ಕರಾವಳಿ

ಮಂಗಳೂರು: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಕಾಲೇಜುಗಳಿಗೆ ನೊಟೀಸ್ -627 ವಿದ್ಯಾರ್ಥಿಗಳಿಗೆ ಸೋಂಕು

ಮಂಗಳೂರು: ದ. ಕ. ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ಮಾರ್ಗಸೂಚಿ ಉಲ್ಲಂಘಿಸಿದ ಕಾಲೇಜುಗಳನ್ನು ಪತ್ತೆಹಚ್ಚಿ ನೋಟಿಸ್ ನೀಡಲು ಮುಂದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 29 ಕಾಲೇಜುಗಳ 627 ವಿದ್ಯಾರ್ಥಿಗಳಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.ಈ ಪೈಕಿ 327 ಮಂದಿ ಕೇರಳ ಭಾಗದವರಾಗಿದ್ದಾರೆ. ಉಳಿದಂತೆ ದಕ್ಷಿಣ ಕನ್ನಡ , ಸೇರಿದಂತೆ ಹೊರಜಿಲ್ಲೆ ರಾಜ್ಯದ ವಿದ್ಯಾರ್ಥಿಗಳು ಸೇರಿದ್ದಾರೆ. ಜಿಲ್ಲೆಯ ಕಾಲೇಜುಗಳಲ್ಲಿ ಹಾಸ್ಟೆಲ್ ಗಳಲ್ಲಿ ಕೊರೋನಾ ಮಾರ್ಗಸೂಚಿ ಪಾಲನೆ ಕಡ್ಡಾಯ ಎಂದು ಆರೋಗ್ಯ ಇಲಾಖೆ ಈಗಾಗಲೇ ಸೂಚನೆ […]

ಮಂಗಳೂರು: ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ಕಾಲೇಜುಗಳಿಗೆ ನೊಟೀಸ್ -627 ವಿದ್ಯಾರ್ಥಿಗಳಿಗೆ ಸೋಂಕು Read More »

ಮಂಗಳೂರು: ಟಿ.ವಿ ನೋಡಲು ಬಂದ ಬಾಲಕಿಗೆ ಲೈಂಗಿಕ ಕಿರುಕುಳ ಮನೆ ಮಾಲೀಕನ ಬಂಧನ

ಮಂಗಳೂರು: ಪಕ್ಕದ ಮನೆಗೆ ಟಿ.ವಿ ನೋಡಲು ಬಂದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮನೆ ಮಾಲೀಕನನ್ನು ಮಹಿಳಾ ಠಾಣೆಯ ಪೋಲಿಸರು ಬಂಧಿಸಿದ್ದಾರೆ. ಪೆರ್ಮುದೆ ನಿವಾಸಿ ರಾಮಕೃಷ್ಣ ಬಂಧಿತ ಆರೋಪಿ. ಶಿವಮೊಗ್ಗ ಮೂಲದ ಮಹಿಳೆಯೊಬ್ಬರು ರಾಮಕೃಷ್ಣನ ಬಾಡಿಗೆ ಮನೆಯಲ್ಲಿ ಮೂವರು ಮಕ್ಕಳೊಂದಿಗೆ ವಾಸವಿದ್ದರು. ಆಗಸ್ಟ್ 21ರಂದು ತುರ್ತು ಕೆಲಸಕ್ಕಾಗಿ ತಾಯಿ ಶಿವಮೊಗ್ಗಕ್ಕೆ ಮಕ್ಕಳನ್ನು ಬಿಟ್ಟು ಹೋಗಿದ್ದರು. ಮಕ್ಕಳನ್ನು ನೋಡಿಕೊಳ್ಳುವಂತೆ ಆರೋಪಿಯ ಪತ್ನಿಗೆ ಹೇಳಿದ್ದರು. ಸಂಜೆಯ ವೇಳೆಗೆ ಮೂವರು ಮಕ್ಕಳು ಆರೋಪಿಯ ಮನೆಗೆ ಟಿವಿ ನೋಡಲು ಹೋಗಿದ್ದು, ಆಗ

ಮಂಗಳೂರು: ಟಿ.ವಿ ನೋಡಲು ಬಂದ ಬಾಲಕಿಗೆ ಲೈಂಗಿಕ ಕಿರುಕುಳ ಮನೆ ಮಾಲೀಕನ ಬಂಧನ Read More »

ಪುತ್ತೂರು: ಕಾರು ಚಾಲಕನ ಕೊಲೆ ಯತ್ನ |6 ಮಂದಿಯ ಬಂಧನ |ಇದು ಕಾರ್ತಿಕ್ ಮೇರ್ಲ ಕೊಲೆ ಕೇಸಿಗೆ ಸಂಬಂಧವೇ?

