ಕ್ರೈಂ

ಸಹಾಯ ಕೇಳಿ ಬಂದಾಕೆಯಿಂದ ವಿಡಿಯೋ ಮಾಡಿ ಹನಿಟ್ರ್ಯಾಪ್| ‘ನಿಧಿ’ ಗೆ ಖೆಡ್ಡಾ ತೋಡಿದ ಮದನಾರಿ!

ಸಮಗ್ರ ನ್ಯೂಸ್: ಕೆಲವು ಖತರ್ನಾಕ್ ಗ್ಯಾಂಗ್ ಗಳು ದುಡ್ಡು ಇರುವವರನ್ನು ಹನಿಟ್ರ್ಯಾಪ್ ಹೆಸರಿನಲ್ಲಿ ಬ್ಲಾಕ್ ಮೇಲ್ ಮಾಡಿ ಹಣ ಮಾಡುವ ಪ್ರವೃತ್ತಿಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇಂತದ್ದೇ ಒಂದು ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ. ಸಹಾಯ ಕೇಳಿ ಬಂದ ಮಹಿಳೆಯೊಬ್ಬಳು ಚಿನ್ನದಂಗಡಿಯ ಮಾಲೀಕನಿಗೆ ಹನಿಟ್ರ್ಯಾಪ್ ಮೂಲಕ ಬ್ಲಾಕ್ ಮೇಲ್ ಮಾಡಿ 50 ಲಕ್ಷ ರೂಪಾಯಿ ಹಣ ಪೀಕಿ ಪೊಲೀಸರ ಅತಿಥಿಯಾಗಿದ್ದಾಳೆ. ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ ಸಲ್ಮಾಭಾನು ಎಂಬಾಕೆ, ಇದೀಗ ಮಂಡ್ಯದ ಶ್ರೀನಿಧಿ ಗೋಲ್ಡ್ ಚಿನ್ನದಂಗಡಿಯ […]

ಸಹಾಯ ಕೇಳಿ ಬಂದಾಕೆಯಿಂದ ವಿಡಿಯೋ ಮಾಡಿ ಹನಿಟ್ರ್ಯಾಪ್| ‘ನಿಧಿ’ ಗೆ ಖೆಡ್ಡಾ ತೋಡಿದ ಮದನಾರಿ! Read More »

ಮಂಗಳೂರು: ತಪ್ಪಿಸಲು ಯತ್ನಿಸುತ್ತಿದ್ದ ಆರೋಪಿ ಮೇಲೆ ಫೈರಿಂಗ್

ಸಮಗ್ರ ನ್ಯೂಸ್: ಸ್ಥಳ ಮಹಜರು ಮಾಡಲು ಆರೋಪಿಯನ್ನು ಕರೆದೊಯ್ದ ಸಂದರ್ಭ ಆರೋಪಿ ತಪ್ಪಿಲೆತ್ನಿಸಿದ ಸಂದರ್ಭ ಆರೋಪಿಗೆ ಪೊಲೀಸರು ಗುಂಡೇಟು ಹಾಕಿದ ಘಟನೆ ನಡೆದಿದೆ. ಮಿಸ್ತಾ ಯಾನೆ ಮುಸ್ತಾಕ್ ಗುಂಡೇಟಿಗೊಳಗಾದ ಆರೋಪಿಯಾಗಿದ್ದಾನೆ. ಆಗಸ್ಟ್ 19ರಂದು ವ್ಯಕ್ತಿಯೊಬ್ಬನ ಕೊಲೆಗೆ ಯತ್ನಿಸಿದ ಆರೋಪ ಈತನ ‌ಮೇಲಿತ್ತು. ಅದರಂತೆ ಮಂಗಳೂರು ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಇಂದು ಸ್ಥಳ‌ ಮಜಹರು ಮಾಡಲು ಕರೆದೊಯ್ದು ಆರೋಪಿಯು‌ ಪೊಲೀಸರ ಮೇಲೆರೆಗಿ ತಪ್ಪಿಸಲು‌ ಮುಂದಾದ ಎನ್ನಲಾಗಿದೆ. ಈ‌ ಸಂದರ್ಭ ‌ಪೊಲೀಸರು ಆರೋಪಿಗೆ ಗುಂಡೇಟು ಹಾಕಿ ಬಂಧಿಸಿದರು ‌ಎಂದು

ಮಂಗಳೂರು: ತಪ್ಪಿಸಲು ಯತ್ನಿಸುತ್ತಿದ್ದ ಆರೋಪಿ ಮೇಲೆ ಫೈರಿಂಗ್ Read More »

