ಕರಾವಳಿ

ಸಂಪಾಜೆ: ಕಾರು ಮತ್ತು ಕೆಎಸ್ ಆರ್ ಟಿ ಸಿ ಬಸ್ ನಡುವೆ ಭೀಕರ ಅಪಘಾತ‌| ಮಗು ಸಹಿತ ಮೂರು ಮಂದಿ ದುರ್ಮರಣ

ಸಮಗ್ರ ನ್ಯೂಸ್: ಮಾಣಿ – ಮೈಸೂರು ರಾ.ಹೆದ್ದಾರಿಯ ಸಂಪಾಜೆ ಬಳಿ ರಾಜ್ಯ ರಸ್ತೆ ಸಾರಿಗೆ ಬಸ್ ಹಾಗೂ ಕಾರೊಂದರ ನಡುವೆ ನಡೆದ ಭೀಕರ ಅಪಘಾತದಲ್ಲಿ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಸುಳ್ಯದಿಂದ ವಿರಾಜಪೇಟೆಗೆ ತೆರಳುತ್ತಿದ್ದ ಬಸ್ ಹಾಗೂ ಮಡಿಕೇರಿಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿರುವುದಾಗಿ ತಿಳಿದುಬಂದಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರ ಪೈಕಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವುದಾಗಿ ವರದಿಯಾಗಿದ್ದು ಗಾಯಗೊಂಡ ಪ್ರಯಾಣಿಕರನ್ನು ಸುಳ್ಯದ ಆಸ್ಪತ್ರೆಗೆ ಸಾಗಿಸಲಾಗಿದೆ. ಹೆಚ್ಚಿನ ಮಾಹಿತಿ ‌ನಿರೀಕ್ಷಿಸಲಾಗಿದೆ.

ಸಂಪಾಜೆ: ಕಾರು ಮತ್ತು ಕೆಎಸ್ ಆರ್ ಟಿ ಸಿ ಬಸ್ ನಡುವೆ ಭೀಕರ ಅಪಘಾತ‌| ಮಗು ಸಹಿತ ಮೂರು ಮಂದಿ ದುರ್ಮರಣ Read More »

ಪುತ್ತೂರು ಕಾಂಗ್ರೆಸ್ ಗೆ ಬಿಗ್ ಶಾಕ್| ಜೆಡಿಎಸ್ ನತ್ತ ಹಾರಿದ ದಿವ್ಯಪ್ರಭಾ ಚಿಲ್ತಡ್ಕ!

ಸಮಗ್ರ ನ್ಯೂಸ್: ಕಾಂಗ್ರೆಸ್‌ ಮುಖಂಡೆ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾದ ದಿವ್ಯಪ್ರಭಾ ಚಿಲ್ತಡ್ಕರವರು ಇಂದು (ಎ.14) ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಗೌಡ ರವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ರವರ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಮುಖಂಡ ದಿವ್ಯಪ್ರಭಾ ಗೌಡ ಚಿಲ್ತಡ್ಕರವರು ಎಂಎಲ್‌ಎ ರಘು ಆಚಾರ್ ಹಾಗೂ

ಪುತ್ತೂರು ಕಾಂಗ್ರೆಸ್ ಗೆ ಬಿಗ್ ಶಾಕ್| ಜೆಡಿಎಸ್ ನತ್ತ ಹಾರಿದ ದಿವ್ಯಪ್ರಭಾ ಚಿಲ್ತಡ್ಕ! Read More »

ಪುತ್ತೂರಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಕಣಕ್ಕೆ?

ಸಮಗ್ರ ನ್ಯೂಸ್: ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಣಕ್ಕಿಳಿಯುವ ಬಿಜೆಪಿ ಅಭ್ಯರ್ಥಿಗಳ ಮೊದಲ ಹಂತದ ಪಟ್ಟಿ ಬಿಡುಗಡೆಯಾಗಿದ್ದೇ ಹಿಂದುತ್ವದ ಭದ್ರಕೋಟೆ ಕರಾವಳಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಪುತ್ತೂರಿನಲ್ಲಿ ಅರುಣ್ ಪುತ್ತಿಲರವರಿಗೆ ಅಭ್ಯರ್ಥಿ ಸ್ಥಾನ ನೀಡಬೇಕೆನ್ನುವುದು ಅವರ ಅಭಿಮಾನಿಗಳ ಆಶಯವಾಗಿತ್ತು. ಅವರಿಗೆ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಕಾರ್ಯಕರ್ತರ ಒತ್ತಾಯದ ಮೇರೆಗೆ ಹಾಗೂ ಹಿಂದುತ್ವದ ಧ್ವ ನಿಯನ್ನು ಮತ್ತೆ ಮುನ್ನಲೆಗೆ ತರಲು, ಕಾರ್ಯಕರ್ತರ ಭಾವನೆಗೆ ಬೆಲೆ ನೀಡಿ ಅವರ ಪರವಾಗಿ ಕೆಲಸ ನಿರ್ವಹಿಸಲು ಅರುಣ್ ಕುಮಾರ್ ಪುತ್ತಿಲರವರು

