ಕ್ರೈಂ

ಪ್ಲೈ ಓವರ್ ಮೇಲೆ ಆಟೋಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಗಂಭೀರ

ಸಮಗ್ರ ನ್ಯೂಸ್: ಫ್ಲೈಓವರ್ ಮೇಲೆ ಕಾರು ಡಿಕ್ಕಿ ಹೊಡೆದು ಆಟೋ ಸಂಪೂರ್ಣ ಜಖಂಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಆಟೋ ಚಾಲಕ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಟೋ ಟೌನ್ ಹಾಲ್ ಕಡೆಯಿಂದ ಸ್ಯಾಟಲೈಟ್ ಕಡೆಗೆ ಹೊರಟಿತ್ತು, ಕಾರು ಹಿಂಬದಿಯಿಂದ ವೇಗವಾಗಿ ಬಂದು ಆಟೋಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಫ್ಲೈ ಓವರ್ ಮೇಲೆ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿಗೆ ಗಂಭೀರ […]

ಪ್ಲೈ ಓವರ್ ಮೇಲೆ ಆಟೋಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಗಂಭೀರ Read More »

ಬಸ್ ನಿಂದ ಬಿದ್ದು ವಿದ್ಯಾರ್ಥಿನಿ ಸಾವು

ಸಮಗ್ರ ನ್ಯೂಸ್: ರಾಜ್ಯ ಸಾರಿಗೆ ಬಸ್‌ನಿಂದ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ ಹಾವೇರಿಯಲ್ಲಿ ನಡೆದಿದೆ. ವಾಸನ ಹಳ್ಳಿಯ ನಿವಾಸಿ ಮಧು ಕುಂಬಾರ(14) ಮೃತ ದುರ್ದೈವಿ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕುಸನೂರ ಗ್ರಾಮದ ಬಳಿ ಈ ಘಟನೆ ನಡೆದಿದೆ. ಮೃತ ಬಾಲಕಿಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾರಿಗೆ ಬಸ್ ಚಾಲಕನ ವಿರುದ್ಧ ದೂರು ದಾಖಲಾಗಿದೆ. ಕರ್ನಾಟಕ ಸರ್ಕಾರ ‘ಶಕ್ತಿ’ ಯೋಜನೆಯನ್ನು ಜಾರಿಗೆ ತಂದ ದಿನವೇ ಈ ಘಟನೆ ನಡೆದಿರುವುದು ದುರ್ದೈವದ ಸಂಗತಿ.ಶಾಲೆಗೆ

ಬಸ್ ನಿಂದ ಬಿದ್ದು ವಿದ್ಯಾರ್ಥಿನಿ ಸಾವು Read More »

ಹೆತ್ತ ತಾಯಿಯನ್ನು ಹತ್ಯೆ ಮಾಡಿ ಸೂಟ್ ಕೇಸ್ ನಲ್ಲಿ ಠಾಣೆಗೆ ತಂದ ಮಗಳು!!

ಸಮಗ್ರ ನ್ಯೂಸ್: ಹೆತ್ತ ತಾಯಿಯನ್ನು ಹತ್ಯೆ ಮಾಡಿ, ಶವವನ್ನು ಸ್ಕೂಟೇಸ್ ನಲ್ಲಿ ಠಾಣೆಗೆ ತಂದ ಘಟನೆ ಬೆಂಗಳೂರಿನ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಮೈಕೋ ಲೇಔಟ್ ಪೊಲೀಸ್ ಠಾಣೆಯ ಬಿಳೇಕಹಳ್ಳಿಯ ಎಂಎಸ್ ಆರ್ ಅಪಾರ್ಟ್ ಮೆಂಟ್ ನಲ್ಲಿ ಮಗಳು ಸೋನಾಲಿ ಹಾಗೂ ತಾಯಿ ಬೀವಪಾಲ್ ವಾಸವಾಗಿದ್ದರು. ತಾಯಿ, ಅತ್ತೆ ನಡುವೆ ಜಗಳದಿಂದ ಬೇಸತ್ತಿದ್ದ ಸೋನಾಲಿ (39) ತನ್ನ ಹೆತ್ತ ತಾಯಿಯನ್ನು ಕೊಲೆ ಮಾಡಿ ಸೂಟ್ಕೇಸ್ ನಲ್ಲಿ ಶವವನ್ನು ಠಾಣೆಗೆ ತಂದಿದ್ದಾಳೆ. ನಿನ್ನೆ ರಾತ್ರಿ ಜಗಳವಾಗಿದ್ದು, ಜಗಳದ

ಹೆತ್ತ ತಾಯಿಯನ್ನು ಹತ್ಯೆ ಮಾಡಿ ಸೂಟ್ ಕೇಸ್ ನಲ್ಲಿ ಠಾಣೆಗೆ ತಂದ ಮಗಳು!! Read More »

