ಕರಾವಳಿ

ಉಪ್ಪಿನಂಗಡಿ: ಅಪಾಯದ ಮಟ್ಟ ಮೀರಿ‌ ಹರಿಯುತ್ತಿರುವ ನೇತ್ರಾವತಿ| ಕುಮಾರಧಾರ – ನೇತ್ರಾವತಿ ಸಂಗಮ ಪುಣ್ಯಸ್ನಾನಕ್ಕೆ ಕ್ಷಣಗಣನೆ| ಇತ್ತ‌ ರಾ.ಹೆದ್ದಾರಿಯತ್ತ ಆವರಿಸಿದ ನೆರೆನೀರು

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನೇತ್ರಾವತಿ, ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ. ನೇತ್ರಾವತಿ ಮತ್ತು ಕುಮಾರದಾರ ನದಿಗಳ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಸದ್ಯ 29.09 ಮೀಟರ್ ನಷ್ಟು ನದಿ ನೀರಿನ ಹರಿವು ಇದ್ದು ಅಪಾಯದ ಮಟ್ಟ 31.05 ಆಗಿದೆ. ಪಂಜಳ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿದ್ದು ಹೆದ್ದಾರಿಯ ಒಂದು ಬದಿಯಲ್ಲಿ ಮಾತ್ರ ವಾಹನಗಳು ಸಂಚರಿಸುತ್ತಿದೆ. ಮತ್ತೊಮ್ಮೆ ಪ್ರವಾಹದ ಭೀತಿ ಎದುರಾಗಿದ್ದು, ಸ್ಥಳೀಯ ಜನರಲ್ಲಿ

ಉಪ್ಪಿನಂಗಡಿ: ಅಪಾಯದ ಮಟ್ಟ ಮೀರಿ‌ ಹರಿಯುತ್ತಿರುವ ನೇತ್ರಾವತಿ| ಕುಮಾರಧಾರ – ನೇತ್ರಾವತಿ ಸಂಗಮ ಪುಣ್ಯಸ್ನಾನಕ್ಕೆ ಕ್ಷಣಗಣನೆ| ಇತ್ತ‌ ರಾ.ಹೆದ್ದಾರಿಯತ್ತ ಆವರಿಸಿದ ನೆರೆನೀರು Read More »

ಬೆಳ್ಳಾರೆ:ಭಾರೀ ಮಳೆಗೆ ಉಕ್ಕಿ ಹರಿದ ಗೌರಿ ಹೊಳೆ| ಪೆರುವಾಜೆ ಜಲದುರ್ಗಾ ದೇವಸ್ಥಾನ ಜಲಾವೃತ

ಸಮಗ್ರ ನ್ಯೂಸ್: ಮಲೆನಾಡು‌ ಹಾಗೂ ಕರಾವಳಿಯಲ್ಲಿ ಭಾರಿ ಮಳೆ‌ ಸುರಿಯುತ್ತಿದ್ದು ಬೆಳ್ಳಾರೆ ಸಮೀಪದ ಪೆರುವಾಜೆಯಲ್ಲಿ ಗೌರಿಹೊಳೆ‌ ಉಕ್ಕಿ ಹರಿದಿದೆ. ಪರಿಣಾಮವಾಗಿ ಪೆರುವಾಜೆಯ ಜಲದುರ್ಗಾ ದೇವಿ ಸನ್ನಿದಾನ ಜಲಾವೃತವಾಗಿದ್ದು, ತಗ್ಗು ಪ್ರದೇಶಗಳು ನೆರೆ ನೀರಿನಿಂದ ಆವೃತವಾಗಿವೆ.

