ಕ್ರೈಂ

ಮತ್ತಿಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪ| ಮುರುಘಾ ಶರಣರ ವಿರುದ್ದ ಮತ್ತೊಂದು ಎಫ್ಐಆರ್ ದಾಖಲು

ಸಮಗ್ರ ನ್ಯೂಸ್: ಲೈಂಗಿಕ ಕಿರುಕುಳ ಆರೋಪದ ಮೇಲೆ ಜೈಲಿನಲ್ಲಿ ವಿಚಾರಣೆ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಇದೀಗ ಮತ್ತಿಬ್ಬರು ಅಪ್ರಾಪ್ತ ಬಾಲಕಿಯರಿಗೆ ಅಂತಹದ್ದೇ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಮಠದಲ್ಲಿ‌ ಕೆಲಸ ಮಾಡುತ್ತಿದ್ದ ನೌಕರರ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಶ್ರೀಗಳ ವಿರುದ್ಧ ನಿನ್ನೆ ತಡ ರಾತ್ರಿ ಮೈಸೂರಿನ ನಜರಬಾದ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅದರಂತೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದು, ಬಳಿಕ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಯಿತು. ಸದ್ಯ

ಮತ್ತಿಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪ| ಮುರುಘಾ ಶರಣರ ವಿರುದ್ದ ಮತ್ತೊಂದು ಎಫ್ಐಆರ್ ದಾಖಲು Read More »

ಟೀಚರ್ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ವಿದ್ಯಾರ್ಥಿ ಸಾವಿಗೆ ಶರಣು| ಆತನ ಆತ್ಮಹತ್ಯೆಗೆ ಕಾರಣವೇನು ಗೊತ್ತಾ?

ಸಮಗ್ರ ನ್ಯೂಸ್: ಶಿಕ್ಷಕಿ ಜೊತೆ ದೈಹಿಕ ಸಂಬಂಧ ಹೊಂದಿದ್ದ ವಿದ್ಯಾರ್ಥಿಯೊಬ್ಬ ಸಾವಿಗೆ ಶರಣಾದ ಬಳಿಕ ಶಿಕ್ಷಕಿಯನ್ನು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಶಿಕ್ಷಕಿ 18 ವರ್ಷದ ವಿದ್ಯಾರ್ಥಿ ಜತೆಗಿನ ಸಂಬಂಧವನ್ನು ಕಡಿದುಕೊಂಡ ನಂತರ ಈತ ಸಾವಿಗೆ ಶರಣಾಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಚೆನ್ನೈನ ಅಂಬತ್ತೂರ್ ನಲ್ಲಿನ ಅನುದಾನಿತ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈಕೆ, ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗೆ ಶಿಕ್ಷಕಿಯಾಗಿದ್ದಳು. ಕೆಲವು ಬಾರಿ ವಿದ್ಯಾರ್ಥಿ ಈಕೆಯ ಮನೆಗೂ ಭೇಟಿ ನೀಡುತ್ತಿದ್ದ ಎಂದು ವರದಿ ತಿಳಿಸಿದೆ. ಶಿಕ್ಷಕಿಗೆ ನಿಶ್ಚಿತಾರ್ಥವಾದ

ಟೀಚರ್ ಜೊತೆ ಲೈಂಗಿಕ ಸಂಬಂಧ ಹೊಂದಿದ್ದ ವಿದ್ಯಾರ್ಥಿ ಸಾವಿಗೆ ಶರಣು| ಆತನ ಆತ್ಮಹತ್ಯೆಗೆ ಕಾರಣವೇನು ಗೊತ್ತಾ? Read More »

ಬೈಕ್ ನಿಂದ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ದಂಪತಿ; ಗರ್ಭಿಣಿ ಮಹಿಳೆ ಸಾವು, ಪತಿ ಗಂಭೀರ

