ಕರಾವಳಿ

ಬಂಟ್ವಾಳ: ರವಿ ಪೂಜಾರಿ ಹೆಸರಲ್ಲಿ ಬೆದರಿಕೆ ಕರೆ ಪ್ರಕರಣ ರದ್ದುಗೊಳಿಸಿದ ಕೋರ್ಟ್

ಬಂಟ್ವಾಳ: ಕೃಷಿಕರೊಬ್ಬರ ಮೊಬೈಲ್ ಗೆ ರವಿ ಪೂಜಾರಿ ಹೆಸರು ಹೇಳಿಕೊಂಡು 25 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟು ಕೊಡದೇ ಇದ್ದರೆ ಜೀವ ಬೆದರಿಕೆ ಒಡ್ಡಿರುವ ಪ್ರಕರಣವನ್ನು ‌ಬಂಟ್ವಾಳ ಜೆಎಂಎಫ್ ಸಿ ನ್ಯಾಯಾಲಯ‌ ರದ್ದು ಪಡಿಸಿದೆ. ವಿಟ್ಲಾ ಠಾಣಾ ವ್ಯಾಪ್ತಿಯ ಇಡ್ಕಿದು ಗ್ರಾಮದ ಮಾತೃಶ್ರೀ ಕೃಪಾ ನಿವಾಸಿ ವೆಂಕಟರಮಣ ಭಟ್ ಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಈಗ ನ್ಯಾಯಾಲಯದಲ್ಲಿ ದೂರುದಾರರು ಪ್ರಕರಣವನ್ನು ಮುಂದುವರಿಸದಿರಲು ನಿರ್ಧರಿಸಿದ ಕಾರಣ ಪ್ರಕರಣ ರದ್ದುಗೊಳ್ಳುವ

ಬಂಟ್ವಾಳ: ರವಿ ಪೂಜಾರಿ ಹೆಸರಲ್ಲಿ ಬೆದರಿಕೆ ಕರೆ ಪ್ರಕರಣ ರದ್ದುಗೊಳಿಸಿದ ಕೋರ್ಟ್ Read More »

ಮಂಗಳೂರು: ಮಕ್ಕಳ ಮಾರಾಟ ಮತ್ತು ಕೊಳ್ಳುವವರಿಗೆ 5 ವರ್ಷ ಸಜೆ

ಮಂಗಳೂರು: ಮಕ್ಕಳನ್ನು ಮಾರುವವರಿಗೂ ಹಾಗೂ ಕೊಳ್ಳುವವರಿಗೂ ಬಾಲನ್ಯಾಯ ಕಾಯ್ದೆ-2015ರ ಸೆಕ್ಷನ್ 81 ಪ್ರಕಾರ 5 ವರ್ಷ ಸೆರೆಮನೆ ವಾಸ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು. ಮಕ್ಕಳ ಮಾರಾಟ ಅಪರಾಧವಾಗಿದ್ದು, ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯನ್ನು 3 ರಿಂದ 7 ವರ್ಷಗಳವರೆಗೆ ವಿಧಿಸಬಹುದಾಗಿದೆ.ಹೆಚ್ಚಿನ ಮಾಹಿತಿಗೆ ರಾಜ್ಯ ದತ್ತು ಸಂಪನ್ಮೂಲ ಏಜೆನ್ಸಿ ದೂ.ಸಂ:080-22867381/2, ನಗರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂ.ಸಂ.:0824-2440004 ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು: ಮಕ್ಕಳ ಮಾರಾಟ ಮತ್ತು ಕೊಳ್ಳುವವರಿಗೆ 5 ವರ್ಷ ಸಜೆ Read More »

