ಮಾಜಿ ಸಚಿವ ಎಂ.ರಘುಪತಿ ನಿಧನ

ಸಮಗ್ರ ನ್ಯೂಸ್: ಜನತಾ ಪರಿವಾರದ ಹಿರಿಯ ಕೊಂಡಿ ಹಾಗೂ ಮಾಜಿ ಸಚಿವ ಎಂ.ರಘುಪತಿ ಅವರು ಇಂದು ಅನಾರೋಗ್ಯದಿಂದ ನಿಧನರಾಗಿದ್ದಾರೆ.

. Ad Widget . Ad Widget

ಮಲ್ಲೇಶ್ವರಂನಲ್ಲಿರುವ ಅವರ ನಿವಾಸದಲ್ಲಿ ಮುಂಜಾನೆ 3 ಗಂಟೆಗೆ ರಘುಪತಿ ಅವರು ಕೊನೆಯುಸಿರೆಳೆದರೆಂದು ಕುಟುಂಬದ ಮೂಲಗಳು ತಿಳಿಸಿದ್ದು, ಮೃತರ ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ತಿಳಿದುಬಂದಿದೆ.

. Ad Widget . . Ad Widget . Ad Widget

ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಅವರು ಅಪಾರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದಾರೆ.

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೊಂಚ ಗುಣಮುಖರಾಗಿ ನಿವಾಸಕ್ಕೆ ಹಿಂದಿರುಗಿದ್ದ ಅವರು ಆರೋಗ್ಯ ಸ್ಥಿತಿ ಸುಧಾರಿಸದೆ ಇಂದು ಬೆಳಗಿನ ಜಾವ 3 ಗಂಟೆಗೆ ತಮ್ಮ ಮಲ್ಲೇಶ್ವರದ ನಿವಾಸದಲ್ಲಿ ನಿಧನರಾಗಿದ್ದಾರೆ.

Leave a Comment

Your email address will not be published. Required fields are marked *