ಸಮಗ್ರ ನ್ಯೂಸ್: ಬೈಕ್ ಸವಾರನ ನಿಯಂತ್ರಣ ತಪ್ಪಿ ಕೆರೆ ಬಿದ್ದ ದಂಪತಿಗಳು ಹಿಂಬದಿಯಲ್ಲಿ ಕುಳಿತ್ತಿದ್ದ ಗರ್ಭಿಣಿ ಮಹಿಳೆ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೂಗಲೂರು ಗ್ರಾಮದಲ್ಲಿ ನಡೆದಿದೆ. 22 ವರ್ಷದ ಯಮುನಾ ಮೃತ ಗರ್ಭಿಣಿ ಮಹಿಳೆ. 28 ವರ್ಷದ ದಕ್ಷಿಣಾಮೂರ್ತಿ ಅಲಿಯಾಸ್ ನವೀನ್ ಗಂಭೀರ ಗಾಯಗೊಂಡಿದ್ದಾರೆ. ದೇವನೂರು ಗ್ರಾಮದ ದಕ್ಷಿಣಾಮೂರ್ತಿ ತನ್ನ ಹೆಂಡತಿ ಯಮುನಾ ಜೊತೆ ಬೈಕ್ ನಲ್ಲಿ ನಂಜನಗೂಡು ಮಾರ್ಗವಾಗಿ ಸಿದ್ದಯ್ಯನಹುಂಡಿ ಗ್ರಾಮಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ. ಬೈಕ್ ನಲ್ಲಿ ಗಂಡ

ಬೈಕ್ ನಿಂದ ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ದಂಪತಿ; ಗರ್ಭಿಣಿ ಮಹಿಳೆ ಸಾವು, ಪತಿ ಗಂಭೀರ Read More »

ಮಂಡ್ಯ: ಬಾಲಕಿಯ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣ| ನಿಷ್ಪಕ್ಷಪಾತ ತನಿಖೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ

ಸಮಗ್ರ ನ್ಯೂಸ್: ಮಂಡ್ಯದ ಮಳವಳ್ಳಿಯಲ್ಲಿ ಪುಟ್ಟ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಪ್ರಕರಣವನ್ನು ಪೊಲೀಸರು ಯಾವುದೇ ಒತ್ತಡಕ್ಕೆ ಈಡಾಗದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಕರಣದ ಸೂಕ್ತ ತನಿಖೆ ನಡೆಸಿ ಆರೋಪಿಗೆ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.ಇದು ಅತ್ಯಂತ ಹೇಯ ಕೃತ್ಯ. ಇಂಥಾ ಸ್ಥಿತಿ ಮತ್ತಾವ ಕಂದಮ್ಮನಿಗೂ ಬಾರದಿರಲಿ ಎಂದು ಬಾಲಕಿ ಕುಟುಂಬದ ಜತೆ ಮಾತನಾಡಿ, ಸಾಂತ್ವನ ಹೇಳುವ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಮಂಡ್ಯ: ಬಾಲಕಿಯ ಅತ್ಯಾಚಾರ ನಡೆಸಿ ಕೊಲೆಗೈದ ಪ್ರಕರಣ| ನಿಷ್ಪಕ್ಷಪಾತ ತನಿಖೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹ Read More »

