ಕ್ರೈಂ

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಕಡಬದ ಯುವಕ‌ ಆತ್ಮಹತ್ಯೆ

ಸಮಗ್ರ ವಾರ್ತೆ: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಯುವಕನೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.7ರಂದು ನಡೆದಿದೆ. ಕಡಬ ತಾಲೂಕಿನ ಕಾಯಿಮಣ ಮುಂಡಾಲ ನಿವಾಸಿ ದಿವಾಕರ್ (36) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅನಾರೋಗ್ಯದಿಂದ ದಿವಾಕರ್ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತರು ತಂದೆ ಆನಂದ ಗೌಡ, ತಾಯಿ ಸುಂದರಿ, ಸಹೋದರಚಂದ್ರಶೇಖರ, ಸಹೋದರಿ ಸೌಮ್ಯರವರನ್ನು ಅಗಲಿದ್ದಾರೆ.

ಮಂಗಳೂರು: ವೆನ್ಲಾಕ್ ಆಸ್ಪತ್ರೆಯಲ್ಲಿ ಕಡಬದ ಯುವಕ‌ ಆತ್ಮಹತ್ಯೆ Read More »

ಬಂಟ್ವಾಳ: ನೇಣಿಗೆ ಶರಣಾದ ಸರಕಾರಿ ನೌಕರ

ಸಮಗ್ರ ನ್ಯೂಸ್: ಸರಕಾರಿ ನೌಕರನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ. ಮೇಗಿನ‌ಪೇಟೆ ನಿವಾಸಿ ಪ್ರಶಾಂತ್ ( 30) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ವಿಟ್ಲ ಸರಕಾರಿ ಆಸ್ಪತ್ರೆಯಲ್ಲಿ ಡಿ.ಗ್ರೂಪ್ ನೌಕರರನಾಗಿ ಕೆಲಸ ಮಾಡುತ್ತಿದ್ದ ಈತ ಕೌಟುಂಬಿಕ ವಿಚಾರದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ವಿಟ್ಲ ಪೋಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಟ್ವಾಳ: ನೇಣಿಗೆ ಶರಣಾದ ಸರಕಾರಿ ನೌಕರ Read More »

ಭಕ್ತರು ದೂರು ನೀಡಿದ ನಾಲ್ಕೇ ಗಂಟೆಗಳಲ್ಲಿ ಆರೋಪಿಗಳು ವಶಕ್ಕೆ |ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಜೈನಮುನಿ ಕೊಲೆ

ಸಮಗ್ರ ನ್ಯೂಸ್: ಹೀರೆಕುಡಿ ನಂದಿ ಪರ್ವತ ಆಶ್ರಮದ (Nandi Parvatha Ashram) ಜೈನಮುನಿ (Jain Muni) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೊಟ್ಟ ಹಣ ವಾಪಸ್ ಕೇಳಿದ್ದಕ್ಕಾಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಈ ಕುರಿತು ಖಟಕಬಾವಿ ಗ್ರಾಮದಲ್ಲಿ ಹೇಳಿಕೆ ನೀಡಿದ ಎಸ್ಪಿ ಸಂಜೀವ್ ಪಾಟೀಲ್, ಬುಧವಾರ ರಾತ್ರಿಯಿಂದ ಸ್ವಾಮೀಜಿ ನಾಪತ್ತೆಯಾಗಿದ್ದರು ಎಂದು ಭಕ್ತರು ದೂರು ನೀಡಿದ್ದರು. ಭಕ್ತರ ದೂರಿನ ಮೇರೆಗೆ ತನಿಖೆ ಕೈಗೊಳ್ಳಲಾಗಿದೆ. ತನಿಖೆ ವೇಳೆ ಆಶ್ರಮಕ್ಕೆ ಯಾರು ಬಂದು ಹೋಗಿದ್ದರು ಎಂಬ ಬಗ್ಗೆ ವಿಚಾರಣೆ

ಭಕ್ತರು ದೂರು ನೀಡಿದ ನಾಲ್ಕೇ ಗಂಟೆಗಳಲ್ಲಿ ಆರೋಪಿಗಳು ವಶಕ್ಕೆ |ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಜೈನಮುನಿ ಕೊಲೆ Read More »

