ಕ್ರೈಂ

ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ‌ ಬಾಡಿಬಿಲ್ಡರ್ | ಸಾವಿನ ಸುತ್ತ ಅನುಮಾನದ ಹುತ್ತ

ಸಮಗ್ರ ನ್ಯೂಸ್: ಐಟಿಸಿಟಿ ಬೆಂಗಳೂರಿನಲ್ಲಿ ಕೋಲಾರದ ಬಾಡಿ ಬಿಲ್ಡರ್‌ ಯುವಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಕ್ಕೆ ಕಾರಣವಾಗಿದೆ. ಆರ್ ಪುರಂ ಬಳಿಯ ಹೀರಂಡಹಳ್ಳಿಯಲ್ಲಿ ಶ್ರೀನಾಥ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಬಾಡಿ ಬಿಲ್ಡರ್‌ ಎಂದು ಗುರುತಿಸಲಾಗಿದೆ. ಮೂಲತಃ ಕೋಲಾರದ ಶ್ರೀನಿವಾಸಪುರದ ಶ್ರೀನಾಥ್, ಈಸ್ಟ್ ಪಾಯಿಂಟ್ ಕಾಲೇಜಿನಲ್ಲಿ ಫಾರ್ಮಾ ಡಿ ಓದುತ್ತಿದ್ದರು. ಜೊತೆಗೆ ದೇಹದಾರ್ಢ್ಯ ಸ್ಪರ್ಧೆಗಳಲ್ಲೂ ಭಾಗಿಯಾಗುತ್ತಿದ್ದರು. ಆದರೆ ತಾವು ವಾಸವಿದ್ದ ಕೊಠಡಿಯಲ್ಲಿ ಮಂಗಳವಾರ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ದೊರೆತಿದ್ದಾರೆ. ಈ ಘಟನೆ ಸಂಬಂಧ

ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ‌ ಬಾಡಿಬಿಲ್ಡರ್ | ಸಾವಿನ ಸುತ್ತ ಅನುಮಾನದ ಹುತ್ತ Read More »

ಜಮ್ಮು ಕಾಶ್ಮೀರ: ಕಂದಕಕ್ಕೆ ಉರುಳಿದ ವಾಹನ – ಮೂರು ಯೋಧರು ಮೃತ್ಯು

ಸಮಗ್ರ ನ್ಯೂಸ್: ನಿಯಮಿತ ಕಾರ್ಯಾಚರಣೆ ಕಾರ್ಯ ನಡೆಸುತ್ತಿದ್ದಾಗ ಸೈನಿಕರಿದ್ದ ವಾಹನ ಕಂದಕಕ್ಕೆ ಉರುಳಿ ಮೂವರು ಭಾರತೀಯ ಸೇನಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಪ್ವಾರದ ಮಚ್ಚಲ್ ಸೆಕ್ಟರ್‌ನ ಮುಂಚೂಣಿ ಪ್ರದೇಶದಲ್ಲಿ ಇಂದು ಬೆಳ್ಳಗ್ಗೆ ಸಂಭವಿಸಿದೆ. ಒಬ್ಬ ಜೂನಿಯರ್ ಕಮಿಷನ್ಡ್ ಆಫೀಸರ್ ಮತ್ತು ಇಬ್ಬರು ಇತರ ಶ್ರೇಣಿಯ ಅಧಿಕಾರಿಗಳನ್ನು ಹೊತ್ತ ವಾಹನವು ಹಿಮದಿಂದ ತುಂಬಿದ ಟ್ರ್ಯಾಕ್‌ನಿಂದ ಜಾರಿ ಆಳದ ಕಮರಿಗೆ ಬಿದ್ದು ಈ ಘಟನೆ ಸಂಭವಿಸಿದೆ ಎಂದು ಸೇನೆ ಮಾಹಿತಿ ನೀಡಿದೆ. ಇನ್ನು ಸೇನೆಯ ಚಿನಾರ್

ಜಮ್ಮು ಕಾಶ್ಮೀರ: ಕಂದಕಕ್ಕೆ ಉರುಳಿದ ವಾಹನ – ಮೂರು ಯೋಧರು ಮೃತ್ಯು Read More »

