ಕರಾವಳಿ

ಸುಳ್ಯ: ವಿವಾಹಿತ ಮಹಿಳೆಯೊಂದಿಗೆ ಸಂಬಂಧ| ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ

ಸಮಗ್ರ ನ್ಯೂಸ್: ಬಿಜೆಪಿ ಮುಖಂಡನೊಬ್ಬ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಕಾರಿನಲ್ಲಿ ಹೋಗುತ್ತಿದ್ದಾಗ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಘಟನೆ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ನಡೆದಿದೆ. ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹಾಗೂ ಪುಣಚ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಹರಿಪ್ರಸಾದ್‌ ಯಾದವ್‌‌ನನ್ನು ಮಹಿಳೆಯ ಪತಿ ಧರ್ಮದೇಟು ನೀಡಿದ್ದು, ಈ ವೇಳೆ ಆತ ಮಹಿಳೆ ಹಾಗೂ ಕಾರನ್ನು ಬಿಟ್ಟು ಪಕ್ಕದ ಕಾಡಿನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಮಹಿಳೆಯ ಪತಿ ಬಿಜೆಪಿ ಮುಖಂಡ ಹರಿಪ್ರಸಾದ್‌ ಯಾದವ್‌‌ ವಿರುದ್ಧ

ಸುಳ್ಯ: ವಿವಾಹಿತ ಮಹಿಳೆಯೊಂದಿಗೆ ಸಂಬಂಧ| ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ Read More »

ಚೇತರಿಕೆಯತ್ತ ಸಾಗಿದ ಅಡಿಕೆ ಧಾರಣೆ| ಬೆಳೆಗಾರರಲ್ಲಿ ಮಂದಹಾಸ

ಸಮಗ್ರ ನ್ಯೂಸ್: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ ಕಂಡಿದೆ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಏರಿಳಿತದಿಂದಾಗಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಈ ವಾರದ ಆರಂಭದಲ್ಲಿ ರಾಜ್ಯದ ಕೆಲವು ಮಾರುಕಟ್ಟೆಯ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ. ಆದರೆ ಫೆಬ್ರವರಿ 1 ರಂದು ರಾಜ್ಯದ ಹೆಚ್ಚಿನ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಭರ್ಜರಿ ಏರಿಕೆ ಕಂಡಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಹಾವು ಏಣಿ ಆಟದಂತೆ ಆಗಿದೆ. ಕಳೆದ ಮೂರು

ಚೇತರಿಕೆಯತ್ತ ಸಾಗಿದ ಅಡಿಕೆ ಧಾರಣೆ| ಬೆಳೆಗಾರರಲ್ಲಿ ಮಂದಹಾಸ Read More »

ಮಂಗಳೂರು ಹೈಪ್ರೊಪೈಲ್ ಗಾಂಜಾ ದಂಧೆ| ಬಂಧಿತ ವೈದ್ಯರು, ವಿದ್ಯಾರ್ಥಿಗಳಿಗೆ ಜಾಮೀನು

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಹೈಪ್ರೊಫೈಲ್ ಗಾಂಜಾ ದಂಧೆ ಪ್ರಕರಣ ಭಾರೀ ಸದ್ದು ಮಾಡಿದ್ದು, ಈ ಕೇಸ್‌ನಲ್ಲಿ ಭಾಗಿಯಾಗಿದ್ದ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಬಂಧಿತರಿಗೆ ಜಾಮೀನು ಮಂಜೂರಾಗಿದೆ. ಒಟ್ಟು ನಾಲ್ವರು ವೈದ್ಯರು ಹಾಗೂ 19 ವೈದ್ಯಕೀಯ ವಿದ್ಯಾರ್ಥಿಗಳಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ವೈದ್ಯರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 24 ಮಂದಿಯನ್ನು ಬಂಧಿಸಲಾಗಿತ್ತು. ಈ ಪೈಕಿ ವೈದ್ಯಕೀಯ (ಬಿಡಿಎಸ್‌) ವಿದ್ಯಾರ್ಥಿ ಸಾಗರೋತ್ತರ ಭಾರತೀಯ ಪ್ರಜೆ ಯುನೈಟೆಡ್‌ ಕಿಂಗ್‌ಡಮ್‌ನ ನೀಲ್‌ ಕಿಶೋರಿಲಾಲ್‌ ರಾಮ್‌