ಒಡಿಶಾ ರೈಲು ದುರಂತ| ಮೂವರು ಅಧಿಕಾರಿಗಳು ಅರೆಸ್ಟ್

ಸಮಗ್ರ ನ್ಯೂಸ್: ಒಡಿಶಾದಲ್ಲಿ 290 ಮಂದಿಯನ್ನು ಬಲಿಪಡೆದ ಸರಣಿ ರೈಲು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ರೈಲ್ವೆ ಉದ್ಯೋಗಿಗಳಾಗಿರುವ ಮೂವರನ್ನು ಸಿಬಿಐ ಬಂಧಿಸಿದೆ. ಈಗಾಗಲೇ ಪ್ರಕರಣಕ್ಕೆ ಸಂಭಧಿಸಿದಂತೆ ರೈಲ್ವೆ ಸುರಕ್ಷತಾ ಆಯುಕ್ತರು ರೈಲ್ವೆ ಮಂಡಳಿಗೆ ಸಲ್ಲಿಸಿದ್ದ ವರದಿಯಲ್ಲಿ, ಮಾನವ ಪ್ರಮಾದ ಮತ್ತು ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಹೇಳಿತ್ತು. ಬಂಧಿತ ವ್ಯಕ್ತಿಗಳಾದ ಅರುಣ್ ಕುಮಾರ್ ಮಹಂತ, ಮುಹಮ್ಮದ್ ಅಮೀರ್ ಖಾನ್ ಮತ್ತು ಪಪ್ಪು ಕುಮಾರ್ ವಿರುದ್ಧ ಕೊಲೆಗೆ ಸಮನಾಗದ ನರಹತ್ಯೆ

ಒಡಿಶಾ ರೈಲು ದುರಂತ| ಮೂವರು ಅಧಿಕಾರಿಗಳು ಅರೆಸ್ಟ್ Read More »

ಚಾರ್ಮಾಡಿ ಘಾಟ್ ನಲ್ಲಿ ಬಸ್ ಗಳ ಮುಖಾಮುಖಿ ಡಿಕ್ಕಿ| ಚಾಲಕರು ಗಂಭೀರ; ನಡೆದೇ ಸಾಗಿದ ಪ್ರಯಾಣಿಕರು

ಸಮಗ್ರ ನ್ಯೂಸ್: ದಟ್ಟವಾದ ಮಂಜು ಆವರಿಸಿದ ಪರಿಣಾಮ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ಎರಡು ಸರ್ಕಾರಿ ಬಸ್ಸುಗಳ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಚಾಲಕರ ಕಾಲುಗಳಿಗೆ ತೀವ್ರ ಗಾಯಗಳಾಗಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ಸಾಗುತ್ತಿದ್ದ ಬಸ್ ಹುಬ್ಬಳ್ಳಿಯಿಂದ ಧರ್ಮಸ್ಥಳಕ್ಕೆ ಸಾಗುತ್ತಿದ್ದ ಬಸ್ ಗಳು ಇಕ್ಕಟ್ಟಾದ ರಸ್ತೆಯಲ್ಲಿ ಶುಕ್ರವಾರ ಸಂಜೆ ಮುಖಾಮುಖಿ ಢಿಕ್ಕಿಯಾಗಿ ಅವಘಡ ಸಂಭವಿಸಿದೆ. ಅಪಘಾತಕ್ಕೀಡಾದ ಬಸ್ಸುಗಳಲ್ಲಿ 80ಕ್ಕೂ ಹೆಚ್ಚು ಜನ ಪ್ರವಾಸಿಗರು ಇದ್ದರು. ಅಪಘಾತಕ್ಕೆ ರಸ್ತೆ ಕಾಮಗಾರಿ ಕಾರಣ

ಚಾರ್ಮಾಡಿ ಘಾಟ್ ನಲ್ಲಿ ಬಸ್ ಗಳ ಮುಖಾಮುಖಿ ಡಿಕ್ಕಿ| ಚಾಲಕರು ಗಂಭೀರ; ನಡೆದೇ ಸಾಗಿದ ಪ್ರಯಾಣಿಕರು Read More »

ಕುಡಿದ ನಶೆಯಲ್ಲಿ ಕಾರೊಳಗೆ ಸೆಕ್ಸ್ ನಲ್ಲಿ ತೊಡಗಿದ ಜೋಡಿ!! ಅನುಮಾನಗೊಂಡು ನೋಡಿದ ಮನೆಯೊಡತಿ| ಮುಂದೇನಾಯ್ತು ಗೊತ್ತಾ?

