ಕರಾವಳಿ

ಸುಬ್ರಹ್ಮಣ್ಯ: ಬಿಸ್ಲೆ ಘಾಟ್ ನಲ್ಲಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ

ಸುಬ್ರಹ್ಮಣ್ಯ : ಬಿಸಿಲೆ ಘಾಟ್ ನ ರಸ್ತೆಯ ಬದಿ ಇರುವ ನದಿಯ ಸಮೀಪ ಅಪರಿಚಿತ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಷಸೇವಿಸಿ ಅರೆಪ್ರಜ್ಞಾವಸ್ಥೆಯಲ್ಲಿದ್ದ ಈತನನ್ನು ಬದುಕಿಸಲು ಯುವ ತೇಜಸ್ಸು ಸಂಸ್ಥೆಯ ಸದಸ್ಯರ ಗರಿಷ್ಠ ಪ್ರಯತ್ನದ ಹೊರತಾಗಿಯೂ ವ್ಯಕ್ತಿ ಸಾವನ್ನಪ್ಪಿದ್ದಾನೆ. ಬಿಸಿಲೆ ಘಾಟ್ ನ ಚೌಡೇಶ್ವರಿ ಅಮ್ಮನವರ ಗುಡಿಯಿಂದ ಸುಮಾರು 100 ಮೀಟರ್ ಇಳಿಜಾರಿನ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸ್ಥಳೀಯರ ಗಮನಕ್ಕೆ ಬಂದು ಕೂಡಲೇ ಸುಬ್ರಮಣ್ಯದ ಯುವತೇಜಸ್ಸು ಟ್ರಸ್ಟ್ ಗೆ ತಿಳಿಸಿದ್ದಾರೆ.

ಸುಬ್ರಹ್ಮಣ್ಯ: ಬಿಸ್ಲೆ ಘಾಟ್ ನಲ್ಲಿ ಅಪರಿಚಿತ ವ್ಯಕ್ತಿ ಆತ್ಮಹತ್ಯೆ Read More »

ಸುಳ್ಯ: ಕ್ಯಾಂಟೀನ್ ಪಾತ್ರೆಗಳನ್ನು ಬಾವಿಗೆಸೆದು,‌ಮಗನಿಗೆ ಕತ್ತಿಯಿಂದ ಕಡಿದ ತಂದೆ

ಸುಳ್ಯ: ಮಾನಸಿಕ ಸ್ಥಿರತೆಯನ್ನು ಕಳೆದುಕೊಂಡ ವ್ಯಕ್ತಿಯೋರ್ವರು ಕ್ಯಾಂಟಿನ್ ಒಂದರ ಪಾತ್ರೆಗಳು ಮತ್ತು ಗ್ಯಾಸ್ ಸಿಲಿಂಡರ್ ನ್ನು ಎಸೆದು, ತನ್ನ ಮಗನ ಹೋಟೆಲ್ ಗೆ ನುಗ್ಗಿ ಮಗನಿಗೆ ಕತ್ತಿಯಿಂದ ಕಡಿದ ಘಟನೆ ಮಂಗಳವಾರದಂದು ತಾಲೂಕಿನ ಎಲಿಮಲೆ ಎಂಬಲ್ಲಿ ನಡೆದಿದೆ. ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಯನ್ನು ಎಲಿಮಲೆಯ ರಾಜೇಶ್(55) ಎಂದು ಗುರುತಿಸಲಾಗಿದೆ. ಇವರು ಮಂಗಳವಾರದಂದು ರಾತ್ರಿ ಎಲಿಮಲೆಯಲ್ಲಿ ಕಾರ್ಯಾಚರಿಸುತ್ತಿದ್ದ ಬಾಲಕೃಷ್ಣ ಎಂಬವರ ಕ್ಯಾಂಟಿನ್ ಗೆ ನುಗ್ಗಿ ಪಾತ್ರೆಗಳನ್ನೆಲ್ಲ ಪಕ್ಕದ ಬಾವಿಗೆಸೆದು, ಗ್ಯಾಸ್ ಸಿಲಿಂಡರ್ ನ್ನು ಸುಮಾರು ದೂರ ಹೊತ್ತೊಯ್ದು ಬಿಸಾಡಿದ್ದಾರೆ.

