ಬೆನ್ನು ನೋವು ಎಂದು ಬಂದ ಯುವತಿಯ ಪ್ರಾಣ ತೆಗೆದರಾ ಡಾಕ್ಟರ್!? |ಇಲ್ಲಸಲ್ಲದ ಚಿಕಿತ್ಸೆ ನೀಡಿ ಮನೆಗೆ ಶವ ಕಳುಹಿಸಿದ ಉಡುಪಿ ಸಿಟಿ ಆಸ್ಪತ್ರೆ
ಸಮಗ್ರ ನ್ಯೂಸ್: ಬೆನ್ನು ನೋವು ಎಂದು ಹೋದ ಯುವತಿಗೆ ಇಲ್ಲಸಲ್ಲದ ಚಿಕಿತ್ಸೆ ಮಾಡಿ ಯುವತಿಯ ಜೀವ ತೆಗೆದಿದ್ದಾರೆ ಎನ್ನಲಾದ ಘಟನೆ ಉಡುಪಿಯ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ನಿಖಿತಾ ಎಂದು ಗುರುತಿಸಲಾಗಿದೆ. ಈಕೆ ವಿದ್ಯಾರ್ಥಿಯಾಗಿದ್ದು ಕೆಲ ದಿನಗಳ ಹಿಂದೆ ಬೆನ್ನು ನೋವು ಎಂದು ಪರೀಕ್ಷೆ ಮಾಡಿಸಲು ಉಡುಪಿಯಲ್ಲಿರುವ ಸಿಟಿ ಆಸ್ಪತ್ರೆಗೆ ಹೋಗಿದ್ದಳು. ಈ ವೇಲೆ ಅಲ್ಲಿಯ ವೈದ್ಯರು ಆಕೆಯನ್ನು ಪರೀಕ್ಷೆ ಮಾಡಿ ನಿನಗೆ ಅರ್ನಿಯಾ, ಅಪೆಂಡಿಕ್ಸ್ ಇದೆ ಎಂದು ಇತ್ಯಾದಿ ಇಲ್ಲ ಸಲ್ಲದ ಗುಣಮಟ್ಟದ ಪರೀಕ್ಷೆಗಳನ್ನು










