ಕ್ರೈಂ

ಉದ್ಯಮಿಗೆ ಬೆದರಿಕೆ; ಹಿಂದೂ ಮಹಾಸಭಾದ ರಾಜೇಶ್ ಪವಿತ್ರನ್ ಅರೆಸ್ಟ್

ಸಮಗ್ರ ನ್ಯೂಸ್: ಉದ್ಯಮಿಯೊಬ್ಬರ ಖಾಸಗಿ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸುವ ಬೆದರಿಕೆ ಹಾಕಿ, ಚಿನ್ನ ಹಾಗೂ ಹಣಕ್ಕಾಗಿ ಬೇಡಿಕೆ ಇಟ್ಟ ಆರೋಪದ ಮೇಲೆ ಅಖಿಲ ಭಾರತ ಹಿಂದೂ ಮಹಾಸಭಾದ ಕರ್ನಾಟಕ ಘಟಕದ ಅಧ್ಯಕ್ಷ ರಾಜೇಶ್‌ ಪವಿತ್ರನ್‌ ಎಂಬುವರನ್ನು ಸುರತ್ಕಲ್‌ ಠಾಣೆಯ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ. ಕಾವೂರು ನಿವಾಸಿ ಸುರೇಶ್ ಎಂಬವರು ಸುರತ್ಕಲ್‍ನಲ್ಲಿ ರಾಜೇಶ್ ಪವಿತ್ರನ್ ಜೊತೆ ಪಾಲುದಾರಿಕೆಯಲ್ಲಿ ಸ್ಯಾಫ್ರಾನ್ ಇಂಟರ್ ನ್ಯಾಷನಲ್ ಟ್ರೇಡಿಂಗ್ ಎಂಬ ವ್ಯವಹಾರ ನಡೆಸಲು ಮುಂದಾಗಿದ್ದರು. ಆದರೆ ರಾಜೇಶ್ ಪವಿತ್ರನ್ ಅವ್ಯವಹಾರಗಳು

ಉದ್ಯಮಿಗೆ ಬೆದರಿಕೆ; ಹಿಂದೂ ಮಹಾಸಭಾದ ರಾಜೇಶ್ ಪವಿತ್ರನ್ ಅರೆಸ್ಟ್ Read More »

ಪತ್ನಿಯ ಐಷಾರಾಮಿ ಆಸೆಗೆ ಬೇಸತ್ತ ಪತಿ| ಹೆಂಡತಿ ಕಾಟ ತಾಳಲಾರದೆ ‌ನವವಿವಾಹಿತ ಆತ್ಮಹತ್ಯೆ

ಸಮಗ್ರ ನ್ಯೂಸ್: ಹೆಂಡತಿ ಕಾಟ ತಾಳಲಾರದೇ ನವವಿವಾಹಿತನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಲಿಕಾನ್‌ ಸಿಟಿಯ ಉಲ್ಲಾಳದ ಬಳಿಯ ಎಂವಿ ಲೇಔಟ್ನಲ್ಲಿ ನಡೆದಿದೆ. ಮಹೇಶ್ವರ(24) ಮೃತ ದುರ್ದೈವಿ. ಕಳೆದ ಆಗಸ್ಟ್ 21 ರಂದು ಕವನಾ ಎಂಬಾಕೆಯ ಜೊತೆ ಮಹೇಶ್ವರ ಸಪ್ತಪದಿ ತುಳಿದಿದ್ದ. ಆದರೆ ಮದುವೆಯಾದ ಮೇಲೆ ಹೆಂಡತಿ ಕವನಾ ಪ್ರತಿದಿನ ಟಾರ್ಚರ್‌ ಕೊಡುತ್ತಿದ್ದಳು. ನಾನು ಐಷಾರಾಮಿ ಜೀವನ ನಡೆಸಬೇಕು. ನನಗೆ ಚಿನ್ನಾಭರಣ ಬೇಕು ಎಂದು ಪ್ರತಿ ನಿತ್ಯ ಪೀಡಿಸುತ್ತಿದ್ದು ಎನ್ನಲಾಗಿದೆ. ಇದಕ್ಕೆ ಮಹೇಶ್ವರ ಸ್ಪಂದಿಸದಿದ್ದಾಗ ಅವಾಚ್ಯ ಶಬ್ದಗಳಿಂದ ಕವನಾ