ಬೈಕ್ ಗೆ ಅಡ್ಡಬಂದ ನಾಯಿ| ಸಹಸವಾರ ಸಾವು

ಕಡಬ: ನಾಯಿಯೊಂದು ದ್ವಿಚಕ್ರ ವಾಹನಕ್ಕೆ ಅಡ್ಡಬಂದ ಪರಿಣಾಮ ಅಪಘಾತ ಸಂಭವಿಸಿ ಸಹಸವಾರ ಮೃತಪಟ್ಟ ಘಟನೆ ಎಡಮಂಗಲದಲ್ಲಿ ನಡೆದಿದೆ. ಮೃತಪಟ್ಟವರನ್ನು ಗ್ರಾಮದ ಸುರೇಶ್ (53) ಎಂದು ಗುರುತಿಸಲಾಗಿದೆ. ಇವರು ಎಡಮಂಗಲದಿಂದ ಕೊಳಂಬೆ ಎಂಬಲ್ಲಿಗೆ ಟ್ಯಾಪಿಂಗ್ ಗೆ ಮಾಡಲು ತಮ್ಮ ಸಂತೋಷ್ ಎಂಬವರೊಂದಿಗೆ ಸ್ಕೂಟರ್ ನಲ್ಲಿ ತೆರಳುತ್ತಿದ್ದ ವೇಳೆ ನಾಯಿ ಅಡ್ಡ ಬಂದ ಪರಿಣಾಮ ಸ್ಕೂಟರ್ ನಿಯಂತ್ರಣ ತಪ್ಪಿ ಮಗುಚಿಬಿದ್ದಿದೆ. ಪರಿಣಾಮ ಸುರೇಶ್ ಎಂಬವರು ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಕಡಬ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿನ ವೈದ್ಯರ ಸಲಹೆಯಂತೆ ಮಂಗಳೂರಿನ

ಬೈಕ್ ಗೆ ಅಡ್ಡಬಂದ ನಾಯಿ| ಸಹಸವಾರ ಸಾವು Read More »

ಬಂಟ್ವಾಳ: ತಡರಾತ್ರಿ ಲಾರಿ-ಬೈಕ್ ನಡುವೆ ಢಿಕ್ಕಿ| ಗಂಭೀರವಾಗಿ ಗಾಯಗೊಂಡ ಸವಾರ ಸಾವು|

ಬಂಟ್ವಾಳ: ಇಲ್ಲಿನ ಮೆಲ್ಕಾರ್ ಜಂಕ್ಷನ್ ಬಳಿ ನ.16ರಂದು ತಡರಾತ್ರಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮಂಗಳೂರು ನಿವಾಸಿ ಗಣೇಶ್(36) ಮೃತಪಟ್ಟವರು. ಗಣೇಶ್ ಅವರು ಮೆಲ್ಕಾರ್ ಜಂಕ್ಷನ್‌ ನಲ್ಲಿ ಬೈಕ್ ಸವಾರಿ ಮಾಡುತ್ತಾ ಮುಡಿಪು ರಸ್ತೆಗೆ ಕ್ರಾಸ್ ಮಾಡುತ್ತಿದ್ದರು. ಈ ಸಂದರ್ಭ ಹೆದ್ದಾರಿಯಲ್ಲಿ ಸಾಗುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆ ಬಿದ್ದ ಗಣೇಶ್ ಅವರು ಗಂಭೀರವಾಗಿ ಗಾಯಗೊಂಡಿದ್ದರು.‌ ತಕ್ಷಣ ಅವರನ್ನು ಆಸ್ಪತ್ರೆಗೆ

ಬಂಟ್ವಾಳ: ತಡರಾತ್ರಿ ಲಾರಿ-ಬೈಕ್ ನಡುವೆ ಢಿಕ್ಕಿ| ಗಂಭೀರವಾಗಿ ಗಾಯಗೊಂಡ ಸವಾರ ಸಾವು| Read More »