ಪುತ್ತೂರಿನಿಂದ ಪಕ್ಷೇತರ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪುತ್ತಿಲ ಕಣಕ್ಕೆ? Read More »

Elephant resque: ಸುಳ್ಯ: ಕೆರೆಗೆ ಬಿದ್ದ ಕಾಡಾನೆಗಳ ಕಾರ್ಯಾಚರಣೆ ಯಶಸ್ವಿ| ಮತ್ತೆ ಕಾಡಿನತ್ತ ಮರಳಿದ ಗಜಪಡೆ

ಸಮಗ್ರ ನ್ಯೂಸ್: ಯಶಸ್ವೀ ಕಾರ್ಯಾಚರಣೆಯ ಮೂಲಕ ನಾಡಿಗೆ ಬಂದು ತೋಟದ ಕೆರೆಗೆ ಬಿದ್ದು ಪರದಾಡಿದ ಕಾಡಾನೆಗಳನ್ನು ರಕ್ಷಣೆ ಮಾಡಲಾಗಿದೆ. ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗು ಜಿಲ್ಲಾ ಪಂಚಾಯ್ ಮಾಜಿ ಸದಸ್ಯ ನವೀನ್ ಕುಮಾರ್ ರೈ ಮೇನಾಲ ಅವರ ನೇತೃತ್ವದಲ್ಲಿ ಸ್ಥಳೀಯರು ಸೇರಿ ಕಾರ್ಯಾಚರಣೆ ನಡೆಸಿ ಅಜ್ಜಾವರದ ತುದಿಯಡ್ಕದಲ್ಲಿ‌ ಕೆರಯಲ್ಲಿ‌ ಸಿಲುಕಿದ್ದ ಆನೆಗಳನ್ನು ಮೇಲಕ್ಕೆ ತರಲಾಯಿತು. ಸ್ಥಳೀಯರು ಕೆರೆಯ ಬದಿಯಲ್ಲಿ ಅಗೆತ ಮಾಡಿ ಮಣ್ಣು, ಮರಳು ಕಲ್ಲು ಹಾಕಿ ಆನೆಗಳಿಗೆ ಮೇಲೆ ಬರಲು

Elephant resque: ಸುಳ್ಯ: ಕೆರೆಗೆ ಬಿದ್ದ ಕಾಡಾನೆಗಳ ಕಾರ್ಯಾಚರಣೆ ಯಶಸ್ವಿ| ಮತ್ತೆ ಕಾಡಿನತ್ತ ಮರಳಿದ ಗಜಪಡೆ Read More »

ಸುಳ್ಯದ ಅಜ್ಜಾವರದಲ್ಲಿ ಕೆರೆಗೆ ಬಿದ್ದ ಕಾಡಾನೆ ಹಿಂಡು

ಸಮಗ್ರ ನ್ಯೂಸ್: ನಾಡಿಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡೊಂದು ತೋಟದೊಳಗಿನ ಕೆರೆಗೆ ಬಿದ್ದಿರುವ ಘಟನೆ ಸುಳ್ಯದ ಅಜ್ಜಾವರದಲ್ಲಿ ನಡೆದಿದೆ. ಇಲ್ಲಿನ ತುದಿಯಡ್ಕ ಎಂಬಲ್ಲಿನ ಸಂತೋಷ್ ಎಂಬವರ ತೋಟದಲ್ಲಿ ಈ ಘಟನೆ ನಡೆದಿದ್ದು, ಕೆರೆಗೆ ಬಿದ್ದ ಎರಡು ದೊಡ್ಡ ಮತ್ತೆರಡು ಮರಿಯಾನೆಗಳು ಮೇಲೆ ಬರಲಾಗದೇ ಒದ್ದಾಡುತ್ತಿರುವುದಾಗಿ ವರದಿಯಾಗಿದೆ. ಸ್ಥಳಕ್ಕೆ ಸುಳ್ಯ ವಲಯ ಅರಣ್ಯಾಧಿಕಾರಿಗಳು ದಾಂಗುಡಿ ಇಟ್ಟಿದ್ದು, ಆನೆಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ. ಅಜ್ಜಾವರ, ಆಲೆಟ್ಟಿ ಗ್ರಾಮಗಳಲ್ಲಿ ಆನೆಗಳ ಹಾವಳಿ ಜೋರಾಗಿದ್ದು, ಅಪಾರ ಪ್ರಮಾಣದ ಕೃಷಿನಾಶ ಸಂಭವಿಸುತ್ತಿರುತ್ತದೆ.

