ಕರಾವಳಿ

ಬೆಳ್ತಂಗಡಿ: ವೈಯಕ್ತಿಕ ವೀಡಿಯೋ ವೈರಲ್ ಬೆದರಿಕೆ|ಭಯಗೊಂಡ ವಿದ್ಯಾರ್ಥಿ ಆತ್ಮಹತ್ಯೆ

ಸಮಗ್ರ ನ್ಯೂಸ್: ವೈಯಕ್ತಿಕ ವೀಡಿಯೋ ವೈರಲ್ ಮಾಡೋದಾಗಿ ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದರಿಂದ ಭಯಗೊಂಡ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬೆಳ್ತಂಗಡಿಯ ಖಾಸಗಿ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಹರ್ಷಿತ್ ಮೃತ ವ್ಯಕ್ತಿ. ಈತನಿಗೆ ಇನ್ ಸ್ಟಾಗ್ರಾಂ ನಲ್ಲಿ  ಅಪರಿಚಿತ ವ್ಯಕ್ತಿ ಪರಿಚಯವಾಗಿದ್ದು, ಇವರು ಚಾಟ್ ಮಾಡುತ್ತಿದ್ದಲ್ಲದೆ  ವೀಡಿಯೋಕಾಲ್ ಮಾಡಿ ಮಾತನಾಡುತ್ತಿದ್ದರೆನ್ನಲಾಗಿದೆ.  ಈ ನಡುವೆ ಅಪರಿಚಿತ  ತನ್ನ ಬಳಿ  ನಿನ್ನ ವೈಯುಕ್ತಿಕ ವೀಡಿಯೋ ಇದೆ, ಹಣ ನೀಡದಿದ್ದಲ್ಲಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಆದರೆ ಹಣ ನೀಡಲು ಸಾಧ್ಯವಾಗದ ವಿದ್ಯಾರ್ಥಿ ಭಯಗೊಂಡು ಮನೆಯಲ್ಲಿ ಜ.24 ರಂದು ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮನೆಯವರು ಇದನ್ನು ಗಮನಿಸಿದ್ದು ಕೂಡಲೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ . ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಳ್ತಂಗಡಿ: ವೈಯಕ್ತಿಕ ವೀಡಿಯೋ ವೈರಲ್ ಬೆದರಿಕೆ|ಭಯಗೊಂಡ ವಿದ್ಯಾರ್ಥಿ ಆತ್ಮಹತ್ಯೆ Read More »

ಕಾರ್ಕಳ: ಟೈಮಿಂಗ್ ವಿಚಾರದಲ್ಲಿ ಸರ್ಕಾರಿ ಬಸ್ ಚಾಲಕ, ಖಾಸಗಿ ಬಸ್ ಕಂಡಕ್ಟರ್ ನಡುವೆ ಮಾರಾಮಾರಿ

ಸಮಗ್ರ ನ್ಯೂಸ್: ಟೈಮಿಂಗ್ ವಿಚಾರದಲ್ಲಿ ಸರ್ಕಾರಿ ಬಸ್ ಚಾಲಕ ಹಾಗೂ ಖಾಸಗಿ ಬಸ್ ನಡುವೆ ನಿರ್ವಾಹಕ ಹೊಡೆದಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದಿದೆ. ಸರಕಾರಿ ಬಸ್ ಚಾಲಕ ಮೊಹಮ್ಮದ್ ಸೈಯದ್ ಮತ್ತು ಖಾಸಗಿ ಬಸ್ ಕಂಡಕ್ಟರ್ ಟೈಮಿಂಗ್ ವಿಚಾರದಲ್ಲಿ ಮೊದಲು ಜಗಳವಾಡಿದ್ದು, ನಂತರ ಜಗಳ ತಾರಕಕ್ಕೆ ಏರಿ ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಅಲ್ಲದೇ ಸರ್ಕಾರಿ ಬಸ್ ಚಾಲಕ ಖಾಸಗಿ ಬಸ್ ನಿರ್ವಾಹಕನಿಗೆ ಚಪ್ಪಲಿ ಏಟು ನೀಡಿದ ಘಟನೆಯೂ ನಡೆಯಿತು. ಸದ್ಯ ಇಬ್ಬರೂ ಬಡಿದಾಡಿಕೊಂಡ ವಿಡಿಯೋ

