ಕ್ರೈಂ

‘ಕುಟ್ಟಿ ಪಟ್ಟಾಳಂ’ ಖ್ಯಾತಿಯ ಮಲೆಯಾಳಂ ನಟಿ ಸುಬಿ ಸುರೇಶ್ ಇನ್ನಿಲ್ಲ

ಸಮಗ್ರ ನ್ಯೂಸ್: ಮಲಯಾಳಂ ಖ್ಯಾತ ನಟಿ ಸುಬಿ ಸುರೇಶ್ ನಿಧನರಾಗಿದ್ದಾರೆ. ಅವರಿಗೆ 34 ವರ್ಷ ವಯಸ್ಸಾಗಿತ್ತು. ಅವರು ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿದ್ದು, ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಬುಧವಾರ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಹಾಸ್ಯಕ್ಕೆ ಹೆಸರುವಾಸಿಯಾದ ಸುಬಿ ಅವರು ವಿವಿಧ ಸ್ಟೇಜ್ ಶೋಗಳಲ್ಲಿ ಡ್ಯಾನ್ಸ್ ಮತ್ತು ಹಾಸ್ಯನಟರಾಗಿ ವೃತ್ತಿಯನ್ನು ಆರಂಭಿಸಿದ್ದರು. ಅವರು ಮಳವಿಲ್ ಮನೋರಮಾ ಅವರ ‘ಮೇಡ್ ಫಾರ್ ಈಚ್’ ಮತ್ತು ಸೂರ್ಯ ಟಿವಿಯ ‘ಕುಟ್ಟಿ ಪಟ್ಟಾಲಂ’ ನಂತಹ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು.

‘ಕುಟ್ಟಿ ಪಟ್ಟಾಳಂ’ ಖ್ಯಾತಿಯ ಮಲೆಯಾಳಂ ನಟಿ ಸುಬಿ ಸುರೇಶ್ ಇನ್ನಿಲ್ಲ Read More »

ಕಾಣಿಯೂರು: ಕೌಟುಂಬಿಕ ಗಲಭೆ; ಇಬ್ಬರು ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ಪುತ್ತೂರು ತಾಲೂಕಿನ ಕಾಣಿಯೂರು ಸಮೀಪದ ಬೆಳಂದೂರಿನ ಅಮೈ ಎಂಬಲ್ಲಿ ಕುಟುಂಬದೊಳಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಇತ್ತಂಡಗಳಿಂದ ದೂರು ದಾಖಲಾಗಿದೆ. ಅಮೈ ನಿವಾಸಿ ಧರ್ಮಪಾಲ ಎಂಬವರಿಗೆ ಅವರ ಅಣ್ಣನ ಪತ್ನಿ ಹಾಗೂ ಮಗಳು ದೊಣ್ಣೆಯಿಂದ ತಲೆಗೆ ಹೊಡೆದು ನೋವುಂಟು ಮಾಡಿ ದೂಡಿ ಹಾಕಿ ನೆಲದಲ್ಲಿದ್ದ ಕಲ್ಲು ಮುಖಕ್ಕೆ ತಾಗಿ ಗುದ್ದಿರುವುದಾಗಿ ಆರೋಸಲಾಗಿದೆ. ಗಾಯಾಳು ಚಿಕಿತ್ಸೆಯ ಬಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಯಶೋದಾ ಅವರು ದೂರು ನೀಡಿ ಬೆಳಂದೂರು

ಕಾಣಿಯೂರು: ಕೌಟುಂಬಿಕ ಗಲಭೆ; ಇಬ್ಬರು ಆಸ್ಪತ್ರೆಗೆ ದಾಖಲು Read More »