ಬೆಳ್ತಂಗಡಿ:ಕಿಂಡಿ ಅಣೆಕಟ್ಟಿನ ಬದಿ ಯುವಕನ ಮೃತದೇಹ ಪತ್ತೆ

ಸಮಗ್ರ ನ್ಯೂಸ್ : ಕಿಂಡಿ ಅಣೆಕಟ್ಟಿನ ಬದಿಯಲ್ಲಿ ಕುಳಿತ ಸ್ಥಿತಿಯಲ್ಲಿ ಯುವಕನೊಬ್ಬನ ಮೃತದೇಹ ಪತ್ತೆಯಾಗಿರುವ ಘಟನೆ ಬೆಳ್ತಂಗಡಿಯಲ್ಲಿ ಜ.10 ರಂದು ಸಂಜೆ ವರದಿಯಾಗಿದೆ. ಲಾಯಿಲ ಗ್ರಾಮದ ಅಯೋಧ್ಯನಗರದ ನಿವಾಸಿ ಕಿರಣ್ ಗಾಣಿಗ(27) ಮೃತ ಯುವಕ ಎಂದು ಗುರುತಿಸಲಾಗಿದೆ. ಈತನ ಮೃತದೇಹ ಅಲ್ಲೇ ಸಮೀಪದಲ್ಲಿ ಹರಿಯುವ ನದಿಯ ಕಿಂಡಿ ಅಣೆಕಟ್ಟಿನ ಬದಿಯಲ್ಲಿ ಕುಳಿತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಸ್ಥಳಕ್ಕೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಅರ್ಜುನ್ ಹಾಗೂ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇನ್ನು ಕಿರಣ್

ಬೆಳ್ತಂಗಡಿ:ಕಿಂಡಿ ಅಣೆಕಟ್ಟಿನ ಬದಿ ಯುವಕನ ಮೃತದೇಹ ಪತ್ತೆ Read More »

ಸ್ಯಾಂಟ್ರೊರವಿ ಮತ್ತು ಸಿಎಂ ಪುತ್ರನ ನಡುವಿನ ವಾಟ್ಸಪ್ ಚಾಟ್ ರಿಲೀಸ್ ಮಾಡಿದ ಕಾಂಗ್ರೆಸ್| ಟ್ವಿಟರ್ ನಲ್ಲಿ ಸರ್ಕಾರಕ್ಕೆ ಚಾಟಿ ಬೀಸಿದ ಕೈಪಾಳಯ

ಸಮಗ್ರ ನ್ಯೂಸ್: ಸ್ಯಾಂಟ್ರೋ ರವಿಯ ಸ್ವೀಟ್ ಬ್ರದರ್ ಆಗಿರುವ ಸಿಎಂ ಪುತ್ರ ಮತ್ತು ರವಿಯ ವಾಟ್ಸಾಪ್ ಮೆಸೇಜ್‌ಗಳ ಸ್ಕ್ರೀನ್ ಶಾಟ್ ಅನ್ನು ಕಾಂಗ್ರೆಸ್ ರಿಲೀಸ್ ಮಾಡಿದ್ದು, ಇವು ಹಲವು ಪ್ರಶ್ನೆಗಳನ್ನ ಎತ್ತುತ್ತವೆ. ಎಲ್ಲಾ ಬ್ರೋಕರ್‌ಗಳನ್ನು ಮ್ಯಾನೇಜ್ ಮಾಡುವ ಜವಾಬ್ದಾರಿ ಸಿಎಂ ಪುತ್ರನದ್ದೇ? ಎಂಬ ಅನುಮಾನ ಮೂಡಿದ್ದು, ಸಿಎಂ ಬೊಮ್ಮಾಯಿ ಈ ಆರೋಪಕ್ಕೆ ಉತ್ತರಿಸಬೇಕಿದೆ. ಸಿಎಂ ಪಾಲಿನ ಕಮಿಷನ್ ವ್ಯವಹಾರ ನೋಡಿಕೊಳ್ಳುವುದು ಪುತ್ರನೇ? ಸ್ವತಃ ಸಿಎಂ ರವಿಯ ರಕ್ಷಣೆಗೆ ನಿಂತಿದ್ದಾರೆಯೇ ಬಿಜೆಪಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಟ್ವಿಟ್ ನಲ್ಲಿ

ಸ್ಯಾಂಟ್ರೊರವಿ ಮತ್ತು ಸಿಎಂ ಪುತ್ರನ ನಡುವಿನ ವಾಟ್ಸಪ್ ಚಾಟ್ ರಿಲೀಸ್ ಮಾಡಿದ ಕಾಂಗ್ರೆಸ್| ಟ್ವಿಟರ್ ನಲ್ಲಿ ಸರ್ಕಾರಕ್ಕೆ ಚಾಟಿ ಬೀಸಿದ ಕೈಪಾಳಯ Read More »

ಹೊನ್ನಾವರದಲ್ಲಿ ಭೀಕರ ಅಪಘಾತ| ಕಂಟೇನರ್ ಡಿಕ್ಕಿ ಹೊಡೆದು ಮಹಿಳೆಯ ದೇಹ ಛಿದ್ರ!!