ವಿಡಿಯೋಕಾಲ್ ನಲ್ಲಿ ಬೆತ್ತಲಾದ ಯುವತಿ| ಕಾಲ್ ರಿಸೀವ್ ಮಾಡಿದಾತ ಫುಲ್ ಶಾಕ್

ಸಮಗ್ರ ನ್ಯೂಸ್: ವಿಡಿಯೋ ಕಾಲ್ ಮಾಡಿ ಯುವಕನಿಗೆ ಯುವತಿಯಿಂದ ಬ್ಲಾಕ್ ಮೇಲ್ ಮಾಡಲಾಗಿದೆ. ಹುಣಸೂರು ತಾಲೂಕಿನ ಬಿಳಿಕೆರೆ ಗ್ರಾಮದ ವಾಸುಗೆ ಹಣ ನೀಡುವಂತೆ ಯುವತಿ ಬ್ಲಾಕ್ ಮೇಲ್ ಮಾಡಿದ್ದಾಳೆ. ವಿಡಿಯೋ ಕಾಲ್ ಗೆ ಮೊದಲು ಮೆಸೇಜ್ ಮಾಡಿ ತನ್ನನ್ನು ಅಮೃತಾ ಎಂದು ಪರಿಚಯ ಮಾಡಿಕೊಂಡಿದ್ದ ಯುವತಿ ಬಳಿಕ ವಿಡಿಯೋ ಕಾಲ್ ಮಾಡಿ ನಗ್ನಳಾಗಿದ್ದಾಳೆ. ಕೂಡಲೇ ವಿಡಿಯೋ ಕಾಲ್ ಕಟ್ ಮಾಡಲಾಗಿದೆ. ವಿಡಿಯೋ ಕಾಲ್ ಕಟ್ ಮಾಡಿದ ನಂತರ ವಿಡಿಯೋ ಕಾಲ್ ರೆಕಾರ್ಡ್ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ.

ವಿಡಿಯೋಕಾಲ್ ನಲ್ಲಿ ಬೆತ್ತಲಾದ ಯುವತಿ| ಕಾಲ್ ರಿಸೀವ್ ಮಾಡಿದಾತ ಫುಲ್ ಶಾಕ್ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಭೇದಿಸಿದ ಪೊಲೀಸರಿಗೆ ಪ್ರಶಂಸಾ ಪತ್ರ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಪೊಲೀಸ್ ಇಲಾಖೆಯ ವತಿಯಿಂದ ಪ್ರಸಂಶನಾ ಪತ್ರ ನೀಡಿ ಅಭಿನಂದಿಸಿ ಗೌರವಿಸಲಾಯಿತು. ಆರೋಪಿತರನ್ನು ಪತ್ತೆ ಹಚ್ಚಲು ಬೆಳ್ಳಾರೆ, ಸುಳ್ಯ, ಸುಬ್ರಹ್ಮಣ್ಯ, ಕಡಬ, ವಿಟ್ಲ, ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಪಶ್ಚಿಮ ವಲಯದ ಅಧಿಕಾರಿಸಿಬ್ಬಂದಿಗಳ ತನಿಖಾ ತಂಡ ರಚಿಸಿ, ರಾಜ್ಯ ಹಾಗೂ ಹೊರ ರಾಜ್ಯದ ವಿವಿಧೆಡೆಗಳಲ್ಲಿ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಭೇದಿಸಿದ ಪೊಲೀಸರಿಗೆ ಪ್ರಶಂಸಾ ಪತ್ರ Read More »

ಮಡಿಕೇರಿ: ಅಕ್ರಮ ಜಿಂಕೆ ಚರ್ಮ ಮಾರಾಟ ಯತ್ನ; ಓರ್ವನ ಬಂಧನ

ಸಮಗ್ರ ನ್ಯೂಸ್: ಅಕ್ರಮವಾಗಿ ಜಿಂಕೆ ಚರ್ಮಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಓರ್ವನನ್ನು ಮಡಿಕೇರಿ ಸಿ.ಐ.ಡಿ ಪೊಲೀಸ್ ಅರಣ್ಯ ಘಟಕ ಬಂಧಿಸಿದೆ. ಆರೋಪಿ ಬಳಿಯಿಂದ 3 ಜಿಂಕೆ ಚರ್ಮಗಳನ್ನು ವಶಕ್ಕೆ ಪಡೆಯಲಾಗಿದೆ. ಗುಡ್ಡೆಹೊಸೂರು-ಸಿದ್ದಾಪುರ ಕಡೆಗೆ ತೆರಳುವ ಮಾರ್ಗದಲ್ಲಿ ಆ.21ರಂದು ಅಲೀಮ್ ಪಾಷಾ ಎಂಬಾತ ಸರಕಾರದ ಪರವಾನಗಿ ಪಡೆಯದೆ ಜಿಂಕೆ ಚರ್ಮಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಮಾಹಿತಿ ಅರಿತು ದಾಳಿ ನಡೆಸಿ ಆರೋಪಿ ಸಹಿತ ಜಿಂಕೆ ಚರ್ಮಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಂಧಿತ ಆರೋಪಿ ವಿರುದ್ದ

ಮಡಿಕೇರಿ: ಅಕ್ರಮ ಜಿಂಕೆ ಚರ್ಮ ಮಾರಾಟ ಯತ್ನ; ಓರ್ವನ ಬಂಧನ Read More »

ಭಾರತದಲ್ಲಿ ನಡೆಯಬಹುದಾಗಿದ್ದ ದೊಡ್ಡ ಅನಾಹುತವನ್ನು ತಡೆದ ರಷ್ಯಾ !

ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರೊಬ್ಬರನ್ನು ಟಾರ್ಗೆಟ್ ಮಾಡಿ, ಭಾರತದಲ್ಲಿ ಸ್ಫೋಟ ನಡೆಸಲು ಹೊಂಚು ಹಾಕಿದ್ದ ಐಸಿಸ್ ಉಗ್ರನನ್ನು ರಷ್ಯಾದ ಭದ್ರತಾ ಪಡೆಗಳು ಬಂಧಿಸಿವೆ. ಈ ಬಗ್ಗೆ ಸ್ವತಃ ರಷ್ಯಾವೇ ಅಧಿಕೃತವಾಗಿ ಮಾಹಿತಿ ನೀಡಿದ್ದು, ಭಾರತದಲ್ಲಿ ನಡೆಯಬಹುದಾಗಿದ್ದ ದೊಡ್ಡ ಅನಾಹುತವನ್ನು ಭಾರತದ ಸ್ನೇಹಿತ ರಷ್ಯಾ ತಡೆದಂತಾಗಿದೆ. ರಷ್ಯಾದ ಫೆಡರಲ್ ಸೆಕ್ಯುರಿಟಿ ಸರ್ವೀಸ್ (ಎಫ್ ಎಸ್ ಬಿ) ಸೋಮವಾರ (ಆ.22) ರಂದು ಇಸ್ಲಾಮಿಕ್ ಸ್ಟೇಟ್ ಆತ್ಮಾಹುತಿ ದಾಳಿಕೋರನನ್ನು ಬಂಧಿಸಿದ್ದು, ಆತ ಭಾರತದ ಪ್ರಮುಖ ನಾಯಕನ ಹತ್ಯೆಗೆ ಸಂಚು ರೂಪಿಸುತ್ತಿದ್ದದ್ದನ್ನು

ಭಾರತದಲ್ಲಿ ನಡೆಯಬಹುದಾಗಿದ್ದ ದೊಡ್ಡ ಅನಾಹುತವನ್ನು ತಡೆದ ರಷ್ಯಾ ! Read More »

ಮೃತದೇಹ ತರಲು ಹೊರಟವರು ಮೃತದೇಹವಾದರು !ಕ್ರೂಸರ್ – ಖಾಸಗಿ ಬಸ್ ನಡುವೆ ಅಪಘಾತ ಇಬ್ಬರ ಸಾವು

ಹುಬ್ಬಳ್ಳಿ ಜಿಲ್ಲೆ ಕಲಘಟಗಿ ತಾಲ್ಲೂಕು ರಾಮನಾಳ ಕ್ರಾಸ್ ಬಳಿ ಕ್ರೂಸರ್ ವಾಹನ ಮತ್ತು ಖಾಸಗಿ ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬ ತೀವ್ರ ಗಾಯಗೊಂಡಿದ್ದಾನೆ. ಕಿಮ್ಸ್ ನಲ್ಲಿ ಮೃತಪಟ್ಟ ವ್ಯಕ್ತಿಯ ದೇಹವನ್ನು ಕ್ರೂಸರ್ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ರಾಮನಾಳ ಕ್ರಾಸ ಬಳಿ ಅಪಘಾತ ಸಂಭವಿಸಿದೆ.ಮೃತರಾದವರು ಹಳಿಯಾಳ ತಾಲ್ಲೂಕಿನ ನಂದಿಗಟ್ಟ ಗ್ರಾಮದ ಶಿವನಗೌಡ ಪಾಟೀಲ, ಅಮೃತ ಪಾಟೀಲ ಮೃತಪಟ್ಟವರು. ಚಾಲಕ ಮಾರುತಿ ಎಂಬ ವ್ಯಕ್ತಿ ತೀವ್ರ ಗಾಯಗೊಂಡಿದ್ದು, ದೇವೇಂದ್ರ ಎಂಬುವರು ಅಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ಕಲಘಟಗಿ

ಮೃತದೇಹ ತರಲು ಹೊರಟವರು ಮೃತದೇಹವಾದರು !ಕ್ರೂಸರ್ – ಖಾಸಗಿ ಬಸ್ ನಡುವೆ ಅಪಘಾತ ಇಬ್ಬರ ಸಾವು Read More »

