ಕ್ರೈಂ

ಸುಳ್ಯ: ಅಂಬೇಡ್ಕರ್ ಧ್ವಜ ತೆರವುಗೊಳಿಸಿದ ಪಿಡಿಒ/ಸರಿಗೊಳಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯಿಂದ ಪ್ರತಿಭಟನೆ ಎಚ್ಚರಿಕೆ

ಸಮಗ್ರ ನ್ಯೂಸ್: ಅಂಬೇಡ್ಕರ್ ಸಮುದಾಯ ಭವನದಲ್ಲಿ ಅಂಬೇಡ್ಕರ್ ಧ್ವಜವನ್ನು ಪಿಡಿಒ ತೆರವುಗೊಳಿಸಿದ್ದು ಹಾಗಾಗಿ ಇದನ್ನು ತಕ್ಷಣ ಸರಿಗೊಳಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯಿಂದ ಪ್ರತಿಭಟನೆ ಎಚ್ಚರಿಕೆ ನೀಡಲಾಗಿದೆ. ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಮೇನಲಾದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಇತ್ತೀಚಿಗೆ ಅಂಬೇಡ್ಕರ್ ಆದರ್ಶ ಸೇವಾ ಸಮಿತಿಯವರು ಕಾರ್ಯಕ್ರಮಯೊಂದರಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಧ್ವಜವನ್ನು ಆ ಸಮುದಾಯ ಕಟ್ಟಡದಲ್ಲಿ ಅಳವಡಿಸಿದ್ದರು. ಹೀಗೆ ಅಳವಡಿಸಿದಂತ ಧ್ವಜವನ್ನು ಏಕಾಏಕಿ ಅಜ್ಜಾವಾರ ಗ್ರಾಮ ಪಂಚಾಯತ್ ನ ಪಿಡಿಒ ತೆರವುಗೊಳಿಸಿದರೆ ಎಂದು ಆರೋಪ […]

ಸುಳ್ಯ: ಅಂಬೇಡ್ಕರ್ ಧ್ವಜ ತೆರವುಗೊಳಿಸಿದ ಪಿಡಿಒ/ಸರಿಗೊಳಿಸದಿದ್ದಲ್ಲಿ ಅಂಬೇಡ್ಕರ್ ರಕ್ಷಣೆ ವೇದಿಕೆಯಿಂದ ಪ್ರತಿಭಟನೆ ಎಚ್ಚರಿಕೆ Read More »

ದ.ಕ ಜಿಲ್ಲೆಯಲ್ಲಿ ಪಿಎಫ್ಐನಿಂದ ಉಗ್ರ ತರಬೇತಿ| ಮಾಹಿತಿ ಬಿಚ್ಚಿಟ್ಟ ಎನ್ಐಎ ಅಧಿಕಾರಿಗಳು

ಸಮಗ್ರ ನ್ಯೂಸ್: ಪಿಎಫ್‌ಐ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ಇದೀಗ ಸ್ಪೋಟಕ ಮಾಹಿತಿಯೊಂದನ್ನು ಕಲೆ ಹಾಕಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಿಧೆಡೆ ಮುಸ್ಲಿಂ ಯುವಕರಿಗೆ ಪಿಎಫ್‌ಐನಿಂದ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬ ಮಾಹಿತಿ ಬಹಿರಂಗವಾಗಿದೆ. ಇಡೀ ರಾಜ್ಯವೇ ಬೆಚ್ಚಿ ಬೀಳಿಸುವ ಸುದ್ದಿ ಇದ್ದಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕಿನ ‌ವಿವಿಧ ಕಡೆಗಳಲ್ಲಿ ಪಿಎಫ್‌ಐ ಟೆರರ್ ಟ್ರೈನಿಂಗ್ ನೀಡಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಪುತ್ತೂರು ಸಮೀಪದ ಮಿತ್ತೂರಿನಲ್ಲಿರುವ ಪ್ರೀಡಂ ಕಮ್ಯೂನಿಟಿ ಹಾಲ್ ನಲ್ಲಿ