ಸಮಗ್ರ ನ್ಯೂಸ್: ಮನೆಮುಂದೆ ಕಾರು ನಿಲ್ಲಿಸಿ ಜೋಡಿಯೊಂದು ಸೆಕ್ಸ್ ಮಾಡುತ್ತಿದ್ದು, ಅದನ್ನು ಪ್ರಶ್ನಿಸಿದ ಮಹಿಳೆಯ ಜೊತೆಗೂ ಅನುಚಿತವಾಗಿ ವರ್ತಿಸಿದ ಘಟನೆ ಬುಧವಾರ ಬೆಳಗ್ಗೆ 5 ಗಂಟೆಗೆ ಹರ್ಯಾಣದ ಗುರುಗಾಂವ್‍ನಲ್ಲಿ ನಡೆದಿದೆ. ಮಹಿಳೆಯೊಬ್ಬರು ಯಾರೆಂದು ನೋಡಲು ಮನೆಯಿಂದ ಹೊರಗೆ ಬಂದಿದ್ದರು. ಆಗ ಮನೆಮುಂದೆಯೇ ಕಾರು ನಿಲ್ಲಿಸಿ ಒಂದು ಜೋಡಿ ಕಾರಿನಲ್ಲಿ ಸೆಕ್ಸ್ ಮಾಡುತ್ತಿದ್ದರು. ಕಾರಿನಲ್ಲಿ ಪಕ್ಕದ್ಮನೆಯ 26 ವರ್ಷದ ಯುವತಿ ಇದ್ದು, ಮಹಿಳೆ ಮೊದಲು ಆಕೆಯನ್ನು ಗುರುತಿಸಲಿಲ್ಲ. ನಂತರ ಅವರ ಹತ್ತಿರ ಹೋಗಿ ಅವರ ಹೆಸರನ್ನು ಕೇಳಿದ್ದಾರೆ. ಆದರೆ

ಕುಡಿದ ನಶೆಯಲ್ಲಿ ಕಾರೊಳಗೆ ಸೆಕ್ಸ್ ನಲ್ಲಿ ತೊಡಗಿದ ಜೋಡಿ!! ಅನುಮಾನಗೊಂಡು ನೋಡಿದ ಮನೆಯೊಡತಿ| ಮುಂದೇನಾಯ್ತು ಗೊತ್ತಾ? Read More »

ಭ್ರಷ್ಟ ಅಧಿಕಾರಿ ಅಜಿತ್ ರೈ ನ್ಯಾಯಾಂಗ ಬಂಧನಕ್ಕೆ ‌ಕೋರ್ಟ್‌ ಆದೇಶ

ಸಮಗ್ರ ವಾರ್ತೆ: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರ ವಶದಲ್ಲಿದ್ದ ಅಜಿತ್ ರೈ ಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದೆ. ಲೋಕಾಯುಕ್ತ ಕಸ್ಟಡಿ ಅವಧಿ ಜು.6ಕ್ಕೆ ಮುಕ್ತಾಯವಾದ ಹಿನ್ನೆಲೆ ಅಜಿತ್ ರೈ ಅವರನ್ನು ಇಂದು ಕೋರ್ಟ್ಗೆ ಹಾಜರುಪಡಿಸಿದ ಲೋಕಾಯುಕ್ತ ಅಧಿಕಾರಿಗಳು, ಮತ್ತೆ ಕಸ್ಟಡಿಗೆ ನೀಡುವಂತೆ ಮನವಿ ಮಾಡಿದ್ದರು. ಆದರೆ ವಿಚಾರಣೆ ನಡೆಸಿದ ಕೋರ್ಟ್ ‘ಅಜಿತ್ ರೈ’ ಯನ್ನು ನ್ಯಾಯಾಂಗ ವಶಕ್ಕೆ ನೀಡಿದ ವಿಶೇಷ ನ್ಯಾಯಾಲಯ ಜುಲೈ 11 ಕ್ಕೆ ವಿಚಾರಣೆ

ಭ್ರಷ್ಟ ಅಧಿಕಾರಿ ಅಜಿತ್ ರೈ ನ್ಯಾಯಾಂಗ ಬಂಧನಕ್ಕೆ ‌ಕೋರ್ಟ್‌ ಆದೇಶ Read More »

ಸುಳ್ಯ: ಹೊಳೆಯ ಪಾಲ ದಾಟುತ್ತಿರುವ ವೇಳೆ ಆಯತಪ್ಪಿ ಬಿದ್ದು ನೀರಲ್ಲಿ‌ ಕೊಚ್ಚಿ ಹೋದ ವ್ಯಕ್ತಿ!!

