ಕರಾವಳಿ

ಶಿರಾಡಿ‌ ಘಾಟ್ ರಸ್ತೆಯನ್ನು ಬಂದ್ ಮಾಡುವುದು ಸರಿಯಲ್ಲ – ಮಂಜುನಾಥ್ ಭಂಡಾರಿ

ಮಂಗಳೂರು: ಮಂಗಳೂರು-ಬೆಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಶಿರಾಡಿ ಘಾಟಿಯನ್ನು 6 ತಿಂಗಳು ಬಂದ್ ಮಾಡಲು ಹೋಗಿ ಕೇಂದ್ರ ಬಿಜೆಪಿ ಸರ್ಕಾರ ವಿಶ್ವದಾಖಲೆ ನಿರ್ಮಿಸಲು ಹೊರಟಿದೆ ಎಂದು ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ವ್ಯಂಗ್ಯವಾಡಿದರು. ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್​​ಎಚ್​​​ಎಐ‌ನವರು 10 ಕಿ.ಮೀ ರಸ್ತೆ ಕಾಮಗಾರಿಗಾಗಿ ಶಿರಾಡಿ ಘಾಟಿಯನ್ನು 6 ತಿಂಗಳುಗಳ ಕಾಲ ಮುಚ್ಚುವಂತೆ ಆದೇಶ ಮಾಡಲು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿರುವುದು ಗಮನಕ್ಕೆ ಬಂದಿದೆ. ಈ ಹಿಂದೆಯೂ ಎರಡು ಬಾರಿ ಶಿರಾಡಿಯನ್ನು ಮುಚ್ಚಲಾಗಿತ್ತು‌. ಎಂಆರ್​​ಪಿಎಲ್, ಎನ್‌ಎಂಪಿಟಿ ಬಂದರು

ಶಿರಾಡಿ‌ ಘಾಟ್ ರಸ್ತೆಯನ್ನು ಬಂದ್ ಮಾಡುವುದು ಸರಿಯಲ್ಲ – ಮಂಜುನಾಥ್ ಭಂಡಾರಿ Read More »

ಕಡಬ: ಕಣ್ಣೆದುರಲ್ಲೇ ಹಿಟಾಚಿ ಅಗ್ನಿಗಾಹುತಿ| ಲಕ್ಷಾಂತರ ರೂ.‌ನಷ್ಟ|

ಕಡಬ: ಕಣ್ಣೆದುರಲ್ಲೇ ಹಿಟಾಚಿ ಇಂಜಿನ್ ಒಂದು ಬೆಂಕಿಗಾಹುತಿಯಾಗಿದ್ದು ಲಕ್ಷಾಂತರ ರೂಪಾಯಿ ನಷ್ಟಗೊಂಡ ಘಟನೆ ತಾಲೂಕಿನ ಕೊಂಬಾರು‌ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ. ಉಪ್ಪಿನಂಗಡಿ ಸಮೀಪದ ಕಾಂಚನದ ಸಂಸ್ಥೆಗೆ ಸೇರಿದ ಹಿಟಾಚಿಯನ್ನು ಕೊಂಬಾರು ದೇವಸ್ಥಾನದ ಗದ್ದೆಯಲ್ಲಿ ನಿಲ್ಲಿಸಲಾಗಿದ್ದು, ನೋಡ ನೋಡುತ್ತಿದ್ದಂತೆಯೇ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಿದೆ. ತಕ್ಷಣವೇ ಹಿಟಾಚಿಯ ಸಿಬ್ಬಂದಿ ಹಾಗೂ ಸ್ಥಳೀಯರು ನೀರು ಹಾಯಿಸಿ ಬೆಂಕಿಯನ್ನು ನಂದಿಸಲು ಯತ್ನಿಸಿದರಾದರೂ, ಬೆಂಕಿ ಅದಾಗಲೇ ವ್ಯಾಪಿಸಿದ್ದರಿಂದ ಸಂಪೂರ್ಣ ಸುಟ್ಟು ಕರಕಲಾಗಿದೆ. ಇದರಿಂದಾಗಿ ಲಕ್ಷಾಂತರ ರೂ. ನಷ್ಟ ಅಂದಾಜಿಸಲಾಗಿದೆ.

