ಕ್ರೈಂ

ಮಡಿಕೇರಿ: ಹೆಜ್ಜೇನು ದಾಳಿಗೆ ಇಬ್ಬರು ಬಲಿ

ಸಮಗ್ರ ನ್ಯೂಸ್: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಹೆಜ್ಜೇನು ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಮರಗೋಡು ಗ್ರಾಮದ ಹುಲಿತಾಳದ ಅಶ್ವಿನ್ ಕುಮಾರ್ (45) ಹಾಗೂ ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದ ಕಾರ್ಮಿಕ ವೇಲು ಅವರುಗಳು ಮೃತಪಟ್ಟವರು. ಅಶ್ವಿನ್ ಕುಮಾರ್ ಅವರು ತನ್ನ ತಂಗಿ ಅಪರ್ಣ ಅವರೊಂದಿಗೆ ತೋಟಕ್ಕೆ ಹೋಗಿದ್ದಾಗ ಇಬ್ಬರ ಮೇಲೆ ದಿಢೀರ್ ಆಗಿ ಹೆಜ್ಜೇನು ದಾಳಿ ಮಾಡಿದೆ. ಈ ಸಂದರ್ಭ ದಾಳಿಯಿಂದ ತಪ್ಪಿಸಿಕೊಳ್ಳಲು ಮನೆಯೊಳಗೆ ಬಂದು ಸೇರಿಕೊಂಡರಾದರೂ ಅಶ್ವಿನ್ ಕುಮಾರ್ ತೀವ್ರ ಅಸ್ವಸ್ಥಗೊಂಡರು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರು ಅವರು

ಮಡಿಕೇರಿ: ಹೆಜ್ಜೇನು ದಾಳಿಗೆ ಇಬ್ಬರು ಬಲಿ Read More »

ಎರಡು ಎಲೆಕ್ಟ್ರಿಕ್ ಬಸ್ ಗಳು ಬೆಂಕಿಗಾಹುತಿ| ತಪ್ಪಿದ ಭಾರೀ ಅನಾಹುತ

ಸಮಗ್ರ ನ್ಯೂಸ್: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಎಪಿಎಸ್​​​ಆರ್​ಟಿಸಿ)ಯ ಎರಡು ಸ್ಲೀಪರ್ ಲಕ್ಸುರಿ ಬಸ್​​ಗಳಲ್ಲಿ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತೆಲಂಗಾಣದ ಸೂರ್ಯಪೇಟ್​ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್​ ಬಸ್​​ಗಳಲ್ಲಿ ಯಾವುದೇ ಪ್ರಯಾಣಿಕರು ಇದರ ಕಾರಣದಿಂದ ಭಾರಿ ದುರಂತ ತಪ್ಪಿದಂತಾಗಿದೆ. ಹೈದರಾಬಾದ್ – ವಿಜಯವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚಿವ್ವೆನ್ಲಾ ಮಂಡಲದ ಗುಂಪೂಲ ಗ್ರಾಮದ ಹೊರವಲಯದ ಈ ಘಟನೆ ಜರುಗಿದೆ. ಮೊದಲು ಒಂದು ಬಸ್​ನಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ನಂತರ ಪಕ್ಕದಲ್ಲೇ ನಿಂತಿದ್ದ

ಎರಡು ಎಲೆಕ್ಟ್ರಿಕ್ ಬಸ್ ಗಳು ಬೆಂಕಿಗಾಹುತಿ| ತಪ್ಪಿದ ಭಾರೀ ಅನಾಹುತ Read More »

ಕಾರ್ಕಳ: ವಾಲಿಬಾಲ್ ಆಟದ ವೇಳೆ ಕುಸಿದು ಬಿದ್ದು ಯುವಕ ಮೃತ್ಯು

ಸಮಗ್ರ ನ್ಯೂಸ್: ವಾಲಿಬಾಲ್ ಆಡುತ್ತಿದ್ದ ವೇಳೆ ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದಲ್ಲಿ ನಡೆದಿದೆ. ಸಂತೋಷ (34) ಮೃತ ದುರ್ದೈವಿ.ಕಳೆದ 4 ವರ್ಷಗಳ ಹಿಂದೆ ಹೃದಯಾಘಾತವಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ನಿನ್ನೆ ಸಂಜೆ ಫೆ.25 ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ದುರ್ಗಾ ಅನುದಾನಿತ ಶಾಲೆಯ ಮೈದಾನದಲ್ಲಿ ವಾಲಿಬಾಲ್‌ ಆಡುತ್ತಿರುವಾಗ ಮೈದಾನದಲ್ಲಿ ನಿಂತಿದ್ದ ಸಂತೋಷರವರು ಹೃದಯಘಾಟಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಕಾರ್ಕಳ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅದಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ.ಈ