ಸಮಗ್ರ‌ ನ್ಯೂಸ್: ಕುಮಟಾದಿಂದ ಹೊನ್ನಾವರಕ್ಕೆ ಆಗಮಿಸುತ್ತಿದ್ದ ದಂಪತಿಗಳಿದ್ದ ಸ್ಕೂಟಿಗೆ ಹಿಂಬದಿಯಿಂದ ಕಂಟೇನರ್ ಡಿಕ್ಕಿ ಹೊಡೆದು ಸ್ಕೂಟಿಯಲ್ಲಿ ತೆರಳುತ್ತಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಗೇರುಸೊಪ್ಪಾ ವೃತ್ತದ ಬಳಿ ನಡೆದಿದೆ. ಘಟನೆಯಲ್ಲಿ ಸ್ಕೂಟಿಯಲ್ಲಿದ್ದ ಆಕೆಯ ಗಂಡನಿಗೂ ತೀವ್ರವಾಗಿ ಪೆಟ್ಟಾಗಿದ್ದು, ಅಪಘಾತದ ತೀವ್ರತೆಗೆ ಮಹಿಳೆಯ ದೇಹ‌ ಛಿದ್ರವಾಗಿದೆ. ಸಾವಿತ್ರಿ ಭಟ್(64) ಮೃತ ದುರ್ದೈವಿಯಾಗಿದ್ದು ಈಕೆ ಬಿಎಸ್ಎನ್ಎಲ್ ನ ನಿವೃತ್ತರು ಎಂದು ತಿಳಿದುಬಂದಿದೆ. ಗಂಭೀರ ಗಾಯಗೊಂಡ ಈಕೆಯ ಪತಿ ಹೊನ್ನಾವರ ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ದಂಪತಿಯ

ಹೊನ್ನಾವರದಲ್ಲಿ ಭೀಕರ ಅಪಘಾತ| ಕಂಟೇನರ್ ಡಿಕ್ಕಿ ಹೊಡೆದು ಮಹಿಳೆಯ ದೇಹ ಛಿದ್ರ!! Read More »

ಬೆಂಗಳೂರು: ಮೆಟ್ರೋ ಪಿಲ್ಲರ್​​
ಬಿದ್ದು ತಾಯಿ ಮತ್ತು ಮಗು ಸಾವು

ಸಮಗ್ರ ನ್ಯೂಸ್: ಮೆಟ್ರೋ ಪಿಲ್ಲರ್​​ ಕಬ್ಬಿಣದ ರಾಡುಗಳು ರಸ್ತೆಗೆ ಬಿದ್ದು ತಾಯಿ ಮತ್ತು ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಹೆಚ್​ಬಿಆರ್ ಲೇಔಟ್ ಬಳಿ ಸಂಭವಿಸಿದೆ. ತೇಜಸ್ವಿನಿ (28) ಮತ್ತು ಎರಡೂವರೆ ವರ್ಷದ ಮಗು ವಿಹಾನ್ ಮೃತಪಟ್ಟ ದುರ್ದೈವಿಗಳು. ನಿರ್ಮಾಣ ಹಂತದಲ್ಲಿದ್ದ ಪಿಲ್ಲರ್ ಕಬ್ಬಿಣದ ರಾಡುಗಳು ಬೈಕ್​ನಲ್ಲಿ ಹೋಗುತ್ತಿದ್ದ ದಂಪತಿ ಮತ್ತು ಮಗು ಮೇಲೆ ಬಿದ್ದಿದ್ದು, ಘಟನೆಯಲ್ಲಿ ಗಾಯಗೊಂಡ ಮೂವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತ್ತು. ಆದರೆ ಗಂಭೀರವಾಗಿ ಗಾಯಗೊಂಡ ತಾಯಿ ಮತ್ತು ಮಗು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಸಿದೆ ಸಾವನ್ನಪ್ಪಿದ್ದಾರೆ.