ಕಡಬ: ಕಣ್ಣೆದುರಲ್ಲೇ ಹಿಟಾಚಿ ಅಗ್ನಿಗಾಹುತಿ| ಲಕ್ಷಾಂತರ ರೂ.‌ನಷ್ಟ| Read More »

ಉಪ್ಪಿನಂಗಡಿ: ಬೈಕ್ ಕದ್ದು ಪರಾರಿಯಾಗುತ್ತಿದ್ದಾಗ ಲಾರಿ ಢಿಕ್ಕಿ – ಸವಾರರರಿಬ್ಬರು ಗಂಭೀರ

ಉಪ್ಪಿನಂಗಡಿ: ಗಾಂಧಿಪಾರ್ಕ್ ಬಳಿಯ ಜೈನ ಬಸದಿ ಸಮೀಪದ ಮನೆಯೊಂದರಲ್ಲಿ ನಿಲ್ಲಿಸಿದ್ದ ಬೈಕ್ ನ್ನು ಕಳ್ಳರು ನಕಲಿ ಕೀ ಬಳಸಿ ಕಳವುಗೈದು ತೆರಳುತ್ತಿದ್ದಾಗ ಅಪಘಾತವಾದ ಘಟನೆ ನಡೆದಿದೆ. ಬೈಕನ್ನು ಹಿರೇಬಂಡಾಡಿ ಗ್ರಾಮದ ಕೊಳ್ಳೇಜಾಲ್ ‌ನಿವಾಸಿ ಮುಹಮ್ಮದ್ ಎಂಬವರದು. ಇವರು ಬೈಕ್ ಕಾಲವಾದವಾದ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ಕೂಡಾ ದಾಖಲಿಸಿದ್ದರು. ಆದರೆ ಅಪರಿಚಿತ ಕಳ್ಳರು ಬೈಕ್ ಕದ್ದೊಯ್ದು ಪರಾರಿಯಾಗುತ್ತಿದ್ದ ವೇಳೆ ಬೈಕ್ ಶಿರಾಡಿ ಸಮೀಪದ ಅಡ್ಡಹೊಳೆ ಎಂಬಲ್ಲಿ ಲಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ

ಉಪ್ಪಿನಂಗಡಿ: ಬೈಕ್ ಕದ್ದು ಪರಾರಿಯಾಗುತ್ತಿದ್ದಾಗ ಲಾರಿ ಢಿಕ್ಕಿ – ಸವಾರರರಿಬ್ಬರು ಗಂಭೀರ Read More »

ವಿದ್ಯಾರ್ಥಿನಿಯ ಫೋಟೋ ಜೊತೆಗೆ ಅನ್ಯಧರ್ಮೀಯನ ಫೋಟೋ ಎಡಿಟ್| ದೂರು ದಾಖಲು

ಮಂಗಳೂರು: ನಗರದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯು ತ್ತಿರುವ ವಿದ್ಯಾರ್ಥಿನಿಯ ಫೋಟೋವೊಂದನ್ನು ಅನ್ಯ ಧರ್ಮೀಯ ಯುವಕನ ಜತೆ ಸಂಬಂಧ ಇದೆ ಎಂದು ಆರೋಪಿಸಿ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡಲಾಗಿದ್ದು, ಈ ಬಗ್ಗೆ ನಗರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ಮೆಡಿಕಲ್‌ ಕಾಲೇಜಿನಲ್ಲಿ 3ನೇ ವರ್ಷದ ಎಂಬಿಬಿಎಸ್‌ ಓದುತ್ತಿರುವ ವಿದ್ಯಾರ್ಥಿನಿಯ ಫೋಟೋವನ್ನು ಆರೋಪಿ ಇನ್‌ ಸ್ಟಾಗ್ರಾಮ್‌ನಿಂದ ಡೌನ್‌ಲೊಡ್‌ ಮಾಡಿಕೊಂಡು ಬಳಿಕ ಇನ್ನೋರ್ವ ಯುವಕನ ಫೋಟೋದ ಜತೆ ಎಡಿಟ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾನೆ.