ದ.ಕ ಜಿಲ್ಲೆಯಲ್ಲಿ ಪಿಎಫ್ಐನಿಂದ ಉಗ್ರ ತರಬೇತಿ| ಮಾಹಿತಿ ಬಿಚ್ಚಿಟ್ಟ ಎನ್ಐಎ ಅಧಿಕಾರಿಗಳು Read More »

ಸುಳ್ಯ: ಕುರುಂಜಿಗುಡ್ಡೆ ಪಾರ್ಕ್ ನಲ್ಲಿ ಅವ್ಯವಸ್ಥೆ; ಪೊಲೀಸರಿಂದ ಗಸ್ತು

ಸಮಗ್ರ ನ್ಯೂಸ್: ಸುಳ್ಯ ನ.ಪಂ ವ್ಯಾಪ್ತಿಯ ಕುರುಂಜಿಗುಡ್ಡೆ ಪಾರ್ಕ್ ನಲ್ಲಿ ಅವ್ಯವಸ್ಥೆ ಕುರಿತು ‘ಸಮಗ್ರ ಸಮಾಚಾರ.ಕಾಂ’ ವರದಿ ಬೆನ್ನಲ್ಲೇ ಸುಳ್ಯ ಪೊಲೀಸರು ಗಸ್ತು ತಿರುಗಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಪಾರ್ಕ್ ನಲ್ಲಿ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸಮಗ್ರ ಸಮಾಚಾರವು ಸಾಕ್ಷಾತ್‌ವರದಿ ಮಾಡಿತ್ತು. ಸುದ್ದಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸ್ ಇಲಾಖೆ ಪಾರ್ಕ್ ಗೆ ಭೇಟಿ ನೀಡಿದೆ.

ಸುಳ್ಯ: ಕುರುಂಜಿಗುಡ್ಡೆ ಪಾರ್ಕ್ ನಲ್ಲಿ ಅವ್ಯವಸ್ಥೆ; ಪೊಲೀಸರಿಂದ ಗಸ್ತು Read More »

ಚಿಕ್ಕಮಗಳೂರು: ಆರ್.ಎಸ್.ಎಸ್ ಕಾರ್ಯಕರ್ತನ ಕಾರಿನ ಮೇಲೆ ಬರಹ| ಇಬ್ಬರು ಅಪ್ರಾಪ್ತರ ಬಂಧನ

ಸಮಗ್ರ ನ್ಯೂಸ್: ಆರ್ ಎಸ್ಎಸ್‌ ಕಾರ್ಯಕರ್ತ ಕಡೂರಿನ ಡಾ. ಶಶಿಧರ್ ಚಿಂದಿಗೆರೆ ಅವರ ಕಾರಿನ ಮೇಲೆ ಕ್ಷುಲ್ಲಕ ಬರವಣಿಗೆ ಬರೆದ ಘಟನೆಗೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸರು ಇಬ್ಬರು ಅಪ್ರಾಪ್ತರನ್ನು ಬಂಧಿಸಿದ್ದಾರೆ. ಕಾರಿನ ಮೇಲೆ ‘ಕಿಲ್ ಯೂ, ಜಿಹಾದಿ ಹಾಗೂ ಇನ್ನಿತರ ಅಶ್ಲೀಲ ಬರಹಗಳನ್ನು ಬರೆಯಲಾಗಿತ್ತು. ಈ ಹಿನ್ನೆಲೆಯಲ್ಲಿ ಸೆ.29ರಂದು ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನೂತನ ಮಾದರಿಯ ಕಾರು ಇದಾಗಿದ್ದು, ಇಂತಹ ಕಾರು ಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಕಲ್ಲಿನಲ್ಲಿ ಬರಹ ಗೀಚಿರುವುದಾಗಿ ಪ್ರಾಥಮಿಕ ತನಿಖೆಯಿಂದ

ಚಿಕ್ಕಮಗಳೂರು: ಆರ್.ಎಸ್.ಎಸ್ ಕಾರ್ಯಕರ್ತನ ಕಾರಿನ ಮೇಲೆ ಬರಹ| ಇಬ್ಬರು ಅಪ್ರಾಪ್ತರ ಬಂಧನ Read More »