ಮಂಗಳೂರು ಹೈಪ್ರೊಪೈಲ್ ಗಾಂಜಾ ದಂಧೆ| ಬಂಧಿತ ವೈದ್ಯರು, ವಿದ್ಯಾರ್ಥಿಗಳಿಗೆ ಜಾಮೀನು Read More »

ಸುಳ್ಯ: 10.5 ಕೋಟಿ ರೂ. ವೆಚ್ಚದ ಕಳಪೆ ಕಾಮಗಾರಿ| ಅಧಿಕಾರಿಗಳ ಚಳಿ ಬಿಡಿಸಿದ ಕೋಲ್ಚಾರ್ ಗ್ರಾಮಸ್ಥರು

ಸಮಗ್ರ ನ್ಯೂಸ್:‌‌ 10.5 ಕೋಟಿ ಮೊತ್ತದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಸುಳ್ಯ ತಾಲೂಕಿನ ಕೊಲ್ಚಾರ್ ನಲ್ಲಿ ನಡೆದಿದೆ. ತಾಲೂಕಿನ ಆಲೆಟ್ಟಿ ಗ್ರಾಮದಲ್ಲಿ 4 ವರ್ಷದ ಹಿಂದೆ ಕೊಲ್ಚಾರ್ – ಕನ್ನಡಿ ತೋಡು – ಬಂದಡ್ಕ ಅಂತರಾಜ್ಯ ಸಂಪರ್ಕ‌ ರಸ್ತೆಯ ಕಲ್ಲೆಂಬಿ ಯಿಂದ ಕರ್ನಾಟಕ ಗಡಿ ಕನ್ನಡಿತೋಡು ತನಕ ಸುಮಾರು 10.5 ಕೋಟಿ ಮೊತ್ತದ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿ ಆಗಿದೆ. ಕಾಮಗಾರಿ ಕಳಪೆ ಎಂದು

ಸುಳ್ಯ: 10.5 ಕೋಟಿ ರೂ. ವೆಚ್ಚದ ಕಳಪೆ ಕಾಮಗಾರಿ| ಅಧಿಕಾರಿಗಳ ಚಳಿ ಬಿಡಿಸಿದ ಕೋಲ್ಚಾರ್ ಗ್ರಾಮಸ್ಥರು Read More »

ರಾಜ್ಯದಲ್ಲಿ ಎರಡು ದಿನ ಮಳೆ ಮುನ್ಸೂಚನೆ| ಈ ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ

ಸಮಗ್ರ ನ್ಯೂಸ್: ಇಂದಿನಿಂದ ಎರಡು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೈಸೂರು, ಮಂಡ್ಯ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದ್ದು, ಬೆಂಗಳೂರಿನ ಕನಿಷ್ಠ ತಾಪಮಾನವು 17 ಡಿಗ್ರಿ ಸೆಲ್ಸಿಯಸ್‌ ಇರಲಿದೆ. ಅಲ್ಲದೆ, ಕರ್ನಾಟಕದ ದಕ್ಷಿಣ ಒಳನಾಡಿನ ಪ್ರದೇಶಗಳಲ್ಲಿ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಫೆಬ್ರವರಿ 1

ರಾಜ್ಯದಲ್ಲಿ ಎರಡು ದಿನ ಮಳೆ ಮುನ್ಸೂಚನೆ| ಈ ಜಿಲ್ಲೆಗಳಲ್ಲಿ ಮಳೆ ನಿರೀಕ್ಷೆ Read More »

ಪುತ್ತೂರು: ಕಂಬಳದಲ್ಲಿ ಹುಡುಗಿಯರ ಪೋಟೋ ತೆಗೆಯುತ್ತಿದ್ದಾತ ಪೊಲೀಸ್ ವಶಕ್ಕೆ

ಸಮಗ್ರ ನ್ಯೂಸ್: ಪುತ್ತೂರಿನ ಕೋಟಿ ಚೆನ್ನಯ ಕಂಬಳ ಗದ್ದೆ ಪರಿಸರದಲ್ಲಿ ಯುವಕನೋರ್ವ ಯುವತಿಯ ಫೋಟೋ ತೆಗೆಯುತ್ತಿದ್ದ ವಿಚಾರವಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ಯುವಕನನ್ನು ಪೊಲೀಸರಿಗೊಪ್ಪಿಸಿದ ಮತ್ತು ವಿಚಾರಣೆ ವೇಳೆ ಆತನ ಮೊಬೈಲ್‌ನಲ್ಲಿ ಅನೇಕ ಯುವತಿಯರ ಪೊಟೋ ಇರುವುದು ಬೆಳಕಿಗೆ ಬಂದಿದೆ. ಕುರಿಯ ಮೂಲದ ಯುವಕ ಎಂದು ವಿಚಾರಣೆ ವೇಳೆ ತಿಳಿದು ಬಂದಿದ್ದು ಈತ ಕಂಬಳದ ಪರಿಸರದಲ್ಲಿ ಯುವತಿಯರ ಫೋಟೋ ತೆಗೆಯುತ್ತಿದ್ದ. ಈ ಸಂದರ್ಭ ಓರ್ವ ಯುವತಿ ಇದನ್ನು ಗಮನಿಸಿ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದಳು. ಕಾರ್ಯಕರ್ತರು