ವಿದ್ಯಾರ್ಥಿನಿಯ ಫೋಟೋ ಜೊತೆಗೆ ಅನ್ಯಧರ್ಮೀಯನ ಫೋಟೋ ಎಡಿಟ್| ದೂರು ದಾಖಲು Read More »

ರಿಕ್ಷಾದಲ್ಲಿ‌ ಬಿಟ್ಟು ಹೋಗಿದ್ದ ಮನೆಯ ಕೀ ತೆಗೆದು ದರೋಡೆ| ಪರಿಚಿತರಿಂದಲೇ ಕಳವುಗೈದ ಶಂಕೆ| ದೂರು‌ ದಾಖಲು|

ಬೆಳ್ತಂಗಡಿ: ಆಟೋ ರಿಕ್ಷಾ ಚಾಲಕರೊಬ್ಬರು ತನ್ನ ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ ಮನೆಯ ಬೀಗದ ಕೀಯನ್ನು ಕದ್ದೊಯ್ದ ಕಳ್ಳರು ಚಾಲಕನ ಮನೆಗೆ ನುಗ್ಗಿ 1.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ನಿನ್ನೆ ಕೊಕ್ಕಡದಲ್ಲಿ ನಡೆದಿದೆ. ಕೊಕ್ಕಡ ಬಲಿಪಗುಡ್ಡೆ ನಿವಾಸಿ ಅಶೋಕ್ ಎಂಬವರ ಮನೆಯಲ್ಲಿ ಈ ಕೃತ್ಯ‌ ನಡೆದಿದೆ. ಅಶೋಕ್ ರಿಕ್ಷಾವನ್ನು ಕೊಕ್ಕಡದಲ್ಲಿ ನಿಲ್ಲಿಸಿ ಪುತ್ತೂರಿಗೆ ತೆರಳಿದ್ದರು. ಈ ವೇಳೆ ಮನೆಯ ಬೀಗದ ಕೈಯನ್ನು ರಿಕ್ಷಾದಲ್ಲಿ ಮರೆತು ಹೋಗಿದ್ದರೆನ್ನಲಾಗಿದೆ. ಅವರು ಪುತ್ತೂರಿನಿಂದ ಹಿಂದಿರುಗಿ ಬಂದು ನೋಡಿದಾಗ

ರಿಕ್ಷಾದಲ್ಲಿ‌ ಬಿಟ್ಟು ಹೋಗಿದ್ದ ಮನೆಯ ಕೀ ತೆಗೆದು ದರೋಡೆ| ಪರಿಚಿತರಿಂದಲೇ ಕಳವುಗೈದ ಶಂಕೆ| ದೂರು‌ ದಾಖಲು| Read More »

ಧರ್ಮಸ್ಥಳ: ಇಂದು ಮೋದಿ ದೀರ್ಘಾಯುಷ್ಯಕ್ಕಾಗಿ ಮಹಾಮೃತ್ಯುಂಜಯ ಯಾಗ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸನ್ನಿಧಾನದಲ್ಲಿ ಬೆಳ್ತಂಗಡಿ ತಾಲೂಕಿನ ಸಮಸ್ತ ಜನತೆಯ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ದೀರ್ಘಾಯಸ್ಸು ಹಾಗೂ ಆರೋಗ್ಯ ವೃದ್ಧಿಗಾಗಿ ಪ್ರಾರ್ಥಿಸಿ ಇಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಯುತ್ತಿದೆ. ವೇದಮೂರ್ತಿ ನಾಗೇಂದ್ರ ಭಾರದ್ವಾಜ್ ಸುರತ್ಕಲ್ ಅವರ ಪ್ರಧಾನ ಪೌರೋಹಿತ್ಯದಲ್ಲಿ 108 ಮಂದಿ ಪುರೋಹಿತರಿಂದ ಧರ್ಮಸ್ಥಳ ದೇಗುಲದ ಆವರಣದಲ್ಲಿ ಏಳು ಹೋಮಕುಂಡಗಳಲ್ಲಿ ಹೋಮ ನಡೆಯುತ್ತಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ

ಧರ್ಮಸ್ಥಳ: ಇಂದು ಮೋದಿ ದೀರ್ಘಾಯುಷ್ಯಕ್ಕಾಗಿ ಮಹಾಮೃತ್ಯುಂಜಯ ಯಾಗ Read More »

ಉಡುಪಿ: ಶಬರಿಮಲೆಗೆ ತೆರಳಿದ್ದ ವೃತಧಾರಿ ಸ್ವಾಮಿಪಾದಕ್ಕೆ..!