ಮಲಗಿದ್ದ ದಂಪತಿಗೆ ಕಚ್ಚಿದ ನಾಗರ| ಪತಿ ಸಾವು; ಜೀವನ್ಮರಣ ಸ್ಥಿತಿಯಲ್ಲಿ ಪತ್ನಿ

ಸಮಗ್ರ ನ್ಯೂಸ್: ಮಲಗಿದ್ದ ವೇಳೆಯಲ್ಲಿ ದಂಪತಿಗೆ ನಾಗರಹಾವು ಕಚ್ಚಿದ್ದು, ಪತಿ ಮೃತಪಟ್ಟು ಪತ್ನಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದಿದೆ. ಇಲ್ಲಿನ ಸಾಣೆಕೊಪ್ಪ ಮೂಲದ ಸಿದ್ದಪ್ಪ(35) ಮೃತಪಟ್ಟ ದುರ್ದೈವಿ. ಈತನ ಪತ್ನಿ ನಾಗವ್ವ(28) ಸ್ಥಿತಿ ಗಂಭೀರವಾಗಿದೆ. ಬೆಳಗಾವಿಯ ಅನ್ನಪೂರ್ಣೇಶ್ವರಿ ನಗರದಲ್ಲಿ ಭಾನುವಾರ ಬೆಳಗಿನ ಜಾವ ಘಟನೆ ನಡೆದಿದೆ. ವಡಗಾವಿಯ ಕಟ್ಟಡ ಕಾಮಗಾರಿಯೊಂದರ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಸಿದ್ದಪ್ಪ ಅವರು ಪತ್ನಿ, ಮೂವರು ಮಕ್ಕಳೊಂದಿಗೆ ಸಮೀಪದ ಶೆಡ್ ನಲ್ಲಿ

ಮಲಗಿದ್ದ ದಂಪತಿಗೆ ಕಚ್ಚಿದ ನಾಗರ| ಪತಿ ಸಾವು; ಜೀವನ್ಮರಣ ಸ್ಥಿತಿಯಲ್ಲಿ ಪತ್ನಿ Read More »

ಸ್ಯಾಂಡಲ್ ವುಡ್ ಖಳನಟ ಕಜಾನ್ ಖಾನ್ ಹೃದಯಾಘಾತದಿಂದ ನಿಧನ

ಸಮಗ್ರ ನ್ಯೂಸ್: ಹಬ್ಬ, ನಾಗದೇವತೆ ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ಖಳನಟನಾಗಿ ಮಿಂಚಿದ್ದ ಕಜಾನ್​ ಖಾನ್​ ಅವರು ಹೃದಯಾಘಾತದಿಂದ ಕೊಳೆಯುಸಿರೆಳೆದಿದ್ದಾರೆ. ಮಲೆಯಾಳಂ‌ ಮೂಲದ ​ಕಜಾನ್​ ಖಾನ್​ ಅವರು ಪ್ರಧಾನವಾಗಿ ಖಳನಟನ ಪಾತ್ರಗಳಲ್ಲೇ ನಟಿಸುತ್ತಿದ್ದರು. 1993 ರಲ್ಲಿ ಮೋಹನ್ ಲಾಲ್ ಅವರ ‘ಗಂಧರ್ವಂ’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದರು. ಮಲಯಾಳಂ ನಟ ದಿಲೀಪ್ ಅಭಿನಯದ ‘ಸಿಐಡಿ ಮೂಸಾ’ ಚಿತ್ರದಲ್ಲಿನ ವಿಲನ್​ ಪಾತ್ರಕ್ಕಾಗಿ ಕಜನ್ ಖಾನ್ ಬಹಳ ಮೆಚ್ಚುಗೆಯನ್ನು ಪಡೆದರು. ಕಜನ್ ಖಾನ್ ಅವರು ‘ಗಂಧರ್ವಂ,’ ‘ಸಿಐಡಿ ಮೂಸ,’

ಸ್ಯಾಂಡಲ್ ವುಡ್ ಖಳನಟ ಕಜಾನ್ ಖಾನ್ ಹೃದಯಾಘಾತದಿಂದ ನಿಧನ Read More »

