ಕ್ರೈಂ

ರಷ್ಯಾ ಅಧ್ಯಕ್ಷ ಪುಟಿನ್ ಕೊಲೆಯತ್ನ

ಸಮಗ್ರ ನ್ಯೂಸ್: ಅಪಘಾತ ಮಾಡಿಸಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು ಹತ್ಯೆಗೈಯ್ಯುವ ಯತ್ನ ನಡೆದಿತ್ತು ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ. ಪುಟಿನ್‌ ತಮ್ಮ ಲಿಮೋಸಿನ್‌ ಕಾರಿನಲ್ಲಿ ನಿವಾಸಕ್ಕೆ ಹಿಂದಿರುಗುತ್ತಿದ್ದ ವೇಳೆ ಕೊಲೆ ಯತ್ನ ನಡೆದಿದೆ.ಕಾರಿನ ಎಡಭಾಗದ ಮುಂಬದಿಯ ಚಕ್ರಕ್ಕೆ ವಾಹನವೊಂದು ಢಿಕ್ಕಿ ಹೊಡೆದಿದೆ. ಕಾರಿನ ಚಕ್ರದಲ್ಲಿ ಜೋರಾಗಿ ಶಬ್ದವಾಗಿ, ಹೊಗೆ ಎದ್ದಿತ್ತು. ಕೂಡಲೇ ಅಧ್ಯಕ್ಷರನ್ನು ಬಚಾವ್‌ ಮಾಡಿ, ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಈ ಮೂಲಕ ಹತ್ಯೆ ಯತ್ನವನ್ನು ವಿಫ‌ಲಗೊಳಿಸಲಾಯಿತು ಎಂದು ವರದಿ ಹೇಳಿದೆ. ತಾವು […]

ರಷ್ಯಾ ಅಧ್ಯಕ್ಷ ಪುಟಿನ್ ಕೊಲೆಯತ್ನ Read More »

ಮಂಗಳೂರು: ಒಂಟಿ ಮಹಿಳೆಯ‌ ಬೆದರಿಸಿ‌ ಮನೆ ದರೋಡೆಗೈದ ಪ್ರಕರಣ| ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು

ಸಮಗ್ರ ನ್ಯೂಸ್: ಮನೆಯೊಂದರಲ್ಲಿ ಒಂಟಿ ಮಹಿಳೆ ಯನ್ನು ಬೆದರಿಸಿ ಸುಲಿಗೆಗೈದ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಡಗಮಿಜಾರು ಗ್ರಾಮದ ದಿನೇಶ್ ಪೂಜಾರಿ (36), ಬೆಳ್ತಂಗಡಿ ತಾಲೂಕಿನ ಉಳಗುಡ್ಡ ಹೊಸಮನೆಯ ಸುಕೇಶ್ ಪೂಜಾರಿ (32), ಮೂಡುಬಿದಿರೆ ತಾಲೂಕಿನ ಮೂಡುಮಾರ್ನಾಡು ಗ್ರಾಮದ ಹರೀಶ್ ಪೂಜಾರಿ (34) ಬಂಧಿತ ಆರೋಪಿಗಳು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 1 ತಲವಾರು, 2 ಸ್ಕೂಟರ್, 3 ಮೊಬೈಲ್ ಫೋನ್, 2 ಮಂಕಿಕ್ಯಾಪ್ ಹಾಗೂ ಸುಲಿಗೆಗೈದ 62 ಗ್ರಾಂ ಚಿನ್ನಾಭರಣವನ್ನೂ ವಶಪಡಿಸಲಾಗಿದೆ. ಪೊಲೀಸರು ವಶಪಡಿಸಿಕೊಂಡ

ಮಂಗಳೂರು: ಒಂಟಿ ಮಹಿಳೆಯ‌ ಬೆದರಿಸಿ‌ ಮನೆ ದರೋಡೆಗೈದ ಪ್ರಕರಣ| ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು Read More »