ಬೆಂಗಳೂರು: ಮೆಟ್ರೋ ಪಿಲ್ಲರ್​​
ಬಿದ್ದು ತಾಯಿ ಮತ್ತು ಮಗು ಸಾವು
Read More »

ಮಾಸ್ಕೋದಿಂದ ಗೋವಾಕ್ಕೆ ಬರುತ್ತಿದ್ದ‌ ವಿಮಾನಕ್ಕೆ ಬಾಂಬ್ ಬೆದರಿಕೆ| ಗುಜರಾತ್ ನಲ್ಲಿ ತುರ್ತು ಭೂಸ್ಪರ್ಶ

ಸಮಗ್ರ ನ್ಯೂಸ್: ಮಾಸ್ಕೋದಿಂದ ಗೋವಾಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಇ-ಮೇಲ್ ಬಂದ ಕಾರಣ ಗುಜರಾತ್‌ ಜಾಮ್ ನಗರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ 236 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಪೊಲೀಸ್ ಮಹಾನಿರೀಕ್ಷಕ ಅಶೋಕ್ ಕುಮಾರ್ ಯಾದವ್ ತಿಳಿಸಿದ್ದಾರೆ. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಹಾಗೂ ಸ್ಥಳೀಯ ಅಧಿಕಾರಿಗಳು ವಿಮಾನವನ್ನು ಪರಿಶೀಲಿಸುತ್ತಿದ್ದಾರೆ. ಪೊಲೀಸರು, ಬಿಡಿಡಿಎಸ್ ಮತ್ತು ಸ್ಥಳೀಯ ಅಧಿಕಾರಿಗಳು ಇಡೀ ವಿಮಾನವನ್ನು ಶೋಧಿಸುತ್ತಿದ್ದಾರೆ ಎಂದರು. ಪ್ರಯಾಣಿಕರು ಶಾಂತವಾಗಿರುವಂತೆ

ಮಾಸ್ಕೋದಿಂದ ಗೋವಾಕ್ಕೆ ಬರುತ್ತಿದ್ದ‌ ವಿಮಾನಕ್ಕೆ ಬಾಂಬ್ ಬೆದರಿಕೆ| ಗುಜರಾತ್ ನಲ್ಲಿ ತುರ್ತು ಭೂಸ್ಪರ್ಶ Read More »

ಅಪರಿಚಿತರಿಂದ ಗುಂಡಿನ ದಾಳಿ| ಸಂಘಪರಿವಾರದ ಕಾರ್ಯಕರ್ತ ಸಾವು

ಸಮಗ್ರ ನ್ಯೂಸ್: ಹಾಸನದಲ್ಲಿ ಗುಂಡಿನ ದಾಳಿಗೆ ಮತ್ತೊಂದು ಬಲಿಯಾಗಿದೆ. ತಿಂಗಳ ಅಂತರದಲ್ಲಿಯೇ ಗುಂಡಿನ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಸೋಮವಾರ ಸಂಜೆ ಅಪರಿಚಿತರಿಂದ ನಡೆದ ಗುಂಡಿನ ದಾಳಿಯಲ್ಲಿ ಯುವಕ ನವೀನ್(39) ಸ್ಥಳದಲ್ಲೇ ಸಾವನ್ನಪ್ಪಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಸನ‌ ಜಿಲ್ಲೆ ಸಕಲೇಶಪುರ ತಾಲೂಕಿನ ತಂಬಲಗೇರಿ ಗ್ರಾಮದ ಹೊರವಲಯದಲ್ಲಿ ಗುಂಡಿನ ದಾಳಿ ನಡೆದಿದೆ. ನವೀನ್ ಸೇರಿದಂತೆ ನಾಲ್ವರು ಮೀನು ಹಿಡಿಯಲು ತೆರಳಿದ್ದ ವೇಳೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ. ನವೀನ್ ಜೊತೆಯಲ್ಲಿ ಅವರ ಗೆಳೆಯರಾದ ದಯಾನಂದ್​, ಪದ್ಮನಾಭ್, ರಾಜಾಚಾರಿ ಇದ್ದರು.

