ಸಿಡಿಲು ಬಡಿದು ಇಬ್ಬರು ದುರ್ಮರಣ

ಸಮಗ್ರ ನ್ಯೂಸ್: ಸತತವಾಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಜನಜೀವನ ನಲುಗಿ ಹೋಗಿದೆ

. Ad Widget . Ad Widget

ಅತಿವೃಷ್ಟಿ ಹಾಗೂ ನೆರೆ ಭೀತಿ ಜನರನ್ನು ತಲ್ಲಣಗೊಳಿಸಿದೆ. ಶನಿವಾರ ಸಿಡಿಲು ಬಡಿದು ಓರ್ವ ಮಹಿಳೆ ಹಾಗೂ ವ್ಯಕ್ತಿಯೊಬ್ಬರು ದುರ್ಮರಣ ಹೊಂದಿದ್ದಾರೆ.

. Ad Widget . . Ad Widget . Ad Widget

ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿಯ ನಂದಮ್ಮ (35) ಹಾಗೂ ದೇವತ್ಕಲ್ ಗ್ರಾಮದ ರಾಜು ಸಿಂಗ್ (38) ಮೃತರು.

ತಮ್ಮ ಭತ್ತದ ಜಮೀನಿನಲ್ಲಿನ ಕಳೆ ತೆಗೆದು ವಾಪಸ್ ಬರುವಾಗ ಸಿಡಿಲು ಬಡಿದು ನಂದಮ್ಮ ಮೃತಪಟ್ಟರೆ, ಮನೆ ಮುಂದೆ ನಿಂತಿದ್ದಾಗ ಸಿಡಿಲು ಬಡಿದು ರಾಜು ಸಿಂಗ್ ಕೊನೆಯುಸಿರೆಳೆದರು. ಜೊತೆಗೆ ಇವರ ಎರಡು ಮೇಕೆಗಳೂ ಕೂಡ ಸಾವನ್ನಪ್ಪಿದೆ.

Leave a Comment

Your email address will not be published. Required fields are marked *