ಕ್ರೈಂ

ರಸ್ತೆ ಅಪಘಾತ| ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಮೃತ್ಯು

ಸಮಗ್ರ ನ್ಯೂಸ್: ಬಂಟ್ವಾಳದ ತುಂಬೆಯಲ್ಲಿ ನಡೆದ ರಸ್ತೆ ಅಪಘಾತಕ್ಕೆ ಮಂಗಳೂರು ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಜು.6 ಬೆಳಿಗ್ಗೆ ಸಂಭವಿಸಿದೆ. ಕೂರ್ನಡ್ಕ ನಿವಾಸಿ ಅಬ್ದುಲ್ ಮಜೀದ್ ಹಾಗೂ ಶಮೀಮಾ ದಂಪತಿ ಪುತ್ರಿ ಹನಾ (19) ಮೃತಪಟ್ಟವರು. ಇವರು ಅಲೋಶಿಯಸ್ ನಲ್ಲಿ ಬಿಬಿಎಂ ವಿದ್ಯಾರ್ಥಿನಿ. ಪುತ್ತೂರಿನಿಂದ ಮಂಗಳೂರು ಕಡೆಗೆ ಐ20 ಕಾರಿನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ‌. ಚಾಲಕನ ನಿಯಂತ್ರಣ ತಪ್ಪಿದ ಕಾರು, ಪಲ್ಟಿಯಾಗಿ ಅಪಘಾತಕ್ಕೀಡಾಗಿದೆ.

ರಸ್ತೆ ಅಪಘಾತ| ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಮೃತ್ಯು Read More »

Breaking|ಮಂಗಳೂರು: ಕಾಲೇಜು ಮೇಲ್ಚಾವಣಿ ಕುಸಿತ; ತಪ್ಪಿದ ಭಾರೀ ಅನಾಹುತ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಕಳೆದ ಕೆಲ ದಿನಗಳಿಂದ ಅಬ್ಬರದ ಮಳೆಯಾಗುತ್ತಿದ್ದು, ತಲಪಾಡಿಯಲ್ಲಿರುವ ಕಾಲೇಜಿನ ಮೇಲ್ಚಾವಣಿ ಕುಸಿದಿರುವ ಘಟನೆ ನಡೆದಿದೆ. ತಲಪಾಡಿಯಲ್ಲಿರುವ ದೇವಿನಗರದ ಶಾರದಾ ವಿದ್ಯಾಲಯದ ಕ್ಯಾಂಪಸ್ ನಲ್ಲಿರುವ ಆರು ಮಹಡಿಯ ಕಾಲೇಜಿನ ಅಳವಡಿಸಲಾಗಿದ್ದ ಶೀಟ್ ಭಾರೀ ಮಳೆ, ಗಾಳಿಗೆ ಕುಸಿದು ಬಿದ್ದಿದೆ. ಮಳೆಯ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಘೋಷಣೆ ಮಾಡಿರುವುದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಮಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಬುಧವಾರ ಮತ್ತು ಗುರುವಾರ ರಜೆ

Breaking|ಮಂಗಳೂರು: ಕಾಲೇಜು ಮೇಲ್ಚಾವಣಿ ಕುಸಿತ; ತಪ್ಪಿದ ಭಾರೀ ಅನಾಹುತ Read More »

ಬೆಳ್ತಂಗಡಿಯ ಯುವಕ ದುಬೈ ನಲ್ಲಿ ಅನುಮಾನಾಸ್ಪದ ಸಾವು

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ತುರ್ಕಳಿಕೆ ನಿವಾಸಿ ಮುಂಡೊಟ್ಟು ದಾವೂದ್ ಎಂಬವರ ಪುತ್ರ ಮುಹಮ್ಮದ್ ರಾಝಿಖ್ ಎಂಬವರು ದುಬೈನಲ್ಲಿ ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಇವರು ಇತ್ತೀಚೆಗಷ್ಟೇ ಮದುವೆಯಾಗಿದ್ದು, ನಾಲ್ಕು ತಿಂಗಳ ಮಗು ಕೂಡ ಇದೆ ಎನ್ನಲಾಗಿದೆ. ಮೃತರು ಪತ್ನಿ, ತಂದೆ ತಾಯಿ ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ರಾಝಿಖ್ ರವರ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಬೆಳ್ತಂಗಡಿಯ ಯುವಕ ದುಬೈ ನಲ್ಲಿ ಅನುಮಾನಾಸ್ಪದ ಸಾವು Read More »

ರಸ್ತೆ‌ ಬದಿ‌ ಕುಳಿತಿದ್ದ ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಿಜೆಪಿ ಮುಖಂಡ| ಬಂಧಿತ ಆರೋಪಿಯ ಒಡೆತನದ ಕಟ್ಟಡ ನೆಲಸಮಕ್ಕೆ ಮಧ್ಯಪ್ರದೇಶ ಸರ್ಕಾರ ಆದೇಶ

