ಖಾಸಗಿ ಬಸ್ ಮತ್ತು ಕ್ರೂಸರ್ ನಡುವೆ ಅಪಘಾತ; ಇಬ್ಬರು ಸಾವು
ಧಾರವಾಡ : ಧಾರವಾಡ ಜಿಲ್ಲೆಯ ಕಲಘಟಗಿ ಬಳಿ ಖಾಸಗಿ ಬಸ್ ಹಾಗೂ ಕ್ರೂಸರ್ ನಡುವೆ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಹಳಿಯಾಳದ ನಂದಿಗಟ್ಟ ಗ್ರಾಮದಿಂದ ಹುಬ್ಬಳ್ಳಿಗೆ ಕ್ರೂಸರ್ ವಾಹನ ಬರುತಿದ್ದು, ರಾಮನಾಳ ಕ್ರಾಸ್ ಬಳಿ ಅಪಘಾತ ನಡೆದಿದೆ. ಶಿವನಗೌಡ ಮತ್ತು ಅಮೃತ ಪಾಟೀಲ ಮೃತರಾಗಿದ್ಧಾರೆ. ಚಾಲಕ ಮಾರುತಿ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ಗೆ ದಾಖಲು ಮಾಡಲಾಗಿದೆ. ಕಲಘಟಗಿ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.
ಖಾಸಗಿ ಬಸ್ ಮತ್ತು ಕ್ರೂಸರ್ ನಡುವೆ ಅಪಘಾತ; ಇಬ್ಬರು ಸಾವು Read More »