ಮಂಗಳೂರು: ಫಾಝಿಲ್ ಹತ್ಯೆ ಪ್ರಕರಣ| ಆರೋಪಿ‌ ಹರ್ಷಿತ್ ಗೆ ಜಾಮೀನು ಮಂಜೂರು

ಸಮಗ್ರ ನ್ಯೂಸ್: ಫಾಝಿಲ್ ಹತ್ಯೆ ಪ್ರಕರಣದ ಆರೋಪಿ ಬಂಟ್ವಾಳದ ಹರ್ಷಿತ್‌ಗೆ ಮೂರನೇ ಜಿಲ್ಲಾ ಸತ್ರ ನ್ಯಾಯಾಲಯವು ಜಾಮೀನು ನೀಡಿದೆ. ಜುಲೈ .28ರಂದು ರಾತ್ರಿ ಸುರತ್ಕಲ್ ಅಂಗಡಿಯೊಂದರ ಮುಂಭಾಗದಲ್ಲಿ ಫಾಝಿಲ್‌ನನ್ನು ತಂಡವೊಂದು ಕೊಲೆಗೈದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ನಡುವೆ ಇದೀಗ ಆರೋಪಿ ಹರ್ಷಿತ್‌ಗೆ ನ್ಯಾಯಾಲಯವು ಸೆ.7ರಂದು ಜಾಮೀನು ಮಂಜೂರು ಮಾಡಿದೆ. ಜುಲೈ 28ರಂದು ರಾತ್ರಿ ಮುಹಮ್ಮದ್ ಫಾಝಿಲ್ ಅವರು ಸುರತ್ಕಲ್ ನ ಮೂಡ ಮಾರುಕಟ್ಟೆಯಲ್ಲಿರುವ ಬಟ್ಟೆ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಸ್ನೇಹಿತನನ್ನು

ಮಂಗಳೂರು: ಫಾಝಿಲ್ ಹತ್ಯೆ ಪ್ರಕರಣ| ಆರೋಪಿ‌ ಹರ್ಷಿತ್ ಗೆ ಜಾಮೀನು ಮಂಜೂರು Read More »

ಬೆಳ್ತಂಗಡಿ: ಈಚರ್ ಲಾರಿಗೆ ಡಿಕ್ಕಿ ಹೊಡೆದ ಬೈಕ್; ಸವಾರ ಸ್ಪಾಟ್ ಡೆತ್

ಸಮಗ್ರ ನ್ಯೂಸ್: ಬೈಕ್ ಮತ್ತು ಈಚರ್ ಲಾರಿ ಪರಸ್ಪರ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೆ.15ರಂದು ರಾತ್ರಿ ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಪಿಲ್ಯ ಎಂಬಲ್ಲಿ ನಡೆದಿದೆ ಮೃತ ಯುವಕನನ್ನು ಕುದ್ಮಾಡಿಯ ಪ್ರವೀಣ್ ಆಚಾರ್ಯ ಎಂದು ಗುರುತಿಸಲಾಗಿದೆ. ಘಟನೆ ಬೆನ್ನಲ್ಲೇ ಅಪಘಾತ ಎಸಗಿದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು,ಕೂಡಲೇ ಸ್ಥಳೀಯರು ಬೆನ್ನಟ್ಟಿ ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ. ಮೃತ ಪ್ರವೀಣ್ ಆಚಾರ್ಯ ಅವರ ಪಾರ್ಥಿವ ಶರೀರವನ್ನು ಬೆಳ್ತಂಗಡಿ ಆಸ್ಪತ್ರೆಯ ಶವಾಗಾರಕ್ಕೆ

ಬೆಳ್ತಂಗಡಿ: ಈಚರ್ ಲಾರಿಗೆ ಡಿಕ್ಕಿ ಹೊಡೆದ ಬೈಕ್; ಸವಾರ ಸ್ಪಾಟ್ ಡೆತ್ Read More »

ಸೋಮವಾರಪೇಟೆ: ಚೂರಿಯಿಂದ ಇರಿದು ಮಹಿಳೆಯ ಹತ್ಯೆ

ಸಮಗ್ರ ನ್ಯೂಸ್: ಸೋಮವಾರಪೇಟೆ ತಾಲೂಕು ಮಾದಾಪುರ ಗ್ರಾಮದ ಜಂಬೂರುಬಾಣೆಯಸಾಹೀರಾ (35) ಎಂಬ ಮಹಿಳೆ ಯನ್ನು ಸ್ಥಳೀಯ ವ್ಯಕ್ತಿಯೋರ್ವರು ಚೂರಿ ಯಿಂದ ಇರಿದು ಹತ್ಯೆಗೈದ ಘಟನೆ ವರದಿ ಯಾಗಿದೆ. ಜಂಬೂರುಬಾಣೆಯ ಇಗ್ಗೋಡ್ಲುವಿನಲ್ಲಿ ಘಟನೆ ನಡೆದಿದ್ದು ಆರೋಪಿ ಪೂವಯ್ಯ (ಬೊಳ್ಳು)ಪೋಲಿಸರಿಗೆ ಶರಣಾಗಿರುವುದಾಗಿ ತಿಳಿದುಬಂದಿದೆ.ಸೋಮವಾರಪೇಟೆ ಪೋಲಿಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.