ಕೊಟ್ಟಿಗೆಹಾರಯಲ್ಲಿ ವಿದ್ಯುತ್ ಅವಘಡ| ಒಂದು ಮಂಗ ಸಾವು ಮತ್ತೊಂದಕ್ಕೆ ಗಾಯ

ಸಮಗ್ರ ನ್ಯೂಸ್:‌ ವಿದ್ಯುತ್ ಅವಘಡ ಸಂಭವಿಸಿ ಎರಡು ಮಂಗಗಳಲ್ಲಿ ಒಂದು ಮಂಗಕ್ಕೆ ಗಾಯ ಮತ್ತೊಂದು ಅಸುನೀಗಿದ ಘಟನೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ . ನಿಡುವಾಳೆಯ ನೇರಳಗಂಡಿಯಲ್ಲಿ ಆಹಾರ ಹುಡುಕಿಕೊಂಡು ಬಂದ ಮಂಗಗಳಿಗೆ 11ಕೆವಿ ವಿದ್ಯುತ್ ತಗುಲಿ ಅವಘಡ ಆಗಿತ್ತು ಒಂದು ಸ್ಥಳದಲ್ಲಿಯೇ ಮೃತಪಟ್ಟರೆ ಮತ್ತೊಂದಕ್ಕೆ ನಿಡುವಾಳೆ ಯುವಕರ ತಂಡ ನಿಡುವಾಳೆಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬದುಕಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಧರ್ಭದಲ್ಲಿ ನಿಡುವಾಳೆಯ ಆಟೋ ಚಾಲಕರಾದ ಹರೀಶ್ ಉರುವಿನಖಾನ್, ಸುರೇಶ್ ಅಂಭೇಡ್ಕರ್ ನಗರ,

ಕೊಟ್ಟಿಗೆಹಾರಯಲ್ಲಿ ವಿದ್ಯುತ್ ಅವಘಡ| ಒಂದು ಮಂಗ ಸಾವು ಮತ್ತೊಂದಕ್ಕೆ ಗಾಯ Read More »

ಬೊಜ್ಜು ಕರಗಿಸಲು ಹೋದ ಯುವತಿಯ ಅರೆಬೆತ್ತಲೆ ವೀಡಿಯೋ ರೆಕಾರ್ಡ್

ಸಮಗ್ರ ನ್ಯೂಸ್: ಬೊಜ್ಜು ಕರಗಿಸಲು ಹೋದ ಯುವತಿಯ ಅರೆಬೆತ್ತಲೆ ವೀಡಿಯೋ ರೆಕಾರ್ಡ್ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಯುವತಿಯೊಬ್ಬಳು ಕಳೆದ ತಿಂಗಳು ಚಿಕಿತ್ಸೆಗೆಂದು ಶೆಟ್ಟೀಸ್ ಕ್ಲೀನಿಕ್ ಗೆ ತೆರಳಿದ್ದಾಗ ಚೆಕಪ್ ಮಾಡಿಸಲು ಪರೀಕ್ಷಾ ಕೊಠಡಿಯಲ್ಲಿ ಡಾ.ಶೆಟ್ಟಿ ಮತ್ತು ಇಬ್ಬರು ಮಹಿಳಾ ಸಿಬ್ಬಂದಿ ಪರೀಕ್ಷೆ ಮಾಡಿದ್ದಾರೆ.ಇದಕ್ಕೂ ಮೊದಲು ಮಹಿಳಾ ಸಿಬ್ಬಂದಿ ಚೆಕಪ್ ಮಾಡಲು ಮೈ ಮೇಲಿದ್ದ ಬಟ್ಟೆ ತೆಗೆಯಲು ತಿಳಿಸಿದ್ದಾರೆ. ಅದೇ ರೀತಿ ಯುವತಿ ಬಟ್ಟೆ ತೆಗೆದಿದ್ದು ಒಳ ಉಡುಪಿನಲ್ಲಿ ಪರೀಕ್ಷೆ ಮಾಡಿಸಿದ್ದಾಳೆ. ಆದರೆ ಪರೀಕ್ಷಾ ಕೊಠಡಿಯಲ್ಲಿ

ಬೊಜ್ಜು ಕರಗಿಸಲು ಹೋದ ಯುವತಿಯ ಅರೆಬೆತ್ತಲೆ ವೀಡಿಯೋ ರೆಕಾರ್ಡ್ Read More »

