ಸಮಗ್ರ ನ್ಯೂಸ್: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ ಕಂಡಿದೆ. ಕಳೆದ ವಾರ ಅಡಿಕೆ ಬೆಲೆಯಲ್ಲಿ ಏರಿಳಿತದಿಂದಾಗಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಈ ವಾರದ ಆರಂಭದಲ್ಲಿ ರಾಜ್ಯದ ಕೆಲವು ಮಾರುಕಟ್ಟೆಯ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದೆ.
ಆದರೆ ಫೆಬ್ರವರಿ 1 ರಂದು ರಾಜ್ಯದ ಹೆಚ್ಚಿನ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಭರ್ಜರಿ ಏರಿಕೆ ಕಂಡಿದ್ದು, ರೈತರ ಮೊಗದಲ್ಲಿ ಸಂತಸ ತಂದಿದೆ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಹಾವು ಏಣಿ ಆಟದಂತೆ ಆಗಿದೆ. ಕಳೆದ ಮೂರು ನಾಲ್ಕು ದಿನದಿಂದ ಹೆಚ್ಚಿನ ಅಡಿಕೆ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿದ್ದ ಬೆಲೆ, ಫೆಬ್ರವರಿ ಆರಂಭದಲ್ಲಿ ಏರಿಕೆ ಕಂಡಿದ್ದು ಬೆಳೆಗಾರರಿಗೆ ಸಂತಸವನ್ನು ತಂದಿದೆ.
ರಾಜ್ಯದ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ ಬೆಲೆಯಲ್ಲಿ ಸದ್ಯ ಭರ್ಜರಿ ಏರಿಕೆ ಕಂಡಿದ್ದು, ರೈತರಿಗೆ ನೆಮ್ಮದಿ ತಂದಿದೆ. ವರದಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇದ್ದರಿಂದಾಗಿ ಅಡಿಕೆ ಬೆಳೆಗಾರರು ಇನ್ನಷ್ಟು ನಿರೀಕ್ಷೆಯಲ್ಲಿ ಕಾದಿದ್ದಾರೆ.