ಕಾರ್ಕಳ: ಟೈಮಿಂಗ್ ವಿಚಾರದಲ್ಲಿ ಸರ್ಕಾರಿ ಬಸ್ ಚಾಲಕ, ಖಾಸಗಿ ಬಸ್ ಕಂಡಕ್ಟರ್ ನಡುವೆ ಮಾರಾಮಾರಿ Read More »

ಮಂಗಳೂರು: ಭೀಕರ ಅಪಘಾತಕ್ಕೆ ಬಲಿಯಾದ ಯುವಕ| ಇಬ್ಬರು ಗಂಭೀರ

ಸಮಗ್ರ ನ್ಯೂಸ್: ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಸಂಭವಿಸಿರುವ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು, ಇಬ್ಬರು ಯುವತಿಯರ ಸಹಿತ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ಹೊರವಲಯದ ರಾ.ಹೆ. 66 ರ ಕೊಲ್ಯ- ಅಡ್ಕ ಬಳಿ ನಡೆದಿದೆ. ಘಟನೆಯಲ್ಲಿ ಉಪ್ಪಳ ಹಿದಾಯತ್ ನಗರ ನಿವಾಸಿ ಬಷಾರ ಅಹಮ್ಮದ್ (22) ಮೃತಪಟ್ಟಿದ್ದಾರೆ. ಕೇರಳ ಕಣ್ಣೂರು ನಿವಾಸಿ ಫಾತಿಮಾ ಹಾಗೂ ರೇವತಿ ಎಂಬವರಿಗೆ ಗಂಭೀರ ಗಾಯಗಳಾಗಿವೆ. ಇನ್ನೋರ್ವ ಗಾಯಾಳುವಿನ ಗುರುತು ಪತ್ತೆಯಾಗಿಲ್ಲ. ನಾಲ್ವರಿದ್ದ ಕಾರು ಕೊಲ್ಯ- ಅಡ್ಕ ಬಳಿ

ಮಂಗಳೂರು: ಭೀಕರ ಅಪಘಾತಕ್ಕೆ ಬಲಿಯಾದ ಯುವಕ| ಇಬ್ಬರು ಗಂಭೀರ Read More »

ಮೇ.3. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ

ಸಮಗ್ರ ನ್ಯೂಸ್: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 3 ರಂದು ಸಂಜೆ 6.40 ಕ್ಕೆ ಗೋಧೂಳಿ ಲಗ್ನದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಆಯೋಜಿಸಲಾಗಿದೆ. ವಧುವಿಗೆ ಸೀರೆ, ರವಿಕೆ ಕಣ, ಮಂಗಳಸೂತ್ರ, ವರನಿಗೆ ಧೋತಿ, ಶಾಲು ನೀಡಲಾಗುವುದು.ಎರಡನೇ ಮದುವೆಗೆ ಅವಕಾಶ ಇರುವುದಿಲ್ಲ. ಮದುವೆಯ ಎಲ್ಲಾ ವೆಚ್ಚವನ್ನು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮಸ್ಥಳ ಟ್ರಸ್ಟ್ ಭರಿಸಲಿದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲು ಇಚ್ಛಿಸುವವರು ಏಪ್ರಿಲ್ 20 ರೊಳಗೆ ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ

ಮೇ.3. ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ 51ನೇ ವರ್ಷದ ಉಚಿತ ಸಾಮೂಹಿಕ ವಿವಾಹ Read More »

ಪುತ್ತೂರು: ಕಂಬಳ ಕಾರ್ಯಕ್ರಮದಲ್ಲಿ ನಟಿ ಸಾನ್ಯಾ ಅಯ್ಯರ್ ಕೈಹಿಡಿದೆಳೆದ ಅಭಿಮಾನಿ| ಮುಜುಗರಕ್ಕೊಳಗಾದ ಬಿಗ್ ಬಾಸ್ ತಾರೆ