ಬಂಟ್ವಾಳ: ಮಸೀದಿಗೆ ನುಗ್ಗಿ ಧರ್ಮಗುರುಗಳ ಹಲ್ಲೆಗೆ ಯತ್ನ| ಆರೋಪಿಗಳ ಬಂಧನ

ಬಂಟ್ವಾಳ: ಮಸೀದಿಗೆ ನುಗ್ಗಿ ಧರ್ಮಗುರುಗಳ ಮೇಲೆ ಹಲ್ಲೆಗೆತ್ನಿಸಿದ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಬಂಟ್ವಾಳದ ಕುರ್ನಾಡು ನಿವಾಸಿ ಶರಣ್ (24), ವಿಘ್ನೇಶ್ (23) ಮತ್ತು ಹರ್ಷಿತ್ (22) ಎಂದು ಗುರುತಿಸಲಾಗಿದೆ. ನ.14 ರ ಮಧ್ಯರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳು ಅಬ್ದುಲ್ ಸಮೀರ್ ಎಂಬವರ ಮನೆ ಬಳಿ ಬಂದು ಅವರ ಸಮುದಾಯವನ್ನು ನಿಂದಿಸಿ, ಸಮೀರ್ ಮನೆಯಿಂದ ಹೊರಗೆ ಬರುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಮಸೀದಿಗೆ ನುಗ್ಗಿ ಧರ್ಮಗುರುಗಳನ್ನು ನಿಂದಿಸಿ ಹಲ್ಲೆಗೆ ಯತ್ನಿಸಿ

ಬಂಟ್ವಾಳ: ಮಸೀದಿಗೆ ನುಗ್ಗಿ ಧರ್ಮಗುರುಗಳ ಹಲ್ಲೆಗೆ ಯತ್ನ| ಆರೋಪಿಗಳ ಬಂಧನ Read More »

ಸುರತ್ಕಲ್ ನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ| ಪೊಲೀಸರ ಮಿಂಚಿನ ಕಾರ್ಯಾಚರಣೆ, ಆರೋಪಿಗಳು ಅಂದರ್|

ಮಂಗಳೂರು: ಮಂಗಳೂರಿನ ಸುರತ್ಕಲ್ ನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ ನಡೆಸಲಾಗಿದ್ದು, ಬೈಕ್ ನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಯನ್ನು ಯುವಕರು ಥಳಿಸಿದ್ದಾರೆ. ಅನ್ಯ ಧರ್ಮದ ಯುವತಿಯೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದ ಹಿನ್ನಲೆ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಬೈಕ್ ಹಿಂಬಾಲಿಸಿ ಬಂದ ಯುವಕರ ತಂಡ ಥಳಿಸಿದ್ದು, ಅನ್ಯಧರ್ಮದವರ ಜೊತೆ ಓಡಾಡದಂತೆ ಯುವತಿಗೆ ಧಮ್ಕಿ ಹಾಕಲಾಗಿದೆ. ಯುವತಿ ಅಪಾರ್ಟ್ ಮೆಂಟ್ ಖಾಲಿ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಲಗೇಜ್ ಶಿಫ್ಟ್ ಮಾಡಿ ಯುವಕ ಯುವತಿಯನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಯುವಕರ ತಂಡದಿಂದ ಥಳಿಸಲಾಗಿದೆ.

ಸುರತ್ಕಲ್ ನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ| ಪೊಲೀಸರ ಮಿಂಚಿನ ಕಾರ್ಯಾಚರಣೆ, ಆರೋಪಿಗಳು ಅಂದರ್| Read More »

ಪೇಸ್ ಬುಕ್ ನಲ್ಲಿ ಪ್ರವಾದಿ ನಿಂದನಾತ್ಮಕ ಕಮೆಂಟ್| ಆರೋಪಿಯ ಬಂಧನ|

ಸುಳ್ಯ: ಕಳೆದೊಂದು ವಾರದ ಹಿಂದೆ ಪೇಸ್ ಬುಕ್ ನಲ್ಲಿ ಪ್ರವಾದಿ ಮುಹಮ್ಮದ್ (ಸ.ಅ)ರನ್ನು ಆಶ್ಲೀಲ ಪದಗಳಿಂದ‌ ನಿಂದನೆಗೈದ ಆರೋಪದಲ್ಲಿ ತಾಲೂಕಿನ ಐವರ್ನಾಡು ಗ್ರಾಮದ ಜಗದೀಶ್ ಕೈವಲ್ತಡ್ಕ ಎಂಬಾತನನ್ನು ಬೆಳ್ಳಾರೆ ಪೊಲೀಸರು ಬಂಧಿಸಿದ್ದಾರೆ. ಜಗದೀಶ್ ತನ್ನ ಪೇಸ್ ಬುಕ್ ಖಾತೆಯಲ್ಲಿ ಅವಹೇಳನಕಾರಿ ಪದಬಳಕೆ ಮಾಡಿ ಪ್ರವಾದಿಯನ್ನು ನಿಂದಿಸಿ ಕೋಟ್ಯಾಂತರ ಜನರ‌ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾನೆ, ಈ ಕುರಿತಂತೆ ಪೋಲಿಸರು ಕ್ರಮ ಕೈಗೊಳ್ಳಬೇಕು ಮುಸ್ಲಿಂ ಸಂಘಟನೆಗಳು ದೂರು ನೀಡಿದ್ದವು. ಆದರೆ ದೂರು ನೀಡಿ ವಾರ ಕಳೆದರೂ ಆರೋಪಿಯನ್ನು ಪೊಲೀಸರು