ಸೋಮವಾರಪೇಟೆ: ಚೂರಿಯಿಂದ ಇರಿದು ಮಹಿಳೆಯ ಹತ್ಯೆ Read More »

ಸುಳ್ಯ: ಬೈಕ್ ಅಪಘಾತ/ಎರಡೂ ಕಾಲು ಕಳೆದುಕೊಂಡ ವೃದ್ಧ

ಸಮಗ್ರ ನ್ಯೂಸ್: ಅಜ್ಜಾವರ ಗ್ರಾಮದ ಅಡ್ಪಂಗಾಯ ಬಸ್ ನಿಲ್ದಾಣ ಬಳಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ದನಿಗೆ ಎದುರಿನಿಂದ ಬಂದ ಬೈಕ್ ಡಿಕ್ಕಿ ಹೊಡೆದು ವೃದ್ದನ ಎರಡೂ ಕಾಲು ತುಂಡಾಗಿ ಗಂಭೀರ ಗಾಯಗೊಂಡ ಘಟನೆ ಸೆ.೧೫ ರಂದು ವರದಿಯಾಗಿದೆ. ಕಾಲು ಕಳೆದುಕೊಂಡ ವೃದ್ಧನ್ನು ಮುದರ ಎಂದು ಗುರುತಿಸಲಾಗಿದೆ. ಇವರು ಹಾಗೂ ಪ್ರಭಾಕರ ಎಂಬವರು ನಡೆದುಕೊಂಡು ಹೋಗುತ್ತಿದ್ದಾಗ, ಮಂಡೆಕೋಲಿನಿಂದ ಸುಳ್ಯ ಕಡೆಗೆ ಹೋಗುತ್ತಿದ್ದ ಮಂಡೆಕೋಲಿನ ಮಾರ್ಗ ಎಂಬಲ್ಲಿಯ ಕೌಶಿಕ್ ಎಂಬವರು ಚಲಾಯಿಸುತ್ತಿದ್ದ ಬೈಕ್ ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಬಸಕ್ಕೆ

ಸುಳ್ಯ: ಬೈಕ್ ಅಪಘಾತ/ಎರಡೂ ಕಾಲು ಕಳೆದುಕೊಂಡ ವೃದ್ಧ Read More »

ಲಕ್ಷ್ಮಣತೀರ್ಥ ನದಿಯಲ್ಲಿ ಯುವಕನ ಶವಪತ್ತೆ

ಸಮಗ್ರ ನ್ಯೂಸ್: ಹುಣಸೂರು ಲಕ್ಷ್ಮಣತೀರ್ಥ ನದಿಯ ಕಟ್ಟೆಮಳಲವಾಡಿ ಅಣೆಕಟ್ಟೆ ಬಳಿಯಲ್ಲಿ ಯುವಕನ ಶವ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ದಾವಣಿ ಬೀದಿಯ ನಿತ್ಯಾನಂದರ ಪುತ್ರ, ಸ್ಟೋರ್ ಬೀದಿ ನಿವಾಸಿ ರಾಘವೇಂದ್ರ(24)ರ ಶವ ಎಂದು ಗುರುತಿಸಲಾಗಿದೆ. ಕಳೆದ ಶನಿವಾರ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು, ಈತನ ಪಲ್ಸರ್ ಬೈಕ್, ಮೊಬೈಲ್, ಪರ್ಸ್,ಪಾನ್‌ಕಾರ್ಡ್, ಡಿ.ಎಲ್. ಚಿಕ್ಕಹುಣಸೂರು ಹಳೇ ಊರಿನ ನದಿಯ ಬಳಿಯ ಜಮೀನಿನಲ್ಲಿ ಪತ್ತೆಯಾಗಿತ್ತು. ಮೀನುಗಾರರು ನೀಡಿದ ಮಾಹಿತಿ ಮೇರೆಗೆ ಎಸ್.ಐ.ರಾಧಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ರಾಘವೇಂದ್ರರ

ಲಕ್ಷ್ಮಣತೀರ್ಥ ನದಿಯಲ್ಲಿ ಯುವಕನ ಶವಪತ್ತೆ Read More »