ಸಮಗ್ರ ನ್ಯೂಸ್: ಕರಾವಳಿಯ ಪುತ್ತೂರಿನಲ್ಲಿ ನಡೆಯುತ್ತಿರುವ ಕಂಬಳದಲ್ಲಿ ಬಿಗ್​ಬಾಸ್ ಖ್ಯಾತಿಯ ನಟಿ ಸಾನ್ಯಾ ಐಯ್ಯರ್ ಅವರ ಕೈ ಹಿಡಿದು ಎಳೆದ ಘಟನೆ ನಡೆದಿದೆ. ನಟಿ ಭಾಷಣ ಮಾಡುತ್ತಿದ್ದ ಸಮಯದಲ್ಲಿ ಐ ಲವ್ ಯೂ ಎಂದು ಹೇಳಿ ಕಿರುಚುತ್ತಿದ್ದ ಅಭಿಮಾನಿ ಬಳಿಕ ವೇದಿಕೆಯಿಂದ ಇಳಿದ ನಟಿಯ ಕೈ ಹಿಡಿದಿದ್ದಾನೆ. ಈ ದಿಢೀರ್ ಘಟನೆಯಿಂದ ನಟಿ ಮುಜುಗರಕ್ಕೊಳಗಾಗಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅದ್ಧೂರಿ ಕಂಬಳ ನಡೆಯುತ್ತಿದೆ. ಜಾತ್ರೆಯಂತೆ ಅದ್ಧೂರಿಯಾಗಿ ನಡೆಯುತ್ತಿರುವ ಈ ಕಾರ್ಯಕ್ರಮವನ್ನು ವೀಕ್ಷಿಸಲು ನೆರೆಯ ಕೇರಳದಿಂದಲೂ ಜನರು ಹೆಚ್ಚಿನ

ಪುತ್ತೂರು: ಕಂಬಳ ಕಾರ್ಯಕ್ರಮದಲ್ಲಿ ನಟಿ ಸಾನ್ಯಾ ಅಯ್ಯರ್ ಕೈಹಿಡಿದೆಳೆದ ಅಭಿಮಾನಿ| ಮುಜುಗರಕ್ಕೊಳಗಾದ ಬಿಗ್ ಬಾಸ್ ತಾರೆ Read More »

ಕಾರ್ಕಳ: ಆಕಾಶದೆತ್ತರಕ್ಕೆ ಕಾಣಿಸಿಕೊಂಡ ಸುಳಿಗಾಳಿ

ಸಮಗ್ರ ನ್ಯೂಸ್: ಕಾರ್ಕಳ ನಗರದ ಗಾಂಧಿ ಮೈದಾನದಲ್ಲಿ ಆಕಾಶದೆತ್ತರಕ್ಕೆ ಸುಳಿಗಾಳಿ ಕಾಣಿಸಿಕೊಂಡು ವಿಸ್ಮಯ ಸೃಷ್ಠಿಸಿತು. ಕಾರ್ಕಳ ಪಶ್ಚಿಮ ಘಟ್ಟದ ತಪ್ಪಲಿನ ಪ್ರದೇಶವಾಗಿದ್ದು ಮೂಡುಬಿದರೆ, ಅಜೆಕಾರು, ಬೆಳಪು ಪರಿಸರದಲ್ಲೂ ಹಿಂದೆ ಸುಳಿಗಾಳಿ ಕಾಣಿಸಿಕೊಂಡಿತ್ತು ಎಂದು ಹೇಳಲಾಗಿದೆ. ಇದನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು. ಸುಳಿಯಾಕಾರದಲ್ಲಿ ಧೂಳು ಹಾಗೂ ಗಾಳಿ ಮುಗಿಲೆತ್ತರಕ್ಕೆ ಚಿಮ್ಮಿತು. ಮೈದಾನದಲ್ಲಿದ್ದ ಕಸ, ಗಿಡಗಂಟಿಯನ್ನೆಲ್ಲ ಮೇಲಕೆತ್ತಿ ತೇಲಾಡಿತು. ಕೆಲ ನಿಮಿಷಗಳ ಕಾಲ ಜನರು ಸುಳಿಗಾಳಿಯ ವೀಕ್ಷಿಸಿದರು. ಸುಳಿ ಗಾಳಿಯ ವೀಡಿಯೋ ವೈರಲ್ ಆಗಿದೆ.