ಪುತ್ತೂರು: ದರ್ಬೆ ಪೆಟ್ರೋಲ್ ಪಂಪ್‌ನಲ್ಲಿ ಆ.24ರಂದು ರಾತ್ರಿ ಇನ್ನೋವಾ ಕಾರು ಚಾಲಕನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಕೆಲವೇ ಗಂಟೆಗಳಲ್ಲಿ 6 ಮಂದಿ ಆರೋಪಿಗಳನ್ನು ಪುತ್ತೂರು ನಗರ ಪೊಲೀಸ್ ಠಾಣಾ ಇನ್‌ಸ್ಪೆಕ್ಟರ್ ಗೋಪಾಲ್ ನಾಯ್ಕ್ ನೇತೃತ್ವದಲ್ಲಿ ಬಂಧಿಸಿದ್ದಾರೆ. ಇದು ಹಿಂಜಾವೇ ಯ ಕಾರ್ತಿಕ್ ಮೇರ್ಲ ಕೊಲೆ ಕೇಸಿಗೆ ಸಂಬಂಧಿಸಿದ ಈ ಕೊಲೆ ಯತ್ನ ನಡೆದಿದೆ ಎಂದು ತನಿಖೆ ವೇಳೆ ತಿಳಿದು ಬಂಧಿದೆ. ಕಿಶೊರ್ ಮೇರ್ಲ, ರಾಕೇಶ್ ಪಂಚೋಡಿ, ರೆಹಮಂತ್, ಇಬ್ರಾಹಿಂ, ದೇವಿಪ್ರಸಾದ್ ಮತ್ತು ಅಶ್ರಫ್ ಬಂಧಿತ ಆರೋಪಿಗಳು.

ಪುತ್ತೂರು: ಕಾರು ಚಾಲಕನ ಕೊಲೆ ಯತ್ನ |6 ಮಂದಿಯ ಬಂಧನ |ಇದು ಕಾರ್ತಿಕ್ ಮೇರ್ಲ ಕೊಲೆ ಕೇಸಿಗೆ ಸಂಬಂಧವೇ? Read More »

ಉಡುಪಿ: ಬಿ.ಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಮುಗಿಯದ ಕಥೆಯಾದ ಸಿಬ್ಬಂದಿ ಮುಷ್ಕರ

ಉಡುಪಿ: ಇಲ್ಲಿನ ಬಿ.ಆರ್ ಶೆಟ್ಟಿ ನಿರ್ವಹಣೆ ಮಾಡುತ್ತಿರುವ ಆಸ್ಪತ್ರೆಯ ಸಿಬ್ಬಂದಿಯ ಮುಷ್ಕರ ಮುಗಿಯದ ಕಥೆಯಾಗಿದ್ದು, ಸಾರ್ವಜನಿಕರು, ಆಸ್ಪತ್ರೆಗೆ ಆಗಮಿಸುತ್ತಿರು ರೋಗಿಗಳಿಗೆ ಸಂಕಷ್ಟ ಎದುರಾಗಿದೆ. ವೇತನ ನೀಡುವಂತೆ ಆಗ್ರಹಿಸಿ ಇತ್ತೀಚೆಗೆ ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ 16 ಸಿಬ್ಬಂದಿಯನ್ನು ಬಿ.ಆರ್ ಶೆಟ್ಟಿ ಆಸ್ಪತ್ರೆಯ ಆಡಳಿತ ಮಂಡಳಿ ಕೆಲಸದಿಂದಲೇ ತೆಗೆದು ಹಾಕಿದೆ. ಹೀಗಾಗಿ ಕೆಲಸದಿಂದ ತೆಗೆದುಹಾಕಲು ಕಾರಣ ತಿಳಿಸಲು ಪಟ್ಟು ಹಿಡಿದು ಬಿ.ಆರ್.ಶೆಟ್ಟಿ ಆಸ್ಪತ್ರೆಯ ಮುಂದೆ ಸಿಬ್ಬಂದಿ ಮತ್ತೆ ಪ್ರತಿಭಟನೆ ನಡೆಸುತ್ತಿದ್ದಾರೆ. ಕೆಲಸ ಕಳೆದುಕೊಂಡವರ ಬೆಂಬಲಕ್ಕೆ ಇತರ