ಪುತ್ತೂರು: ಕಂಬಳದಲ್ಲಿ ಹುಡುಗಿಯರ ಪೋಟೋ ತೆಗೆಯುತ್ತಿದ್ದಾತ ಪೊಲೀಸ್ ವಶಕ್ಕೆ Read More »

ಸುಳ್ಯ: ಉರೂಸ್ ಮುಗಿದರೂ ವಿವೇಚನಾ ರಜೆ ಮುಂದುವರಿಕೆ| ಎಸ್ಡಿಎಂಸಿ ಅಧ್ಯಕ್ಷರ ನಿರ್ಧಾರಕ್ಕೆ ಪೋಷಕರು ಗರಂ

ಸಮಗ್ರ ನ್ಯೂಸ್: ಉರೂಸ್ ಕಾರ್ಯಕ್ರಮ ಮುಗಿದರೂ ಶಾಲಾ ವಿವೇಚನಾ ರಜೆಯನ್ನು ಮುಂದುವರಿಸಿರುವ ಎಸ್ಡಿಎಂಸಿ ಅಧ್ಯಕ್ಷರ ನಿರ್ಧಾರಕ್ಕೆ ಪೋಷಕರು ಗರಂಗೊಂಡಿರುವ ಘಟನೆ ಸುಳ್ಯ ತಾಲೂಕಿನ ಅಜ್ಜಾವರದಲ್ಲಿ ನಡೆದಿದೆ. ಇಲ್ಲಿನ ಅಜ್ಜಾವರ ಮಾಪಳಡ್ಕ ದರ್ಗಾದಲ್ಲಿ ವರ್ಷಂಪ್ರತಿಯಂತೆ ಈ ಭಾರಿಯು ಅದ್ದೂರಿಯಾಗಿ ಉರುಸ್ ಕಾರ್ಯಕ್ರಮ ಜರಗಿತು. ಉರುಸ್ ಕಾರ್ಯಕ್ರಮ ಮುಗಿದ ಬಳಿಕ ಇತ್ತ ಸರಕಾರಿ ಶಾಲೆಗೆ ಇಂದು ಕೂಡಾ ವಿವೇಚನಾ ರಜೆ ಘೋಷಣೆ ಮಾಡಿರುವುದು ತೀವ್ರ ರೀತಿಯ ಚರ್ಚೆಗೆ ಗ್ರಾಸವಾಗಿದೆ . ಇತಿಹಾಸ ಪ್ರಸಿದ್ದ ಮಾಪಳಡ್ಕ ಮುಖಾಂ ಊರುಸ್ ಕಾರ್ಯಕ್ರಮವು ಮುಗಿದಿದ್ದರೂ

ಸುಳ್ಯ: ಉರೂಸ್ ಮುಗಿದರೂ ವಿವೇಚನಾ ರಜೆ ಮುಂದುವರಿಕೆ| ಎಸ್ಡಿಎಂಸಿ ಅಧ್ಯಕ್ಷರ ನಿರ್ಧಾರಕ್ಕೆ ಪೋಷಕರು ಗರಂ Read More »

ಫೆ. 11ಕ್ಕೆ ಪುತ್ತೂರಿಗೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ

ಸಮಗ್ರ ನ್ಯೂಸ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ. 11ರಂದು ಆಗಮಿಸಲಿದ್ದು, ಪುತ್ತೂರಿನ ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ತೆಂಕಿಲ ವಿವೇಕಾನಂದ ಶಿಕ್ಷಣ ಸಂಸ್ಥೆಗಳ ಮೈದಾನದಲ್ಲಿ ಅಪರಾಹ್ನ 2ರಿಂದ 4.30ರ ತನಕ ಬೃಹತ್ ಸಮಾವೇಶ ನಡೆಯಲಿದೆ. ಕ್ಯಾಂಪ್ಕೋ ಸುವರ್ಣ ಮಹೋತ್ಸವ ಸಂಬಂಧಿಸಿದ ವಿವಿಧ ಯೋಜನೆಗಳು ಹಾಗೂ ಇತರ ಕಾರ್ಯಕ್ರಮಗಳಿಗೆ ಅಮಿತ್ ಶಾ ಅವರು ಚಾಲನೆ ನೀಡಲಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಹಿತ ಹಲವು ಸಚಿವರು, ಬಿಜೆಪಿ ನಾಯಕರು, ಮುಂಬರುವ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳು ಸೇರಿದಂತೆ