ಅಪರಿಚಿತರಿಂದ ಗುಂಡಿನ ದಾಳಿ| ಸಂಘಪರಿವಾರದ ಕಾರ್ಯಕರ್ತ ಸಾವು Read More »

ಸುರತ್ಕಲ್: ಶಾಲೆಗೆ ಹೊರಡುತ್ತಿದ್ದ ಬಾಲಕ ಹೃದಯಾಘಾತದಿಂದ ವಿಧಿವಶ

ಸಮಗ್ರ ನ್ಯೂಸ್: ಶಾಲೆಗೆ ಹೊರಡಲು ಸಿದ್ದನಾಗುತ್ತಿದ್ದ ಬಾಲಕ ಹೃದಯಾಘಾತಕ್ಕೆ ತುತ್ತಾಗಿ ಮೃತಪಟ್ಟ ಘಟನೆ ಸೋಮವಾರ ಬೆಳಗ್ಗೆ ಸುರತ್ಕಲ್ ನಲ್ಲಿ ನಡೆದಿದೆ. ಇಲ್ಲಿನ ಕೃಷ್ಣಾಪುರ 7ನೇ ಬ್ಲಾಕ್‌ ನಿವಾಸಿ ಮೊಹಮ್ಮದ್‌ ಹಸೀಮ್‌ (17) ಮೃತ ಬಾಲಕ. ಬೆಳಗ್ಗೆ ಸಿದ್ದನಾಗಿದ್ದ ಹಸೀಮ್‌ಗೆ ಏಕಾಏಕಿ ತಲೆ ಸುತ್ತು ಬಂದು ಬಿದ್ದಿದ್ದು, ಮನೆಮಂದಿ ತತ್‌ಕ್ಷಣ ಸಮೀಪದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಅಲ್ಲಿ ಮೃತಪಟ್ಟಿರುವ ಬಗ್ಗೆ ವೈದ್ಯರು ತಿಳಿಸಿದ್ದು, ಬದುಕುಳಿಯುವ ಆಸೆಯಿಂದ ಪೋಷಕರು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅದಾಗಲೇ ಆತ ಮೃತಪಟ್ಟ

ಸುರತ್ಕಲ್: ಶಾಲೆಗೆ ಹೊರಡುತ್ತಿದ್ದ ಬಾಲಕ ಹೃದಯಾಘಾತದಿಂದ ವಿಧಿವಶ Read More »

ಸುಬ್ರಹ್ಮಣ್ಯ: ಕಾಣೆಯಾಗಿದ್ದ ಗ್ರಾ.ಪಂ ಸದಸ್ಯೆ ಪ್ರಿಯಕರನೊಂದಿಗೆ ಠಾಣೆಗೆ ಹಾಜರ್!!

ಸಮಗ್ರ ನ್ಯೂಸ್: ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ದ.ಕ ಜಿಲ್ಲೆಯ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ ಸದಸ್ಯೆ ಭಾರತಿ ಮೂಕಮಲೆ ಜ. 5ರಂದು ಸುಬ್ರಹ್ಮಣ್ಯ ಠಾಣೆಗೆ ಪ್ರಿಯಕರನೊಂದಿಗೆ ಹಾಜರಾಗಿ ಆತನೊಂದಿಗೇ ತೆರಳಿದ್ದಾರೆ. ಭಾರತಿ ಮೂಕಮಲೆ ತನ್ನ ಪ್ರಿಯಕರ ನಂದನ್‌ ಮತ್ತು ಅವರ ನ್ಯಾಯವಾದಿ ಮುಖಾಂತರ ಸುಬ್ರಹ್ಮಣ್ಯ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ನಂದನ್‌ನೊಂದಿಗೆ ಜೀವನ ಮುಂದುವರೆಸುವ ನಿರ್ಧಾರ ಪ್ರಕಟಿಸಿದ್ದಾರೆ. ಠಾಣೆಯಲ್ಲಿ ತನ್ನ ನಿರ್ಧಾರವನ್ನು ಲಿಖೀತ ರೂಪದಲ್ಲಿ ಬರೆದು ಕೊಟ್ಟು ನಂದನ್‌ನೊಂದಿಗೆ ತೆರಳಿದ್ದಾರೆ. ತನ್ನಿಬ್ಬರು ಸಣ್ಣ ಹೆಣ್ಣು

ಸುಬ್ರಹ್ಮಣ್ಯ: ಕಾಣೆಯಾಗಿದ್ದ ಗ್ರಾ.ಪಂ ಸದಸ್ಯೆ ಪ್ರಿಯಕರನೊಂದಿಗೆ ಠಾಣೆಗೆ ಹಾಜರ್!! Read More »