ಪತ್ನಿಯ ಐಷಾರಾಮಿ ಆಸೆಗೆ ಬೇಸತ್ತ ಪತಿ| ಹೆಂಡತಿ ಕಾಟ ತಾಳಲಾರದೆ ‌ನವವಿವಾಹಿತ ಆತ್ಮಹತ್ಯೆ Read More »

ಬಿ.ಸಿ‌ರೋಡು: ಲಾರಿ ರಿಕ್ಷಾ ಅಪಘಾತ: ಮಹಿಳೆ ಗಂಭೀರ

ಸಮಗ್ರ ನ್ಯೂಸ್: ಲಾರಿ ರಿಕ್ಷಾ ಅಪಘಾತದ ಪರಿಣಾಮ ರಿಕ್ಷಾದಲ್ಲಿದ್ದ ಮಹಿಳೆ ಗಂಭೀರ ಗಾಯಗೊಂಡು, ಮಗು, ಚಾಲಕ ಸಹಿತ ಇನ್ನಿಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ಬಿ.ಸಿ‌ರೋಡು ಸಮೀಪದ ಮೊಡಂಕಾಪು‌ವಿನಲ್ಲಿ ಬುಧವಾರ ಮಧ್ಯಾಹ್ನ ನಡೆದಿದೆ. ರಿಕ್ಷಾವನ್ನು ಅಶ್ರಫ್ ಎಂಬವರು ಚಲಾಯಿಸುತ್ತಿದ್ದು, ರಿಕ್ಷಾ ಪ್ರಯಾಣಿಕರನ್ನು ಕೈಕಂಬ ಕಡೆಯಿಂದ ಮೊಡಂಕಾಪು ಕಡೆಗೆ ಕರೆದೊಯ್ಯುತ್ತಿತ್ತು, ಈ ವೇಳೆ ಮೊಡಂಕಾಪು ಕಡೆಯಿಂದ ಬಂದ ಟಿಪ್ಪರ್ ಲಾರಿ, ಬಸ್ಸೊಂದನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ‌ ಬರುತ್ತಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆದು, ಪಕ್ಕದ ವಿದ್ಯುತ್ ಕಂಬಕ್ಕೆ

ಬಿ.ಸಿ‌ರೋಡು: ಲಾರಿ ರಿಕ್ಷಾ ಅಪಘಾತ: ಮಹಿಳೆ ಗಂಭೀರ Read More »

ಬೈಕ್ ನಲ್ಲಿ ಬಂದು ಬಾಲಕಿಗೆ ಆ್ಯಸಿಡ್ ಎರಚಿದ ದುಷ್ಕರ್ಮಿಗಳು

ಸಮಗ್ರ ನ್ಯೂಸ್: ಬೈಕ್​ನಲ್ಲಿ ಬಂದ ಇಬ್ಬರು ಯುವಕರು 17ವರ್ಷದ ಬಾಲಕಿಯ ಮೇಲೆ ಆಯಸಿಡ್​ ಎರಚಿದ ಘಟನೆ ದೆಹಲಿಯ ದ್ವಾರಕ ಜಿಲ್ಲೆಯ ಉತ್ತಮ್​ನಗರದಲ್ಲಿ ಡಿ. ೧೪ರಂದು ನಡೆದಿದೆ. ಬಾಲಕಿ ತನ್ನ ತಂಗಿಯೊಂದಿಗೆ ಶಾಲೆಗೆ ಹೋಗುತ್ತಿದ್ದಾಗ ದುಷ್ಕೃತ್ಯ ನಡೆದಿದ್ದು, ಗಂಭೀರ ಗಾಯಗೊಂಡಿರುವ ಆಕೆಯನ್ನು ಸಫ್ದರ್‌ಜಂಗ್ ಆಸ್ಪತ್ರೆಗೆ ಸೇರಿಸಲಾಗಿದೆ. ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಎಂ ಹರ್ಷವರ್ಧನ್ ತಿಳಿಸಿದರು. ಬಾಲಕಿಯ ಎರಡೂ ಕಣ್ಣುಗಳಿಗೆ ಆ್ಯಸಿಡ್ ಬಿದ್ದಿದೆ. ಇಬ್ಬರ ಹೆಸರನ್ನು ಆಕೆ ಹೇಳಿದ್ದಾಳೆ. ಅವರಲ್ಲಿ ಓರ್ವ ಪೊಲೀಸರ

