ಕರಾವಳಿ

ಮಂಗಳೂರು: ಲಾಡ್ಜ್ ನಲ್ಲಿ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ

ಸಮಗ್ರ ನ್ಯೂಸ್: ಮಂಗಳೂರಿನ ಲಾಡ್ಜ್ ವೊಂದರಲ್ಲಿ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಮೃತದೇಹಗಳು ಪತ್ತೆಯಾಗಿವೆ. ಕೇರಳ ಮೂಲದ ರವೀಂದ್ರ (55) ಹಾಗೂ ಸುಧಾ (50) ಆತ್ಮಹತ್ಯೆಗೈದ ದಂಪತಿ ಎಂದು ತಿಳಿದುಬಂದಿದೆ. ಇವರು ಕೇರಳದ ತಳೀಪರಂಬು ನಿವಾಸಿ ಎಂದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.ಎರಡು ದಿನಗಳ ಹಿಂದೆ ದಂಪತಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಬಟ್ಟೆ ವ್ಯಾಪಾರಿಗಳಾದ ಈ ದಂಪತಿಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಮಂಗಳೂರು: ಲಾಡ್ಜ್ ನಲ್ಲಿ ದಂಪತಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆ Read More »

ಮಂಗಳೂರು: ಫುಡ್ ಪಾಯ್ಸನ್ ಪ್ರಕರಣ| ನರ್ಸಿಂಗ್ ಕಾಲೇಜು ಮತ್ತು ಆಡಳಿತ ಮಂಡಳಿ ವಿರುದ್ಧ ಎಫ್ಐಆರ್

ಸಮಗ್ರ ನ್ಯೂಸ್: ಮಂಗಳೂರು ನಗರದ ಶಕ್ತಿನಗರದ ಖಾಸಗಿ ನರ್ಸಿಂಗ್ ಸಂಸ್ಥೆಯ ಹಾಸ್ಟೆಲ್‌ನಲ್ಲಿ ಕಲುಷಿತ ಆಹಾರ ಸೇವನೆಯಿಂದ 137 ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿರುವ ಪ್ರಕರಣದ ಕುರಿತು ಕದ್ರಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಜಿಲ್ಲಾ ಆರೋಗ್ಯ ಸರ್ವೇಕ್ಷಣಾ ಅಧಿಕಾರಿ ಜಗದೀಶ್ ಅವರು ನರ್ಸಿಂಗ್ ಕಾಲೇಜು ಮತ್ತು ಆಡಳಿತ ಮಂಡಳಿ ವಿರುದ್ದ ನಿರ್ಲಕ್ಷ್ಯತೆಯ ಕುರಿತು ದೂರು ನೀಡಿದ್ದು ಅದರಂತೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ. ಹಾಸ್ಟೆಲ್ ನಲ್ಲಿ ಆಹಾರ ಸೇವಿಸಿದ್ದ ಕೆಲವು ವಿದ್ಯಾರ್ಥಿನಿಯರಲ್ಲಿ ಭಾನುವಾರವೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತ್ತು.

ಮಂಗಳೂರು: ಫುಡ್ ಪಾಯ್ಸನ್ ಪ್ರಕರಣ| ನರ್ಸಿಂಗ್ ಕಾಲೇಜು ಮತ್ತು ಆಡಳಿತ ಮಂಡಳಿ ವಿರುದ್ಧ ಎಫ್ಐಆರ್ Read More »

ಹೆಣ್ಮಕ್ಕಳ ಮೇಲೆ ಕೈ ಹಾಕಿದ್ದೇನೆ ಎನ್ನುವವರು ಕಾನತ್ತೂರಿಗೆ ಬರಲಿ – ಸುಂದರ ಪಾಟಾಜೆ

ಸಮಗ್ರ ನ್ಯೂಸ್: ಮನೆಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿದ ಹಿನ್ನಲೆ ಮಹಿಳೆಯರು ಧರ್ಮದೇಟು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸುಂದರ ಪಾಟಾಜೆ ಫೆ.7 ರಂದು ಸುಳ್ಯದಲ್ಲಿ ಪತ್ರಿಕಾಗೊಷ್ಠಿಯಲ್ಲಿ ನಡೆಸಿದರು. ಈ ವೇಳೆ ಮಾತನಾಡಿದ ಸುಂದರ ಪಾಟಾಜೆ ಪುತ್ತೂರಿನ ಕೋಡಿಂಬಾಡಿ ಗ್ರಾಮದ ಕಜೆ ಎಂಬ ಸ್ಥಳದಲ್ಲಿ ನಿವಾಸಿಯಾದ ಚೋಮು ಎಂಬವರಿಗೂ ಮತ್ತು, ಗಿರಿಯಪ್ಪರಿಗೂ ಜಾಗದ ವಿವಾದವಿದ್ದು, ಚೋಮ ಎಂಬವರ 1.05 ಎಕ್ರೆ ಜಾಗ ದರ್ಖಾಸ್ತು ಆಸ್ತಿಯಾಗಿದ್ದು, ಆರ ಟಿ ಸಿ ಹೊಂದಿದ್ದು, ಇದೇ ಜಾಗದಲ್ಲಿ ಗಿರಿಯಪ್ಪರಿಗೂ 94.

