ಸುಳ್ಯ: ನಂದಕುಮಾರ್ ಗೆ ಬಿ ಫಾರಂ ನೀಡುವಂತೆ ಕಾರ್ಯಕರ್ತರಿಂದ ಹೆಚ್ಚಿದ ಒತ್ತಡ| ಕೃಷ್ಣಪ್ಪ ಪರ ಪ್ರಚಾರಕ್ಕಿಲ್ಲದ ಕಾರ್ಯಕರ್ತರು, ಬೂತ್ ಮಟ್ಟದಲ್ಲಿ ಮುಖಭಂಗ

ಸಮಗ್ರ ನ್ಯೂಸ್: ಸುಳ್ಯ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಕೃಷ್ಣಪ್ಪರ ಆಯ್ಕೆಯಿಂದ ಅಸಮಾಧಾನ ಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಕ್ಷೇತ್ರದಾದ್ಯಂತ ತಟಸ್ಥರಾಗಿದ್ದು, ಕೃಷ್ಣಪ್ಪರವರು ಕೆಲವು ನಾಯಕರೊಂದಿಗೆ ಪ್ರಚಾರಕ್ಕೆ ಪ್ರಾರಂಭಿಸಿದ್ದಾರೆ. ಆದರೆ ಕ್ಷೇತ್ರದ ಪ್ರತೀ ಗ್ರಾಮಗಳ ಬೂತ್ ಗಳಲ್ಲಿ ಕಾರ್ಯಕರ್ತರು ಹೈಕಮಾಂಡ್ ನಡೆಯಿಂದ ಆಕ್ರೋಷಿತರಾಗಿದ್ದಾರೆ.

. Ad Widget . Ad Widget . Ad Widget .

ನಂದಕುಮಾರ್ ಪರ ಸುಳ್ಯದಲ್ಲಿ ಅಲೆ ಎದ್ದಿದ್ದು ಕೃಷ್ಣಪ್ಪರ ಪರವಾಗಿ ಪ್ರಚಾರಕ್ಕೆ ತೆರಳುವ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುವುದು ವರದಿಯಾಗುತ್ತಿದೆ. ಇದು ನಾಯಕರು ಇರಿಸು ಮುರಿಸಿಗೆ ಕಾರಣವಾಗಿದೆ. ಬಿ ಫಾರಂ ನಂದಕುಮಾರ್ ರವರಿಗೆ ನೀಡಿ ಅಭ್ಯರ್ಥಿಯಾಗಿಸಿದರೆ ಚುನಾವಣಾ ಪ್ರಚಾರಕ್ಕಿಳಿಯುವುದಾಗಿ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

. Ad Widget . Ad Widget . Ad Widget . Ad Widget . Ad Widget . Ad Widget . . Ad Widget . Ad Widget . Ad Widget . Ad Widget .

ಈ ಮಧ್ಯೆ ನಂದಕುಮಾರ್ ರವರಿಗೆ ಕಾಂಗ್ರೆಸ್ ಬಿ ಫಾರಂ ನೀಡದೆ ಪಕ್ಷೇತರಾಗಿ ಸ್ಪರ್ಧೆಸಿದರೆ ನಂದಕುಮಾರ್ ಅಭಿಮಾನಿ ಕಾಂಗ್ರೆಸ್ ಕಾರ್ಯಕರ್ತರು ಗೆಲ್ಲಿಸಿಕೊಡುವ ಹುಮ್ಮಸ್ಸಿನಲ್ಲಿದ್ದಾರೆ.

ಒಟ್ಟಿನಲ್ಲಿ ಸುಳ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗೆಲ್ಲುವ ಅಭ್ಯರ್ಥಿ ನಂದಕುಮಾರ್ ಪರವಾಗಿರುವುದು ಮುಖಂಡರಿಗೆ ಮುಖಭಂಗ ಉಂಟು ಮಾಡಿದೆ.

Leave a Comment

Your email address will not be published. Required fields are marked *