ಉಡುಪಿ: ಬಿ.ಆರ್ ಶೆಟ್ಟಿ ಆಸ್ಪತ್ರೆಯಲ್ಲಿ ಮುಗಿಯದ ಕಥೆಯಾದ ಸಿಬ್ಬಂದಿ ಮುಷ್ಕರ Read More »

ನಮಗೆ ಭಾರತವೇ ಸುರಕ್ಷಿತ ರಾಷ್ಟ್ರ| ಮಂಗಳೂರು ವಿವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ ನೂರಾರು ಅಫ್ಘಾನ್ ವಿದ್ಯಾರ್ಥಿಗಳು|

ಮಂಗಳೂರು: ಅಫ್ಘಾನಿಸ್ತಾನ ತಾಲಿಬಾನ್‌ಗಳ ವಶವಾದ ಬೆನ್ನಲ್ಲೇ ಇಡೀ ಜಗತ್ತು ಅಫ್ಘಾನಿಸ್ತಾನದ ಕಡೆಗೆ ಕಿಸುಗಣ್ಣು ಇರಿಸಿದೆ, ಅದರೆ ಇತ್ತಾ ಅಫ್ಘಾನಿಸ್ತಾನದ ವಿದ್ಯಾರ್ಥಿಗಳು ಮಂಗಳೂರು ವಿಶ್ವ ವಿದ್ಯಾನಿಲಯದೆಡೆ ಹೆಜ್ಜೆ ಹಾಕಲು ಮುಂದಾಗಿದ್ದು, ಸಾವಿರಾರು ವಿದ್ಯಾರ್ಥಿಗಳು ವಿ.ವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಪ್ಘಾನಿಸ್ತಾನದ ಬೆಳವಣಿಗೆಯ ಬಳಿಕ ನಮಗೆ ಭಾರತವು ಸುರಕ್ಷಿತ ರಾಷ್ಟ್ರವೆಂದು ಭಾರತದಲ್ಲಿ ವ್ಯಾಸಂಗ ಮಾಡುತ್ತಿದ್ದ ಅಪ್ಘಾನ್ ವಿದ್ಯಾರ್ಥಿಗಳ ಹೇಳಿಕೆಯನ್ನು ನಾವು ಮತ್ತೊಮ್ಮೆ ನೆನಪಿಸಿಕೊಳ್ಳ ಬಹುದು. ಅಪ್ಘಾನಿಸ್ತಾನದ ಸಾವಿರಾರು ವಿದ್ಯಾರ್ಥಿಗಳು ಮಂಗಳೂರು ವಿ.ವಿ.ಯಲ್ಲಿ ವ್ಯಾಸಂಗ ಮಾಡಲು ಅರ್ಜಿ ಸಲ್ಲಿಕೆ ಮಾಡಿದ್ದು, ಇಷ್ಟೊಂದು

ನಮಗೆ ಭಾರತವೇ ಸುರಕ್ಷಿತ ರಾಷ್ಟ್ರ| ಮಂಗಳೂರು ವಿವಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ ನೂರಾರು ಅಫ್ಘಾನ್ ವಿದ್ಯಾರ್ಥಿಗಳು| Read More »

ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕುಮಾರ್ ಕುಮಾರಮಂಗಲ ಇನ್ನಿಲ್ಲ

ಪುತ್ತೂರು: ಶಿಕ್ಷಣ ಕ್ಷೇತ್ರದಲ್ಲಿನ ಉತ್ತಮ ಸೇವೆಗಾಗಿ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತರಾಗಿದ್ದ ನಿವೃತ್ತ ಶಿಕ್ಷಕ ಕುಮಾರ್ ಮಾಸ್ಟರ್ ಕುಮಾರಮಂಗಲ(68) ಅಲ್ಪ ಕಾಲದ ಅಸೌಖ್ಯದಿಂದ ಮಂಗಳವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಎಂಬಲ್ಲಿನ ನಿವಾಸಿಯಾಗಿರುವ ಕುಮಾರ್ ಮಾಸ್ಟರ್ ಅವರು 36 ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಇವರ ಸೇವೆಯನ್ನು ಗುರುತಿಸಿ 1994ರಲ್ಲಿ ಜಿಲ್ಲಾ ಪ್ರಶಸ್ತಿ, 2009ರಲ್ಲಿ ರಾಜ್ಯ ಪ್ರಶಸ್ತಿ ಹಾಗೂ 2011ರಲ್ಲಿ

ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಕುಮಾರ್ ಕುಮಾರಮಂಗಲ ಇನ್ನಿಲ್ಲ Read More »

ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮಂಗಳೂರು: ರಾವ್ ಅಂಡ್ ರಾವ್ ಸರ್ಕಲ್ ರಸ್ತೆಯಲ್ಲಿರುವ ಸ್ಟಾರ್ ಟವರ್ ಬಳಿ ಆ. 24ರಂದು ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ವರದಿ ಪ್ರಕಾರ, ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ವ್ಯಕ್ತಿಯ ವಯಸ್ಸು 45 ವರ್ಷ ಎಂದು ಅಂದಾಜಿಸಲಾಗಿದೆ. ಮೃತನ ಬಲಗೈ `ಆರ್ ಎಸ್’, ‘ಓಂ’ ಮತ್ತು ನಕ್ಷತ್ರದ ಹಚ್ಚೆ ಇದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ದೇಹದ ಮೇಲೆ ಯಾವುದೇ ಬಾಹ್ಯ ಗಾಯಗಳಿಲ್ಲ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ.

ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ Read More »

ಕುಂದಾಪುರ: ಆಕಸ್ಮಿಕವಾಗಿ ನದಿಗೆ ಬಿದ್ದು ಇಬ್ಬರು ಯುವಕರು ಮೃತ್ಯು

ಕುಂದಾಪುರ: ಇಬ್ಬರು ಯುವಕರು ಆಕಸ್ಮಿಕವಾಗಿ ನದಿಗೆ ಬಿದ್ದು ಸಾವನಪ್ಪಿದ ಘಟನೆ ಕುಂದಾಪುರದ ಅಲ್ಬಾಡಿ ಗ್ರಾಮದ ಗಂಟುಬೀಲು ಬಳಿ ಸಂಭವಿಸಿದೆ. ಅಲ್ಬಾಡಿ ಗ್ರಾಮದ ಮೋಹನ್ ನಾಯಕ್ (21) ಮತ್ತು ಮಹಾಬಲ ನಾಯ್ಕ್ ಅವರ ಮಗ ಸುರೇಶ್ (19) ಮೃತಪಟ್ಟ ಯುವಕರು. ಇವರಿಬ್ಬರು ಬಡ ಕುಟುಂಬದವರಾಗಿದ್ದು, ಇಬ್ಬರು ಕೂಲಿ ಕೆಲಸ ಮಾಡುತ್ತಿದ್ದರು. ಸೋಮವಾರ ಅವರು ಗಂಟುಬೀಲು ಕೃಷ್ಣ ನಾಯಕ್ ಅವರಿಗೆ ಸೇರಿದ ತೋಟಕ್ಕೆ ಕೂಲಿ ಕೆಲಸ ಮಾಡಲು ಹೋಗಿದ್ದು, ಬಳಿಕ ತಡವಾದರೂ ಹಿಂದಿರುಗದ ಹಿನ್ನಲೆಯಲ್ಲಿ ಹುಡುಕಾಟ ಆರಂಭಿಸಿದಾಗ ಅವರ ಮೃತದೇಹ