ಕಾರ್ಕಳ: ಆಕಾಶದೆತ್ತರಕ್ಕೆ ಕಾಣಿಸಿಕೊಂಡ ಸುಳಿಗಾಳಿ Read More »

ಸುಳ್ಯ: ಐಸಿಯು ನಲ್ಲಿದೆ ಅಂಬ್ಯುಲೆನ್ಸ್! ಸೂಕ್ತ ಚಿಕಿತ್ಸೆ ನೀಡಿ

ಸಮಗ್ರ ನ್ಯೂಸ್: ಸಾರ್ವಜನಿಕ ಸೇವೆಗೆಂದು ಮೀಸಲಾಗಿರುವ ಅಂಬ್ಯುಲೆನ್ಸ್ ಒಂದು ಸರಿಯಾದ ನಿರ್ವಹಣೆ ಇಲ್ಲದೆ ಪಾಳುಬಿದ್ದಿರುವ ಘಟನೆ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದಲ್ಲಿ ಕಂಡುಬರುತ್ತಿದೆ. ತುರ್ತು ಸಂದರ್ಭದಲ್ಲಿ ಸಾರ್ವಜನಿಕರಿಗೆ ಉಪಯೋಗಕ್ಕೆ ಲಭಿಸಲೆಂದು ಕೆಲವರ್ಷಗಳ ಹಿಂದೆ ಇಲ್ಲಿನ ಪಂಚಾಯತ್ ಗೆ ದಾನಿಗಳ ಸಹಾಯದಿಂದ ಅಂಬ್ಯುಲೆನ್ಸ್ ಒದಗಿಸಲಾಗಿತ್ತು. ಆದರೆ ನಿರ್ವಹಣೆ ಕೊರತೆ ಮತ್ತು ಸರಿಯಾದ ವ್ಯವಸ್ಥೆಗಳಿಲ್ಲದೆ ಅಂಬ್ಯುಲೆನ್ಸ್ ತುರ್ತು ಪರಿಸ್ಥಿತಿಯಲ್ಲಿದೆ. ಇದುವರೆಗೂ ಈ ಅಂಬ್ಯುಲೆನ್ಸ್ ನಿಂದ ಯಾರಿಗೂ ಉಪಯೋಗ ಲಭಿಸದಿದ್ದು, ಸದಾಕಾಲವೂ ಪಂಕ್ಚರ್ ಸ್ಥಿತಿಯಲ್ಲಿ ತುಕ್ಕುಹಿಡಿಯುತ್ತಿದೆ. ಸಂಬಂಧಪಟ್ಟವರು ಇದಕ್ಕೆ ಸೂಕ್ತ ಚಿಕಿತ್ಸೆ

ಸುಳ್ಯ: ಐಸಿಯು ನಲ್ಲಿದೆ ಅಂಬ್ಯುಲೆನ್ಸ್! ಸೂಕ್ತ ಚಿಕಿತ್ಸೆ ನೀಡಿ Read More »

ಪ್ರವೀಣ್ ನೆಟ್ಟಾರು ಹಂತಕರು ಸೌದಿಯಲ್ಲಿ ಪತ್ತೆ!? ಕಾರ್ಯಾಚರಣೆ ಚುರುಕು

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಅರೋಪಿಗಳು ಸೌದಿ ಅರೇಬಿಯಾದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದ ತನಿಖೆಯನ್ನು ಎನ್ ಐಎ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ. ಇನ್ನಿಬ್ಬರು ಪ್ರಮುಖ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಈ ಮಧ್ಯೆ ತಲೆಮರೆಸಿಕೊಂಡಿರುವ ಇಬ್ಬರು ಪ್ರಮುಖ ಆರೋಪಿಗಳಾದ ಶರೀಫ್ ಹಾಗೂ ಕೆ.ಎ.ಮಸೂದ್ ಬಗ್ಗೆ ಸುಳಿವು ನೀಡಿದರೆ 10 ಲಕ್ಷ ನಗದು ಬಹುಮಾನ ನೀಡುವುದಾಗಿ ಎನ್ ಐ ಎ ಅಧಿಕಾರಿಗಳು