ಬೆಳ್ಳಾರೆ:ಭಾರೀ ಮಳೆಗೆ ಉಕ್ಕಿ ಹರಿದ ಗೌರಿ ಹೊಳೆ| ಪೆರುವಾಜೆ ಜಲದುರ್ಗಾ ದೇವಸ್ಥಾನ ಜಲಾವೃತ Read More »

ಪುತ್ತೂರು ಸಮೀಪದ ಶೇಖಮಲೆ ಬಳಿ ಗುಡ್ಡ ಕುಸಿತ| ಮಾಣಿ -ಮೈಸೂರು ರಾ.ಹೆದ್ದಾರಿ ಸಂಚಾರ ಬಂದ್

ಸಮಗ್ರ ನ್ಯೂಸ್: ಮಾಣಿ-ಮೈಸೂರು ಹೆದ್ದಾರಿಯ ಪುತ್ತೂರು – ಸುಳ್ಯ ರಸ್ತೆಯ ಶೇಖಮಲೆ ಎಂಬಲ್ಲಿ ಬಳಿ ಗುಡ್ಡ ಕುಸಿತ ಸಂಭವಿಸಿದೆ. ಪರಿಣಾಮವಾಗಿಬಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಗುಡ್ಡ ಕುಸಿತದಿಂದಾಗಿ ಈಗಾಗಲೇ 4 ವಿದ್ಯುತ್‌ ಕಂಬಗಳು ನೆಲಕ್ಕುರುಳಿದೆ. ಗುಡ್ಡ ಕುಸಿತ ಮುಂದುವರಿದಿದ್ದು 2 ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಸಂಬಂಧಪಟ್ಟವರ ಕಾರ್ಯಾಚರಣೆಗೆ ಪ್ರಯಾಣಿಕರು ಕಾಯುತ್ತಿದ್ದಾರೆ. ಸದ್ಯ ಪುತ್ತೂರು ಸುಳ್ಯ ರಸ್ತೆ ಸಂಚಾರ ಬಂದ್‌ ಆಗಿದೆ ಎಂದು ತಿಳಿದುಬಂದಿದೆ.

ಪುತ್ತೂರು ಸಮೀಪದ ಶೇಖಮಲೆ ಬಳಿ ಗುಡ್ಡ ಕುಸಿತ| ಮಾಣಿ -ಮೈಸೂರು ರಾ.ಹೆದ್ದಾರಿ ಸಂಚಾರ ಬಂದ್ Read More »

ಮಂಗಳೂರು: ಟ್ಯಾಂಕರ್ ಹರಿದು ಸ್ಕೂಟಿ ಸವಾರ ದುರ್ಮರಣ

ಸಮಗ್ರ ನ್ಯೂಸ್: ಟ್ಯಾಂಕರ್ ಹರಿದು ದ್ವಿಚಕ್ರ ವಾಹನ ಸವಾರ ಸಾವಿಗೀಡಾದ ಘಟನೆ ಇಂದು ಬೆಳಿಗ್ಗೆ ನಗರದ ನಂತೂರು ಪದವು ಎಂಬಲ್ಲಿ ನಡೆದಿದೆ. ಮೃತಪಟ್ಟ ಸವಾರ ಅಡ್ಯಾರ್ ಕಣ್ಣೂರು ನಿವಾಸಿ ಎಂದು ಹೇಳಲಾಗುತ್ತಿದೆ. ನಂತೂರು ಪದವು ರಸ್ತೆಯಾಗಿ ಹೋಗುತ್ತಿದ್ದ ದ್ವಿಚಕ್ರ ವಾಹನವು ಸವಾರನ ನಿಯಂತ್ರಣ ತಪ್ಪಿ ಉರುಳಿದ್ದು, ಹಿಂದಿನಿಂದ ಚಲಿಸುತ್ತಿದ್ದ ಟ್ಯಾಂಕರ್ ಸವಾರನ ಮೇಲೆ ಹರಿಯಿತು ಎನ್ನಲಾಗಿದೆ. ಇದರಿಂದ ಸವಾರ ಸ್ಥಳದಲ್ಲೇ ಮೃತಪಟ್ಟರು ಎನ್ನಲಾಗಿದೆ. ಸಂಚಾರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮಂಗಳೂರು: ಟ್ಯಾಂಕರ್ ಹರಿದು ಸ್ಕೂಟಿ ಸವಾರ ದುರ್ಮರಣ Read More »