ಉಳ್ಳಾಲ: ಸಮುದ್ರ ಪಾಲಾಗುತ್ತಿರುವ ಗಿಡ-ಮರ, ಮನೆಗಳು

ಸಮಗ್ರ ನ್ಯೂಸ್: ಮಳೆಯಿಂದಾಗಿ ಸಮುದ್ರದಲ್ಲಿ ಅಲೆಗಳ ಹೊಡೆತ ಬಿರುಸುಗೊಂಡಿದ್ದು ಉಳ್ಳಾಲದ ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಸಮುದ್ರದ ಅಲೆಗಳು ಜೋರಾಗಿ ದಡಕ್ಕೆ ಅಪ್ಪಳಿಸುತ್ತಿದೆ. ಉಳ್ಳಾಲದ ತೀರ ಪ್ರದೇಶಗಳಾದ ಕೈಕೋ, ಸೀಗ್ರೌಂಡ್, ಮೊಗವೀರಪಟ್ಣ, ಸೋಮೇಶ್ವರ, ಉಚ್ಚಿಲ ಪ್ರದೇಶದಲ್ಲಿ ಸಮುದ್ರದ ಅಲೆಗಳು ದಡಕ್ಕಪ್ಪಳಿಸುತ್ತಿದೆ. ಇನ್ನು ಉಚ್ಚಿಲ ಬಟ್ಟಪ್ಪಾಡಿಯಲ್ಲಿ ತಾತ್ಕಾಲಿಕ ಕಾಮಗಾರಿ ನಡೆಯುತ್ತಿದ್ದರೂ ಸಮುದ್ರದ ಸಮುದ್ರದ ಅಲೆಗಳು ತೀರದ ಮನೆಗಳಿಗೆ ಅಪ್ಪಳಿಸುತ್ತಿದ್ದು ತೀರದ ಪ್ರದೇಶದ ಮರ ಗಿಡಗಳು, ಅನೇಕ ಮನೆಗಳು, ರಸ್ತೆ ಸಮುದ್ರ ಪಾಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂ ರಾವ್,

ಉಳ್ಳಾಲ: ಸಮುದ್ರ ಪಾಲಾಗುತ್ತಿರುವ ಗಿಡ-ಮರ, ಮನೆಗಳು Read More »

ಬೆಳ್ತಂಗಡಿ: ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ

ಸಮಗ್ರ ನ್ಯೂಸ್: ಹೈಸ್ಕೂಲ್ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಕ್ಕಡದಲ್ಲಿ ನಡೆದಿದೆ. ಕೊಕ್ಕಡ ಗ್ರಾಮದ ನೇತ್ರಾಳ ನಿವಾಸಿ ಶ್ರೀಧರ ಆಚಾರ್ಯ ಹಾಗೂ ದಿ.ಪುಷ್ಪ ದಂಪತಿ ಪುತ್ರಿ ರೇಖಾ(15) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಈಕೆಯ ತಾಯಿ ವರ್ಷದ ಹಿಂದೆ ಜ್ವರದಿಂದ ಸಾವನ್ನಪ್ಪಿದ್ದರು. ತಂದೆ ಕೂಲಿ ಕೆಲಸ ಮಾಡುತ್ತಿದ್ದು, ತಾಯಿಯ ನಿಧನದ ಬಳಿಕ ರೇಖಾ ಮಾನಸಿಕವಾಗಿ ಕುಗ್ಗಿದ್ದಳು ಎನ್ನಲಾಗಿದೆ . ಆಕೆ ಸಂಬಂಧಿಕರ ಮನೆಯಿಂದ ಶಾಲೆ ಹೋಗುತ್ತಿದ್ದಳು . ಕೊಕ್ಕಡ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆಕೆಯನ್ನು ಪುತ್ತೂರಿನ

ಬೆಳ್ತಂಗಡಿ: ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ Read More »

ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಲವ್‌ ಸ್ಟೋರಿ|ಲವ್ ಜಿಹಾದ್‌ನಿಂದ ಯುವತಿ ಬಚಾವ್

ಸಮಗ್ರ ನ್ಯೂಸ್: ಬೆಂಗಳೂರಿನಲ್ಲೂ ಲವ್ ಜಿಹಾದ್ ಗಾಳಿ ಬೀಸಿದ್ದು, ಅನ್ಯ ಕೋಮಿನ ಯುವಕ ತನ್ನ ಧರ್ಮವನ್ನೇ ಮುಚ್ಚಿಟ್ಟು ಸುಳ್ಳು ಹೇಳಿ ಯುವತಿಯನ್ನ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ. ಕೊನೆಗೆ ಎರಡು ವರ್ಷದ ಬಳಿಕ ಆತನ ಬಣ್ಣ ಬಯಲಾಗಿದ್ದು, ಯುವತಿ ಲವ್ ಜಿಹಾದ್ ಗೆ ಸಿಲುಕುವ ಮುನ್ನವೆ ಯುವತಿ ಪಾರಾಗಿದ್ದಾಳೆ. ಇಂತದೊಂದು ಘಟನೆ ನಡೆದದ್ದು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ,ಮಹಾರಾಷ್ಟ್ರ ಮೂಲದ ಹಿಂದೂ ಯುವತಿ ವಂಚನೆಗೊಳಗಾಗಿದ್ದು, ಅಸ್ಸಾಂ ಮೂಲದ ಅಲ್ ಮೆಹಪ್ಯೂಸ್ ಬರಪೂಯಾ ಎಂಬಾತ ಯುವತಿಯನ್ನ ವಂಚಿಸಿದ್ದಾನೆ. ಇವರಿಬ್ಬರು ನಗರದ ಗಾರ್ಮೆಂಟ್

ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ ಲವ್‌ ಸ್ಟೋರಿ|ಲವ್ ಜಿಹಾದ್‌ನಿಂದ ಯುವತಿ ಬಚಾವ್ Read More »