ಸುಳ್ಯ: ಕ್ಯಾಂಟೀನ್ ಪಾತ್ರೆಗಳನ್ನು ಬಾವಿಗೆಸೆದು,‌ಮಗನಿಗೆ ಕತ್ತಿಯಿಂದ ಕಡಿದ ತಂದೆ Read More »

ಪುತ್ತೂರು: ಹಿಂದೂ-ಮುಸ್ಲಿಂ ಯುವಕರ ನಡುವೆ ಹಲ್ಲೆ| ಪೊಲೀಸರಿಂದ ಲಾಠಿ ಪ್ರಹಾರ

ಪುತ್ತೂರು: ಅನ್ಯಕೋಮಿನ ಯುವಕರ ಮಧ್ಯೆ ಮಾತಿನ ಚಕಮಕಿ ನಡೆದು ನಂತರ ಅದು ಪರಸ್ಪರ ಹಲ್ಲೆಗೆ ತಿರುಗಿ ಘಟನಾ ಸ್ಥಳಕ್ಕೆ ಪೊಲೀಸರು ಬಂದು ಲಘು ಲಾಠಿ ಪ್ರಹಾರದ ಮೂಲಕ ಗುಂಪು ಚದುರಿಸಿದ ಘಟನೆ ಪುತ್ತೂರಿನ ಕೆದಿಲ ಗ್ರಾಮದ ಗಡಿಯಾರದಲ್ಲಿ ತಡರಾತ್ರಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕೆಲ ಯುವಕರನ್ನು ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಗಡಿಯಾರದ ಸತ್ತಿಕಲ್ಲು ನಿವಾಸಿ ರಷ್ಪಕ್, ಪೆರ್ನೆ ನಿವಾಸಿಗಳಾದ ಹರ್ಷಿತ್, ಸತೀಶ್, ಜಗದೀಶ್ ಎನ್ನಲಾಗಿದೆ. ಅನ್ಯಕೋಮಿನ ಯುವಕರ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ನಡೆದಾಗ ಪೊಲೀಸರು

ಪುತ್ತೂರು: ಹಿಂದೂ-ಮುಸ್ಲಿಂ ಯುವಕರ ನಡುವೆ ಹಲ್ಲೆ| ಪೊಲೀಸರಿಂದ ಲಾಠಿ ಪ್ರಹಾರ Read More »

ಮಂಗಳೂರು: ಮರುವಾಯಿ ತಿಂದು ಅಸ್ವಸ್ಥ

ಮಂಗಳೂರು: ಮರುವಾಯಿ(ಚಿಪ್ಪು ಮೀನು) ತಿಂದು ಹಲವರು ಅಸ್ವಸ್ಥಗೊಂಡು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಹೊರವಲಯದ ಗುರುಪುರ ಕುಪ್ಪೆಪದವುವಿನಲ್ಲಿ ನಡೆದಿದೆ. ತುಳುವಿನಲ್ಲಿ ಮರುವಾಯಿ ಎಂದು ಕರೆಯಲ್ಪಡುವ ಚಿಪ್ಪು ಮೀನು ಖರೀದಿಸಿ ಪದಾರ್ಥ ಮಾಡಿ ತಿಂದ ಮೇಲೆ ಕೆಲವರು ಅಸ್ವಸ್ಥಗೊಂಡಿದ್ದು, ಕೋವಿಡ್ ಭೀತಿಯಿಂದ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳದೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಇನ್ನು ಆರೊಗ್ಯ ಕೇಂದ್ರಕ್ಕೆ ಯಾರೊಬ್ಬರೂ ಚಿಕಿತ್ಸೆಗೆ ಬಂದಿಲ್ಲ. ಫುಡ್ ಪಾಯಿಸನ್ ಆಗಿರುವ ಬಗ್ಗೆ ಕೆಲವರು ಮಾಹಿತಿ ನೀಡಿದ್ದಾರೆ. ಅನಾರೋಗ್ಯ

ಮಂಗಳೂರು: ಮರುವಾಯಿ ತಿಂದು ಅಸ್ವಸ್ಥ Read More »

ಬಂಟ್ವಾಳ: ರಾತ್ರೋರಾತ್ರಿ ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

ಬಂಟ್ವಾಳ: ನೇತ್ರಾವತಿ ನದಿಗೆ ಹಾರಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಕಾರಾಜೆ ನಿವಾಸಿ ಜಲೀಲ್ ( 55) ಎಂದು ಗುರುತಿಸಲಾಗಿದೆ.ಇವರು ರಾತ್ರಿ ಸುಮಾರು 11 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯರು ತಿಳಿಸಿದ್ದಾರೆ. 11 ಗಂಟೆಯ ವೇಳೆಗೆ ನೇತ್ರಾವತಿ ಸೇತುವೆಯಲ್ಲಿ ಬೈಕ್ ಚಪ್ಪಲಿ ಹಾಗೂ ಮೊಬೈಲ್ ಇಟ್ಟು ಯಾರು ಇಲ್ಲದ ಬಗ್ಗೆ ಸಂಶಯಗೊಂಡ ಸ್ಥಳೀಯ ಈಜುಗಾರರು ನದಿಯಲ್ಲಿ ಹುಡುಕಲು ಆರಂಭಿಸಿದರು. ಸ್ಥಳದಲ್ಲಿದ್ದ ಮೊಬೈಲ್ ಬಗ್ಗೆ