ಪೋಷಕರ ಜೊತೆ ಕೋಪಕೊಂಡು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಬೆಂಗಳೂರು : ಪೋಷಕರ ಜೊತೆ ಕೋಪಕೊಂಡು 5ನೇ ತರಗತಿ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬಾಲಕಿಯ ತಂದೆ, ಪೇಂಟಿಂಗ್ ಕೆಲಸ ಮಾಡುತ್ತಿದ್ದು, ತಾಯಿ, ಗೃಹಿಣಿ. ದಂಪತಿಗೆ ಮೂವರು ಮಕ್ಕಳಿದ್ದು, ಮೃತ ವಿದ್ಯಾರ್ಥಿನಿಯೇ ಹಿರಿಯವಳು. ‘ಆಂಗ್ಲ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದ ಬಾಲಕಿ, ವಿದ್ಯಾಭ್ಯಾಸದಲ್ಲಿ ಚುರುಕಿದ್ದಳು. ಶಾಲೆಯಲ್ಲಿ ಶನಿವಾರ ಪೋಷಕರ ಸಭೆ ಇತ್ತು. ಮಗಳ ಜೊತೆ ತಂದೆ ಸಭೆಗೆ ಹೋಗಿ ವಾಪಸು ಮನೆಗೆ ಬಂದಿದ್ದರು. ಊರ ಹಬ್ಬದ ನಿಮಿತ್ತ ಮಗಳಿಗೆ ಹೊಸ ಬಟ್ಟೆ ಕೊಡಿಸಿದ್ದರು. ಆಕೆಯನ್ನು ಮನೆಯಲ್ಲೇ ಬಿಟ್ಟು ಉಳಿದ

ಪೋಷಕರ ಜೊತೆ ಕೋಪಕೊಂಡು ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ Read More »

ಭಟ್ಕಳ: ಬ್ರೆಡ್ ತರಲೆಂದು ಹೋಗಿದ್ದ ಬಾಲಕ ಗೋವಾದಲ್ಲಿ ಪತ್ತೆ

ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಿಂದ ಬ್ರೆಡ್ ತರಲೆಂದು ಹೋಗಿದ್ದ 8 ವರ್ಷದ ಅಲಿ ಇಸ್ಲಾಂ ಸಾದಾ ಎಂಬ ಬಾಲಕ ಎರಡು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದು, ಇದೀಗ ಗೋವಾದಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಬಾಲಕನನ್ನು ಕಾರಿನಲ್ಲಿ ಬಂದು ಕಿಡ್ನಾಪ್ ಮಾಡಲಾಗಿದ್ದು, ಕಿಡ್ನಾಪ್ ಮಾಡಿದ್ದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಕಾರ್ಯಚರಣೆ ಮುಂದುವರೆಸಿದ ಭಟ್ಕಳ ನಗರ ಠಾಣೆ ಪೊಲೀಸರು ಇದೀಗ ಬಾಲಕನನ್ನು ಗೋವಾದಲ್ಲಿ ಪತ್ತೆ ಮಾಡಿ ರಕ್ಷಿಸಿದ್ದಾರೆ. ಇನ್ನು ಬಾಲಕನ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ಬಾಲಕ

ಭಟ್ಕಳ: ಬ್ರೆಡ್ ತರಲೆಂದು ಹೋಗಿದ್ದ ಬಾಲಕ ಗೋವಾದಲ್ಲಿ ಪತ್ತೆ Read More »

ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ; ಕಾಲೇಜು ಪ್ರಾಚಾರ್ಯ ಹಾಗೂ ಅವರ ಪುತ್ರ ಸೂತ್ರದಾರರು

ಗದಗ : ಇಲ್ಲಿನ ಮುನ್ಸಿಪಲ್ ಕಾಲೇಜ್‌ನಲ್ಲಿ ನಡೆದ ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನೇತೃತ್ವದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ್ದು, ಗದಗದ ಮುನ್ಸಿಪಲ್ ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋನಾವನೆ ಮತ್ತು ಅವರ ಪುತ್ರ ಸಮೀತ ಕುಮಾರ್ ಪ್ರಶ್ನೆ ಪತ್ರಿಕೆಯನ್ನು ಸೋರಿಕೆಯ ಸೂತ್ರದಾರರಾಗಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆಗಾಗಿ ನಡೆಸಿದ್ದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. 2022ರ ಆಗಸ್ಟ್

ಕೆಪಿಟಿಸಿಎಲ್ ಕಿರಿಯ ಸಹಾಯಕ ಹುದ್ದೆ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ; ಕಾಲೇಜು ಪ್ರಾಚಾರ್ಯ ಹಾಗೂ ಅವರ ಪುತ್ರ ಸೂತ್ರದಾರರು Read More »