ಕರಾವಳಿ

ಸುಳ್ಯ: ಕಗ್ಗಂಟಾದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ| ನಾಯಕರ ಮುಂದೆ ಕಾರ್ಯಕರ್ತರ ಆಕ್ರೋಶ

ಸಮಗ್ರ ನ್ಯೂಸ್: ಇದೇ ಪ್ರಪ್ರಥಮ ಬಾರಿಗೆ ಸುಳ್ಯ ಕಾಂಗ್ರೆಸ್ ಅಭ್ಯರ್ಥಿ‌ ಆಯ್ಕೆ ವಿಚಾರದಲ್ಲಿ ಗೊಂದಲ ಉಂಟಾಗಿದ್ದು, ಬಿ ಫಾರಂಗಾಗಿ ನಂದಕುಮಾರ್‌ ಹಾಗೂ ಜಿ ಕೃಷ್ಣಪ್ಪ ನಡುವೆ ಜಂಗಿಕುಸ್ತಿ ಆರಂಭವಾಗಿದೆ. ಅಭ್ಯರ್ಥಿ ಆಯ್ಕೆ ಸರಿಯಲ್ಲ ನಂದಕುಮಾರ್ ಅವರಿ ಬಿ ಪಾರ್ಮ್ ನೀಡಬೇಕು ಎಂದು ನಂದಕುಮಾರ್ ಬೆಂಬಲಿಗರು ಆಯ್ಕೆ ಪ್ರಕ್ರಿಯೆಗೆಂದು ಆಗಮಿಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಎಂಎಲ್ ಸಿ ಮಂಜುನಾಥ್ ಭಂಡಾರಿ, ಮಾಜಿ ಸಚಿವ ರಮಾನಾಥ್ ರೈ, ಕೆ ಪಿ ಸಿ ಸಿ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಮುಂದೆ

ಸುಳ್ಯ: ಕಗ್ಗಂಟಾದ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ| ನಾಯಕರ ಮುಂದೆ ಕಾರ್ಯಕರ್ತರ ಆಕ್ರೋಶ Read More »

ಅರುಣ್ ಕುಮಾರ್ ಪುತ್ತಿಲ ಪತ್ರಿಕಾಗೋಷ್ಠಿ| ಬಿಜೆಪಿಗೆ ಸೆಡ್ಡು ಹೊಡೆದು ನಾಮಪತ್ರ ಸಲ್ಲಿಸಲಿರುವ ಹಿಂದುತ್ವದ ಬೆಂಕಿ ಚೆಂಡು

ಸಮಗ್ರ ನ್ಯೂಸ್: ಅರುಣ್ ಕುಮಾರ್ ಪುತ್ತಿಲ ಅವರು ಸ್ವತಂತ್ರ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಿಂದ ಸ್ಪರ್ಧಿಸಲು ಎ.೧೭ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಏಪ್ರಿಲ್ ೧೫ ರಂದು ಪತ್ರಿಕಾಗೋಷ್ಠಿ ಕರೆದು ಮಾತನಾಡಿದ ಅವರು ಅಭಿಮಾನಿಗಳ ಕೋರಿಕೆಯಂತೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಏ. ೧೭ರಂದು ಬೆಳಿಗ್ಗೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಬಲಿ ನಡೆದು ಬಟ್ಟಲು ಕಾಣಿಕ ಸೇವೆಯ ಬಳಿಕ ಗಂಧ ಪ್ರಸಾದ ಸ್ವೀಕರಿಸಿ ಬೆಂಬಲಿಗರೊಂದಿಗೆ ಪುತ್ತೂರಿನ ಮುಖ್ಯ ರಸ್ತೆಯಲ್ಲಿ ಮೆರವಣಿಗೆಯ ಮೂಲಕ ಸಾಗಿ ನಾಮಪತ್ರ ಸಲ್ಲಿಸುವುದಾಗಿ ಅವರು

ಅರುಣ್ ಕುಮಾರ್ ಪುತ್ತಿಲ ಪತ್ರಿಕಾಗೋಷ್ಠಿ| ಬಿಜೆಪಿಗೆ ಸೆಡ್ಡು ಹೊಡೆದು ನಾಮಪತ್ರ ಸಲ್ಲಿಸಲಿರುವ ಹಿಂದುತ್ವದ ಬೆಂಕಿ ಚೆಂಡು Read More »