ಪೇಸ್ ಬುಕ್ ನಲ್ಲಿ ಪ್ರವಾದಿ ನಿಂದನಾತ್ಮಕ ಕಮೆಂಟ್| ಆರೋಪಿಯ ಬಂಧನ| Read More »

ಸುಳ್ಯ| ಐತಿಹಾಸಿಕ ರಸ್ತೆಯಲ್ಲೊಂದು ಅಡ್ವೆಂಚರ್ ಎಕ್ಸ್ಪರಿಮೆಂಟ್| ಪುರಾತನ ಟಾರು ರೋಡಿನಲ್ಲಿ ಸಂಚರಿಸುವ ಮಜಾನೇ ಬೇರೆ..! ಈ ವಿಶೇಷ ರಸ್ತೆ ಇರೋದೆಲ್ಲಿ ಗೊತ್ತೇ..?

ಸುಳ್ಯ: ಈ ರಸ್ತೆಗೆ ಡಾಂಬರು ಹಾಯಿಸಿ ಅದೆಷ್ಟು ದಶಕಗಳು ಕಳೆದಿದೆಯೋ ಗೊತ್ತಿಲ್ಲ. ಅಂದು ಮಾಡಿದ ಡಾಂಬರು ರಸ್ತೆಯ ಕುರುಹುಗಳು ಮಾತ್ರ ಇಲ್ಲಿ ಕಂಡುಬರುತ್ತಿದ್ದು, ಭೌಗೋಳಿಕ ಅಧ್ಯಯನ ಮಾಡುವ ಸಂಶೋಧಕರಿಗೆ, ಐತಿಹಾಸಿಕ ಉತ್ಖನನ ಮಾಡಲು ಈ ರಸ್ತೆ ಹೇಳಿ ಮಾಡಿಸಿದ ಸ್ಥಳ..! ಅಷ್ಟೇ ಅಲ್ಲ, ನೀವೇನಾದ್ರೂ ಹೊಸದಾಗಿ ಅಡ್ವೆಂಚರ್‌ ಮಾಡ್ಬೇಕು ಅಂತ ಮನಸ್ಸು ಮಾಡಿದ್ರೆ ಖಂಡಿತವಾಗಿ ಈ ಸ್ಥಳಕ್ಕೊಮ್ಮೆ ಭೇಟಿ‌ ನೀಡಬಹುದು. ಕೇವಲ ಒಂದೂವರೆ ಕಿ.ಮೀ ರಸ್ತೆಯಲ್ಲಿ ಇಡೀ ವಿಶ್ವ ಪರ್ಯಟನೆ ಮಾಡಿದ ಅನುಭವ ನಿಮ್ಮದಾಗಲಿದೆ. ಇಂತಹ ಒಂದು

ಸುಳ್ಯ| ಐತಿಹಾಸಿಕ ರಸ್ತೆಯಲ್ಲೊಂದು ಅಡ್ವೆಂಚರ್ ಎಕ್ಸ್ಪರಿಮೆಂಟ್| ಪುರಾತನ ಟಾರು ರೋಡಿನಲ್ಲಿ ಸಂಚರಿಸುವ ಮಜಾನೇ ಬೇರೆ..! ಈ ವಿಶೇಷ ರಸ್ತೆ ಇರೋದೆಲ್ಲಿ ಗೊತ್ತೇ..? Read More »