ಸುಳ್ಯ: ಅಪ್ರಾಪ್ತ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ| ಬೆಳ್ಳಾರೆಯ ಮುಸ್ಲಿಂ ‌ಮುಖಂಡ ವಿರುದ್ಧ ಫೋಕ್ಸೊ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುತ್ತಿದ್ದಾಗ ವ್ಯಕ್ತಿಯೊಬ್ಬ ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ಬೆಳ್ಳಾರೆಯ ಮುಸ್ಲಿಂ ಮುಖಂಡನೋರ್ವನ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿಯು ರಾತ್ರಿ ಸಮಯ ತಾಯಿ ಮೊಬೈಲಿನಿಂದ ಕರೆ ಮಾಡಿ ಮಾತನಾಡುವಂತೆ ಒತ್ತಾಯ ಮಾಡಿದ್ದು, ಇದರಿಂದ ಭಯಗೊಂಡ ಬಾಲಕಿ ಶಾಲೆಗೆ ಹೋಗುವುದಿಲ್ಲ ಎಂದು ಹೇಳುತ್ತಿರುದಾಗಿ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಆರೋಪಿಯನ್ನು ಅಶ್ರಫ್ ಯಾನೆ ಅಚ್ಚಚ್ಚಪ್ಪನು ಎಂದು ಗುರುತಿಸಲಾಗಿದೆ. ವಿದ್ಯಾರ್ಥಿನಿಯು ಶಾಲೆ ಬಿಟ್ಟು ಮನೆಗೆ ನಡೆದುಕೊಂಡು ಬರುತ್ತಿರುವ ಸಮಯ ಆರೋಪಿಯು

ಸುಳ್ಯ: ಅಪ್ರಾಪ್ತ ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ| ಬೆಳ್ಳಾರೆಯ ಮುಸ್ಲಿಂ ‌ಮುಖಂಡ ವಿರುದ್ಧ ಫೋಕ್ಸೊ ಪ್ರಕರಣ ದಾಖಲು Read More »

ನನ್ನ ಹೆಣವೂ ಪ್ರಿಡ್ಜ್ ಒಳಗೆ ಸ್ಟೋರ್ ಆಗ್ತಿತ್ತು, ದೇವರು ಬಚಾವ್ ಮಾಡಿದ| ಗೋಳು ತೋಡಿಕೊಂಡ ರಾಖಿ ಸಾವಂತ್

ಸಮಗ್ರ ನ್ಯೂಸ್: ಮದುವೆಯಾಗಿ ಕೆಲವೇ ದಿನಗಳಲ್ಲಿಯೇ ಗಂಡ ಆದಿಲ್‌ ಖಾನ್‌ ಜೊತೆಗಿನ ಮನಸ್ತಾಪದಿಂದಾಗಿ ನಟಿ, ಡಾನ್ಸರ್‌ ಹಾಗೂ ಬಿಗ್‌ ಬಾಸ್‌ ಮೂಲಕ ಪ್ರಸಿದ್ಧಿ ಪಡೆದ ರಾಖಿ ಸಾವಂತ್‌ ಸುದ್ದಿಯಲ್ಲಿದ್ದಾರೆ. ಒಂದು ಕಡೆ ರಾಖಿ ಸಾವಂತ್‌ ನೀಡಿದ ದೂರಿನ ಆಧಾರದಲ್ಲಿ ಮೈಸೂರು ಮೂಲದ ಪತಿ ಆದಿಲ್‌ ಖಾನ್‌ ಜೈಲಿನಲ್ಲಿದ್ದರೆ, ರಾಖಿ ಸಾವಂತ್‌ ಮಾಧ್ಯಮಗಳ ಎದುರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಮತ್ತೆ ಮಾಧ್ಯಮಗಳ ಎದುರು ಬಂದಿದ್ದ ರಾಖಿ ಸಾವಂತ್‌, ಕೆನ್ನೆಗೆ ಹೊಡೆದುಕೊಳ್ಳುತ್ತಾ ಅಯ್ಯಯ್ಯೋ ಎಂಥಾ ತಪ್ಪು ಮಾಡಿಬಿಟ್ಟೆ ಎಂದು

