ಮಂಗಳೂರು: ಶಾರದೋತ್ಸವ ಬ್ಯಾನರ್ ಹರಿದ ಪ್ರಕರಣ| ಗುಳಿಗನ ಕಾರಣಿಕದಿಂದ ಸಿಕ್ಕಿಬಿದ್ದರಾ ಆರೋಪಿಗಳು? ಕುತೂಹಲ ಮೂಡಿಸಿದ ಗುಳಿಗನ ಹರಕೆ!!
ಸಮಗ್ರ ನ್ಯೂಸ್: ಕರಾವಳಿಯಲ್ಲಿ ಮತ್ತೆ ಕೋಮು ಸಂಘರ್ಘಕ್ಕೆ ಸಂಚು ರೂಪಿಸಲಾಗಿದ್ದು, ಶಾರದೋತ್ಸವದ ನಿಮಿತ್ತ ಹಾಕಲಾಗಿದ್ದ, ಬ್ಯಾನರ್ ಹರಿದು ಕೋಮುಗಲಭೆ ಸೃಷ್ಟಿಸಲು ಪ್ಲ್ಯಾನ್ ಮಾಡಿದ್ದಾರೆಂಬ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಐದಾರು ಬ್ಯಾನರ್ ಹರಿದು ಸಂಘರ್ಷ ಸೃಷ್ಟಿಸಲು ಪ್ಲ್ಯಾನ್ ಮಾಡಿ ಅನ್ಯದರ್ಮಿಯರ ಮೇಲೆ ಅನುಮಾನ ಬರುವಂತೆ ಕೃತ್ಯ ಎಸಗಲಾಗಿತ್ತು. ಘಟನೆ ಸಂಬಂಧ ಇದೀಗ ಕುತೂಹಲಕಾರಿ ವಿಚಾರ ಬೆಳಕಿಗೆ ಬಂದಿದ್ದು, ದೈವರ ಮೊರೆಹೊಕ್ಕ ಬಳಿಕ ಕಿಡಿಕೇಡಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಇದರಿಂದ ಬೇಸತ್ತ […]