ಬೈಕ್ ನಲ್ಲಿ ಬಂದು ಬಾಲಕಿಗೆ ಆ್ಯಸಿಡ್ ಎರಚಿದ ದುಷ್ಕರ್ಮಿಗಳು Read More »

ಬೆಳ್ತಂಗಡಿ: ಸುಟ್ಟರೀತಿಯಲ್ಲಿ ಮಹಿಳೆಯ ಶವ ಕಾಡೊಳಗೆ ಪತ್ತೆ

ಸಮಗ್ರ ನ್ಯೂಸ್: ಸುಟ್ಟ ರೀತಿಯಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಪತ್ತೆ ಪ್ರಕರಣದಲ್ಲಿ ಶವದ ಹಲವು ಗುರುತುಗಳು ಪತ್ತೆಯಾಗಿದೆ. ಎರಡು ಕಾಲು ಉಂಗುರ, ಕೈಯಲ್ಲಿ ನಾಗರ ಹಾವಿನ ರೀತಿಯ ಉಂಗುರ, ಕೈ ಬಲೆಗಳು, ಸುಟ್ಟ ರೀತಿಯಲ್ಲಿ ಚೈನ್ ವಾಚ್, ಕುತ್ತಿಗೆಗೆ ಹಾಕುವ ಶಿವಲಿಂಗಧಾರಣೆ, ಬಟ್ಟೆಯ ಬಟನ್, ಸುಟ್ಟು ಉಳಿದ ಸ್ವಲ್ಪ ಬಟ್ಟೆಗಳು, ತಲೆಗೆ ಹಾಕುವ ಕ್ಲಿಪ್ ಕೂಡಾ ಪತ್ತೆಯಾಗಿದೆ. ಸುಮಾರು 30-40 ವರ್ಷದ ಮಹಿಳೆಯ ಮೃತದೇಹ ಇದಾಗಿದೆ ಎಂದು ಡಾಕ್ಟರ್ ಮಹಾಬಲ ಶೆಟ್ಟಿ ಅವರು ಅಂದಾಜಿಸಿದ್ದಾರೆ. ಘಟನೆ ನಡೆದ

ಬೆಳ್ತಂಗಡಿ: ಸುಟ್ಟರೀತಿಯಲ್ಲಿ ಮಹಿಳೆಯ ಶವ ಕಾಡೊಳಗೆ ಪತ್ತೆ Read More »

ವರದಕ್ಷಿಣೆ ಕಿರುಕುಳ; ನಟಿ ‘ಅಭಿನಯ’ ಗೆ ಎರಡು ವರ್ಷ ಜೈಲು!!

ಸಮಗ್ರ ನ್ಯೂಸ್: ‘ಅನುಭವʼ ಚಿತ್ರದ ಖ್ಯಾತಿಯ ಸ್ಯಾಂಡಲ್‌ವುಡ್ ನಟಿ ಅಭಿನಯಗೆ ಎರಡು ವರ್ಷದ ಜೈಲು ಶಿಕ್ಷೆ ನೀಡಿ ಆದೇಶವನ್ನು ಹೊರಡಿಸಿದೆ. ಹೈಕೋರ್ಟ್ ಹೈಕೋರ್ಟ್ ನ್ಯಾ.ಹೆಚ್.ಬಿ. ಪ್ರಭಾಕರ್ ಶಾಸ್ತ್ತಿ ಅವರ ಏಕಸದಸ್ಯ ಪೀಠ ವರದಕ್ಷಿಣೆ ನೀಡುವಂತೆ ಪೋಷಕರ ಜೊತೆ ಸೇರಿ ಅತ್ತಿಗೆಗೆ ಕಿರುಕುಳ ನೀಡಿದ ಅರೋಪದಲ್ಲಿ ಈ ಆದೇಶವನ್ನು ಹೊರಡಿಸಿದೆ. ನಟಿ ಅಭಿನಯ ಕನ್ನಡ ಚಿತ್ರರಂಗದ ಖ್ಯಾತ ನಟಿ.ಇವರು ಕಿರುತೆರೆಯಲ್ಲೂ ಹೆಸರುವಾಸಿಯಾಗಿದ್ದು, ಹಲವು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.1983 ರಲ್ಲಿ ಕಾಶಿನಾಥರ ಸೂಪರ್ ಹಿಟ್ ಚಿತ್ರ `ಅನುಭವ’ದಿಂದ ಚಿತ್ರರಂಗಕ್ಕೆ