ಕೊಟ್ಟಿಗೆಹಾರ: ಕಳ್ಳಬಟ್ಟಿ ಅಡ್ಡೆ ಮೇಲೆ ಪೊಲೀಸ್ ದಾಳಿ

ಸಮಗ್ರ ನ್ಯೂಸ್: ಕೊಟ್ಟಿಗೆಹಾರ ಬಾಳೂರು ಠಾಣಾ ವ್ಯಾಪ್ತಿಯ ಮಲೆಮನೆ ಎಂಬಲ್ಲಿ ಬಾಳೂರು ಪೊಲೀಸರು ಅಕ್ರಮ ಕಳ್ಳಬಟ್ಟಿ ಅಡ್ಡೆ ಮೇಲೆ ದಾಳಿ ನಡೆಸಿದ್ದು ಕಳ್ಳಬಟ್ಟಿ ಹಾಗೂ ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ. ಮಲೆ ಮನೆ ಗ್ರಾಮದ ಸುರೇಶ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಬಾಳೂರು ಠಾಣಾಧಿಕಾರಿ ಪವನ್ ಹಾಗೂ ಸಿಬ್ಬಂದಿ ಸುರೇಶ ಎಂಬವರು ಕಳ್ಳಬಟ್ಟಿ ತಯಾರಿಸುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ.ಈ ವೇಳೆ 200 ಲೀಟರ್ ಬೆಲ್ಲದ ಕೊಳೆ ಹಾಗೂ ಎರಡು ಲೀಟರ್ ಕಳ್ಳಬಟ್ಟಿಯನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂದಿಸಿದ್ದಾರೆ.

ಕೊಟ್ಟಿಗೆಹಾರ: ಕಳ್ಳಬಟ್ಟಿ ಅಡ್ಡೆ ಮೇಲೆ ಪೊಲೀಸ್ ದಾಳಿ Read More »

ಕ್ಷುಲ್ಲಕ ಕಾರಣಕ್ಕೆ ಗೆಳತಿಯ ಗುಂಡಿಕ್ಕಿ ಕೊಂದ| ಪರಾರಿಯಾಗಲು ಯತ್ನಿಸಿದವನ ಪ್ರಾಣ ಕಸಿದ ವಿಧಿ

ಸಮಗ್ರ ನ್ಯೂಸ್: ಯುವಕನೊಬ್ಬ ತನ್ನ ಪ್ರೇಯಸಿಯನ್ನು ಹಾಡಹಗಲೇ ಗುಂಡಿಕ್ಕಿ ಕೊಂದ ಘಟನೆ ಮುಂಬೈನ ಬೋಯ್ಸರ್ ಎಂಬಲ್ಲಿ ನಡೆದಿದ್ದು, ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಇಲ್ಲಿನ ಟೀಮಾ ಆಸ್ಪತ್ರೆಯ ಬಳಿ ಶ್ರೀಕೃಷ್ಣ ಯಾದವ್‌ ಮತ್ತವನ ಪ್ರೇಯಸಿ ನೇಹಾ ಮಹತೋ ಮಧ್ಯೆ ವಾಗ್ವಾದ ನಡೆಯಿತು. ಈ ವೇಳೆ ಸಿಟ್ಟಿಗೆದ್ದ ಯಾದವ್‌ ತನ್ನ ಜೇಬಿನಿಂದ ಪಿಸ್ತೂಲ್‌ ತೆಗೆದು ನೇಹಾಗೆ ಗುಂಡು ಹಾರಿಸಿದ್ದಾನೆ. ಆಕೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಸಾರ್ವಜನಿಕರ ಕೈಗೆ ಸಿಕ್ಕಿ ಬೀಳುವ ಭಯದಲ್ಲಿ ಆರೋಪಿ ಶ್ರೀಕೃಷ್ಣ ಯಾದವ್‌ ಅಲ್ಲಿಂದ

ಕ್ಷುಲ್ಲಕ ಕಾರಣಕ್ಕೆ ಗೆಳತಿಯ ಗುಂಡಿಕ್ಕಿ ಕೊಂದ| ಪರಾರಿಯಾಗಲು ಯತ್ನಿಸಿದವನ ಪ್ರಾಣ ಕಸಿದ ವಿಧಿ Read More »

