ಪ್ಲೈ ಓವರ್ ಮೇಲೆ ಆಟೋಗೆ ಡಿಕ್ಕಿ ಹೊಡೆದ ಕಾರು; ಇಬ್ಬರು ಗಂಭೀರ

ಸಮಗ್ರ ನ್ಯೂಸ್: ಫ್ಲೈಓವರ್ ಮೇಲೆ ಕಾರು ಡಿಕ್ಕಿ ಹೊಡೆದು ಆಟೋ ಸಂಪೂರ್ಣ ಜಖಂಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆಯಲ್ಲಿ ಆಟೋ ಚಾಲಕ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

. Ad Widget . Ad Widget . Ad Widget

ಆಟೋ ಟೌನ್ ಹಾಲ್ ಕಡೆಯಿಂದ ಸ್ಯಾಟಲೈಟ್ ಕಡೆಗೆ ಹೊರಟಿತ್ತು, ಕಾರು ಹಿಂಬದಿಯಿಂದ ವೇಗವಾಗಿ ಬಂದು ಆಟೋಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಫ್ಲೈ ಓವರ್ ಮೇಲೆ ಪಲ್ಟಿ ಹೊಡೆದಿದೆ. ಘಟನೆಯಲ್ಲಿ ಚಾಲಕ ಹಾಗೂ ಮತ್ತೊಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿದೆ. ಜನ ಸೇರುತ್ತಿದ್ದಂತೆ ಕಾರು ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

. Ad Widget .

Leave a Comment

Your email address will not be published. Required fields are marked *