ಕಡಬ: ನಿಫಾ ಪೀಡಿತನ ಆರೈಕೆ ಮಾಡಿದ್ದ ಯುವಕನಿಗೆ ಅಂಟಿದ ಸೋಂಕು| ಮಹಾಮಾರಿ ಎಫೆಕ್ಟ್ ನಿಂದ ಕೋಮಾಗೆ ಜಾರಿದ ನರ್ಸ್

ಸಮಗ್ರ ನ್ಯೂಸ್: ನಿಫಾ ವೈರಸ್ ಬಾಧಿಸಿದ್ದ ರೋಗಿಗೆ ಆರೈಕೆ ನೀಡಿದ್ದ ಕಡಬದ ನರ್ಸ್ ಓರ್ವರು ನಿಫಾ ವೈರಸ್ ಗೆ ತುತ್ತಾಗಿ ಕಳೆದ ಎಂಟು ತಿಂಗಳಿನಿಂದ ಕೋಮಾದಲ್ಲಿ ದಿನ ದೂಡುತ್ತಿರುವ ಹೃದಯ ವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಡಬ ತಾಲೂಕಿನ ಐತ್ತೂರು ಗ್ರಾಮದ ಮರ್ಧಾಳ ಸಮೀಪದ ತುಂಬ್ಯ ನಿವಾಸಿ ತೋಮಸ್ ಟಿ.ಸಿ. ಎಂಬವರ ಪುತ್ರ ಟಿಟ್ಟೋ ತೋಮಸ್(24) ಇದೀಗ ಜೀವನ್ಮರಣ ಸ್ಥಿತಿಯಲ್ಲಿ ದಿನದೂಡುತ್ತಿರುವ ಯುವಕ. ಬಿಎಸ್ಸಿ ನರ್ಸಿಂಗ್ ಪದವೀಧರನಾಗಿರುವ ಟಿಟ್ಟೋ ತೋಮಸ್ ಕೇರಳದ ಕ್ಯಾಲಿಕಟ್ ನಲ್ಲಿರುವ ಇಕ್ರಾ

ಕಡಬ: ನಿಫಾ ಪೀಡಿತನ ಆರೈಕೆ ಮಾಡಿದ್ದ ಯುವಕನಿಗೆ ಅಂಟಿದ ಸೋಂಕು| ಮಹಾಮಾರಿ ಎಫೆಕ್ಟ್ ನಿಂದ ಕೋಮಾಗೆ ಜಾರಿದ ನರ್ಸ್ Read More »

ಮೂಡುಬಿದಿರೆ: ಗೀಸರ್ ನಿಂದ ಗ್ಯಾಸ್ ಸೋರಿಕೆ| ಬಾತ್ ರೂಂ ಒಳಗೆ ಯುವಕ ದಾರುಣ ಸಾವು

ಸಮಗ್ರ ನ್ಯೂಸ್: ಸ್ನಾನಕ್ಕೆಂದು ಬಾತ್ ರೂಮ್ ಒಳಗೆ ತೆರಳಿದ್ದ ಯುವಕ ಗ್ಯಾಸ್ ಗೀಸರ್ ವಿಷಾನಿಲ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟ ದಾರುಣ ಘಟನೆ ರವಿವಾರ ರಾತ್ರಿ ಮೂಡಬಿದಿರೆ ತಾಲೂಕಿನ ಕೋಟೆಬಾಗಿಲಿನಲ್ಲಿ ಸಂಭವಿಸಿದೆ. ಕೋಟೆಬಾಗಿಲಿನ ಫ್ಲ್ಯಾಟ್ ಒಂದರಲ್ಲಿ ವಾಸವಾಗಿರುವ ದಿ. ಅನ್ಸಾರ್ ಎಂಬವರ ಪುತ್ರ ಶಾರಿಕ್ (18) ಮೃತಪಟ್ಟ ಯುವಕ. ಶಾರಿಕ್ ಸ್ನಾನಕ್ಕೆಂದು ಬಾತ್ ರೂಮ್ ಗೆ ತೆರಳಿದ್ದರು. ತುಂಬಾ ಹೊತ್ತಾದರೂ ಶಾರಿಕ್ ಹೊರಬಾರದ ಕಾರಣ ಅವರ ಬಾತ್ ರೂಮ್ ಬಾಗಿಲು ಒಡೆದು ನೋಡಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ.

