ಮಂಗಳೂರು ಜೈಲಿನ ಮೇಲೆ ಪೋಲಿಸರ ದಾಳಿ: ಗಾಂಜಾ, ಡ್ರಗ್ಸ್, ಮೊಬೈಲ್ ಪತ್ತೆ

ಸಮಗ್ರ ನ್ಯೂಸ್: ಬೆಳ್ಳಂ ಬೆಳಗ್ಗೆ ಪೊಲೀಸರು ಮಂಗಳೂರು ಜೈಲಿನ ಮೇಲೆ ದಾಳಿ ಮಾಡಿದ್ದು, ಕಾರ್ಯಾಚರಣೆ ವೇಳೆ ಗಾಂಜಾ ಮತ್ತು ಡ್ರಗ್ಸ್  ಪತ್ತೆಯಾಗಿದೆ. ಜೊತೆಗೆ ಮೊಬೈಲ್ ಫೋನ್ಗಳು, ಡಿವೈಸ್ಗಳು ಪತ್ತೆಯಾಗಿವೆ. ಏಕಾಏಕಿ ದಾಳಿ ಮಾಡಿದ್ದರಿಂದ ನಡೆಯುತ್ತಿದ್ದ ಅಕ್ರಮ ಬಯಲಾಗಿದೆ.

. Ad Widget . Ad Widget

ಇಪ್ಪತ್ತೈದು ಮೊಬೈಲ್, ಒಂದು ಬ್ಲೂ ಟೂತ್ ಡಿವೈಸ್, ಐದು ಇಯರ್ ಫೋನ್, ಒಂದು ಪೆನ್ ಡ್ರೈವ್, ಐದು ಚಾರ್ಜರ್, ಒಂದು ಕತ್ತರಿ ಸೇರಿದಂತೆ ವಿವಿಧ ವಸ್ತುಗಳು ಸಿಕ್ಕಿದ್ದು ಪೊಲೀಸರು ಆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಜೊತೆಗೆ ಜೈಲು ಖೈದಿಗಳ ಜೊತೆಗಿದ್ದ ಗಾಂಜಾ ಮತ್ತು ಡ್ರಗ್ಸ್ ಪ್ಯಾಕೇಟ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂಜಾನೆ ನಾಲ್ಕು ಗಂಟೆಯ ವೇಳೆಗೆ ಜೈಲಿನ ಮೇಲೆ ಏಕಕಾಲದಲ್ಲಿ ನೂರೈವತ್ತಕ್ಕೂ ಅಧಿಕ ಪೊಲೀಸರು ದಾಳಿ ಮಾಡಿದರು. ಡ್ರಗ್ಸ್, ಗಾಂಜಾ ಪತ್ತೆಯ ಹಿನ್ನಲೆಯಲ್ಲಿ ತನಿಖೆಗೆ ಮಂಗಳೂರು ಪೊಲೀಸ್ ಕಮೀಷನರ್ ಅನುಪಮ್ ಅಗರ್ ವಾಲ್ ಆದೇಶ ಹೊರಡಿಸಿದ್ದಾರೆ. ಕಾರ್ಯಾಚರಣೆಯಲ್ಲಿ 2 ಡಿಸಿಪಿಗಳು, 3 ಎಸಿಪಿಗಳು, 15 ಪಿಐಗಳು ಮತ್ತು ಸುಮಾರು 150 ಸಿಬ್ಬಂದಿ ಪಾಲ್ಗೊಂಡಿದ್ದರು.

. Ad Widget . . Ad Widget . Ad Widget

Leave a Comment

Your email address will not be published. Required fields are marked *