ಪ್ರವೀಣ್ ನೆಟ್ಟಾರು ಹಂತಕರು ಸೌದಿಯಲ್ಲಿ ಪತ್ತೆ!? ಕಾರ್ಯಾಚರಣೆ ಚುರುಕು Read More »

ಇಂದಿನಿಂದ ಎರಡು ದಿನ ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ| ಈ ಬಾರಿ ಇರಲಿದೆ ಹಲವು ಆಕರ್ಷಣೆ!!

ಸಮಗ್ರ ನ್ಯೂಸ್: ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಜ. 28 ಹಾಗೂ 29ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿದೆ. ಜ. 28 ಶನಿವಾರ ಬೆಳಗ್ಗೆ 10.35 ಕ್ಕೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಕಂಬಳಕ್ಕೆ ಚಾಲನೆ ನೀಡಲಿದ್ದು, ಬಳಿಕ ನಡೆಯುವ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈ ವಹಿಸುವರು. ಮುಖ್ಯ ಅತಿಥಿಗಳಾಗಿ ಹಲವಾರು ಧಾರ್ಮಿಕ, ಸಾಮಾಜಿಕ,

ಇಂದಿನಿಂದ ಎರಡು ದಿನ ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ| ಈ ಬಾರಿ ಇರಲಿದೆ ಹಲವು ಆಕರ್ಷಣೆ!! Read More »

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ|ಸುಳ್ಯದಲ್ಲಿ ನಾಲ್ಕು ಹಿಂದು ಯುವಕರನ್ನು ಗುರಿಯಾಗಿರಿಸಿ ಹತ್ಯೆ|ಇಂಚಿಂಚು ಮಾಹಿತಿ ಕಲೆ ಹಾಕಿದ ಎನ್ಐಎ

ಸಮಗ್ರ ನ್ಯೂಸ್ : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಇಂಚಿಂಚು ಮಾಹಿತಿಯನ್ನು ಎನ್ಐಎ ಅಧಿಕಾರಿಗಳು ಕಲೆಹಾಕಿದ್ದು, ಬೆಂಗಳೂರಿನ ಕೋರ್ಟಿಗೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ಹತ್ಯೆಗಾಗಿ ಪಿಎಫ್ಐ ಸಂಘಟನೆ ನಡೆಸಿದ್ದ ಭಯಾನಕ ಸಂಚನ್ನು ಉಲ್ಲೇಖ ಮಾಡಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಅದೇನೋ ಕ್ರಿಯೆಗೆ ಪ್ರತಿಕ್ರಿಯೆ ಅನ್ನೋ ರೀತಿ ಮಾಡಿದ್ದಾರೆ ಅಂದ್ಕೊಂಡರೆ ತಪ್ಪಾಗುತ್ತದೆ. ಎಲ್ಲವನ್ನೂ ಕರಾರುವಾಕ್ ಮಾಡಿದ್ದಾರೆ, ಅಷ್ಟೇ ಅಲ್ಲ, ಸುಳ್ಯದಲ್ಲಿ ಪ್ರವೀಣ್ ಸೇರಿದಂತೆ ನಾಲ್ಕು ಹಿಂದು ಯುವಕರನ್ನು ಗುರಿಯಾಗಿರಿಸಿ ಹತ್ಯೆಗೆ ಸಂಚು ಹೆಣೆದಿದ್ದರು. ಇದನ್ನು

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ|ಸುಳ್ಯದಲ್ಲಿ ನಾಲ್ಕು ಹಿಂದು ಯುವಕರನ್ನು ಗುರಿಯಾಗಿರಿಸಿ ಹತ್ಯೆ|ಇಂಚಿಂಚು ಮಾಹಿತಿ ಕಲೆ ಹಾಕಿದ ಎನ್ಐಎ Read More »