ಹೆಣ್ಮಕ್ಕಳ ಮೇಲೆ ಕೈ ಹಾಕಿದ್ದೇನೆ ಎನ್ನುವವರು ಕಾನತ್ತೂರಿಗೆ ಬರಲಿ – ಸುಂದರ ಪಾಟಾಜೆ Read More »

ಉಜಿರೆಯ ಲಾಡ್ಜೊಂದರಲ್ಲಿ ಯುವತಿಯರ ಬಳಸಿ ಮಾಂಸದಂಧೆ| ಪೊಲೀಸರ ದಾಳಿಯಲ್ಲಿ 7 ಮಂದಿ ಬಂಧನ

ಸಮಗ್ರ ನ್ಯೂಸ್: ಸುಂದರ ಯುವತಿಯರನ್ನು ಬಳಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಬೆಳ್ತಂಗಡಿ ತಾಲೂಕಿನ ಉಜಿರೆ ಎಂ.ಎಸ್.ಎಸ್ ಲಾಡ್ಜ್ ಮೇಲೆ ಪೊಲೀಸರು ದಾಳಿ ನಡೆಸಿದ್ದ ಐವರು ಯುವತಿಯರು ಸೇರಿ 7 ಮಂದಿಯನ್ನು ಬಂಧಿಸಲಾಗಿದೆ. ಉಜಿರೆ ಚಾರ್ಮಾಡಿ ರಸ್ತೆಯಲ್ಲಿರುವ ಸುರೇಶ್ ಪೂಜಾರಿ ಎಂಬಾತ ಬಾಡಿಗೆ ಪಡೆದ ಎಮ್.ಎಸ್.ಎಸ್ ಲಾಡ್ಜ್ ಮೇಲೆ ಫೆ.7 ರಂದು ಸಂಜೆ ದಾಳಿ ವೇಳೆ ದಾಖಲೆಗಳಿಲ್ಲದೆ ರೂಂಗಳಲ್ಲಿ ಐದು ಮಂದಿ ಯುವತಿಯರನ್ನು ಮತ್ತು ಇಬ್ಬರು ಲಾಡ್ಜ್ ಸಿಬ್ಬಂದಿಯನ್ನು ವಶಕ್ಕೆ ಪಡೆದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಕರೆದುಕೊಂಡು

ಉಜಿರೆಯ ಲಾಡ್ಜೊಂದರಲ್ಲಿ ಯುವತಿಯರ ಬಳಸಿ ಮಾಂಸದಂಧೆ| ಪೊಲೀಸರ ದಾಳಿಯಲ್ಲಿ 7 ಮಂದಿ ಬಂಧನ Read More »

ಬೆಳ್ತಂಗಡಿ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ‌ ಸಾವು

ಸಮಗ್ರ ನ್ಯೂಸ್: ನಾಲ್ಕು ದಿನಗಳ ಹಿಂದೆ ನಡೆದ ಟಿಪ್ಪರ್ ಮತ್ತು ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಯುವಕನೋರ್ವ ಚಿಕಿತ್ಸೆ ಫಲಿಸದೇ ಫೆ.7ರಂದು ಸಾವನ್ನಪ್ಪಿದ್ದಾನೆ. ಮೃತ ಯುವಕನನ್ನು ಕೊಕ್ಕಡ ಸೌತಡ್ಕ ನಿವಾಸಿ ಸಿರಾಜ್ ಎಂದು ಗುರುತಿಸಲಾಗಿದೆ. ಟಿಪ್ಪರ್ ಮತ್ತು ಸಿರಾಜ್ ಸಂಚರಿಸುತ್ತಿದ್ದ ಬೈಕ್ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಕೆಂಪಕೋಡಿ ಎಂಬಲ್ಲಿ ಮುಖಾಮುಖಿ ಡಿಕ್ಕಿಯಾಗಿ ಸಿರಾಜ್ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಪಘಾತದ ತೀವ್ರತೆಗೆ‌ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಿರಾಜ್ ಇಂದು ಚಿಕಿತ್ಸೆ

ಬೆಳ್ತಂಗಡಿ: ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ‌ ಸಾವು Read More »