ಮೂಡುಬಿದಿರೆ: ಗೀಸರ್ ನಿಂದ ಗ್ಯಾಸ್ ಸೋರಿಕೆ| ಬಾತ್ ರೂಂ ಒಳಗೆ ಯುವಕ ದಾರುಣ ಸಾವು Read More »

ವಿಟ್ಲ : ಅನಾರೋಗ್ಯದಿಂದ ಬಾಲಕಿ ಸಾವು

ಸಮಗ್ರ ನ್ಯೂಸ್: ಅನಾರೋಗ್ಯದಿಂದ 14 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಇಲ್ಲಿನ ಪರ್ತಿಪ್ಪಾಡಿ ಎಂಬಲ್ಲಿ ನಡೆದಿದೆ. ಗ್ಲೀನಾ ಡಿಸೋಜಾ(14) ಮೃತ ಬಾಲಕಿ. ಪರ್ತಿಪ್ಪಾಡಿ ನಿವಾಸಿಯಾಗಿರುವ ಈಕೆ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಗ್ಲೀನಾ ಬಳಲುತ್ತಿದ್ದರು ಎನ್ನಲಾಗಿದೆ.ಮೃತಳು ತಂದೆ, ತಾಯಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾಳೆ.

ವಿಟ್ಲ : ಅನಾರೋಗ್ಯದಿಂದ ಬಾಲಕಿ ಸಾವು Read More »

ಬಂಟ್ವಾಳ: ಸಂಬಂಧಿ ಯುವತಿಯ ಗರ್ಭವತಿ ಮಾಡಿದಾತ ಅರೆಸ್ಟ್

ಸಮಗ್ರ ನ್ಯೂಸ್: ಸಂಬಂಧಿ ಯುವತಿಯನ್ನು ಅತ್ಯಾಚಾರ ಮಾಡಿ ಗರ್ಭವತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿವಾಹಿತನಾಗಿರುವ ಅಮ್ಟಾಡಿ ನಿವಾಸಿ ಗುರುಪ್ರಸಾದ್‌ ಬಂಧಿತ ಆರೋಪಿಯಾಗಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಘಟನೆಯ ಕುರಿತು ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಒಂದು ವರ್ಷದಲ್ಲಿ 2 ಬಾರಿ ಬಲವಂತವಾಗಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ಆರೋಪಿಸಲಾಗಿದೆ. ಘಟನೆಯ ಕುರಿತು ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಬಂಟ್ವಾಳ: ಸಂಬಂಧಿ ಯುವತಿಯ ಗರ್ಭವತಿ ಮಾಡಿದಾತ ಅರೆಸ್ಟ್ Read More »

ಉಪ್ಪಿನಂಗಡಿ: ತುಂಬಿ ಹರಿಯುತ್ತಿದ್ದ ನೇತ್ರಾವತಿಯಲ್ಲಿ ಕೊಚ್ಚಿ ಬಂದ ದನ| ಗೋವನ್ನು ರಕ್ಷಣೆ ಮಾಡಿದ ವಿಕೋಪ ತಂಡ