ಕುಂದಾಪುರ: ಆಕಸ್ಮಿಕವಾಗಿ ನದಿಗೆ ಬಿದ್ದು ಇಬ್ಬರು ಯುವಕರು ಮೃತ್ಯು Read More »

ನೇತ್ರಾವತಿ ನದಿ ನೀರನ್ನು ಮಲಿನ ಮಾಡಿದ ಆರೋಪ: 4 ಮಂದಿಯ ವಿರುದ್ಧ ಕೇಸ್

ಮಂಗಳೂರು: ಇಲ್ಲಿ ಹರಿಯುವ ನೇತ್ರಾವತಿ ನೀರನ್ನು ಮಲಿನ ಮಾಡಿದ ಆರೋಪದ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ 4 ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಉಪ್ಪಿನಂಗಡಿ ನಿರಲ ಬಾರ್ ಆ್ಯಂಡ್ ರೆಸ್ಟೋರೆಂಟ್ ಮಾಲಕಿ ನವೀನ ರೈ, ಗೌರಿ ವೆಂಕಟೇಶ್ ವಸತಿ ಸಮುಚ್ಚಯದ ಮಾಲಕ ಪ್ರಕಾಶ್ ಭಟ್, ಹೊಟೇಲ್ ಲಕ್ಷ್ಮೀ ನಿವಾಸ ಸಂಸ್ಥೆಯ ಶೇಖರ್ ಮತ್ತು ಇಳಂತಿಲ ಗ್ರಾಮದ ಅಂಡೆತ್ತಡ್ಕ ನಿವಾಸಿ ಸದಾನಂದ ಪ್ರಕರಣದ ಆರೋಪಿಗಳು. ಇವರು ನದಿಗೆ ಮಲಿನ ನೀರು ಬಿಡುವ ಮತ್ತು ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ

ನೇತ್ರಾವತಿ ನದಿ ನೀರನ್ನು ಮಲಿನ ಮಾಡಿದ ಆರೋಪ: 4 ಮಂದಿಯ ವಿರುದ್ಧ ಕೇಸ್ Read More »

ಮಂಗಳೂರು: ಕೊನೆಗೂ ಪತ್ತೆಯಾಯಿತು ಶವದಿಂದ ನಾಪತ್ತೆಯಾದ ಡೈಮಂಡ್ – ಕಳ್ಳ ಗಂಡನಿಗೆ ಸಾತ್ ಕೊಟ್ಟು ಹೆಂಡತಿ ಈಗ ಮಾತಾಡಮ್ಮ !!

ಮಂಗಳೂರು: ಕೆಲ ದಿನಗಳ ಹಿಂದೆ ಭಾರೀ ಸುದ್ದಿಯಲ್ಲಿದ್ದ ನಗರದ ಬೆಂದೂರ್ ವೆಲ್ ನಲ್ಲಿರುವ ಖಾಸಗಿ ಆಸ್ಪತ್ರೆಯಾದ ಕೊಲಾಸ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿರುವ ವ್ಯಕ್ತಿಯ ಮೃತದೇಹದ ಕಿವಿಯಿಂದ ನಾಪತ್ತೆಯಾಗಿದ್ದ ವಜ್ರದ ಕಿವಿ ಓಲೆಯನ್ನು ಕದ್ರಿ ಪೊಲೀಸರು ಪತ್ತೆ ಮಾಡಿದ್ದಾರೆ. ಮಾಲ್ ಒಂದರ ಭದ್ರತಾ ವಿಭಾಗದ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದ ಹರೀಶ್ ಶೆಟ್ಟಿ (45) ಗುರುವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಅವನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ತೆಗೆಯಲಾಗಿತ್ತಾದರೂ, ಮೃತದೇಹದ ಕಿವಿಯಲ್ಲಿನ ವಜ್ರದ ಓಲೆ

ಮಂಗಳೂರು: ಕೊನೆಗೂ ಪತ್ತೆಯಾಯಿತು ಶವದಿಂದ ನಾಪತ್ತೆಯಾದ ಡೈಮಂಡ್ – ಕಳ್ಳ ಗಂಡನಿಗೆ ಸಾತ್ ಕೊಟ್ಟು ಹೆಂಡತಿ ಈಗ ಮಾತಾಡಮ್ಮ !! Read More »