ಸುಳ್ಯದ ಅಜ್ಜಾವರದಲ್ಲಿ ಕೆರೆಗೆ ಬಿದ್ದ ಕಾಡಾನೆ ಹಿಂಡು Read More »

ಸುಳ್ಯ: ಹೊಕ್ಕಳ ಬಳ್ಳಿ ಕಡಿದುಕೊಳ್ಳದೇ ಜನಿಸಿದ ಮಗು| ತಾಯಿ- ಮಗುವನ್ನು ಕಾಪಾಡಿದ ರಿಯಲ್ ಹೀರೋ

ಸಮಗ್ರ ನ್ಯೂಸ್: ಮಗುವಿಗೆ ಜನ್ಮನೀಡುವ ಸಂದರ್ಭದಲ್ಲಿ ಹೊಕ್ಕಳ ಬಳ್ಳಿ ಕಡಿಯದೇ ವಿಪರೀತ ರಕ್ತಸ್ರಾವದಿಂದ ಜೀವನ್ಮರಣ ಸ್ಥಿತಿಯಲ್ಲಿದ್ದ ತಾಯಿ-ಮಗುವನ್ನು ಅಂಬ್ಯುಲೆನ್ಸ್ ಡ್ರೈವರ್ ಒಬ್ಬರು ಕಾಪಾಡಿದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಕಾರಿನಲ್ಲಿ ನಡೆದಿದೆ. ಸುಳ್ಯ ತಾಲೂಕಿನ ಕಲ್ಮಕಾರು ಎಂಬಲ್ಲಿ ಅಸ್ಸಾಂ ಮೂಲದ ಕುಟುಂಬಗಳು ಕೂಲಿ ಕೆಲಸಕ್ಕೆಂದು ಬಂದು ವಾಸ್ತವ್ಯವಿದ್ದಾರೆ. ಈ ಪೈಕಿ ಒಂದು ಕುಟುಂಬ ಸಣ್ಣ ಟೆಂಟ್‌ ಹಾಕಿಕೊಂಡು ಅಲ್ಲಿಯೇ ಜೀವನ ನಡೆಸಿಕೊಂಡು ಬರುತ್ತಿದೆ. ಆ ಪುಟ್ಟ ಕುಟುಂಬದ ಮಹಿಳೆಯೊಬ್ಬಳು ತುಂಬು‌ ಗರ್ಭಿಣಿಯಾಗಿದ್ದು ಆಕೆಗೆ ಕಳೆದ‌ ರಾತ್ರಿ(ಎ.10)

ಸುಳ್ಯ: ಹೊಕ್ಕಳ ಬಳ್ಳಿ ಕಡಿದುಕೊಳ್ಳದೇ ಜನಿಸಿದ ಮಗು| ತಾಯಿ- ಮಗುವನ್ನು ಕಾಪಾಡಿದ ರಿಯಲ್ ಹೀರೋ Read More »

“ಏರೆಗ್ಲಾ ಪನೊಡ್ಚಿ, ಶೆಟ್ಟರ್, ಈಶ್ವರಪ್ಪ ಪೂರಾ ದೆಪ್ಪುವ” |ನಳಿನ್ ಕುಮಾರ್ ರ ಹಳೆ ಆಡಿಯೊ ಮತ್ತೆ ವೈರಲ್