ನನ್ನ ಹೆಣವೂ ಪ್ರಿಡ್ಜ್ ಒಳಗೆ ಸ್ಟೋರ್ ಆಗ್ತಿತ್ತು, ದೇವರು ಬಚಾವ್ ಮಾಡಿದ| ಗೋಳು ತೋಡಿಕೊಂಡ ರಾಖಿ ಸಾವಂತ್ Read More »

ಬೆಳ್ತಂಗಡಿ: ಅಪಘಾತಕ್ಕೆ ಕಾಲೇಜು ವಿದ್ಯಾರ್ಥಿ ಬಲಿ

ಸಮಗ್ರ ನ್ಯೂಸ್: ಬೈಕ್ ಮತ್ತು ಪಿಕಪ್ ವಾಹನದ ಮಧ್ಯೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ದ.ಕ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕೊಕ್ರಾಡಿಯಲ್ಲಿ ನಡೆದಿದೆ. ಕೊಕ್ರಾಡಿಯ ನಿವಾಸಿ ಉಜ್ವಲ್ ಹೆಗ್ಡೆ (18) ಮೃತ ವಿದ್ಯಾರ್ಥಿ. ಫೆ.21ರ ಬೆಳಿಗ್ಗೆ ಉಜ್ವಲ್ ಬೈಕ್ ನಲ್ಲಿ ಮೂಡಬಿದ್ರೆಯ ಕಾಲೇಜಿಗೆ ಹೋಗುತ್ತಿದ್ದಾಗ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ವಾಹನ ಡಿಕ್ಕಿ ಹೊಡೆದ ರಭಸಕ್ಕೆ ಉಜ್ವಲ್ ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಬೆಳ್ತಂಗಡಿ: ಅಪಘಾತಕ್ಕೆ ಕಾಲೇಜು ವಿದ್ಯಾರ್ಥಿ ಬಲಿ Read More »

ನೇಣಿಗೆ ಶರಣಾದ ಮಹಿಳಾ ಪೊಲೀಸ್ ಪೇದೆ

ಸಮಗ್ರ ನ್ಯೂಸ್: ಮಹಿಳಾ ಪೊಲೀಸ್​ ಕಾನ್ಸ್​​ಟೇಬಲ್​ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಕೆಎಸ್​ಆರ್​​ಪಿ ವಸತಿಗೃಹದ ಮನೆಯಲ್ಲಿ ನಡೆದಿದೆ. ಗೀತಾ (32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಗೀತಾ, ನಜರಬಾದ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸಟೇಬಲ್ ಆಗಿದ್ದರು. ನಿನ್ನೆ (ಫೆ.19) ಗೀತಾ ಅನಾರೋಗ್ಯದ ಕಾರಣ ನೀಡಿ ಕೆಲಸದಿಂದ ಮನೆಗೆ ಬಂದಿದ್ದರು. ಮನೆಯಲ್ಲಿದ್ದ ಪತಿಯನ್ನು, ಎಟಿಎಂನಿಂದ ಹಣ ಡ್ರಾ ಮಾಡಿಕೊಂಡು ಬರಲು ಕಳುಹಿಸಿದ್ದಾರೆ. ಈ ವೇಳೆ ಪತಿ, ಪತ್ನಿ ಗೀತಾಗೆ ಕರೆ ಮಾಡಿದಾಗ ಗೀತಾ ಉತ್ತರಿಸಿಲ್ಲ. ನಂತರ ಮನೆಗೆ ವಾಪಸ್ಸು

ನೇಣಿಗೆ ಶರಣಾದ ಮಹಿಳಾ ಪೊಲೀಸ್ ಪೇದೆ Read More »

ಮಂಡ್ಯ: ಏಕಾಏಕಿ ಬ್ರೇಕ್ ಹಾಕಿದ ಟ್ರಕ್ ಗೆ ಡಿಕ್ಕಿ ಹೊಡೆದ ಕಾರು| ಭೀಕರ ಅಪಘಾತಕ್ಕೆ ಯುವಕರಿಬ್ಬರು ಬಲಿ