ವರದಕ್ಷಿಣೆ ಕಿರುಕುಳ; ನಟಿ ‘ಅಭಿನಯ’ ಗೆ ಎರಡು ವರ್ಷ ಜೈಲು!! Read More »

ಚುನಾವಣೆ ಹಿನ್ನಲೆ|ಮೈಸೂರಿನ ರೌಡಿ ಶೀಟರ್ ಗಳಿಗೆ ಡ್ರಿಲ್

ಸಮಗ್ರ ನ್ಯೂಸ್: ಚುನಾವಣೆ ಹಿನ್ನಲೆ ಮೈಸೂರು ಖಾಕಿ ಪಡೆ ಅಲರ್ಟ್ ಆಗುತ್ತಿದ್ದು, ಸಮಾಜಘಾತುಕ ಶಕ್ತಿಗಳನ್ನ ಸೆದೆಬಡಿಯಲು ಮುಂದಾಗಿದೆ. ಶಾಂತಿ ಕದಡುವ ಯತ್ನ ನಡೆಸುವವರಿಗೆ ಎಚ್ಚರಿಕೆ ನೀಡಿದ್ದಾರೆ. ಬೆಳ್ಳಂಬೆಳಗ್ಗೆ ಮೈಸೂರಿನ ರೌಡಿ ಶೀಟರ್ ಗಳಿಗೆ ಡ್ರಿಲ್ ಮಾಡಿಸಿದ್ದು ಸುಮಾರು 50 ಕ್ಕೂ ಹೆಚ್ಚು ರೌಡಿ ಶೀಟರ್ ಗಳನ್ನ ಹೆಬ್ಬಾಳ್ ಪೊಲೀಸ್ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ಸಮಯದಲ್ಲಿ ಅಹಿತಕರ ಘಟನೆಗೆ ಆಸ್ಪದ ನೀಡಿದ್ರೆ ಹುಷಾರ್ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಇದೇ ವೇಳೆ ನಗರದ ವಿವಿದ ಪೊಲೀಸ್

ಚುನಾವಣೆ ಹಿನ್ನಲೆ|ಮೈಸೂರಿನ ರೌಡಿ ಶೀಟರ್ ಗಳಿಗೆ ಡ್ರಿಲ್ Read More »

ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ರಾಜ್ಯ ಸರ್ಕಾರದಿಂದ ಆದೇಶ

ಸಮಗ್ರ ನ್ಯೂಸ್: ಪೋಸ್ಕೋ ಕೇಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಮುರುಘಾ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಜೈಲು ಪಾಲು ಆಗಿದ್ದಾರೆ. ಈ ಹಿನ್ನಲೆಯಲ್ಲಿ ಮುರುಘಾ ಮಠದ ಆಡಳಿತಾಧಿಕಾರಿಯನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿಎಸ್ ವಸ್ತ್ರದ್ ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಕುರಿತಂತೆ ಕಂದಾಯ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದು, ಚಿತ್ರದುರ್ಗ ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹಲ್ಮಠದ ಪೀಠಾಧಿಪತಿ ಹಾಗೂ ಎಸ್ ಜೆ ಎಂ ವಿದ್ಯಾಪೀಠದ ಅಧ್ಯಕ್ಷರು ಆಗಿರುವ ಶ್ರೀ ಶಿವಮೂರ್ತಿ ಮುರುಘಾ

ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸಿ ರಾಜ್ಯ ಸರ್ಕಾರದಿಂದ ಆದೇಶ Read More »