ಸಮಗ್ರ ನ್ಯೂಸ್: ಕೆ.ಎಸ್‌. ಈಶ್ವರಪ್ಪ ಮತ್ತು ಜಗದೀಶ್‌ ಶೆಟ್ಟರ್‌ ಅವರ ಟೀಮನ್ನು ತೆಗೆಯಲಾಗುತ್ತದೆ ಮತ್ತು ಹೊಸ ಟೀಮ್‌ ಮಾಡಲಾಗುತ್ತದೆ ಎಂದು ಅವರು ಆವತ್ತೇ ಹೇಳಿದ್ದರು. ಅಂದರೆ ಇವರಿಬ್ಬರನ್ನು ತೆಗೆಯುವ ಪ್ಲ್ಯಾನ್‌ 20 ತಿಂಗಳ ಹಿಂದೆಯೇ ಇತ್ತಾ ಎನ್ನುವ ಪ್ರಶ್ನೆ ಮೂಡಿದೆ. ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲು ಬಿಜೆಪಿ ಹೈಕಮಾಂಡ್‌ ಬಿಜೆಪಿಯ ಹಿರಿಯ ನಾಯಕ ಕೆ.ಎಸ್‌. ಈಶ್ವರಪ್ಪ ಮತ್ತು ಜಗದೀಶ್‌ ಶೆಟ್ಟರ್‌ ಅವರಿಗೆ ಕರೆ ಮಾಡಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುವಂತೆ

“ಏರೆಗ್ಲಾ ಪನೊಡ್ಚಿ, ಶೆಟ್ಟರ್, ಈಶ್ವರಪ್ಪ ಪೂರಾ ದೆಪ್ಪುವ” |ನಳಿನ್ ಕುಮಾರ್ ರ ಹಳೆ ಆಡಿಯೊ ಮತ್ತೆ ವೈರಲ್ Read More »

ಎಪ್ಪತ್ತೈದರಲ್ಲೂ ಬತ್ತದ ಜೀವನೋತ್ಸಾಹ| ಸೀರೆಯುಟ್ಟು ಸೈಕಲ್ ಏರಿ ಸಾಗಿದ ವೃದ್ಧೆ

ಸಮಗ್ರ ನ್ಯೂಸ್: ಜೀವನೋತ್ಸಾಹ ಬಲವಾಗಿದ್ದರೆ ವಯಸ್ಸು ಎನ್ನುವುದು ಕೇವಲ ಒಂದು ಸಂಖ್ಯೆ ಎಂದು ಸಾರಿ ಹೇಳುವ ಹಿರಿಯ ಮಹಿಳೆಯೊಬ್ಬರು ತರುಣ, ತರುಣಿಯರೂ ನಾಚುವಂತೆ ಸಕ್ರಿಯ ಜೀವನ ಸಾಗಿಸುತ್ತಿದ್ದಾರೆ. ಜ್ಯೋತ್ಸ್ನಾ ಕಾಗಲ್ ಹೆಸರಿನ ಈ ಹಿರಿಯ ಮಹಿಳೆಗೆ ಈಗ 74ರ ಹರೆಯ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಬಳಿ ಬಂಕಿಕೊಡ್ಲ ಗ್ರಾಮದಲ್ಲಿ ಬೆಳೆದ ಜ್ಯೋತ್ಸ್ನಾ, ಬಾಲ್ಯದಿಂದಲೂ ಬೈಸಿಕಲ್‌ಗಳನ್ನು ಇಷ್ಟ ಪಡುತ್ತಿದ್ದರು. ತಮ್ಮ 14ನೇ ವಯಸ್ಸಿನಲ್ಲಿ ಅಕ್ಕಪಕ್ಕದ ಮನೆಯವರಿಂದ ಬೈಸಿಕಲ್ ಪಡೆದ ಜ್ಯೋತ್ಸ್ನಾ ಬೈಸಿಕಲ್ ಸವಾರಿ ಕಲಿತರು. ಪೆಡಲ್ ತುಳಿಯುವುದರ

ಎಪ್ಪತ್ತೈದರಲ್ಲೂ ಬತ್ತದ ಜೀವನೋತ್ಸಾಹ| ಸೀರೆಯುಟ್ಟು ಸೈಕಲ್ ಏರಿ ಸಾಗಿದ ವೃದ್ಧೆ Read More »

ಬಂಟ್ವಾಳ: ಬಾಲಕನ ಛಲಕ್ಕೆ ಭೂಮಿಯಲ್ಲಿ ಹುಟ್ಟಿತು ಜಲ| ಏಕಾಂಗಿಯಾಗಿ ಬಾವಿ ಕೊರೆದು‌ ಭಗೀರಥನಾದ ವಿದ್ಯಾರ್ಥಿ