ಸಮಗ್ರ ನ್ಯೂಸ್: ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರು ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೃತರನ್ನು ಮಂಡ್ಯ ನಗರದ ಗುತ್ತಲು ನಿವಾಸಿ ಶರೀಫ್ (23), ಮೈಸೂರಿನ ಕೆಸರೆ ನಿವಾಸಿ ಸದ್ಕಿಕ್ ಪಾಷಾ (25) ಎಂದು ಗುರುತಿಸಲಾಗಿದೆ. ಮದ್ದೂರು ತಾಲೂಕಿನ ಗೆಜ್ಜಲಗೆರೆ ಸಮೀಪ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಮುಂದೆ ಸಾಗುವ ವೇಳೆ ಟ್ರಕ್ ಲಾರಿ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ ಸ್ಟಿಫ್ಟ್ ಕಾರು ಹಿಂಬದಿಯಿಂದ ಡಿಕ್ಕಿ

ಮಂಡ್ಯ: ಏಕಾಏಕಿ ಬ್ರೇಕ್ ಹಾಕಿದ ಟ್ರಕ್ ಗೆ ಡಿಕ್ಕಿ ಹೊಡೆದ ಕಾರು| ಭೀಕರ ಅಪಘಾತಕ್ಕೆ ಯುವಕರಿಬ್ಬರು ಬಲಿ Read More »

ಗಂಡ ಮತ್ತು ಅತ್ತೆಯನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟ ಮಹಿಳೆ….!! ಬಳಿಕ ಮೇಘಾಲಯಕ್ಕೆ ಸಾಗಾಟ

ಸಮಗ್ರ ನ್ಯೂಸ್: ತನ್ನ ಗಂಡ ಮತ್ತು ಅತ್ತೆಯನ್ನು ಕೊಂದು ಅವರ ದೇಹಗಳನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟ ಭಯಾನಕ ಘಟನೆ ಅಸ್ಸಾಂನ ನೂನ್‌ಮತಿಯಲ್ಲಿ ಬೆಳಕಿಗೆ ಬಂದಿದೆ. ಕೊಲೆ ಮಾಡಿದ ಆರೋಪಿಯನ್ನು ವಂದನಾ ಕಲಿತಾ ಎಂದು ಗುರುತಿಸಲಾಗಿದೆ. ಈಕೆ ವಿವಾಹೇತರ ಸಂಬಂಧ ಹೊಂದಿದ್ದಳು. ಪತಿ ಅಮರಜ್ಯೋತಿ ಡೇ ಮತ್ತು ಅತ್ತೆ ಶಂಕರಿ ಡೇ ಅವರನ್ನು ಹತ್ಯೆ ಮಾಡಿ ಮೂರು ದಿನಗಳ ನಂತರ ತನ್ನ ಪ್ರಿಯಕರನೊಂದಿಗೆ ಸೇರಿ, ಇಬ್ಬರ ದೇಹಗಳ ಭಾಗಗಳನ್ನು ಬೇರೆಡೆಗೆ ಸಾಗಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗುವಾಹಟಿಯಿಂದ 150

ಗಂಡ ಮತ್ತು ಅತ್ತೆಯನ್ನು ಕತ್ತರಿಸಿ ಫ್ರಿಡ್ಜ್ ನಲ್ಲಿಟ್ಟ ಮಹಿಳೆ….!! ಬಳಿಕ ಮೇಘಾಲಯಕ್ಕೆ ಸಾಗಾಟ Read More »