ಸಮಗ್ರ ನ್ಯೂಸ್: ರಸ್ತೆಬದಿ ಕುಳಿತಿದ್ದ ಬುಡಕಟ್ಟು ಯುವಕನ ಮೇಲೆ ಬಿಜೆಪಿ ನಾಯಕ ಪ್ರವೇಶ್‌ ಶುಕ್ಲಾ ಮೂತ್ರ ಮಾಡಿರುವ ಅಮಾನವೀಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಮಧ್ಯರಾತ್ರಿ ಬುಡಕಟ್ಟು ಕಾರ್ಮಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಿಜೆಪಿ ನಾಯಕನನ್ನು ಬಂಧಿಸಲಾಗಿದೆ. ಇದರ ಜೊತೆಗೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಧ್ಯ ಪ್ರದೇಶ ಸರ್ಕಾರ ಈಗಾಗಲೇ ಜೈಲು ಪಾಲಾಗಿರುವ ಆರೋಪಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸಲು ಆದೇಶ ಹೊರಡಿಸಿದೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಕಳೆದ

ರಸ್ತೆ‌ ಬದಿ‌ ಕುಳಿತಿದ್ದ ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಬಿಜೆಪಿ ಮುಖಂಡ| ಬಂಧಿತ ಆರೋಪಿಯ ಒಡೆತನದ ಕಟ್ಟಡ ನೆಲಸಮಕ್ಕೆ ಮಧ್ಯಪ್ರದೇಶ ಸರ್ಕಾರ ಆದೇಶ Read More »

ಸುಳ್ಯ: ಪರ್ಮಿಟ್ ಇಲ್ಲದ ಖಾಸಗಿ ಬಸ್ ಗಳಿಗೆ ಮುಟ್ಟುಗೋಲು ಹಾಕಿದ ಸಾರಿಗೆ ಅಧಿಕಾರಿಗಳು

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಅತೀ ಹಳೆಯದಾದ ಪರ್ಮಿಟ್ ಹೊಂದಿದ್ದ ಸುಳ್ಯ – ಮಂಡೆಕೋಲು ಮಾರ್ಗದಲ್ಲಿ ಚಲಿಸುತ್ತಿದ್ದ ಬಸ್ಸುಗಳು ಧಿಡೀರ್ ಆಗಿ ಸೋಮವಾರ ಮುಂಜಾನೆ ಸಾರಿಗೆ ಇಲಾಖೆ ಇನ್ಸ್ ಪೆಕ್ಟರ್ ಇಸ್ಮಾನ್ ನೇತೃತ್ವದಲ್ಲಿ ಸೀಝ್ ಮಾಡಲಾಗಿದೆ ಎಂದು ಪುತ್ತೂರು ಆರ್ ಟಿ ಓ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದಿನಿಂದಲೂ ಅಜ್ಜಾವರ ಮಂಡೆಕೋಲು – ಅಡೂರು ಗೆ ತೆರಳುತ್ತಿದ್ದ ಕೆಎ-20-ಸಿ-1809 ಖಾಸಗಿ ಬಸ್ಸ್ ಅನಿಲ್ ಛಾತ್ರ ಎಂಬುವವರ ಹೆಸರಿನಲ್ಲಿದ್ದು ಈ ಬಸ್ಸು ಒಂದು ಲಕ್ಷದ ಹನ್ನೆರಡು ಸಾವಿರ ಟ್ಯಾಕ್ಸ್

ಸುಳ್ಯ: ಪರ್ಮಿಟ್ ಇಲ್ಲದ ಖಾಸಗಿ ಬಸ್ ಗಳಿಗೆ ಮುಟ್ಟುಗೋಲು ಹಾಕಿದ ಸಾರಿಗೆ ಅಧಿಕಾರಿಗಳು Read More »

ಮೂಡಬಿದ್ರೆ: ಪರಸ್ತ್ರೀ ಜೊತೆ ಸರಸವಾಡಿದ ವಿಡಿಯೋ ವೈರಲ್ ಬೆನ್ನಲ್ಲೇ ಪುತ್ರ ಆತ್ಮಹತ್ಯೆ| ರಾಸಕ್ರೀಡೆಯ ವಿಡಿಯೋ ವೈರಲ್ ಮಾಡಿದಾತ ಅರೆಸ್ಟ್