ಕಾರ್ಕಳ: ವಾಲಿಬಾಲ್ ಆಟದ ವೇಳೆ ಕುಸಿದು ಬಿದ್ದು ಯುವಕ ಮೃತ್ಯು Read More »

ಅರುಣ್ ಜೇಟ್ಲಿ ಪುತ್ರನಿಂದ ಲೈಂಗಿಕ ದೌರ್ಜನ್ಯ ಆರೋಪ| ಬಿಸಿಸಿಐ ಗೆ ದೂರು ನೀಡಿದ ಮಹಿಳೆ

ಸಮಗ್ರ ನ್ಯೂಸ್: ದೆಹಲಿ ಡಿಸ್ಟ್ರಿಕ್ಟ್​​ ಕ್ರಿಕೆಟ್​​ ಅಸೋಸಿಯೇಷನ್​ ಅಧ್ಯಕ್ಷ ರೋಹಿತ್​ ಜೇಟ್ಲಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ಜ್ಯೋತ್ಸ್ನಾ ಸಹ್ನಿ ಎಂಬ ಮಹಿಳೆ ರೋಹನ್ ಜೇಟ್ಲಿ ವಿರುದ್ಧ ಈ ಆರೋಪವನ್ನು ಮಾಡಿದ್ದು ಬಿಸಿಸಿಐಗೆ ದೂರು ನೀಡಿದ್ದಾರೆ. 3 ಪುಟಗಳ ಈಮೇಲ್‌ನಲ್ಲಿ ಮದುವೆಯ ನೆಪದಲ್ಲಿ ರೋಹನ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಡಿಡಿಸಿಎ ನಿಧಿ ದುರ್ಬಳಕೆಯ ಆರೋಪ ಮಾಡಿದ್ದು, ತನಗೆ ಜೀವ ಬೆದರಿಕೆಯನ್ನು ಕೂಡ ಒಡ್ಡಲಾಗಿದೆ ಎಂದು ಉಲ್ಲೇಖಿಸಿದ್ದಾರೆ. ಸಂತ್ರಸ್ತ

ಅರುಣ್ ಜೇಟ್ಲಿ ಪುತ್ರನಿಂದ ಲೈಂಗಿಕ ದೌರ್ಜನ್ಯ ಆರೋಪ| ಬಿಸಿಸಿಐ ಗೆ ದೂರು ನೀಡಿದ ಮಹಿಳೆ Read More »

ಬೈಕ್ – ಟ್ರಾಕ್ಟರ್ ನಡುವೆ ಅಪಘಾತ| ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದುರ್ಮರಣ

ಸಮಗ್ರ ನ್ಯೂಸ್: ಬೈಕ್, ಟ್ರ್ಯಾಕ್ಟರ್ ಗೆ ಡಿಕ್ಕಿಯಾದ ಪರಿಣಾಮ, ಬೈಕ್ ನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕು ಕಾರೆಹಳ್ಳಿ ಬಳಿ ನಡೆದಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾರೆಹಳ್ಳಿ ಬಳಿಯಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದಂತ ಟ್ರ್ಯಾಕ್ಟರ್ ಗೆ ಬೈಕ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಲೋಕೇಶ್ ಆಚಾರಿ ಹಾಗೂ ಅವರ ಪತ್ನಿ ಲಕ್ಷ್ಮೀ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ರಸ್ತೆ ಬದಿಯಲ್ಲಿ ಟ್ರ್ಯಾಕ್ಟರ್ ನಿಂತಿದ್ದನ್ನು

ಬೈಕ್ – ಟ್ರಾಕ್ಟರ್ ನಡುವೆ ಅಪಘಾತ| ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ದುರ್ಮರಣ Read More »

