ಕರಾವಳಿ

ಸುಳ್ಯ: ಅ. 5 ರಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಡಿಕೆಶಿ

ಸುಳ್ಯ: ಇಂಧನ ಸಚಿವರಾಗಿದ್ದಾಗ ವಿದ್ಯುತ್ ಸಮಸ್ಯೆ ಬಗ್ಗೆ ಕರೆ ಮಾಡಿದ ವ್ಯಕ್ತಿಯನ್ನು ಬಂಧನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಸುಳ್ಯದ ನ್ಯಾಯಾಲಯ ಪದೇ ಪದೇ ನೋಟಿಸ್ ನೀಡಿದ್ದರು ಆಗಮಿಸದಿದ್ದ ಡಿ.ಕೆ ಶಿವಕುಮಾರ್ ಇದೀಗ ಅಕ್ಟೋಬರ್ 5ರಂದು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಶಿವಕುಮಾರ್ ಅವರಿಗೆ ನ್ಯಾಯಾಲಯವು ಮೂರು ಬಾರಿ ಸಮನ್ಸ್ ಜಾರಿ ಮಾಡಿತ್ತು. ವಿಚಾರಣೆಗೆ ಹಾಜರಾಗದ ಅವರಿಗೆ ಸೆಪ್ಟೆಂಬರ್ 29 ರಂದು ವಾರಂಟ್ ಜಾರಿಗೊಳಿಸಿ ಶಿವಕುಮಾರ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ಇಲಾಖೆಯ ಉನ್ನತ […]

ಸುಳ್ಯ: ಅ. 5 ರಂದು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಡಿಕೆಶಿ Read More »

ಮಂಗಳೂರು ನಗರದಲ್ಲಿ ಚಿರತೆಯ ಓಡಾಟ! ಬೆಚ್ಚಿಬಿದ್ದ ಕುಡ್ಲ ಜನತೆ

ಮಂಗಳೂರು: ಮಂಗಳೂರು ನಗರದ ಮರೋಳಿ ಎಂಬಲ್ಲಿ ಚಿರತೆಯ ಓಡಾಟ ಕಂಡುಬಂದಿದ್ದು, ಮಂಗಳೂರಿನ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಮರೋಳಿಯ ಸೂರ್ಯನಾರಾಯಣ ದೇವಸ್ಥಾನದ ಬಳಿಯ ಖಾಲಿ ಜಾಗದಲ್ಲಿ ಚಿರತೆಯ ಓಡಾಟ ಕಂಡು ಬಂದಿದೆ. ಈ ಹಿನ್ನಲೆ ಮಂಗಳೂರು ಅರಣ್ಯ ವಲಯಾಧಿಕಾಧಿಕಾರಿ ಪ್ರಶಾಂತ್ ಪೈ ನೇತೃತ್ವದಲ್ಲಿ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ನಡೆದಿದದೆ. ಇನ್ನೂ ಇದು ಜನವಸತಿ ಇರುವ ಪ್ರದೇಶವಾಗಿರುವ ಕಾರಣ ಚಿರತೆಯ ಓಡಾಟ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮಂಗಳೂರು ನಗರದಲ್ಲಿ ಚಿರತೆಯ ಓಡಾಟ! ಬೆಚ್ಚಿಬಿದ್ದ ಕುಡ್ಲ ಜನತೆ Read More »

ಅ. 7 ರಿಂದ ಅ.16ವರೆಗೆ ಮಂಗಳೂರು ದಸರಾ| ಕ್ಷೇತ್ರಕ್ಕೆ ಬರುವ ಭಕ್ತರಿಗೆ ಕೋವಿಡ್ ಲಸಿಕೆ ವ್ಯವಸ್ಥೆ

ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವತಿಯಿಂದ ಪ್ರತಿ ವರ್ಷ ನಡೆಯುವ ‘ಮಂಗಳೂರು ದಸರಾ’ವನ್ನು ಈ ಬಾರಿಯೂ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆಯೊಂದಿಗೆ ನಡೆಸಲು ಸಿದ್ಧತೆ ನಡೆಸಲಾಗಿದೆ. ಕೊರೊನಾದಿಂದಾಗಿ ಈ ಬಾರಿಯೂ ಮಂಗಳೂರು ದಸರಾ ಮರೆವಣಿಗೆ ಇಲ್ಲದೆ ಶಾರದಾ ಮೂರ್ತಿಯ ವಿಸರ್ಜನೆಯನ್ನು ಕಳೆದ ವರ್ಷದಂತೆ ಈ ವರ್ಷವೂ, ಕ್ಷೇತ್ರದ ಆವರಣದಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ ತಿಳಿಸಿದ್ದಾರೆ. ಅದೇ ರೀತಿ ನಮ್ಮ ದಸರಾ ನಮ್ಮ ಸುರಕ್ಷೆ’ ಎಂಬ ಘೋಷ ವಾಕ್ಯದಡಿ ದಸರಾ ಕಾರ್ಯಕ್ರಮ ನಡೆಯಲಿದೆ.