ಹಿರಿಯ ಯಕ್ಷಗಾನ ಅರ್ಥಧಾರಿ, ಸಾಹಿತಿ ಅಂಬಾತನಯ ಮುದ್ರಾಡಿ ಇನ್ನಿಲ್ಲ

ಸಮಗ್ರ ನ್ಯೂಸ್: ಹಿರಿಯ ಸಾಹಿತಿ, ಯಕ್ಷಗಾನ ಅರ್ಥಧಾರಿ, ನಾಟಕಕಾರ, ಪ್ರಸಂಗಕರ್ತ, ನಿವೃತ್ತ ಪ್ರಾಧ್ಯಾಪಕ ಅಂಬಾತನಯ ಮುದ್ರಾಡಿ ಎಂದೇ ಪ್ರಸಿದ್ಧರಾಗಿದ್ದ ಕೇಶವ ಶೆಟ್ಟಿಗಾರ(85) ವಯೋಸಹಜ ಅಸೌಖ್ಯದಿಂದ ಇಂದು(ಫೆ.21) ಬೆಳಿಗ್ಗೆ ಮುದ್ರಾಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಬಹುಮುಖ ಪ್ರತಿಭೆಯ ಮುದ್ರಾಡಿ ಅವರು ಕೈಯಾಡಿಸದ ಕ್ಷೇತ್ರವಿಲ್ಲ. ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿದ್ದ ಅವರು ಸಾಹಿತ್ಯ ಕ್ಷೇತ್ರದ ಎಲ್ಲ ವಿಭಾಗಗಳಲ್ಲಿ ಕೈಯಾಡಿಸಿದರೂ ಕಾವ್ಯ ಅವರಿಗೆ ವಿಶೇಷವಾಗಿ ಒಲಿದಿತ್ತು. ಯಕ್ಷಗಾನ, ನಾಟಕ, ರಂಗಗಳಲ್ಲು ಅವರು ಮಿಂಚಿದ್ದಾರೆ. ಹಲವು

ಹಿರಿಯ ಯಕ್ಷಗಾನ ಅರ್ಥಧಾರಿ, ಸಾಹಿತಿ ಅಂಬಾತನಯ ಮುದ್ರಾಡಿ ಇನ್ನಿಲ್ಲ Read More »

ಉಪ್ಪಿನಂಗಡಿ: ಬೈಕ್ ಮೇಲೆ ಬೊಲೆರೋ ಪಲ್ಟಿ|ಬೈಕ್ ಸವಾರ ಮೃತ್ಯು

ಸಮಗ್ರ ನ್ಯೂಸ್: ಬೈಕ್ ಮೇಲೆ ಬೊಲೆರೋ ಪಲ್ಟಿಯಾಗಿ ಬೈಕ್ ಸವಾರ ಮೃತಪಟ್ಟ ಘಟನೆ ಬಜತ್ತೂರು ಗ್ರಾಮದ ಕೆಮ್ಮಾರದ ಓಡ್ಲ ಬಳಿ ಸೋಮವಾರ ಸಂಭವಿಸಿದೆ. ಕೊಯಿಲ ಗ್ರಾಮದ ಕಡೆಂಬ್ಯಾಲು ನಿವಾಸಿ, ಎಲೆಕ್ಟ್ರಿಷಿಯನ್ ಆಗಿ ವೃತ್ತಿ ನಿರ್ವಹಿಸುತ್ತಿದ್ದ ಕೊರಗಪ್ಪ ಗೌಡ (58) ಮೃತಪಟ್ಟವರು. ಬೆಳಗ್ಗೆ 11:30ರ ಸುಮಾರಿಗೆ ಹಳೆಗೇಟು- ಮರ್ದಾಳ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಕಡಬ ಕಡೆಯಿಂದ ಕೃಷ್ಣಪ್ಪ ನಾಯ್ಕ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಬೊಲೆರೋ ಓಡ್ಲ ಎಂಬಲ್ಲಿ ಸ್ಕಿಡ್ ಆಗಿ ಪಲ್ಟಿ ಹೊಡೆದಿದೆ. ಈ ಸಂದರ್ಭ

ಉಪ್ಪಿನಂಗಡಿ: ಬೈಕ್ ಮೇಲೆ ಬೊಲೆರೋ ಪಲ್ಟಿ|ಬೈಕ್ ಸವಾರ ಮೃತ್ಯು Read More »