ಸಮಗ್ರ ನ್ಯೂಸ್ : ಮಧ್ಯವಯಸ್ಸಿನ ಜೋಡಿಯ ರಾಸಕ್ರೀಡೆಯ ವಿಡಿಯೋ ವೈರಲ್ ಬಳಿಕ ವಿಡಿಯೋದಲ್ಲಿದ್ದ ವ್ಯಕ್ತಿಯ ಪುತ್ರ ಆತ್ಮಹತ್ಯೆಗೆ ಶರಣಾಗಿರುವ ಬೆನ್ನಲ್ಲೇ ವಿಡಿಯೋ ಮಾಡಿ ಬಳಿಕ ವಿಡಿಯೋ ವೈರಲ್ ಮಾಡಿದ್ದ ಆರೋಪಿಯನ್ನು ಮೂಡಬಿದ್ರಿ ಪೋಲಿಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಜಯಕುಮಾರ್ ಎಂದು ಗುರುತಿಸಲಾಗಿದೆ. ಕೆಲ ಸಮಯದ ಹಿಂದೆಯೇ ಘಟನೆಯ ವಿಡಿಯೋ ಚಿತ್ರೀಕರಣವಾಗಿದೆ ಎನ್ನಲಾಗುತ್ತಿದ್ದು, ವಿಡಿಯೋ ಚಿತ್ರೀಕರಿಸಿದ ಆರೋಪಿ ವಿಡಿಯೋದಲ್ಲಿ ಸಿಕ್ಕಿಬಿದ್ದ ವ್ಯಕ್ತಿಯನ್ನು ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂಪಾಯಿ ಹಣ ಕೂಡ ಸುಲಿಗೆ ಮಾಡಿದ್ದ ಎಂಬ ಆರೋಪ ಸಾಮಾಜಿಕ

ಮೂಡಬಿದ್ರೆ: ಪರಸ್ತ್ರೀ ಜೊತೆ ಸರಸವಾಡಿದ ವಿಡಿಯೋ ವೈರಲ್ ಬೆನ್ನಲ್ಲೇ ಪುತ್ರ ಆತ್ಮಹತ್ಯೆ| ರಾಸಕ್ರೀಡೆಯ ವಿಡಿಯೋ ವೈರಲ್ ಮಾಡಿದಾತ ಅರೆಸ್ಟ್ Read More »

ಥಲಸ್ಸೇಮಿಯಾ ಮಾರಣಾಂತಿಕ ಕಾಯಿಲೆ ಗೊತ್ತಾಗಿ 2 ವರ್ಷದ ಮಗು, ಪತ್ನಿಯನ್ನು ಹೊರಹಾಕಿದ ಪತಿ| ಖಾಯಿಲೆ ಪೀಡಿತ ಮಗುವಿನ ಚಿಕಿತ್ಸೆಗೆ ಪರದಾಡುತ್ತಿರುವ ತಾಯಿ| ಈ ತಾಯಿಯ ಕಣ್ಣೀರು ಒರೆಸುವವರಾರು?

ಸಮಗ್ರ ವಿಶೇಷ: ದಿನನಿತ್ಯದ ಬದುಕಿನ ಬಂಡಿ ಸಾಗಿಸಲು ಕಷ್ಟ ಪಡುತ್ತಿರುವ ಕುಟುಂಬಕ್ಕೆ ಶ್ರೀಮಂತರ ಕಾಯಿಲೆ ಬಂದರೆ ಹೇಗಿರಬೇಡ? ಹುಬ್ಬಳ್ಳಿಯ ಕುಟುಂಬವೊಂದು ಇಂತಹ ಸಂಕಷ್ಟದ ಪರಿಸ್ಥಿತಿ ಅನುಭವಿಸುತ್ತಿದೆ. ಮಗುವಿನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಬೇಕು. ಹೇಗಾದರೂ ಮಾಡಿ ನನ್ನ ಮಗುವನ್ನು ಬದುಕಿಸಿಕೊಡಿ ಎಂದು ತಾಯಿ ಅಂಗಲಾಚುತ್ತಿದ್ದಾರೆ. ಹುಬ್ಬಳ್ಳಿ ತಾಲೂಕಿನ ಸೈದಾಪುರ ಗ್ರಾಮದ ಶಾಹೀನಬೇಗಂ ಎನ್ನುವವರನ್ನು 4 ವರ್ಷಗಳ ಹಿಂದೆ ಭದ್ರಾಪುರದ ಖಾಜೇಸಾಬ ಅಬ್ಬಿಗೇರಿ ಎಂಬುವರಿಗೆ ವಿವಾಹ ಮಾಡಿಕೊಡಲಾಗಿತ್ತು. ಒಂದು ವರ್ಷ ಉರುಳಿದ ನಂತರ ಶಾಹೀನ ಬೇಗಂ ಅವಳಿ ಜವಳಿ

