“ನಿನ್ನನ್ನು ಕೊಚ್ಚಿ ನಾಯಿಗೆ ಹಾಕುತ್ತೇವೆ” | ಪ್ರಮೋದ್ ಮುತಾಲಿಕ್ ಗೆ ಜೀವ ಬೆದರಿಕೆಯೊಡ್ಡಿದ ದುಷ್ಕರ್ಮಿಗಳು
ಸಮಗ್ರ ನ್ಯೂಸ್: ಶ್ರೀ ರಾಮಸೇನೆಯ ಸಂಸ್ಥಾಪಕ ಅಧ್ಯಕ್ಷರಾಗಿರುವ ಪ್ರಮೋದ್ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವ ಕುರಿತು ಸ್ವತಃ ಪ್ರಮೋದ್ ಮುತಾಲಿಕ್ ಅವರೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರಿಗೆ ಜೀವ ಬೆದರಿಕೆ ಕರೆ ಬಂದಿರುವ ಆರೋಪ ಕೇಳಿಬಂದಿದೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಕಟ್ಟಾ ಹಿಂದುತ್ವವಾದಿಗೆ ಜೀವ ಬೆದರಿಕೆ ಹಾಕಲಾಗಿದೆ. ‘ನಿನ್ನನ್ನು ಕೊಚ್ಚಿ ಕೊಚ್ಚಿ ತುಂಡು ಮಾಡಿ ನಾಯಿಗೆ ಬಿಸಾಕುತ್ತೇವೆ’ ಎಂದು ಅಪರಿಚಿತ ದುಷ್ಕರ್ಮಿಗಳು ಮುತಾಲಿಕ್ ಅವರಿಗೆ ನಿಂದಿಸಿ