ಸುಳ್ಯ: ಹಿಂದೂ ಎಂದು ನಂಬಿಸಿ ಅನುಚಿತ ವರ್ತನೆಗೈದ ಮುಸ್ಲಿಂ ಯುವಕ| ಠಾಣೆ ಮೆಟ್ಟಿಲೇರಿದ ಯುವತಿ

ಸುಳ್ಯ: ಅನ್ಯಕೋಮಿನ ಯುವಕನೋರ್ವ ಸಾಮಾಜಿಕ ಜಾಲತಾಣ ದಲ್ಲಿ ಪರಿಚಯವಾದ ಯುವತಿಯೋರ್ವಳನ್ನು ನಾನು ಹಿಂದೂ ಯುವಕನೆಂದು ಸುಳ್ಳು ಹೆಸರು ಹೇಳಿ ನಂಬಿಸಿ ಆಕೆಯನ್ನು ಬಲವಂತವಾಗಿ ಸುತ್ತಾಡಿಸಿ ಅನುಚಿತವಾಗಿ ವರ್ತಿಸಿರುವ ಬಗ್ಗೆ ವಂಚನೆಗೆ ಒಳಗಾದ ಯುವತಿ ಸುಳ್ಯ ಪೋಲಿಸ್ ಮೆಟ್ಟಿಲೇರಿ ದೂರು ನೀಡಿದ್ದಾಳೆ. ಮಡಿಕೇರಿ ಮೂಲದ ಯುವಕನೋರ್ವ ಕಳೆದ 2 ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದು ತನ್ನ ಹೆಸರನ್ನು ಕೌಶಲ್ ‌ಎಂದು ಪರಿಚಯಿಸಿಕೊಂಡಿದ್ದನು ಎನ್ನಲಾಗಿದೆ. ನ.೧೧ ರಂದು ಆತ ಯುವತಿಯನ್ನು ಸುಳ್ಯಕ್ಕೆ ಬರುವಂತೆ ಒತ್ತಾಯ ಮಾಡಿದ್ದು, ಹಿಂದೂ ಯುವಕನೆಂದು

ಸುಳ್ಯ: ಹಿಂದೂ ಎಂದು ನಂಬಿಸಿ ಅನುಚಿತ ವರ್ತನೆಗೈದ ಮುಸ್ಲಿಂ ಯುವಕ| ಠಾಣೆ ಮೆಟ್ಟಿಲೇರಿದ ಯುವತಿ Read More »

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು-ಬದಲು ಪ್ರಕರಣ| ಸಂತ್ರಸ್ತ ಮಗು ಡಿಎನ್ಎ ವರದಿ ಬರುವ ಮೊದಲೇ ಸಾವು|

ಮಂಗಳೂರು: ಇಲ್ಲಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಮಗು ಅದಲು-ಬದಲು ಪ್ರಕರಣದಲ್ಲಿನ ಸಂತ್ರಸ್ತ ಮಗು ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಮೂಲಗಳ ಪ್ರಕಾರ, ಉಸಿರಾಟದ ತೊಂದರೆಯಿಂದ ಮಗು ಮೃತಪಟ್ಟಿದೆ ಎನ್ನಲಾಗಿದೆ. ಅದಲು ಬದಲು ಪ್ರಕರಣದಲ್ಲಿ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಬಳಿಕ ಮಗುವಿನ ಡಿ ಎನ್ ಎ ಪರೀಕ್ಷೆಗಾಗಿ ಮಾದರಿಯನ್ನು ಹೈದರಾಬಾದಿಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷಾ ವರದಿ ಬರುವುದಕ್ಕಿಂತ ಮೊದಲೇ ಮಗು ಮೃತಪಟ್ಟಿದೆ. ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಅಕ್ಟೋಬರ್ 15ರಂದು, ಕುಂದಾಪುರ ಮೂಲದ ಪೋಷಕರು, ನಮಗೆ ಆಸ್ಪತ್ರೆಯ ಸಿಬ್ಬಂದಿ ಮೊದಲು,

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು-ಬದಲು ಪ್ರಕರಣ| ಸಂತ್ರಸ್ತ ಮಗು ಡಿಎನ್ಎ ವರದಿ ಬರುವ ಮೊದಲೇ ಸಾವು| Read More »