ಫೆ. 11ಕ್ಕೆ ಪುತ್ತೂರಿಗೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ Read More »

ಪುತ್ತೂರು: ಒಬ್ಬಳಿಗಾಗಿ ಇಬ್ಬರು ಹೊಡೆದಾಟ| 9 ಮಂದಿ ವಿರುದ್ಧ ಕೇಸ್

ಸಮಗ್ರ ನ್ಯೂಸ್: ಯುವಕನೋರ್ವ ತನ್ನ ಪ್ರಿಯತಮೆ ಜೊತೆ ಮಾತನಾಡುತ್ತಿರುವಾಗ ಆಕೆಯ ಮಾಜಿ ಪ್ರಿಯಕರ ಸ್ನೇಹಿತರೊಂದಿಗೆ ಬಂದು ಹಲ್ಲೆ ನಡೆಸಿದ್ದಾನೆಂದು ಆರೋಪಿಸಿ ಯುವಕನೋರ್ವ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾನೆ. ಮಂಗಳೂರು ಕೋಡಿಕಲ್ ನಿವಾಸಿ ಸಾಗರ್ (23) ನೀಡಿದ ದೂರಿನ ಮೇರೆಗೆ ಕೌಶಿಕ್, ಯಜ್ಞೇಶ್, ಕೇಶವ, ಸೃಜನ್, ವಿನೀತ್, ಲತೇಶ್, ಮನ್ವಿತ್, ಮೋಹಿತ್, ಹೇಮಂತ್ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜ.29 ರಂದು ಮಧ್ಯಾಹ್ನ ಸಾಗರ್ ಕಂಬಳಗದ್ದೆಯಲ್ಲಿರುವ ವೇಳೆ ಆತನ ಪ್ರೇಯಸಿ ಕೂಡ ಇದ್ದು, ಅವಳಲ್ಲಿ

ಪುತ್ತೂರು: ಒಬ್ಬಳಿಗಾಗಿ ಇಬ್ಬರು ಹೊಡೆದಾಟ| 9 ಮಂದಿ ವಿರುದ್ಧ ಕೇಸ್ Read More »

ಮಂಗಳೂರು: ಅಪಘಾತ- ನಟ, ರಂಗಕರ್ಮಿ ಅರವಿಂದ ಬೋಳಾರ್ ಗಂಭೀರ

ಸಮಗ್ರ ನ್ಯೂಸ್: ತುಳು ರಂಗಭೂಮಿ, ಚಿತ್ರರಂಗದ ಪ್ರಸಿದ್ಧ ಹಾಸ್ಯನಟ ತುಳುನಾಡ ಮಾಣಿಕ್ಯ ಖ್ಯಾತಿಯ ಅರವಿಂದ್ ಬೋಳಾರ್‌ರವರ ವಾಹನ ಸ್ಕಿಡ್ ಆಗಿ ಅಪಘಾತಕ್ಕೊಳಗಾದ ಘಟನೆ ಮಂಗಳೂರು ಪಂಪ್‌ವೆಲ್ ಬಳಿ ಜ.30 ರಂದು ಸಂಭವಿಸಿದೆ. ಅವರು ಚಲಾಯಿಸುತ್ತಿದ್ದ ಆಕ್ಟೀವಾ ಹೊಂಡಾ ಸ್ಕಿಡ್ ಹೊಡೆದು ಅಪಘಾತಕ್ಕೊಳಗಾಗಿದೆ. ಚಿಕಿತ್ಸೆಗಾಗಿ ಎನಪೋಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆಪರೇಷನ್‌ ನಡೆಸುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ಮೂಲಗಳಿಂದ ತಿಳಿದು ಬಂದಿದೆ.

ಮಂಗಳೂರು: ಅಪಘಾತ- ನಟ, ರಂಗಕರ್ಮಿ ಅರವಿಂದ ಬೋಳಾರ್ ಗಂಭೀರ Read More »