ಉಡುಪಿ: ಜಿಲ್ಲೆಯಿಂದ ಶಬರಿಮಲೆ ಸನ್ನಿಧಾನಕ್ಕೆ ತೆರಳಿದ್ದ ಮಾಲಾಧಾರಿಯೋರ್ವರು ಬೆಟ್ಟ ಹತ್ತುವಾಗ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ. ಸುರೇಶ್ ಬಂಗೇರ ( 52) ಹೃದಯಾಘಾತದಿಂದ ಸಾವಿಗೀಡಾದ ಮಾಲಾಧಾರಿ. ಜಿಲ್ಲೆಯ ಉದ್ಯಾವರದ ಈ ಮಾಲಾಧಾರಿ ಇಲ್ಲಿಯ ಅಯ್ಯಪ್ಪ ಮಂದಿರದಿಂದ 32 ಸ್ವಾಮಿಗಳ ಜೊತೆ ಇರುಮುಡಿ ಕಟ್ಟಿ ನಿನ್ನೆ‌ ರೈಲು ಮಾರ್ಗದ ಮೂಲಕ ಶಬರಿ ತಲುಪಿದ್ದರು. ಇಂದು ದೇವರ ದರ್ಶನಕ್ಕೆ ಬೆಟ್ಟ ಹತ್ತಿ ಹೊರಟ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ರಿಕ್ಷಾ ಚಾಲಕನಾಗಿ ಜೀವನ ಸಾಗಿಸುತ್ತಿದ್ದ ಮಾಲಾಧಾರಿ ಸುರೇಶ್ ಕುಟುಂಬದಲ್ಲಿ ಆಕ್ರಂದನ

ಉಡುಪಿ: ಶಬರಿಮಲೆಗೆ ತೆರಳಿದ್ದ ವೃತಧಾರಿ ಸ್ವಾಮಿಪಾದಕ್ಕೆ..! Read More »

ಬಳ್ಪ: ಆದರ್ಶ ಗ್ರಾಮದ ಬೋಗಾಯನ ಕೆರೆ ಅಭಿವೃದ್ಧಿಗೆ ಕೂಡಿ ಬಂತು ಕಾಲ !

ರೂ. 2 ಕೋಟಿ ಅನುದಾನ ಬಿಡುಗಡೆ | ಇಲ್ಲಿದೆ ಬರಪೂರ ಜಲಮೂಲ ಸುಬ್ರಹ್ಮಣ್ಯ: ಕಡಬ ತಾಲೂಕಿನ ಸಂಸದರ ಆದರ್ಶ ಗ್ರಾಮದ ಬಳ್ಪದ ಐತಿಹಾಸಿಕ ಬೋಗಾಯನ ಕೆರೆ ಅಭಿವೃದ್ಧಿಗೆ ಕೊನೆಗೂ ಅಭಿವೃದ್ಧಿ ಭಾಗ್ಯ ಒದಗಿ ಬಂದಿದೆ. 1.40 ಎಕ್ರೆಯ ಕೆರೆ ಅಭಿವೃದ್ಧಿಗೆ ಸಣ್ಣ ನೀರಾವರಿ ಇಲಾಖೆಯಿಂದ ರೂ. 2 ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಐತಿಹಾಸಿಕ ಕೆರೆ;ಬಳ್ಪದ ಬೋಗಾಯನ ಕೆರೆ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಕದಂಬರ ತುಂಡರಸ ಬೋಗರಾಯವರ್ಮ ಕಡಬ ಪ್ರದೇಶವನ್ನು ಆಳುತ್ತಿದ್ದ ಕಾಲದಲ್ಲಿ