ಭಯೋತ್ಪಾದಕರ ಜೊತೆ‌ ಹೋರಾಡಿದ್ದ ಸೇನಾಶ್ವಾನ “ಜೂಮ್” ವಿಧಿವಶ

ಸಮಗ್ರ ನ್ಯೂಸ್: ಜಮ್ಮುವಿನ ಅನಂತ್‌ನಾಗ್‌ ಜಿಲ್ಲೆಯಲ್ಲಿ ಭಯೋತ್ಪಾದಕರನ್ನು ತಟಸ್ಥಗೊಳಿಸುವ ಕಾರ್ಯಾಚರಣೆಯ ವೇಳೆ ದಿಟ್ಟ ಹೋರಾಟ ತೋರಿದ್ದ ಸೇನಾ ಶ್ವಾನ ಜೂಮ್‌ ಗುರುವಾರ ಮಧ್ಯಾಹ್ನ ನಿಧನವಾಗಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಕಾರ್ಯಾಚರಣೆಯ ವೇಳೆ ಭಯೋತ್ಪಾದಕರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದ ಜೂಮ್‌, ಈ ವೇಳೆ ಎರಡು ಗುಂಡೇಟು ತಿಂದಿತ್ತು. ಹಾಗಿದ್ದರೂ ಭಾರತೀಯ ಸೇನೆಯ ಶ್ವಾನದ ಸಹಾಯದಿಂದಲೇ ಭಯೋತ್ಪಾದಕರನ್ನು ಸಾಯಿಸಲು ಯಶಸ್ವುಯಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಶ್ವಾನವನ್ನು 54 ಅಡ್ವಾನ್ಸ್ ಫೀಲ್ಡ್ ವೆಟರ್ನರಿ ಹಾಸ್ಪಿಟಲ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಗುರುವಾರ ಮಧ್ಯಾಹ್ನ 12

ಭಯೋತ್ಪಾದಕರ ಜೊತೆ‌ ಹೋರಾಡಿದ್ದ ಸೇನಾಶ್ವಾನ “ಜೂಮ್” ವಿಧಿವಶ Read More »

ಟ್ಯೂಷನ್ ಗೆ ಬರಹೇಳಿ 10ರ ಬಾಲಕಿಯ ಅತ್ಯಾಚಾರಗೈದು ಕೊಲೆ| ಟ್ಯೂಷನ್ ಸೆಂಟರ್ ಶಿಕ್ಷಕನ ಬಂಧನ

ಸಮಗ್ರ ನ್ಯೂಸ್: ಟ್ಯೂಷನ್‌ಗೆ ಬರಲು ಹೇಳಿ 10ರ ಬಾಲಕಿ ಮೇಲೆ ಅತ್ಯಾಚಾರ, ಕೊಲೆ ಮಾಡಿ ಸಂಪ್‌ ಗೆ ಎಸೆದ ಆರೋಪಿಯನ್ನು ಪೊಲೀಸರು ಬಂಧಿಸಿರುವ ಘಟನೆ ಮಂಡ್ಯದ ಮಳವಳ್ಳಿಯಲ್ಲಿ ನಡೆದಿದೆ. ಇಲ್ಲಿನ ಎನ್‌ಇಎಸ್ ಬಡಾವಣೆಯ ನಿವಾಸಿ ದಿವ್ಯ(10)ಎಂಬ ಬಾಲಕಿಯನ್ನು ಚಾಕೊಲೇಟ್ ನೀಡುವುದಾಗಿ ಪುಸಲಾಯಿಸಿ ಕರೆದೊಯ್ದು ಅತ್ಯಾಚಾರ ನಡೆಸಿ ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿಯನ್ನು ಪಟ್ಟಣ ಪೋಲಿಸರು ಬಂಧಿಸಿದ್ದಾರೆ. ಆರೋಪಿಯು ಮಳವಳ್ಳಿ ತಾಲ್ಲೂಕಿನ ನೆಲಮಾಕನಹಳ್ಳಿ ಗ್ರಾಮದವನಾಗಿದ್ದು, ಕಳೆದ 15 ವರ್ಷಗಳಿಂದ ಮೈಸೂರಿನಲ್ಲಿ ನೆಲೆಸಿದ್ದ. ಮಳವಳ್ಳಿ ಪಟ್ಟಣದಲ್ಲಿ ಟ್ಯೂಷನ್ ಸೆಂಟರ್‌ ನಲ್ಲಿ

ಟ್ಯೂಷನ್ ಗೆ ಬರಹೇಳಿ 10ರ ಬಾಲಕಿಯ ಅತ್ಯಾಚಾರಗೈದು ಕೊಲೆ| ಟ್ಯೂಷನ್ ಸೆಂಟರ್ ಶಿಕ್ಷಕನ ಬಂಧನ Read More »

ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಯತ್ನ| ಟವರ್ ನಿಂದ ಆಯತಪ್ಪಿ ಬಿದ್ದು ಸಾವು

ಸಮಗ್ರ ನ್ಯೂಸ್: ವ್ಯಕ್ತಿಯೋಬ್ಬನು ಸಾಲಬಾಧೆ ತಾಳಲಾರದೆ ಟವರ್ ಏರಿ ಆತ್ಮಹತ್ಯೆ ಯತ್ನಿಸಿದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ಮಂಗಾವತಿ ಗ್ರಾಮದಲ್ಲಿ ನಡೆದಿದೆ ಟವರ್ ಏರಿ ವ್ಯಕ್ತಿ ಆತ್ಮಹತ್ಯೆ ಮಾಡಿಕೋಳ್ಳವ ಸಂದರ್ಭದಲ್ಲಿ ಗ್ರಾಮಸ್ಥರು ನೋಡಿ ಕೆಳಗೆ ಇಳಿಯುವಂತೆ ಹೇಳಿದಾಗ ವ್ಯಕ್ತಿಯು ಕೆಳಗೆ ಇಳಿಯುವ ಸಂದರ್ಭದಲ್ಲಿ ಆಯಾ ತಪ್ಪಿ ಬಿದ್ದಿದ್ದು ವ್ಯಕ್ತಿಯನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲು ರವಾನಿಸುವ ಸಂದರ್ಭದಲ್ಲಿ ವ್ಯಕ್ತಿ ಮೃತಪಟ್ಟಿದ್ದಾನೆ. ಮೃತ ವ್ಯಕ್ತಿಯನ್ನು ಬೆಳಗಾವಿಯ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದ ನಿವಾಸಿಯಾದ ಸಂಜಯ ಪಾಟೀಲ (36) ಎಂದು

ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಯತ್ನ| ಟವರ್ ನಿಂದ ಆಯತಪ್ಪಿ ಬಿದ್ದು ಸಾವು Read More »

ಹಣದ ಕೊರತೆ ನೀಗಿಸಲು ನರಬಲಿ| ಇಬ್ಬರು ಮಹಿಳೆಯರ ಕೊಂದು ಭಕ್ಷಿಸಿದ ರಾಕ್ಷಸರು|

ಸಮಗ್ರ ನ್ಯೂಸ್: ದೇವರ ನಾಡು ಕೇರಳದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದಂಪತಿಗಳು ಮೂಢನಂಬಿಕೆಗೆ ಒಳಗಾಗಿ ಇದನ್ನು ಪರಿಹರಿಸಿಕೊಳ್ಳಲು ನರಬಲಿ ನೀಡಿದ್ದಾರೆ. ಇವರ ಘೋರ ಕೃತ್ಯಕ್ಕೆ ಇಬ್ಬರು ಮಹಿಳೆಯರು ಬಲಿಯಾಗಿದ್ದು, ಇದೀಗ ಆರೋಪಿಗಳನ್ನು ಬಂಧಿಸಲಾಗಿದೆ. ಕೇರಳದಲ್ಲಿ ಈ ಘಟನೆ ನಡೆದಿದ್ದು, ಭಾಗವಾರ್ ಸಿಂಗ್ ಮತ್ತು ಲೈಲಾ ಎಂಬ ದಂಪತಿ ತಮ್ಮ ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವ ಸಲುವಾಗಿ ಮಂತ್ರವಾದಿಯ ಮೊರೆ ಹೋಗಿದ್ದರು ಎನ್ನಲಾಗಿದೆ. ಈ ವೇಳೆ ಆತ ನರಬಲಿ ಕೊಟ್ಟರೆ ಸಮಸ್ಯೆ ಪರಿಹಾರವಾಗುವುದಾಗಿ ಹೇಳಿದ್ದಾನೆ.