ಬಂಟ್ವಾಳ: ರಾತ್ರೋರಾತ್ರಿ ನೇತ್ರಾವತಿ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ Read More »

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜಿಗೆ ಮೈಕ್ ಸೆಟ್ ಕೊಡುಗೆ

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜು ಹಳೆವಿದ್ಯಾರ್ಥಿ ಸಂಘದಿಂದ ಕಾಲೇಜಿಗೆ 65 ಸಾವಿರ ಮೌಲ್ಯದ ಮೈಕ್ ಸೆಟ್ ನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ ವೆಂಕಪ್ಪ ಗೌಡ ಕಾಲೇಜು ಪ್ರಾಂಶುಪಾಲರಾದ ಗೋವಿಂದ ಎಸ್ ಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ಪಿ ಜಿ ಎಸ್ ಏನ್ ಪ್ರಸಾದ್ , ಹಳೆವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ವಿಮಲಾರಂಗಯ್ಯ , ದುಗ್ಗಪ್ಪ ಗೌಡ ನಾರಾಯಣ ಅಗ್ರಹಾರ , ಶ್ರೀಲತಾ ಮತ್ತಿತರರು ಉಪಸ್ಥಿತರಿದ್ದರು

ಸುಬ್ರಹ್ಮಣ್ಯ: ಕೆಎಸ್ಎಸ್ ಕಾಲೇಜಿಗೆ ಮೈಕ್ ಸೆಟ್ ಕೊಡುಗೆ Read More »

ಮಂಗಳೂರು: ಕಾಂಗ್ರೆಸ್ ಕಚೇರಿಯೊಳಗೆ ಕಾರ್ಯಕರ್ತರ ಜಟಾಪಟಿ|

ಮಂಗಳೂರು: ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಯೂತ್ ಕಾಂಗ್ರೆಸ್ ಹಾಗೂ ರಮಾನಾಥ್ ರೈ ಬಣದ ನಡುವೆ ಹೊಯ್ ಕೈ ನಡೆದಿರುವ ಘಟನೆ ವರದಿಯಾಗಿದೆ. ಕೇಂದ್ರ ಸರಕಾರ ನಾರಾಯಣ ಗುರು ಅವರ ಸ್ತಬ್ಧಚಿತ್ರಕ್ಕೆ ಅವಕಾಶ ನಿರಾಕರಿಸಿರುವ ಘಟನೆಯನ್ನು ಖಂಡಿಸಿ, ಯುವ ಕಾಂಗ್ರೆಸ್ ಹಮ್ಮಿಕೊಂಡಿರುವ “ನಾರಾಯಣ ಗುರು ಕಡೆಗೆ ನಮ್ಮ ನಡಿಗೆ” ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ರಮಾನಾಥ ರೈಗಳು ವೇದಿಕೆಯಲ್ಲಿ ನಿಂತು ಮಾತನಾಡುತ್ತಿದ್ದ ವೇಳೆ ಮೂಲ್ಕಿ ವಲಯದ ನಾಯಕರೊಬ್ಬರು ರೈಗಳನ್ನು ನಿಂದಿಸಿ ಮಾತನಾಡಿದ್ದೇ

ಮಂಗಳೂರು: ಕಾಂಗ್ರೆಸ್ ಕಚೇರಿಯೊಳಗೆ ಕಾರ್ಯಕರ್ತರ ಜಟಾಪಟಿ| Read More »

ಮಂಗಳೂರು: 5ಕ್ಕಿಂತ ಅಧಿಕ ಕೋವಿಡ್ ಪ್ರಕರಣಗಳಿರುವ ಶಾಲೆ ತಾತ್ಕಾಲಿಕ ಸ್ಥಗಿತ – ಜಿಲ್ಲಾಧಿಕಾರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಕೋವಿಡ್ ಪಾಸಿಟಿವ್ ಬಂದ ಶಾಲೆಗಳನ್ನು ಒಂದು ವಾರದ ಮಟ್ಟಿಗೆ ತಾತ್ಕಾಲಿಕ ಸ್ಥಗಿತಗೊಳಿಸಿ ಆನ್‌ಲೈನ್ ತರಗತಿಗಳನ್ನು ಆರಂಭಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಶಾಲಾ ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಈ ಸೂಚನೆ ನೀಡಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಇಡೀ ಜಿಲ್ಲೆಯಲ್ಲಿ ಶಾಲೆಗಳನ್ನು ಸ್ಥಗಿತಗೊಳಿಸುವುದರಿಂದ