ಮಂಗಳೂರು: ಇನ್ನೂ ಪತ್ತೆಯಾಗದ ಕಾಲೇಜು ಡೀನ್

ಸಮಗ್ರ ನ್ಯೂಸ್: ಮಂಗಳೂರಿನ ಖಾಸಗಿ ವೈದ್ಯಕೀಯ ಕಾಲೇಜಿನ ಡೀನ್ ಅವರು ಸೆಪ್ಟೆಂಬರ್ 25ರಂದು ನಾಪತ್ತೆಯಾಗಿದ್ದರು. ಆದರೆ ಅವರು ಇನ್ನೂ ಪತ್ತೆ ಆಗಿಲ್ಲ. ಈ ಕುರಿತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಡಾ.ಅರ್ಬನ್ ಜೆ ಅರ್ನಾಲ್ಡ್ ಡಿಸೋಜಾ ಅವರು ಭಾನುವಾರ ಬೇಗನೆ ಮನೆಗೆ ಬುರುತ್ತೇನೆ ಎಂದು ಹೇಳಿ ಹಿಂತಿರುಗಿ ಬರಲೇ ಇಲ್ಲ ಎಂದು ದೂರಿನಲ್ಲಿ ದಾಖಲಾಗಿದೆ. ವೆಲೆನ್ಸಿಯಾದಲ್ಲಿನ ಅವರ ಮನೆಯಿಂದ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ವಿವಿಧ ಮೂಲಗಳ ಪ್ರಕಾರ, ಡಾ.ಡಿಸೋಜಾ ಅವರು ತಮ್ಮ ಹೆಂಡತಿಗೆ ಹತ್ತಿರದ

ಮಂಗಳೂರು: ಇನ್ನೂ ಪತ್ತೆಯಾಗದ ಕಾಲೇಜು ಡೀನ್ Read More »

ತಾಳಿಕಟ್ಟಿದವನಿಗೆ 3 ವರ್ಷ, ಕಟ್ಟಿಸಿದ ಶಾಸ್ತ್ರಿಗೆ 1 ವರ್ಷ ಜೈಲು ಶಿಕ್ಷೆ!

ಸಮಗ್ರ ನ್ಯೂಸ್ : ಬಾಲಕಿಯನ್ನು ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು, ಆಕೆಯ ಇಷ್ಟಕ್ಕೆ ವಿರುದ್ಧವಾಗಿ ತಾಳಿಕಟ್ಟಿ ಮದುವೆಯಾಗಿ ಲೈಂಗಿಕ ಕಿರುಕುಳ ನೀಡಿದಾತನಿಗೆ 3 ವರ್ಷ ಜೈಲು ಶಿಕ್ಷೆ, ಇದಕ್ಕೆ ಸಹಕರಿಸಿದವರಿಗೆ 1 ವರ್ಷಕಠಿಣ ಶಿಕ್ಷೆ ವಿಧಿಸಿ, ಮಕ್ಕಳ ಸ್ನೇಹಿ ಹಾಗೂ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಯಳಂದೂರು ತಾಲೂಕು ಗಣಿಗನೂರು ಗ್ರಾಮದ ಕೆಎಸ್‌ ಆರ್‌ಟಿಸಿ ಕಂಡಕ್ಟರ್‌ ಎಂ.ರವಿಕುಮಾರ್‌ ಬಾಲಕಿಯನ್ನು ಬಲವಂತವಾಗಿ ಮದುವೆಯಾದ ಅಪರಾಧಿಯಾಗಿದ್ದು, ಮದುವೆ ಮಾಡಿಸಿದ ಮೈಸೂರು ಜಯನಗರದ ಕೆ.ಎನ್‌. ಚಂದ್ರಶೇಖರ , ಮೈಸೂರಿನ

ತಾಳಿಕಟ್ಟಿದವನಿಗೆ 3 ವರ್ಷ, ಕಟ್ಟಿಸಿದ ಶಾಸ್ತ್ರಿಗೆ 1 ವರ್ಷ ಜೈಲು ಶಿಕ್ಷೆ! Read More »

