ ಯುವಕನನ್ನು ಪ್ರೇಮಿಸಿ ಮದುವೆಯಾಗಿದ್ದು, ಯುವಕನ ಮೇಲೆ ವಶೀಕರಣದ ಆರೋಪ ಹೊರಿಸಿರುವ ಘಟನೆ ಸುಳ್ಯದಿಂದ ವರದಿಯಾಗಿದೆ. ತಾಲೂಕಿನ ಗ್ರಾಮ ಪಂಚಾಯತ್ ಪ್ರತಿನಿಧಿಯೋರ್ವರ ಮಗಳಾಗಿರುವ ಯುವತಿಯು ಕಾಂಞಂಗಾಡ್ ಮೂಲದ ಯುವಕನನ್ನು ಪ್ರೀತಿಸುತ್ತಿದ್ದು ಮನೆಯವರ ಒಪ್ಪಿಗೆ ಇಲ್ಲದ ಕಾರಣ ಇವರಿಬ್ಬರೂ ರಿಜಿಸ್ಟ್ರಾರ್ ವಿವಾಹವಾಗಿದ್ದಾರೆ. ಈ ಹಿಂದೆ ಹುಡುಗಿಯ ಮನೆಯವರು ಈಕೆಗಾಗಿ ಬೇರೆ ಹುಡುಗನ ಜೊತೆ ವಿವಾಹ ಗೊತ್ತುಮಾಡಿದ್ದು, ಇದು ಆಕೆಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಇದೀಗ ವಿವಾಹವಾದ ಬಳಿಕವೂ ಪ್ರತಿಷ್ಟಿತ ಮನೆತನದವಳಾದ ಆಕೆಯನ್ನು ಮನೆಯವರು ಮನವೊಲಿಸಲು

ಸುಳ್ಯ: ಅನ್ಯಜಾತಿಯ ಯುವಕನ ಪ್ರೇಮಿಸಿ ಮದುವೆಯಾದ ಯುವವೈದ್ಯೆ| ವಶೀಕರಣ ಆರೋಪ ಮಾಡಿದ ಯುವತಿಯ ಪೋಷಕರು Read More »

ಪುತ್ತೂರು:ಗೃಹರಕ್ಷಕ ಸಿಬ್ಬಂದಿ ಕುರಿತು ಮಾನಹಾನಿಕರ ವರದಿ ಪ್ರಕಟ| ಸುದ್ದಿಬಿಡುಗಡೆ ಸಂಪಾದಕ ಡಾ. ಯು.ಪಿ ಶಿವಾನಂದ ವಿರುದ್ದ ದೂರು‌ ದಾಖಲು

ಸಮಗ್ರ ನ್ಯೂಸ್: ಗೃಹರಕ್ಷಕದಳದ ಮಹಿಳಾ ಸಿಬ್ಬಂದಿ ಕುರಿತು ಮಾನಹಾನಿಕರ ವರದಿ ಪ್ರಕಟಿಸಿದ ಸುದ್ದಿ ಬಿಡುಗಡೆ ಸಂಪಾದಕ ಡಾ. ಯು.ಪಿ ಶಿವಾನಂದ ವಿರುದ್ದ ಪುತ್ತೂರು ಡಿವೈಎಸ್ ಪಿ ಗಾನ ಪಿ. ಕುಮಾರ್ ಗೆ ದೂರು ನೀಡಲಾಗಿದೆ. ಗೃಹರಕ್ಷಕ ದಳದ ಪುತ್ತೂರು ಘಟಕವು ಜೂ.16ರಂದು ದೂರು ನೀಡಿದ್ದು, ಸಿಬ್ಬಂದಿ ವಿರುದ್ದ ಮಾನಹಾನಿಕರವಾಗಿ, ಅವಹೇಳನಕಾರಿಯಾಗಿ ವರದಿ ಪ್ರಕಟಿಸಲಾಗಿದೆ, ಈ ಕುರಿತಂತೆ ತನಿಖೆ ನಡೆಸಿ ಆರೋಪಿಯನ್ನು ಬಂಧಿಸುವಂತೆ ಮನವಿ ಮಾಡಲಾಗಿದೆ. ಪುತ್ತೂರಿನ ಭವನವೊಂದಕ್ಕೆ ಆ ಭವನದಲ್ಲಿ ಕಚೇರಿ ಹೊಂದಿರುವ ಪ್ರತಿಷ್ಠಿತ ವ್ಯಕ್ತಿಯೋರ್ವರು ಗೃಹರಕ್ಷಕ

ಪುತ್ತೂರು:ಗೃಹರಕ್ಷಕ ಸಿಬ್ಬಂದಿ ಕುರಿತು ಮಾನಹಾನಿಕರ ವರದಿ ಪ್ರಕಟ| ಸುದ್ದಿಬಿಡುಗಡೆ ಸಂಪಾದಕ ಡಾ. ಯು.ಪಿ ಶಿವಾನಂದ ವಿರುದ್ದ ದೂರು‌ ದಾಖಲು Read More »