ಹಣದ ಕೊರತೆ ನೀಗಿಸಲು ನರಬಲಿ| ಇಬ್ಬರು ಮಹಿಳೆಯರ ಕೊಂದು ಭಕ್ಷಿಸಿದ ರಾಕ್ಷಸರು| Read More »

ಮಂಗಳೂರು: ನಿಷೇದಿತ ಪಿಎಫ್ಐ‌ ಮುಖಂಡರ ಮನೆ ಮೇಲೆ ಪೊಲೀಸರ ದಾಳಿ| ಐವರನ್ನು ವಶಕ್ಕೆ ಪಡೆದ ಖಾಕಿ ಪಡೆ

ಮಂಗಳೂರು: ಮಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ನಿಷೇಧಿತ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) ಹಾಗೂ ಎಸ್ ಡಿಪಿಐ ಮುಖಂಡರ ಮನೆಗಳ ಮೇಲೆ ಪೊಲೀಸರು ಮತ್ತೆ ದಾಳಿ ನಡೆಸಿದ್ದಾರೆ. ಇಂದು(ಅ.13) ಬೆಳಗ್ಗೆ ಪೊಲೀಸರು ಪಿಎಫ್ ಐ ಹಾಗೂ ಎಸ್ ಡಿಪಿಐ ಮುಖಂಡರ ಮೇಲೆ ಕಮಿಷನರ್ ಎನ್ ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದು, ಐವರು ಪಿಎಫ್ ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಕಮಿಷನರ್ ಎನ್.ಶಶಿಕುಮಾರ್ ನೇತೃತ್ವದಲ್ಲಿ ಪಣಂಬೂರು, ಸುರತ್ಕಲ್ ಹಾಗೂ ಮಂಗಳೂರು ಗ್ರಾಮಾಂತರ ಉಳ್ಳಾಲ ಸೇರಿ ಏಳೆಂಟು ಕಡೆ

ಮಂಗಳೂರು: ನಿಷೇದಿತ ಪಿಎಫ್ಐ‌ ಮುಖಂಡರ ಮನೆ ಮೇಲೆ ಪೊಲೀಸರ ದಾಳಿ| ಐವರನ್ನು ವಶಕ್ಕೆ ಪಡೆದ ಖಾಕಿ ಪಡೆ Read More »

ಹೆಂಡತಿಯ ಬಿಟ್ಟು ಪ್ರೇಯಸಿ ಜೊತೆ ಪ್ರವಾಸ ಹೋದ ಗಂಡ| ನೊಂದ ಪತ್ನಿ ನೇಣಿಗೆ ಶರಣು|

ಸಮಗ್ರ ನ್ಯೂಸ್: ಅವರು ಒಬ್ಬರಿಗೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದರು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅವರ ತಂದೆ ತಾಯಿ ಅದ್ದೂರಿ ಮದುವೆ ಮಾಡಿದ್ದರು. ಮದುವೆಯಾಗಿ ಕೇವಲ 8 ತಿಂಗಳು ಆಗಿತ್ತು. ಕೈಹಿಡಿದ ಪತ್ನಿಯನ್ನು ತವರು ಮನೆಗೆ ಕಳುಹಿಸಿ ಆತ ಪ್ರೇಯಸಿಯ ಜೊತೆ ಸುತ್ತಾಡ್ತಿದ್ದ, ಸಾಲದು ಎಂಬಂತೆ ಪ್ರೇಯಸಿ ಜೊತೆ ಸುತ್ತಾಡ್ತಿರುವ ಹಾಗೂ ಮೋಜು ಮಸ್ತಿ ಮಾಡ್ತಿರುವ ಫೋಟೊಗಳನ್ನು, ತನ್ನ ಪತ್ನಿಗೆ ಕಳುಹಿಸಿದ್ದ. ಇದರಿಂದ ಮನನೊಂದ ಆಕೆ, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ

ಹೆಂಡತಿಯ ಬಿಟ್ಟು ಪ್ರೇಯಸಿ ಜೊತೆ ಪ್ರವಾಸ ಹೋದ ಗಂಡ| ನೊಂದ ಪತ್ನಿ ನೇಣಿಗೆ ಶರಣು| Read More »