ಬಳ್ಪ: ಆದರ್ಶ ಗ್ರಾಮದ ಬೋಗಾಯನ ಕೆರೆ ಅಭಿವೃದ್ಧಿಗೆ ಕೂಡಿ ಬಂತು ಕಾಲ ! Read More »

ಮಂಗಳೂರು: ಉದ್ಯಮಿಗೆ ಹಣ ಬೇಡಿಕೆ ಇಟ್ಟು ಜೀವ ಬೆದರಿಕೆ| ಇಬ್ಬರು ರೌಡಿಶೀಟರ್ ಗಳು ಅಂದರ್

ಮಂಗಳೂರು: ಉದ್ಯಮಿಗೆ ಕರೆ ಮಾಡಿ ಹಣದ ಬೇಡಿಕೆ ಇಟ್ಟು, ಬೆದರಿಕೆ ಹಾಕಿ, ಹಣ ವಸೂಲಿ ಮಾಡಿದ ಇಬ್ಬರು ರೌಡಿ ಶೀಟರ್ ಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಲಂದರ್ ಶರೀಫ್ ಮತ್ತು ಹಸನಬ್ಬ ಎಂದು ಗುರುತಿಸಲಾಗಿದೆ. ಶರೀಫ್ ಮತ್ತು ಹಸನಬ್ಬ ಪುತ್ತೂರಿನ ಉದ್ಯಮಿಗೆ ಕರೆ ಮಾಡಿ ಯಾರೋ ಒಬ್ಬ ವ್ಯಕ್ತಿ ಜೈಲಿನಲ್ಲಿದ್ದಾನೆ ಅವನನ್ನು ಬಿಡಿಸಲು 13,00,000 ತಗಲುತ್ತದೆ. ಅವನನ್ನು ಬಿಡಿಸಲು ನೀನು ಹಣ ಕೊಡಬೇಕು. ಎರಡು ದಿನಗಳೊಳಗೆ 3,50,000 ಹಣ ರೆಡಿ ಮಾಡಬೇಕು.

ಮಂಗಳೂರು: ಉದ್ಯಮಿಗೆ ಹಣ ಬೇಡಿಕೆ ಇಟ್ಟು ಜೀವ ಬೆದರಿಕೆ| ಇಬ್ಬರು ರೌಡಿಶೀಟರ್ ಗಳು ಅಂದರ್ Read More »

ಮಂಗಳೂರು: ಪಿಕಪ್ ಢಿಕ್ಕಿಯಾಗಿ ವೃದ್ದ ಸಾವು

ಮಂಗಳೂರು: ನಗರದ ಶಕ್ತಿನಗರದ ಕಕ್ಕೆಬೆಟ್ಟು ಎಂಬಲ್ಲಿ ಶನಿವಾರ ಪಿಕಪ್ ಲಾರಿಯೊಂದು ಢಿಕ್ಕಿಯಾಗಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.ಮೃತರನ್ನು ಕಕ್ಕೆಬೆಟ್ಟು ಕಾರ್ಮಿಕ ಕಾಲೋನಿ ನಿವಾಸಿ ಕೊರಗಪ್ಪ (85) ಎಂದು ಗುರುತಿಸಲಾಗಿದೆ. ನೆಲದ ಹೆಂಚುಗಳನ್ನು ತುಂಬಿದ್ದ ಪಿಕಪ್ ಹಿಮ್ಮುಖ ತಿರುವು ತೆಗೆದುಕೊಳ್ಳುತ್ತಿದ್ದಾಗ ಟ್ರಕ್‌ನ ಹಿಂದೆ ನಿಂತಿದ್ದ ಕೊರಗಪ್ಪ ಅವರಿಗೆ ಢಿಕ್ಕಿ ಹೊಡೆದಿದೆ. ಕೊರಗಪ್ಪನವರ ತಲೆಯ ಭಾಗಕ್ಕೆ ಗಾಯಗವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ, ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚಾಲಕನ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮಂಗಳೂರು: ಪಿಕಪ್ ಢಿಕ್ಕಿಯಾಗಿ ವೃದ್ದ ಸಾವು Read More »