ಅ. 7 ರಿಂದ ಅ.16ವರೆಗೆ ಮಂಗಳೂರು ದಸರಾ| ಕ್ಷೇತ್ರಕ್ಕೆ ಬರುವ ಭಕ್ತರಿಗೆ ಕೋವಿಡ್ ಲಸಿಕೆ ವ್ಯವಸ್ಥೆ Read More »

ಉಪ್ಪಿನಂಗಡಿ: ನೀರೆಂದು ತಿಳಿದು ಪೆಟ್ರೋಲ್ ‌ಕುಡಿದ ಮಹಿಳೆ ಸಾವು

ಉಪ್ಪಿನಂಗಡಿ: ಮಹಿಳೆಯೊಬ್ಬರು ತಪ್ಪಾಗಿ ನೀರಿನ ಬದಲು ಪೆಟ್ರೋಲ್‌ ಕುಡಿದು ಅಸ್ವಸ್ಥಗೊಂಡು ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಉಪ್ಪಿನಂಗಡಿ ಸಮೀಪದ ಪೆರ್ನೆಯ ಸಂಪದಕೋಡಿ ಎಂಬಲ್ಲಿ ನಡೆದಿದೆ. ಮೃತ ಮಹಿಳೆ ಪದ್ಮಾವತಿ (79) ಎಂದು ಗುರುತಿಸಲಾಗಿದೆ. ದೃಷ್ಟಿ ದೋಷದಿಂದ ಬಳಲುತ್ತಿದ್ದ ಈಕೆ ಪೆರ್ನೆಯ ಸಂಪದಕೋಡಿಯಲ್ಲಿರುವ ತನ್ನ ಮಗಳ ಮನೆಗೆ ಬಂದಿದ್ದಾಗ ಅಲ್ಲಿ ಹುಲ್ಲು ಕತ್ತರಿಸುವ ಯಂತ್ರದ ಬಳಕೆಯ ಉದ್ದೇಶದಿಂದ ಮನೆಯಲ್ಲಿ ಬಾಟಲಿಯಲ್ಲಿ ತಂದಿರಿಸಿದ ಪೆಟ್ರೋಲನ್ನು ತಿಳಿಯದೇ ಕುಡಿದಿದ್ದಾರೆ ಎಂದು ಹೇಳಲಾಗಿದೆ. ಆ ಬಳಿಕ ಅಸ್ವಸ್ಥರಾದ ಅವರನ್ನು ಮಂಗಳೂರಿನ ವೆನ್‌

ಉಪ್ಪಿನಂಗಡಿ: ನೀರೆಂದು ತಿಳಿದು ಪೆಟ್ರೋಲ್ ‌ಕುಡಿದ ಮಹಿಳೆ ಸಾವು Read More »

ಸುಳ್ಯ| ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು

ಸುಳ್ಯ: ವ್ಯಕ್ತಿಯೊಬ್ಬರು ರಾತ್ರಿ ವೇಳೆ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ತಾಲೂಕಿನ ಕನಕಮಜಲು ಎಂಬಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಗ್ರಾಮದ ಪೆರುಂಬಾರು ನಿವಾಸಿ ಜಯರಾಮ ಗೌಡ(52) ಎಂದು ಗುರುತಿಸಲಾಗಿದೆ. ರಾತ್ರಿ ವೇಳೆ ಜಯರಾಮ ಗೌಡರಿಗೆ ಓಡಾಡುವ ಅಭ್ಯಾಸವಿದ್ದು, ನಿನ್ನೆ ತಡರಾತ್ರಿಯೂ ಮನೆಯಿಂದ ಹೊರಟು ಹೋಗಿದ್ದರೆನ್ನಲಾಗಿದೆ. ಬಳಿಕ ಮನೆಗೆ ಬಾರದಿದ್ದ ಅವರನ್ನು ಇಂದು ಮುಂಜಾನೆ ಹುಡುಕಾಟ ನಡೆಸಿದ್ದು, ಗೌಡರ ಮೃತದೇಹ ಮನೆಯಿಂದ 1 ಕಿ.ಮೀ ದೂರದ ಕಾರಿಂಜ ಸಿಆರ್ ಸಿ‌ ಕಾಲೊನಿ ಬಳಿಯ ಕೆರೆಯಲ್ಲಿ ಪತ್ತೆಯಾಗಿದೆ. ರಾತ್ರಿವೇಳೆ