ಕಾರು ಪಲ್ಟಿ| ಸುಳ್ಯ ಮೂಲದ ತಾಯಿ, ಮಗು ಮೃತ್ಯು

ಸಮಗ್ರ ನ್ಯೂಸ್: ಇನೋವಾ ಕಾರೊಂದು ಸ್ಕಿಡ್ ಆಗಿ ಪಲ್ಟಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿದ್ದ ಸುಳ್ಯ ಮೂಲದ ಇಬ್ಬರು ಮೃತಪಟ್ಟಿದ್ದು ಹಾಗೂ ನಾಲ್ವರು ತೀವ್ರ ಗಾಯಗೊಂಡ ಘಟನೆ ಜಾಲ್ಸೂರು – ಕಾಸರಗೋಡು ರಸ್ತೆಯ ಪರಪ್ಪೆ ಬಳಿ ಸಂಭವಿಸಿದೆ. ಸುಳ್ಯದ ನಾವೂರು ಬೋರುಗುಡ್ಡೆ ಅಬ್ದುಲ್ಲಾ ಎಂಬವರ ಪುತ್ರಿ, ಪರಪ್ಪೆಯ ಶಾನ್ ಎಂಬವರ ಪತ್ನಿ ಶಾಹಿನಾ(28) ಹಾಗೂ ಮಗು ೩ ವರ್ಷ ಪ್ರಾಯದ ಶಜಾ ಮೃತಪಟ್ಟಿದ್ದಾರೆ. ಇನ್ನೂ ಕಾರಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು ಅವರನ್ನು ಕಾಸರಗೋಡು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಂಗಳೂರಿನ

ಕಾರು ಪಲ್ಟಿ| ಸುಳ್ಯ ಮೂಲದ ತಾಯಿ, ಮಗು ಮೃತ್ಯು Read More »

ಸುಳ್ಯ: ಪ್ರೇಯಸಿಯ ಜೊತೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ವಿವಾಹಿತ ಯುವಕ| ಪತ್ನಿಯಿಂದ ರಸ್ತೆಯಲ್ಲಿ ಬೀದಿರಂಪ

ಸಮಗ್ರ ನ್ಯೂಸ್: ಮಂಗಳೂರು ಮೂಲದ ವಿವಾಹಿತ ಯುವಕನೋರ್ವ ಪ್ರೇಯಸಿಯೊಂದಿಗೆ ಸುಳ್ಯದ ಗಾಂಧಿನಗರದ ಲಾಡ್ಜ್ ಒಂದರಲ್ಲಿ ಬಂದು ತಂಗಿದ್ದಾರೆಂದು ತಿಳಿದ ಯುವಕನ ಪತ್ನಿ ಡಿ.೧೧ರಂದು ಸಂಜೆ ಸುಳ್ಯಕ್ಕೆ ಬಂದು ಅವರು ತಂಗಿದ್ದ ಲಾಡ್ಜ್ ಬಳಿ ಬಂದು ಬೀದಿರಂಪ ಮಾಡಿದ ಘಟನೆ ವರದಿಯಾಗಿದೆ. ಲಾಡ್ಜ್ ನಲ್ಲಿದ್ದ ಯುವತಿಯ ಜತೆಗಿದ್ದ ವಿವಾಹಿತ ಯುವಕ ತನ್ನ ಪತ್ನಿ ಲಾಡ್ಜ್‌ನ ರಿಸೆಪ್ಶನ್ ಬಳಿಗೆ ಬಂದು ನಿಂತಿರುವ ವಿಷಯ ತಿಳಿದು ಪ್ರೇಯಸಿಯೊಂದಿಗೆ ಲಾಡ್ಜ್ ನಿಂದ ಹೊರಗೆ ಬಂದಿದ್ದಾರೆ. ಈ ಜೋಡಿಯನ್ನು ನೋಡಿದ ಆತನ ಹೆಂಡತಿ ರಸ್ತೆಯಲ್ಲಿ

ಸುಳ್ಯ: ಪ್ರೇಯಸಿಯ ಜೊತೆ ಲಾಡ್ಜ್ ನಲ್ಲಿ ಸಿಕ್ಕಿಬಿದ್ದ ವಿವಾಹಿತ ಯುವಕ| ಪತ್ನಿಯಿಂದ ರಸ್ತೆಯಲ್ಲಿ ಬೀದಿರಂಪ Read More »