ಬೆಟ್ಟಕ್ಕೆ ತೆರಳಿದ ಯುವಕ ಚಿರತೆ ಬಾಯಿಗೆ ಬಲಿ
ಸಮಗ್ರ ನ್ಯೂಸ್: ತಿ.ನರಸೀಪುರ ತಾಲ್ಲೂಕಿನ ಮದ್ಗಾರ್ ಲಿಂಗಯ್ಯನಹುಂಡಿ ಗ್ರಾಮದ ಬಳಿ ಚಿರತೆ ದಾಳಿಗೆ ಯುವಕ ಬಲಿಯಾಗಿದ್ದಾನೆ. ಮಹಾರಾಜ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಮಂಜುನಾಥ್ (18) ಮೃತಪಟ್ಟ ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಮಲ್ಲಪ್ಪನ ಬೆಟ್ಟದ ಸಮೀಪವಿರುವ ಮುದ್ದು ಮಾರಮ್ಮ ದೇವಾಲಯಕ್ಕೆ ಸ್ನೇಹಿತರೊಂದಿಗೆ ಪೂಜೆಗೆಂದು ಹೋಗಿದ್ದಾಗ ಘಟನೆ ನಡೆದಿದೆ. ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದಾಗ ಪೊದೆಯಿಂದ ಜಿಗಿದು ಬಂದ ಚಿರತೆ ಯುವಕನ ಮೇಲೆ ದಾಳಿ ನಡೆಸಿತು. ಸ್ನೇಹಿತರು ಚಿರತೆಗೆ ಕಲ್ಲು ಹೊಡೆದು ಮಂಜುನಾಥ್‌ನನ್ನು ರಕ್ಷಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಗ್ರಾಮಸ್ಥರು ಯುವಕನ
ಬೆಟ್ಟಕ್ಕೆ ತೆರಳಿದ ಯುವಕ ಚಿರತೆ ಬಾಯಿಗೆ ಬಲಿ Read More »