ಸಮಗ್ರ ನ್ಯೂಸ್: ನೀರು ಸಮರ್ಪಕವಾಗಿ ಸಿಗದ ಹಿನ್ನೆಲೆಯಲ್ಲಿ ಬಂಟ್ವಾಳದ ನರಿಕೊಂಬು ನಾಯಿಲದ ಪಿಯುಸಿ ವಿದ್ಯಾರ್ಥಿ ತಾನೇ ಒಬ್ಬನೇ ಬಾವಿ ಕೊರೆದು ಈಗ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಪಿಯುಸಿ ವಿದ್ಯಾರ್ಥಿ ಸೃಜನ್ ಬಾವಿ ಕೊರೆದ ವಿದ್ಯಾರ್ಥಿಯಾಗಿದ್ದಾನೆ. ಸೃಜನ್ ಮನೆಗೆ ನಲ್ಲಿಯಲ್ಲಿ ಸಮರ್ಪಕವಾಗಿ ನೀರು ಬಾರದ ಹಿನ್ನೆಲೆಯಲ್ಲಿ ಬಾವಿ ಕೊರೆಯುವ ನಿರ್ಧಾರ ಮಾಡಿ, ಬಾವಿ ಕೊರೆಯಲು ಮುಂದಾಗಿದ್ದಾನೆ. ಆರಂಭದಲ್ಲಿ ಆತನ ಮಾತನ್ನು ಕುಟುಂಬಸ್ಥರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಸೃಜನ್ ಪ್ರಥಮ ಪಿಯುಸಿ ಪರೀಕ್ಷೆ ಮುಗಿದ ನಂತರ ರಜೆಯಲ್ಲಿ ಒಬ್ಬನೇ ಬಾವಿ

ಬಂಟ್ವಾಳ: ಬಾಲಕನ ಛಲಕ್ಕೆ ಭೂಮಿಯಲ್ಲಿ ಹುಟ್ಟಿತು ಜಲ| ಏಕಾಂಗಿಯಾಗಿ ಬಾವಿ ಕೊರೆದು‌ ಭಗೀರಥನಾದ ವಿದ್ಯಾರ್ಥಿ Read More »

ಸುರತ್ಕಲ್ :ಟಿಕೆಟ್ ಘೋಷಣೆ ಸಂದರ್ಭ ಕಾರ್ಯಕರ್ತನ ಅರೋಗ್ಯ ವಿಚಾರಿಸಿದ ಡಾ. ವೈ. ಭರತ್ ಶೆಟ್ಟಿ!

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆಗೆ ಬಿಜೆಪಿ ಮೊದಲ ಪಟ್ಟಿ ಬಿಡುಗಡೆ ಸಂದರ್ಭದಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಅಪಘಾತಕ್ಕೊಳಗಾದಕಾರ್ಯಕರ್ತನ ಆರೋಗ್ಯ ವಿಚಾರಿಸುತ್ತಿದ್ದರು. ಉತ್ತರ ಕ್ಷೇತ್ರಕ್ಕೆ ಮತ್ತೊಮ್ಮೆ ಪಕ್ಷ ಟಿಕೆಟ್ ನೀಡಿದ್ದರಿಂದ ಸಂಭ್ರಮಪಟ್ಟು ಸ್ಥಳಕ್ಕೆ ಆಗಮಿಸಿದ ಹಲವು ಬಿಜೆಪಿ ಕಾರ್ಯಕರ್ತರು ಶಾಸಕರಿಗೆ ಶುಭಕೋರಿ ಸಂತಸ ವ್ಯಕ್ತ ಪಡಿಸಿದರು. ಈ ಮೂಲಕ ಭರತ್ ಶೆಟ್ಟಿ ಅವರು ಕಾರ್ಯಕರ್ತರ ಮೇಲಿನ ಕಾಳಜಿ ಪ್ರಶಂಸೆಗೆ ಪಾತ್ರವಾಗಿದೆ.

ಸುರತ್ಕಲ್ :ಟಿಕೆಟ್ ಘೋಷಣೆ ಸಂದರ್ಭ ಕಾರ್ಯಕರ್ತನ ಅರೋಗ್ಯ ವಿಚಾರಿಸಿದ ಡಾ. ವೈ. ಭರತ್ ಶೆಟ್ಟಿ! Read More »