ಧರ್ಮಸ್ಥಳ: ಕಾಡಿನಲ್ಲಿ ವಿಷಸೇವಿಸಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ| ಪೊಲೀಸರ ಸಮಯಪ್ರಜ್ಞೆಯಿಂದ ಬದುಕುಳಿದ ಜೀವ

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯ ಅರಕಲಗೂಡಿನ ಯುವಕನೋರ್ವ ಧರ್ಮಸ್ಥಳ ಸಮೀಪದ ಕಾಡಿನಲ್ಲಿ ವೀಡಿಯೋ ಮಾಡಿ ವಿಷ ಸೇವಿಸಿದ್ದಲ್ಲದೆ ಅದನ್ನು ಕುಟುಂಬದವರಿಗೆ ಕಳುಹಿಸಿದ್ದು, ಘಟನೆ ಕುರಿತು ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ತೆರಳಿದ ಅವರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಧರ್ಮಸ್ಥಳ ಗ್ರಾಮದ ಮಹಾತ್ಮ ಗಾಂಧಿ ವೃತ್ತದ ಪಕ್ಕದ ಗುಡ್ಡದಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದ ನಿವಾಸಿ ಸುನಿಲ್‌ (28) ಬೈಕಿನಲ್ಲಿ ಬುಧವಾರ ಬೆಳಗ್ಗೆ ಧರ್ಮಸ್ಥಳಕ್ಕೆ ಬಂದಿದ್ದರು. ದೇವರ

ಧರ್ಮಸ್ಥಳ: ಕಾಡಿನಲ್ಲಿ ವಿಷಸೇವಿಸಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಯುವಕ| ಪೊಲೀಸರ ಸಮಯಪ್ರಜ್ಞೆಯಿಂದ ಬದುಕುಳಿದ ಜೀವ Read More »

ಸುಬ್ರಹ್ಮಣ್ಯ: 14ರ ಬಾಲಕಿ‌ ಮೇಲೆ ಮಹಿಳೆ ಸೇರಿ‌ 14 ಮಂದಿಯಿಂದ ಅತ್ಯಾಚಾರ; ದೂರು ದಾಖಲು

ಸಮಗ್ರ ನ್ಯೂಸ್: ಹದಿನಾಲ್ಕು ವರ್ಷದ ಬಾಲಕಿಯ ಮೇಲೆ‌ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿದಂತೆ 14 ಮಂದಿಯ ಮೇಲೆ ಸುಬ್ರಹ್ಮಣ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾದ ಬಗ್ಗೆ ವರದಿಯಾಗಿದೆ. ಸುಬ್ರಹ್ಮಣ್ಯದ ದೇವರಗದ್ದೆ ಸಮೀಪದ 14 ವರ್ಷ ಪ್ರಾಯದ ಬಾಲಕಿಯನ್ನು ಬೇರೆ ಬೇರೆ ದಿನ ಅತ್ಯಾಚಾರ ನಡೆಸಿದರೆಂಬ ಆರೋಪ ಹೊರಿಸಲಾಗಿದೆ. ಈ ಘಟನೆಗೆ ಸಂಬಂಧಿಸಿ ವೇದಾವತಿ, ವಿನೋದ್ ಮಣಿಯಾಣಿ, ಪ್ರವೀಣ್, ದಯಾನಂದ, ಹನುಮಂತ, ಆನಂದ, ಪ್ರದೀಪ, ಅಚ್ಚುತ, ಸತೀಶ್ ಗೌಡ, ಜಯಪ್ರಕಾಶ್, ಮಾಂಕು ಸೇರಿದಂತೆ 14 ಮಂದಿಯ ಮೇಲೆ

ಸುಬ್ರಹ್ಮಣ್ಯ: 14ರ ಬಾಲಕಿ‌ ಮೇಲೆ ಮಹಿಳೆ ಸೇರಿ‌ 14 ಮಂದಿಯಿಂದ ಅತ್ಯಾಚಾರ; ದೂರು ದಾಖಲು Read More »