ಮರ್ಯಾದಾ ಹತ್ಯೆ ಪ್ರಕರಣ| ಹೆತ್ತ ಮಗಳ ರುಂಡ ಮುಂಡ ಕತ್ತರಿಸಿದ ತಂದೆ

ಸಮಗ್ರ ನ್ಯೂಸ್: ತಂದೆಯೊಬ್ಬ, ಬೇರೆ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದ ಮಗಳ ರುಂಡ- ಮುಂಡವನ್ನು ಕತ್ತರಿಸಿ ಕೊಲೆ ಮಾಡಿ ಕಾಡಿನಲ್ಲಿ ಎಸೆದಿದ್ದಾನೆ. ಈ ಮರ್ಯಾದಾ ಹತ್ಯೆ ಪ್ರಕರಣ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಪಾಣ್ಯಂ ಮಂಡಲದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಸನ್ನ (21) ಮೃತ ದುರ್ದೈವಿ. ಪಾಣ್ಯಂ ಮಂಡಲ ಆಲಮೂರಿನ ದೇವೇಂದ್ರ ರೆಡ್ಡಿ ಮಗಳನ್ನು ಕೊಂದ ಆರೋಪಿ. ರೆಡ್ಡಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಮಗಳಾದ ಪ್ರಸನ್ನಗೆ ಎರಡು ವರ್ಷಗಳ ಹಿಂದೆ ಸಾಫ್ಟ್‌ವೇರ್ ಇಂಜಿನಿಯರ್ ಜೊತೆ ವಿವಾಹವಾಗಿತ್ತು. ಮದುವೆಯ

ಮರ್ಯಾದಾ ಹತ್ಯೆ ಪ್ರಕರಣ| ಹೆತ್ತ ಮಗಳ ರುಂಡ ಮುಂಡ ಕತ್ತರಿಸಿದ ತಂದೆ Read More »

ಎರಡು ಬಸ್ ಗಳಿಗೆ ಹಿಂದಿನಿಂದ ಡಿಕ್ಕಿ ಹೊಡೆದ‌ ಟ್ರಕ್| 8 ಸಾವು ; 50 ಮಂದಿ ಜಖಂ

ಸಮಗ್ರ ನ್ಯೂಸ್: ಟ್ರಕ್‌ವೊಂದು ಎರಡು ಬಸ್‌ಗಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಸಿಧಿ ಸಮೀಪದ ಮೊಹಾನಿಯಾ ಸುರಂಗದ ಬಳಿ ನಡೆದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರ್ಯಾಲಿಯಿಂದ ಹಿಂದಿರುಗುತ್ತಿದ್ದ ಜನರನ್ನು ಈ ಬಸ್ಸುಗಳು ಸಾಗಿಸುತ್ತಿದ್ದವು. ಅಧಿಕಾರಿಗಳ ಪ್ರಕಾರ, ಟ್ರಕ್‌ನಲ್ಲಿ ಟೈರ್ ಸ್ಫೋಟಗೊಂಡಿದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಗಾಯಾಳುಗಳನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿದೆ. ಜನರನ್ನು ತುಂಬಿದ್ದ ಎರಡು ಬಸ್ಸುಗಳು ರಸ್ತೆ ಬದಿ‌ ನಿಂತಿದ್ದವು,

ಎರಡು ಬಸ್ ಗಳಿಗೆ ಹಿಂದಿನಿಂದ ಡಿಕ್ಕಿ ಹೊಡೆದ‌ ಟ್ರಕ್| 8 ಸಾವು ; 50 ಮಂದಿ ಜಖಂ Read More »

ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ| ದುಷ್ಕರ್ಮಿಗಳ ಕ್ರೌರ್ಯಕ್ಕೆ ಚೆಲ್ಲಾಪಿಲ್ಲಿಯಾದ ಜೀವಗಳು

ಸಮಗ್ರ ನ್ಯೂಸ್: ಒಂದೇ‌ ಕುಟುಂಬದ ನಾಲ್ವರನ್ನು ಬರ್ಬರವಾಗಿ ಕೊಲೆಗೈದ ಘಟನೆ ಉತ್ತರಕನ್ನಡ ಜಿಲ್ಲೆಯಲ್ಲಿ ನಡೆದಿದೆ. ದುಷ್ಕರ್ಮಿಗಳ ಕ್ರೌರ್ಯಕ್ಕೆ ಶವಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡುವಳ್ಳಿ ಗ್ರಾಮದಲ್ಲಿ ಈ ಕೊಲೆ ನಡೆದಿದೆ. ಶಂಭು ಭಟ್ (65), ಅವರ ಪತ್ನಿ ಮಾದೇವಿ ಭಟ್ (40), ಪುತ್ರ ರಾಜೀವ್ ಭಟ್ (34) ಹಾಗೂ ಸೊಸೆ ಕುಸುಮಾ ಭಟ್ (30) ಕೊಲೆಯಾದವರು. ನಾಲ್ವರನ್ನೂ ಕತ್ತಿಯಿಂದ ಕಡಿದು ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸರ ಧಾವಿಸಿದ್ದು, ಪರಿಶೀಲನೆ

ಒಂದೇ ಕುಟುಂಬದ ನಾಲ್ವರ ಬರ್ಬರ ಕೊಲೆ| ದುಷ್ಕರ್ಮಿಗಳ ಕ್ರೌರ್ಯಕ್ಕೆ ಚೆಲ್ಲಾಪಿಲ್ಲಿಯಾದ ಜೀವಗಳು Read More »