ಸಮಗ್ರ ನ್ಯೂಸ್: ನೇತ್ರಾವತಿ ನದಿಯಲ್ಲಿ ತೇಲಿ ಬರುತ್ತಿದ್ದ ದನವೊಂದನ್ನು ಉಪ್ಪಿನಂಗಡಿಯಲ್ಲಿರುವ ಗೃಹರಕ್ಷಕದಳದ ಸಿಬ್ಬಂದಿಗಳು ಹಾಗೂ ಪ್ರವಾಹ ರಕ್ಷಣಾ ತಂಡ ದೋಣಿಯ ಮೂಲಕ ನದಿ ಮಧ್ಯಕ್ಕೆ ಹೋಗಿ ರಕ್ಷಣೆ ಮಾಡಿ ದಡಕ್ಕೆ ಕರೆತಂದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ರಭಸದಿಂದ ಹರಿಯುತ್ತಿದ್ದ ಈ ನದಿಯು ಮಧ್ಯದಲ್ಲಿ ದನವೊಂದು ತೇಲಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಹಳೆಗೇಟು ಸಮೀಪದ ದಡ್ಡು ಎಂಬಲ್ಲಿರುವ ಟಯರ್ ಅಂಗಡಿಯ ಮಾಲಕ ಚಂದಪ್ಪ ಅವರು ಕೂಡಲೇ ಪ್ರವಾಹ ರಕ್ಷಣಾ ತಂಡಕ್ಕೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ತಂಡ ತಮ್ಮಲ್ಲಿರುವ ರಬ್ಬರ್ ದೋಣಿಯ

ಉಪ್ಪಿನಂಗಡಿ: ತುಂಬಿ ಹರಿಯುತ್ತಿದ್ದ ನೇತ್ರಾವತಿಯಲ್ಲಿ ಕೊಚ್ಚಿ ಬಂದ ದನ| ಗೋವನ್ನು ರಕ್ಷಣೆ ಮಾಡಿದ ವಿಕೋಪ ತಂಡ Read More »

ಉಜಿರೆ: ಬೊಲೆರೋ – ಬೈಕ್ ನಡುವೆ ಭೀಕರ ಅಪಘಾತ| ಗಾಯಾಳು ಬಾಲಕಿ ಚಿಕಿತ್ಸೆ ಫಲಿಸದೇ ಸಾವು

ಸಮಗ್ರ ನ್ಯೂಸ್: ಉಜಿರೆಯಿಂದ ಮುಂಡಾಜೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಸೀಟು ಕಾಡು ಎಂಬಲ್ಲಿ ಬೊಲೆರೋ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕಿ ಸಾವನ್ನಪ್ಪಿದ್ದು, ಬಾಲಕಿಯ ತಂದೆ ಗಂಭೀರ ಗಾಯಗೊಂಡ ಘಟನೆ ಜು.27ರಂದು ಸಂಜೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಉಜಿರೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಮಂಜ ಗ್ರಾಮದ ಕುಡೆಂಚಿ ನಿವಾಸಿ ಗುರುಪ್ರಸಾದ್ ಗೋಖಲೆಯವರು ಮಗಳಾದ ಅನರ್ಘ್ಯ(13)ಳನ್ನು ಕೂರಿಸಿಕೊಂಡು ಮುಂಡಾಜೆ ಕಡೆ ಹೋಗುತ್ತಿದ್ದಾಗ ಕುಡಿದ ಮತ್ತಿನಲ್ಲಿ ಬೊಲೆರೋ ವಾಹನ ಚಲಾಯಿಸಿಕೊಂಡು ಬರುತ್ತಿದ್ದ ಚಾಲಕನು ತನ್ನ ವಾಹನದಲ್ಲಿ

ಉಜಿರೆ: ಬೊಲೆರೋ – ಬೈಕ್ ನಡುವೆ ಭೀಕರ ಅಪಘಾತ| ಗಾಯಾಳು ಬಾಲಕಿ ಚಿಕಿತ್ಸೆ ಫಲಿಸದೇ ಸಾವು Read More »