ಹೊಳೆಯಲ್ಲಿ ಸ್ನಾನ‌ ಮಾಡಲು ಹೋಗಿ ಯುವಕ ಕಾಲು ಜಾರಿ ಬಿದ್ದು ಸಾವು

ಸಮಗ್ರ ನ್ಯೂಸ್: ಹೊಳೆಯಲ್ಲಿ ಸ್ನಾನ ಮಾಡಲು ಹೋದ ಯುವಕ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆಯೊಂದು ಹೆಬ್ರಿ ತಾಲೂಕಿನ ವರಂಗ ಗ್ರಾಮದ ತಲಮನೆಯ ಹೊಳೆಯಲ್ಲಿ ಬುಧವಾರದಂದು ನಡೆದಿದೆ. ಮೃತ ಯುವಕ ಮುನಿಯಾಲು ವರಂಗ ಗ್ರಾಮ ಹೆಬ್ರಿ ತಾಲೂಕಿನ ಪವನ್ ರಾಜ್(28) ಎಂದು ಗುರುತಿಸಲಾಗಿದೆ. ಇವರು ತನ್ನ ಸಂಬಂಧಿಕರೊಂದಿಗೆ ವರಂಗ ಗ್ರಾಮದ ತಲಮನೆಯ ಹೊಳೆಯ ಬದಿಯಲ್ಲಿರುವ ಕಲ್ಲಿನ ಬಂಡೆಯ ಮೇಲೆ ಪಾರ್ಟಿ ಮಾಡುತ್ತಿರುವಾಗ ಪವನ್ ರಾಜ್ ಬುಧವಾರ ಸಂಜೆ ಹೊಳೆಯಲ್ಲಿ ಸ್ನಾನ ಮಾಡಲು ಹೋದವರು ಅಕಸ್ಮಿಕವಾಗಿ ಅವರ


ಹೊಳೆಯಲ್ಲಿ ಸ್ನಾನ‌ ಮಾಡಲು ಹೋಗಿ ಯುವಕ ಕಾಲು ಜಾರಿ ಬಿದ್ದು ಸಾವು
Read More »

ಕೆಎಸ್ ಆರ್ ಟಿ ಸಿ ಬಸ್ ಮತ್ತು  ಬೈಕ್ ಅಪಘಾತ; ಬೈಕ್ ಸವಾರ ಸಾವು

ಬೆಳಗಾವಿ: ಬೈಕ್ ಹಾಗೂ ಸಾರಿಗೆ ಬಸ್ ವಾಹನ ಮುಖಾಮುಖಿ ಡಿಕ್ಕಿ, ಈ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆಯೊಂದು ಗೋಕಾಕ ತಾಲೂಕಿನ ಚಿಕ್ಕನಂದಿ ಕ್ರಾಸ್ ಬಳಿ ನಡೆದಿದೆ. ಈ ಅಪಘಾತದಲ್ಲಿ ಬೈಕ್ ಸವಾರ ರೇವಣ್ಣ ಬಣವಿ (36) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಬಸ್ ಉಡುಪಿಯಿಂದ ಗೋಕಾಕ್​ ಗೆ ಹೊರಟಿತ್ತು. ಬೈಕ್ ಸವಾರ ಚಿಕ್ಕನಂದಿ ಗ್ರಾಮಕ್ಕೆ ಹೋಗುತ್ತಿದ್ದನು. ಈ ವೇಳೆ ಮುಖಾಮುಖಿ ಡಿಕ್ಕಿಯಾಗಿದೆ. ಈ ಬಗ್ಗೆ ಗೋಕಾಕ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೆಎಸ್ ಆರ್ ಟಿ ಸಿ ಬಸ್ ಮತ್ತು  ಬೈಕ್ ಅಪಘಾತ; ಬೈಕ್ ಸವಾರ ಸಾವು Read More »

ಸಾಕುನಾಯಿ ವಿಚಾರದಲ್ಲಿ ಅತ್ತೆ ಮಾವನೊಂದಿಗೆ ಗಲಾಟೆ, ಮನನೊಂದು ತಾಯಿ ಮಗಳು ಆತ್ಮಹತ್ಯೆ

ಬೆಂಗಳೂರು: ಸಾಕುನಾಯಿ ವಿಚಾರದಲ್ಲಿ ಅತ್ತೆ ಮಾವನೊಂದಿಗೆ ನಡೆದ ವಿವಾದದಿಂದ ಮನನೊಂದ ತಾಯಿ- ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದಿವ್ಯಾ ಹಾಗೂ ಮಗಳು ಮೃತ ದುರ್ದೈವಿಗಳು. ದಿವ್ಯಾ ಉಸಿರಾಟ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದರು. ದಿವ್ಯಾ ಅವರ ಅತ್ತೆ- ಮಾವ ಮನೆಯಲ್ಲಿ ನಾಯಿ ಸಾಕುತ್ತಿದ್ದರು. ಮನೆಯಲ್ಲಿ ನಾಯಿ ಇದ್ದರೆ ಅಸ್ತಮಾ ಸಂಬಂಧಿ ಅಲರ್ಜಿ ಹೆಚ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿ ನಾಯಿಯನ್ನು ಯಾರಿಗಾದರೂ ನೀಡಿ ಎಂದು ಅತ್ತೆ ಮಾವನಿಗೆ ದಿವ್ಯಾ ಹೇಳಿದ್ದರು. ಆದರೆ

ಸಾಕುನಾಯಿ ವಿಚಾರದಲ್ಲಿ ಅತ್ತೆ ಮಾವನೊಂದಿಗೆ ಗಲಾಟೆ, ಮನನೊಂದು ತಾಯಿ ಮಗಳು ಆತ್ಮಹತ್ಯೆ Read More »