ಎ.15 ರಿಂದ ರಾಜ್ಯದಲ್ಲಿ ಮತ್ತೆ ಮಳೆ ಸಾಧ್ಯತೆ| ಕರಾವಳಿ ಮಲೆನಾಡಿನಲ್ಲೂ ಮಳೆ ನಿರೀಕ್ಷೆ
ಸಮಗ್ರ ನ್ಯೂಸ್: ಕರ್ನಾಟಕ ಬಹುತೇಕ ಎಲ್ಲ ಕಡೆ ಸುರಿದು ಕೊಂಚ ಬ್ರೇಕ್ ನೀಡಿದ್ದ ಪೂರ್ವ ಮುಂಗಾರು ಮಳೆ ಇದೇ ಏಪ್ರಿಲ್ 15ರಿಂದ ಮತ್ತೆ ಅಬ್ಬರ ಆರಂಭಿಸುವ ಮುನ್ಸೂಚನೆ ನೀಡಿದೆ. ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ವರದಿ ತಿಳಿಸಿದೆ. ಏಪ್ರಿಲ್ 15ರಿಂದ ಮೂರು ದಿನ ಕರಾವಳಿ, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಭಾಗದಲ್ಲಿ ವ್ಯಾಪಕವಾಗಿ ಗುಡುಗು ಮಿಂಚು ಸಹಿತ ಮಳೆ ಸುರಿಯಲಿದೆ. ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಬರಲಿದೆ.
ಎ.15 ರಿಂದ ರಾಜ್ಯದಲ್ಲಿ ಮತ್ತೆ ಮಳೆ ಸಾಧ್ಯತೆ| ಕರಾವಳಿ ಮಲೆನಾಡಿನಲ್ಲೂ ಮಳೆ ನಿರೀಕ್ಷೆ Read More »