ಪುತ್ತೂರು: ಮನೆಯೊಂದಕ್ಕೆ ಅಕ್ರಮವಾಗಿ ಪ್ರವೇಶ| ಅಂಬೆಡ್ಕರ್ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮತ್ತು ಸಂಗಡಿಗರಿಗೆ ಧರ್ಮದೇಟು

ಸಮಗ್ರ ನ್ಯೂಸ್: ಮನೆಯೊಂದಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಸುಂದರ ಪಾಟಾಜೆ ಮತ್ತು ಸಂಗಡಿಗ ಪರಮೇಶ್ವರ ಎಂಬವರಿಗೆ ಮಹಿಳೆಯರು ಧರ್ಮದೇಟು ನೀಡಿದ ಬಗ್ಗೆ ಪ್ರಕರಣ ಪುತ್ತೂರಿನ ಕೋಡಿಂಬಾಡಿಯ ಕಜೆ ಎಂಬಲ್ಲಿ ನಡೆದಿದೆ ಎನ್ನಲಾಗಿದೆ. ಕೋಡಿಂಬಾಡಿಯ ಕಜೆ ನಿವಾಸಿಗಳಾದ ಗಿರಿಯಪ್ಷ ಮತ್ತು ಚೋಮ ಎಂಬ ಸಹೋದರರ ಮಧ್ಯೆ ದಶಕಗಳಿಂದ ಜಾಗದ ತಕರಾರು ಇದ್ದು ಇತ್ತೀಚೆಗೆ ಸ್ಥಳೀಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಇತರೇ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಜಾಗದ ತಕರಾರು ಎರಡು

ಪುತ್ತೂರು: ಮನೆಯೊಂದಕ್ಕೆ ಅಕ್ರಮವಾಗಿ ಪ್ರವೇಶ| ಅಂಬೆಡ್ಕರ್ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮತ್ತು ಸಂಗಡಿಗರಿಗೆ ಧರ್ಮದೇಟು Read More »

ಬೆಳ್ತಂಗಡಿ : ಅನೈತಿಕ ಚಟುವಟಿಕೆ ಮಾಹಿತಿ ಹಿನ್ನಲೆ| DYSP ನೇತೃತ್ವದಲ್ಲಿ ಉಜಿರೆಯ ಲಾಡ್ಜ್ ಗಳ ಮೇಲೆ ದಾಳಿ

ಸಮಗ್ರ ನ್ಯೂಸ್: ಲಾಡ್ಜ್ ಗಳಲ್ಲಿ ಅನೈತಿಕ & ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಖಚಿತ ಮಾಹಿತಿ ಮೇರೆಗೆ ಡಿವೈಎಸ್ ಪಿ ನೇತೃತ್ವದ ತಂಡ ಫೆ.6 ರಂದು ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಲಾಡ್ಜ್ ಗಳ ಮೇಲೆ ದಾಳಿ ನಡೆಸಿದೆ. ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಅಮಟೆ ವಿಕ್ರಮ್ ರವರ, ಮಾರ್ಗದರ್ಶನ ದಲ್ಲಿ ಬಂಟ್ವಾಳ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ, ಪ್ರತಾಪ್ ಸಿಂಗ್ ಥೋರಾಟ್ ರವರ ನೇತೃತ್ವದಲ್ಲಿ,ವಿಶೇಷ ತಂಡ ರಚಿಸಿ, ಬಂಟ್ವಾಳ ಉಪ ವಿಭಾಗದ ಅಧಿಕಾರಿಗಳು & ಸಿಬ್ಬಂದಿಗಳ

ಬೆಳ್ತಂಗಡಿ : ಅನೈತಿಕ ಚಟುವಟಿಕೆ ಮಾಹಿತಿ ಹಿನ್ನಲೆ| DYSP ನೇತೃತ್ವದಲ್ಲಿ ಉಜಿರೆಯ ಲಾಡ್ಜ್ ಗಳ ಮೇಲೆ ದಾಳಿ Read More »

ಸುಳ್ಯ:ಪೆರಾಜೆಯಲ್ಲಿ ರಸ್ತೆ ಅಪಘಾತ|ಓರ್ವ ಗಂಭೀರ

ಸಮಗ್ರ ನ್ಯೂಸ್: ಸುಳ್ಯ ಸಮೀಪ ಪೆರಾಜೆಯಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಫೆ.6 ರಂದು ನಡೆದಿದೆ. ಸುಳ್ಯ ಕಡೆಯಿಂದ ಅರಂತೋಡು ಕಡೆಗೆ ಸಿಮೆಂಟ್ ಕೊಂಡೊಯ್ಯುತ್ತಿದ್ದ ಪಿಕಪ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಯಮಹ ಎಫ್ ಝಡ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಬೈಕ್ ನಲ್ಲಿದ್ದ ಹೊನ್ನಪ್ಪ ಹಾಗೂ ಸಹಸವಾರನಿಗೆ ಗಾಯಗಳಾಗಿದ್ದು, ಇಬ್ಬರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಅದರಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದುಬಂದಿದೆ.

ಸುಳ್ಯ:ಪೆರಾಜೆಯಲ್ಲಿ ರಸ್ತೆ ಅಪಘಾತ|ಓರ್ವ ಗಂಭೀರ Read More »

ಸುಬ್ರಹ್ಮಣ್ಯ : ನೈತಿಕ ಪೊಲೀಸ್ ಗಿರಿ ಪ್ರಕರಣ| ಮಾನಭಂಗಕ್ಕೆ ಯತ್ನಿಸಿದ್ದ ಮುಸ್ಲಿಂ ಯುವಕನಿಗೆ ಹಲ್ಲೆಗೈದ ಆರೋಪಿಗಳಿಗೆ ಜಾಮೀನು

ಸಮಗ್ರ ನ್ಯೂಸ್: ಸುಬ್ರಹ್ಮಣ್ಯ ಬಸ್ ತಂಗುದಾಣದಲ್ಲಿ ಅಪ್ರಾಪ್ತ ಹಿಂದೂ ಯುವತಿಯನ್ನು ಪ್ರೀತಿಸುವಂತೆ ಒತ್ತಡ ಹಾಕಿ ಮಾನಭಂಗಕ್ಕೆ ಯತ್ನಿಸಿದ ಮುಸ್ಲಿಂ ಯುವಕನಿಗೆ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾದ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಬಂಧಿತರಾದ ಆರೋಪಿಗಳು ಮಾನಭಂಗಕ್ಕೆ ಯತ್ನಿಸಿದ ಆರೋಪಿಯಾದ ಆಪೀದ್ ನನ್ನು ಬಲತ್ಕಾರವಾಗಿ ಎಳೆದುಕೊಂಡು ಹೋಗಿ ಕುಮಾರಧಾರ ಜಂಕ್ಷನ್ ಹತ್ತಿರ ಇರುವ ಹಳೆ ಕಟ್ಟಡದ ಕೋಣೆಯೊಳಗೆ ಕೂಡಿಹಾಕಿದ್ದರು. ಬಳಿಕ 10 ರಿಂದ 12 ಜನರು ಕೈಯಲ್ಲಿ, ಮರದ ದೊಣ್ಣೆಯಲ್ಲಿ ಮತ್ತು ಬೆತ್ತಗಳಿಂದ ಹೊಡೆದಿದಲ್ಲದೆ ಚಾಕುವಿನಿಂದ ತಿವಿದು ಕೊಲೆಗೆ ಪ್ರಯತ್ನಿಸಿದ,

ಸುಬ್ರಹ್ಮಣ್ಯ : ನೈತಿಕ ಪೊಲೀಸ್ ಗಿರಿ ಪ್ರಕರಣ| ಮಾನಭಂಗಕ್ಕೆ ಯತ್ನಿಸಿದ್ದ ಮುಸ್ಲಿಂ ಯುವಕನಿಗೆ ಹಲ್ಲೆಗೈದ ಆರೋಪಿಗಳಿಗೆ ಜಾಮೀನು Read More »

ಸುಳ್ಯ: ವಿಷ ಸೇವಿಸಿದ ಯುವಕ ಮೃತ್ಯು

ಸಮಗ್ರ ನ್ಯೂಸ್: ಸುಳ್ಯ ಜಯನಗರದ ಯುವಕನೋರ್ವ ಕಳೆದ ಒಂದು ವಾರದ ಹಿಂದೆ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಇಂದು ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸುಳ್ಯ ನಗರದ ಜಯನಗರ ನಿವಾಸಿ ದಿವಂಗತ ಕೃಷ್ಣ ಎಂಬುವರ ಪುತ್ರರಾದ ಸಂದೀಪ್ (20 )ಎಂಬಾತ ಇವರು ಒಂದು ವಾರದ ಹಿಂದೆ ಜಯನಗರ ತಮ್ಮ ಮನೆಯಲ್ಲಿಯೇ ವಿಷ ಸೇವನೆ ಮಾಡಿದ್ದರು. ಈ ಸಂದರ್ಭ ಮನೆಯವರಿಗೆ ವಿಷಯ ತಿಳಿದು ಆತನನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು

ಸುಳ್ಯ: ವಿಷ ಸೇವಿಸಿದ ಯುವಕ ಮೃತ್ಯು Read More »