ಸುಳ್ಯ| ಬಾವಿಗೆ ಬಿದ್ದು ವ್ಯಕ್ತಿ ಮೃತ್ಯು Read More »

ಮಂಗಳೂರು: ದೀಪಕ್ ರಾವ್ ಕೊಲೆ ಆರೋಪಿ ಅರೆಸ್ಟ್

ಮಂಗಳೂರು: ಅಪ್ರಾಪ್ತೆಯ ಮೇಲೆ ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದ ಹಾಗೂ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತ ದೀಪಕ್ ರಾವ್ ಕೊಲೆ ಪ್ರಕರಣ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕಿನ್ನಿಗೋಳಿ ನಿವಾಸಿ ಮಹಮ್ಮದ್ ನೌಶದ್ ಎಂದು ಗುರುತಿಸಲಾಗಿದೆ. ಮಹಮ್ಮದ್ ನೌಶದ್ ವಿರುದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಈತನ ವಿರುದ್ಧ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈತ ಮೂರು ವರ್ಷಗಳ ಹಿಂದೆ 2018 ರಲ್ಲಿ ಜ.3 ರಂದು ಮಂಗಳೂರಿನ ಕಾಟಿಪಳ್ಳದಲ್ಲಿ ಹಾಡಹಗಲೇ ನಡೆದ

ಮಂಗಳೂರು: ದೀಪಕ್ ರಾವ್ ಕೊಲೆ ಆರೋಪಿ ಅರೆಸ್ಟ್ Read More »

ಬಳ್ಪ: ಕೈಗೆಟುಕದ ಖಾಸಗಿ ಮೊಬೈಲ್ ಟವರ್‌ ಸಿಗ್ನಲ್ : ಗ್ರಾಹಕರಿಗೆ ನಿರಾಸೆ

ಬಳ್ಪ: ಆದರ್ಶ ಗ್ರಾಮ ಬಳ್ಪದ ಎಡೋಣಿ-ಪಾದೆ ಬಳಿಯಲ್ಲಿ ಉದ್ಘಾಟನೆಗೊಂಡ ನೂತನ ಜಿಯೋ ಟವರ್‌ ಮೂಲಕ ಮೊಬೈಲ್ ಸಿಗ್ನಲ್‌ ಲಭ್ಯವಾಗಬಹುದು ಎಂದು ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ಈಗ ನಿರಾಸೆಯಾಗಿದೆ. ಉದ್ಘಾಟನೆಗೊಂಡ ಜಿಯೋ ಟವರ್‌ ಮೂಲಕ ಬಳ್ಪ ಪೇಟೆಯಲ್ಲಿಯೇ ಸರಿಯಾಗಿ ಸಿಗ್ನಲ್‌ ಸಿಗುತ್ತಿಲ್ಲ ಮಾತ್ರವಲ್ಲ ತೀರಾ ಗ್ರಾಮೀಣ ಪ್ರದೇಶ ಎಂದು ಗುರುತಿಸಲಾಗಿದ್ದ ಎಡೋಣಿ-ಪಾದೆ ಪರಿಸರಿಂದ ಸ್ವಲ್ಪ ದೂರದಲ್ಲಿಯೇ ಇರುವ ಮಲ್ಕಜೆ, ಏರಣಗುಡ್ಡೆ ಪ್ರದೇಶದಲ್ಲಿ ಸಿಗ್ನಲ್‌ ಲಭ್ಯವಾಗುತ್ತಿಲ್ಲ ಎಂದು ಗ್ರಾಹಕರು ನಿರಾಸೆ ವ್ಯಕ್ತಪಡಿಸಿದ್ದಾರೆ. ಎಡೋಣಿಯಿಂದ ಸ್ವಲ್ಪ ದೂರವರೆಗೆ ಸಿಗ್ನಲ್‌ ಲಭ್ಯವಾಗುತ್ತದೆ, ಈ ಹಿಂದೆಯೇ

ಬಳ್ಪ: ಕೈಗೆಟುಕದ ಖಾಸಗಿ ಮೊಬೈಲ್ ಟವರ್‌ ಸಿಗ್ನಲ್ : ಗ್ರಾಹಕರಿಗೆ ನಿರಾಸೆ Read More »

ಯುವಶಕ್ತಿ ಬಂಟ್ವಾಳ ವತಿಯಿಂದ ‘ನಂದಕಿಶೋರ’ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ

ಬಂಟ್ವಾಳ: ಟೀಂ ವೈಎಸ್ ಕೆ ವತಿಯಿಂದ ಆಯೋಜಿಸಲಾದ ‘ನಂದಕಿಶೋರ’ ಮಕ್ಕಳ ಕೃಷ್ಣ ವೇಷ ಸ್ಪರ್ಧೆಯ ಬಹುಮಾನವನ್ನು ಸಂಘದ ಪದಾಧಿಕಾರಿಗಳು ವಿತರಿಸಿದರು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಮಂಗಳೂರಿನ ರಕ್ಷಣ್, ದ್ವಿತೀಯ ಬಹುಮಾನವನ್ನು ಮಂಗಳೂರಿನ ಬ್ರಹ್ಮೀ, ತೃತೀಯ ಬಹುಮಾನವನ್ನು ಮಂಗಳೂರಿನಲ್ಲಿ ನೆಲೆಸಿರುವ ಶೌರ್ಯ ಕೊಲ್ಯ‌ರವರಿಗೆ ವಿಜೇತರ ಮನೆಗಳಿಗೆ ಸಂಘದ ಸದಸ್ಯರು ತೆರಳಿ ವಿತರಿಸಿದರು

ಯುವಶಕ್ತಿ ಬಂಟ್ವಾಳ ವತಿಯಿಂದ ‘ನಂದಕಿಶೋರ’ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ Read More »

ನವ ಮಂಗಳೂರು ಬಂದರಿನಲ್ಲಿ ಸಹಾಯಕ ‌ಕಾರ್ಯದರ್ಶಿ ಹುದ್ದೆಗೆ ಅರ್ಜಿ ಆಹ್ವಾನ

ಮಂಗಳೂರು: ನವ ಮಂಗಳೂರು ಬಂದರು ಮಂಡಳಿ (NMPT)ಯಲ್ಲಿ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು, ಬೇರೆ ಇಲಾಖೆಗಳಲ್ಲಿ ಸರ್ಕಾರಿ ಕೆಲಸ ನಿರ್ವಹಿಸುತ್ತಿರುವ ಅರ್ಹ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್​ 16 ಕಡೆಯ ದಿನವಾಗಿದೆ. ಯಾವುದೇ ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಯಾವುದೇ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆ ವಿವರ:ಸಹಾಯಕ ಕಾರ್ಯದರ್ಶಿ ಗ್ರೇಡ್​ 2 ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರಿ ಸಂಸ್ಥೆಯಲ್ಲಿ ಮೂರು ವರ್ಷದ ಸೇವಾ ಅನುಭವವನ್ನು

ನವ ಮಂಗಳೂರು ಬಂದರಿನಲ್ಲಿ ಸಹಾಯಕ ‌ಕಾರ್ಯದರ್ಶಿ ಹುದ್ದೆಗೆ ಅರ್ಜಿ ಆಹ್ವಾನ Read More »

ಮಂಗಳೂರು: ಮೇಲಧಿಕಾರಿ ಕಿರುಕುಳದಿಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆತ್ಮಹತ್ಯೆ? ಮೃತ ದೇಹದೊಂದಿಗೆ ಠಾಣೆಗೆ ಆಗಮಿಸಿದ ಕುಟುಂಬಸ್ಥರು

ಮಂಗಳೂರು: ಮಂಗಳೂರು ವಿಭಾಗದ ಕೆಎಸ್‌ಆರ್‌ಟಿಸಿ ಚಾಲಕ ಕಂ ನಿರ್ವಾಹಕರಾಗಿದ್ದ ಬಾಗಲಕೋಟೆಯ ಹುನಗುಂದದ ನಿಂಗಪ್ಪ ಇಮರಾಪುರ ಸೆ. 26 ರ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದು ಈ ಘಟನೆಗೆ ಮೇಲಧಿಕಾರಿಗಳ ಕಿರುಕುಳ ಕಾರಣ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಬಾಗಲಕೋಟೆ ಜಿಲ್ಲೆ ಹುನಗುಂದ ಮೂಲದ ರಾಮವಡಗಿ ಗ್ರಾಮದವರಾದ ನಿಂಗಪ್ಪ ಆತ್ಮಹತ್ಯೆ ಮಾಡಿಕೊಂಡವರು. ಇವರು ಮಂಗಳೂರಿನ ಮೂರನೇ ಡಿಪೋದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಭಾನುವಾರ ರಾತ್ರಿ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದರು. ಕಳೆದ 6 ತಿಂಗಳ ಹಿಂದೆ ಕರ್ತವ್ಯಲೋಪದ ಅಡಿಯಲ್ಲಿ ಅವರನ್ನು

ಮಂಗಳೂರು: ಮೇಲಧಿಕಾರಿ ಕಿರುಕುಳದಿಂದ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆತ್ಮಹತ್ಯೆ? ಮೃತ ದೇಹದೊಂದಿಗೆ ಠಾಣೆಗೆ ಆಗಮಿಸಿದ ಕುಟುಂಬಸ್ಥರು Read More »