ಮಂಗಳೂರು: 5ಕ್ಕಿಂತ ಅಧಿಕ ಕೋವಿಡ್ ಪ್ರಕರಣಗಳಿರುವ ಶಾಲೆ ತಾತ್ಕಾಲಿಕ ಸ್ಥಗಿತ – ಜಿಲ್ಲಾಧಿಕಾರಿ Read More »

ಕೊರಗಜ್ಜ ವೇಷಧರಿಸಿದ ಮದುಮಗನ ಮನೆಗೆ ಕಲ್ಲು ತೂರಾಟ

ಕಾಸರಗೋಡು: ಮದುವೆ ಮನೆಯಲ್ಲಿ ತುಳುನಾಡಿನ ದೈವ ಕೊರಗಜ್ಜ ದೇವರಂತೆ ವೇಷಧರಿಸಿ, ವಿಟ್ಲ ಸಾಲೆತ್ತೂರಿನ ವಧುವಿನ ಮನೆಗೆ ತೆರಳಿದ ಆರೋಪ ಹೊತ್ತಿರುವ ಮಂಜೇಶ್ವರದ ಉಪ್ಪಳ ಬೇಕೂರಿನ ಉಮರುಲ್ ಬಾತೀಶ್ ಅವರ ಮನೆಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಮನೆಯ ಕಿಟಕಿ ಗಾಜುಗಳನ್ನು ಪುಡಿಪುಡಿ ಮಾಡಿರುವ ಘಟನೆ ನಡೆದಿದೆ. ಬೈಕ್ ಬಂದ ದುಷ್ಕರ್ಮಿಗಳು ವರನ ಮನೆಯ ಕಾಂಪೌಂಡ್ ಗೋಡೆಗೆ ಕೇಸರಿ ಬಣ್ಣ ಬಳಿದಿದ್ದಾರೆ ಎನ್ನಲಾಗಿದ್ದು, ಗಾಜು ಒಡೆದ ಸದ್ದು ಕೇಳಿ ಗಾಬರಿಯಿಂದ ಬಾಗಿಲು ತೆರೆದು ಹೊರಗೆ ಬಂದು ನೋಡಿದಾಗ ಇಬ್ಬರು

ಕೊರಗಜ್ಜ ವೇಷಧರಿಸಿದ ಮದುಮಗನ ಮನೆಗೆ ಕಲ್ಲು ತೂರಾಟ Read More »

ವಿಟ್ಲ : ಮಹಿಳೆಯಿಂದ ಮಹಿಳೆಗೆ 3.9 ಲಕ್ಷ ಪಂಗನಾಮ

ವಿಟ್ಲ: ಮಹಿಳೆಯಿಂದ ಮಹಿಳೆಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಗೆ ದೂರುದಾಖಲಾಗಿದೆ. ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಶರವು ಪಡ್ಪು ಎಂಬಲ್ಲಿನ ಹರೀಶ್ ರವರ ಪತ್ನಿ ಪ್ರೇಮ ದೂರುದಾರರಾಗಿದ್ದಾರೆ. ಬಂಟ್ವಾಳ ತಾಲೂಕು ಅನಂತಾಡಿ ಗ್ರಾಮದ ಬಾಕಿಲ ನಿವಾಸಿ ರೋಹಿಣಿ ಸಿ ಯಾನೆ‌ ರೂಪ ಪ್ರಕರಣದ ಆರೋಪಿಯಾಗಿದ್ದಾರೆ. ನನ್ನ ಸಬಂಧಿಯಾದ ರೋಹಿಣಿ ಸಿ ಯಾನೆ ರೂಪ ರವರು ನನ್ನಲ್ಲಿ CRR EDUCATION PALANINIG INVESTMENT ನಲ್ಲಿ ಹಣ ಇಡುವಂತೆ ಒತ್ತಾಯ ಮಾಡಿದ್ದರು ಅದರಂತೆ ಬಂಟ್ವಾಳ

ವಿಟ್ಲ : ಮಹಿಳೆಯಿಂದ ಮಹಿಳೆಗೆ 3.9 ಲಕ್ಷ ಪಂಗನಾಮ Read More »