ಬೆಳ್ತಂಗಡಿ: ವೈಯಕ್ತಿಕ ವೀಡಿಯೋ ವೈರಲ್ ಬೆದರಿಕೆ|ಭಯಗೊಂಡ ವಿದ್ಯಾರ್ಥಿ ಆತ್ಮಹತ್ಯೆ

ಸಮಗ್ರ ನ್ಯೂಸ್: ವೈಯಕ್ತಿಕ ವೀಡಿಯೋ ವೈರಲ್ ಮಾಡೋದಾಗಿ ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದರಿಂದ ಭಯಗೊಂಡ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

. Ad Widget . Ad Widget . Ad Widget .

ಬೆಳ್ತಂಗಡಿಯ ಖಾಸಗಿ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಹರ್ಷಿತ್ ಮೃತ ವ್ಯಕ್ತಿ. ಈತನಿಗೆ ಇನ್ ಸ್ಟಾಗ್ರಾಂ ನಲ್ಲಿ  ಅಪರಿಚಿತ ವ್ಯಕ್ತಿ ಪರಿಚಯವಾಗಿದ್ದು, ಇವರು ಚಾಟ್ ಮಾಡುತ್ತಿದ್ದಲ್ಲದೆ  ವೀಡಿಯೋಕಾಲ್ ಮಾಡಿ ಮಾತನಾಡುತ್ತಿದ್ದರೆನ್ನಲಾಗಿದೆ.  ಈ ನಡುವೆ ಅಪರಿಚಿತ  ತನ್ನ ಬಳಿ  ನಿನ್ನ ವೈಯುಕ್ತಿಕ ವೀಡಿಯೋ ಇದೆ, ಹಣ ನೀಡದಿದ್ದಲ್ಲಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿದ್ದಾನೆ. ಆದರೆ ಹಣ ನೀಡಲು ಸಾಧ್ಯವಾಗದ ವಿದ್ಯಾರ್ಥಿ ಭಯಗೊಂಡು ಮನೆಯಲ್ಲಿ ಜ.24 ರಂದು ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಮನೆಯವರು ಇದನ್ನು ಗಮನಿಸಿದ್ದು ಕೂಡಲೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ . ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Leave a Comment

Your email address will not be published. Required fields are marked *