ಜಿಮ್ ಮಾಡುತ್ತಿರುವಾಗ ಹೃದಯಾಘಾತ| ಪೊಲೀಸ್ ಕಾನ್ ಸ್ಟೇಬಲ್ ಸಾವು

ಸಮಗ್ರ ನ್ಯೂಸ್: ಪೊಲೀಸ್ ಕಾನ್​ಸ್ಟೇಬಲ್ ಒಬ್ಬರು ಜಿಮ್​ನಲ್ಲಿ ವ್ಯಾಯಾಮ ಮಾಡುತ್ತಿರಬೇಕಾದರೆ ಮೃತಪಟ್ಟಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ವಿಶಾಲ್(24) ಎಂಬಾತ ಸಾವನ್ನಪ್ಪಿರುವ ಕಾನ್​ಸ್ಟೇಬಲ್. ಜಿಮ್​ನಲ್ಲಿ ಪುಶ್​-ಅಪ್ ತೆಗೆಯುತ್ತಿರಬೇಕಾದರೆ ಹಠಾತ್ ಸಾವು ಸಂಭವಿಸಿದ್ದು, ಕುಸಿದು ಬಿದ್ದಿರುವ ವೀಡಿಯೋ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾನ್​ಸ್ಟೇಬಲ್ ವಿಶಾಲ್ ಹೈದರಾಬಾದ್​ನ ಆಸಿಫ್ ನಗರದ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ವೈರಲ್ ಆಗಿರುವ ವೀಡಿಯೋದಲ್ಲಿ ವಿಶಾಲ್ ಪುಶ್‌-ಅಪ್‌ ತೆಗೆಯುತ್ತಿದ್ದಾಗ ಕುಸಿದು ಬೀಳುವುದನ್ನು ಗಮನಿಸಬಹುದು. ಈ ವೇಳೆ ಜಿಮ್​ನಲ್ಲಿದ್ದ ಕೆಲ ಯುವಕರು ವಿಶಾಲ್​ ಅವರನ್ನು ಸ್ಥಳೀಯ ಆಸ್ಪತ್ರೆಗೆ

ಜಿಮ್ ಮಾಡುತ್ತಿರುವಾಗ ಹೃದಯಾಘಾತ| ಪೊಲೀಸ್ ಕಾನ್ ಸ್ಟೇಬಲ್ ಸಾವು Read More »

ಮನೆಮುಂದೆಯೇ ಬಿಂದಾಸ್ ಓಡಾಟ‌ ನಡೆಸಿದ ಒಂಟಿಸಲಗ| ಮನೆಯಿಂದ ಹೊರಬರದ ಗ್ರಾಮಸ್ಥರು

ಸಮಗ್ರ ನ್ಯೂಸ್: ರಾಜ್ಯದ ವಿವಿಧ ಕಡೆ ಆನೆಗಳ ಹಾವಳಿ ಮುಂದುವರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಹೊರನಾಡಿನ ಮುಂಡುಗನಮನೆ ಗ್ರಾಮದಲ್ಲಿ ಒಂಟಿ ಸಲಗವೊಂದು ಕಳೆದ ಎರಡು ದಿನಗಳಿಂದ ಬಿಂದಾಸ್‌ ಆಗಿ ಓಡಾಗುತ್ತಿದೆ. ಬುಧವಾರ ಹಲವು ಕಡೆ ಸುತ್ತಾಡಿದ್ದ ಅದು ಗುರುವಾರ ಬೆಳಗ್ಗೆ ಕಾಡಿನಿಂದ ನಾಡಿನತ್ತ ನಡೆದುಕೊಂಡು ಬರುತ್ತಿರುವುದನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಒಂಟಿ ಸಲಗನ ಓಡಾಟದಿಂದ ಭಯಗೊಂಡ ಜನರು ಮನೆಯೊಳಗೇ ಬಂಧಿಯಾಗಿದ್ದಾರೆ. ಬುಧವಾರವೂ ಮರೆಸೀಕೆರೆ ಗ್ರಾಮದಲ್ಲಿ ಒಂಟಿ ಸಲಗ ಎಲ್ಲೆಂದರಲ್ಲಿ ಓಡಾಡಿ ಭೀತಿ ಹುಟ್ಟಿಸಿತ್ತು. ತೋಟದ

ಮನೆಮುಂದೆಯೇ ಬಿಂದಾಸ್ ಓಡಾಟ‌ ನಡೆಸಿದ ಒಂಟಿಸಲಗ| ಮನೆಯಿಂದ ಹೊರಬರದ ಗ್ರಾಮಸ್ಥರು Read More »