ಥಲಸ್ಸೇಮಿಯಾ ಮಾರಣಾಂತಿಕ ಕಾಯಿಲೆ ಗೊತ್ತಾಗಿ 2 ವರ್ಷದ ಮಗು, ಪತ್ನಿಯನ್ನು ಹೊರಹಾಕಿದ ಪತಿ| ಖಾಯಿಲೆ ಪೀಡಿತ ಮಗುವಿನ ಚಿಕಿತ್ಸೆಗೆ ಪರದಾಡುತ್ತಿರುವ ತಾಯಿ| ಈ ತಾಯಿಯ ಕಣ್ಣೀರು ಒರೆಸುವವರಾರು? Read More »

ಮೂಡುಬಿದಿರೆ‌: ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ಮೂಡುಬಿದಿರೆಯಲ್ಲಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.3ರ ರಾತ್ರಿ ನಡೆದಿದೆ. ಮೃತರನ್ನು ಸುಮಂತ್ (21) ಎಂದು ಗುರುತಿಸಲಾಗಿದೆ. ಸುಮಂತ್ ಸೋಮವಾರ ರಾತ್ರಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣಗಳು ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲು ಮಾಡಿ ತನಿಖೆ ನಡೆಸುತಿದ್ದಾರೆ.

ಮೂಡುಬಿದಿರೆ‌: ಯುವಕ ಆತ್ಮಹತ್ಯೆ Read More »

ಪಬ್‌ ಜೀ ಗೇಮ್‌ ಮೂಲಕ ಪರಿಚಯ|ಪ್ರಿಯಕರನಿಗಾಗಿ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್‌ ಮಹಿಳೆ.!

ಸಮಗ್ರ ನ್ಯೂಸ್: ಪಬ್‌ ಜೀ ಗೇಮ್‌ ಮೂಲಕ ಪರಿಚಯವಾದ ಪ್ರಿಯಕರನಿಗಾಗಿ ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದ ಮಹಿಳೆಯೊಬ್ಬರು ಭಾರತಕ್ಕೆ ಬಂದಿರುವ ಘಟನೆ ನಡೆದಿದೆ. ಗ್ರೇಟರ್‌ ನೋಯ್ಡಾ ಮೂಲದ ನಿವಾಸಿಯಾಗಿರುವ ಸಚಿನ್‌ ಜನಪ್ರಿಯ ಮೊಬೈಲ್‌ ಗೇಮ್‌ ಪಬ್‌ ಜೀ ಆಡುತ್ತಾ ಆಡುತ್ತಾ ಅದರ ಮೂಲಕವೇ ಒಬ್ಬ ಮಹಿಳೆಗೆ ಮೆಸೇಜ್‌ ಮಾಡಿ ಆಕೆಯನ್ನೇ ಪ್ರೀತಿಸಲು ತೊಡಗಿದ್ದಾರೆ. ಇನ್ನು ಆ ಮಹಿಳೆಗೆ ಈಗಾಗಲೇ ನಾಲ್ಕು ಮಕ್ಕಳಿದ್ದು, ಆಕೆ ಪಾಕಿಸ್ತಾನ ಮೂಲದವಳು ಆಗಿದ್ದಾಳೆ ಎನ್ನುವುದು ಅರಿತುಕೊಂಡಿದ್ದರೂ ಆಕೆಯೊಂದಿಗೆ ನಿರಂತರವಾಗಿ ಚಾಟಿಂಗ್‌ ಮಾಡತೊಡಗಿದ್ದಾರೆ. ಹೀಗೆ

ಪಬ್‌ ಜೀ ಗೇಮ್‌ ಮೂಲಕ ಪರಿಚಯ|ಪ್ರಿಯಕರನಿಗಾಗಿ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಬಂದ ಪಾಕ್‌ ಮಹಿಳೆ.! Read More »

ಬೆಂಗಳೂರು: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ

ಸಮಗ್ರ ನ್ಯೂಸ್ : ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಜು. 2ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಪವಿತ್ರಾ ಎಂದು ಗುರುತಿಸಲಾಗಿದೆ. ಪವಿತ್ರಾ ಮೊದಲ ಪತಿಗೆ ವಿಚ್ಛೇದನ ನೀಡಿ ಚೇತನ್ ಗೌಡ ಎಂಬಾತನನ್ನು ಎರಡನೇ ವಿವಾಹವಾಗಿದ್ದಳು. ಚೇತನ್​ ಕಂಪೆನಿಯೊಂದರ ಮಾಲೀಕನಾಗಿದ್ದು, ಇತ್ತೀಚೆಗೆ ಚೇತನ್​ಗೆ ಮತ್ತೊರ್ವ ಯುವತಿಯ ಸಂಪರ್ಕ ಬೆಳೆದಿದ್ದು, ಇದೇ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಈ ಬಗ್ಗೆ ತನ್ನ

ಬೆಂಗಳೂರು: ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಹೆಂಡತಿ ಆತ್ಮಹತ್ಯೆ Read More »