ಸಮಗ್ರ ನ್ಯೂಸ್: ಹೊಳೆಯ ಪಾಲ ದಾಟುತ್ತಿರುವ ಸಂದರ್ಭದಲ್ಲಿ ಆಯ ತಪ್ಪಿ ಬಿದ್ದು ವ್ಯಕ್ತಿಯೊಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕೂರ್ನಡ್ಕದಿಂದ ವರದಿಯಾಗಿದೆ. ನೀರು ಪಾಲಾಗಿರುವ ವ್ಯಕ್ತಿಯನ್ನು ಕೇರಳ ಮೂಲದವರು ಎಂದು ಹೇಳಲಾಗಿದ್ದು ತೋಟದಲ್ಲಿ ‌ಕೂಲಿ ಕೆಲಸ ಮುಗಿಸಿ ಹಿಂತಿರುಗುವ ವೇಳೆಯಲ್ಲಿ ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಸುಳ್ಯ ಪೊಲೀಸರು ಭೇಟಿ ನೀಡಿ ಕಾಣೆಯಾಗಿರುವ ವ್ಯಕ್ತಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಸುಳ್ಯ: ಹೊಳೆಯ ಪಾಲ ದಾಟುತ್ತಿರುವ ವೇಳೆ ಆಯತಪ್ಪಿ ಬಿದ್ದು ನೀರಲ್ಲಿ‌ ಕೊಚ್ಚಿ ಹೋದ ವ್ಯಕ್ತಿ!! Read More »

ಸುಳ್ಯ -ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಮಣ್ಣು ಕುಸಿತ

ಸಮಗ್ರ ನ್ಯೂಸ್: ಕಳೆದ ಮೂರು ದಿನಗಳಿಂದ‌ ಎಡೆ ಬಿಡದೆ ಸುರಿಯುತ್ತಿರುವ ಮಳೆಯ ಪರಿಣಾಮ ಸುಳ್ಯ -ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ವಾಹನ ಸಂಚಾರಕ್ಕೆ ತಡೆ ಉಂಟಾದ ಘಟನೆ ಸಂಭವಿಸಿದೆ. ಗಡಿ ಪ್ರದೇಶ ಕೇರಳದ ಭಾಗ ಕಲ್ಲಪಳ್ಳಿಯಲ್ಲಿ ಜೂ.6ರಂದು ಬೆಳಿಗ್ಗೆ ಮಣ್ಣು ಕುಸಿತ ಉಂಟಾಗಿದ್ದು, ಇದರಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಬಳಿಕ ಸ್ಥಳೀಯರು ಸೇರಿ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ.

ಸುಳ್ಯ -ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಮಣ್ಣು ಕುಸಿತ Read More »

ಪುತ್ತೂರು: ಭಾರೀ ಮಳೆಗೆ ಮುಳುಗಿದ ಚೆಲ್ಯಡ್ಕ ಸೇತುವೆ

ಸಮಗ್ರ ನ್ಯೂಸ್: ಭಾರೀ ಮಳೆಗೆ ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇರ್ದೇ ಗ್ರಾಮದ ಚೆಲ್ಯಡ್ಕ ಮುಳುಗು ಸೇತುವೆ ಜು.6ರಂದು ಮುಂಜಾನೆ ಮುಳುಗಡೆಯಾಗಿದೆ. ಈ ಪರಿಣಾಮ ವಾಹನ ಸಂಚಾರ ಸ್ಥಗಿತಗೊಂಡಿದ್ದು, ವಾಹನಗಳು ಸೆಂಟ್ಯಾರು ಪಾಣಾಜೆ ಲೋಕೋಪಯೋಗಿ ರಸ್ತೆಯ ಮೂಲಕ ಸಂಚರಿಸುತ್ತಿದೆ. ಇನ್ನು ಮುಳುಗು ಸೇತುವೆ ಎಂದು ಪ್ರಖ್ಯಾತಿ ಪಡೆದಿರುವ ಚೆಲ್ಯಡ್ಕ ಸೇತುವೆ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ಪ್ರಥಮ ಬಾರಿಗೆ ಮುಳುಗಡೆಯಾಗಿದೆ.

ಪುತ್ತೂರು: ಭಾರೀ ಮಳೆಗೆ ಮುಳುಗಿದ ಚೆಲ್ಯಡ್ಕ ಸೇತುವೆ Read More »