ಉತ್ತರ ಕನ್ನಡ ಜಿಲ್ಲೆಯ ಜೆ.ಡಿ.ಎಸ್. ಚುನಾವಣಾ ಉಸ್ತುವಾರಿಯಾಗಿ ಎಂ.ಬಿ.ಸದಾಶಿವ ಆಯ್ಕೆ

ಸಮಗ್ರ ನ್ಯೂಸ್; ಉತ್ತರ ಕನ್ನಡ ಜಿಲ್ಲೆಯ ಜೆ.ಡಿ.ಎಸ್. ಚುನಾವಣಾ ಉಸ್ತುವಾರಿಯಾಗಿ ಎಂ.ಬಿ.ಸದಾಶಿವರವರು ಆಯ್ಕೆಯಾಗಿದ್ದಾರೆ. ಜೆಡಿಎಸ್ ರಾಜ್ಯ ವಕ್ತಾರರಾದ ಎಂ.ಬಿ.ಸದಾಶಿವ ಅವರಿಗೆ ಉತ್ತರ ಕನ್ನಡ ಜಿಲ್ಲೆಯ ಜಾತ್ಯತೀತ ಜನತಾದಳದ ಚುನಾವಣಾ ಉಸ್ತುವಾರಿ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ೬ ಕ್ಷೇತ್ರಗಳಾದಭಟ್ಕಳ, ಕುಮಟಾ, ಹಳಿಯಾಳ, ಕಾರವಾರ, ಯಲ್ಲಾಪುರ ಕ್ಷೇತ್ರಗಳ ಅಭ್ಯರ್ಥಿಗಳ ಚುನಾವಣಾ ಪ್ರಚಾರದ ಉಸ್ತುವಾರಿಯನ್ನು ಎಂ.ಬಿ.ಯವರು ನೋಡಿಕೊಳ್ಳಲಿದ್ದಾರೆ. ಈ ಹಿನ್ನೆಲೆಯಲ್ಲಿ ಉತ್ತರಕನ್ನಡ ಜಿಲ್ಲೆಯಲ್ಲಿ ಚುನಾವಣಾ ಕಾರ್ಯದಲ್ಲಿ ತೊಡಗಿರುವ ಅವರು ಹೆಚ್.ಡಿ.ಕುಮಾರಸ್ವಾಮಿ ಅವರು ಭಾಗವಹಿಸಿದ ಎರಡು ಬೃಹತ್ ಚುನಾವಣಾ ಪ್ರಚಾರ ಸಭೆಗಳನ್ನು

ಉತ್ತರ ಕನ್ನಡ ಜಿಲ್ಲೆಯ ಜೆ.ಡಿ.ಎಸ್. ಚುನಾವಣಾ ಉಸ್ತುವಾರಿಯಾಗಿ ಎಂ.ಬಿ.ಸದಾಶಿವ ಆಯ್ಕೆ Read More »

ಸುಳ್ಯ: ತನ್ನವರ ಸೇರುವ ತವಕದಲ್ಲಿ ಒಂಟಿ ಮರಿಯಾನೆ| ಅಜ್ಜಾವರದಲ್ಲೊಂದು ಕರುಳು ಹಿಂಡುವ ಕಥೆ| ಬಿಟ್ಯಾಕೋದೇ…ನನ್ನಾ…!

ಸಮಗ್ರ ನ್ಯೂಸ್: ಗುಂಪಿನಿಂದ‌ ಬೇರ್ಪಟ್ಟ ಆನೆಮರಿ ತನ್ನ ಹಿಂಡು‌ ಸೇರಲಾಗದೆ ಅಲೆದಾಡುತ್ತಿರುವ ಘಟನೆ ತಾಲೂಕಿನ ಅಜ್ಜಾವರದಲ್ಲಿ ನಡೆದಿದೆ. ಅಜ್ಜಾವರ ಗ್ರಾಮದ ತುದಿಯಡ್ಕದಲ್ಲಿ ತೋಟದ ಕೆರೆಯೊಂದಕ್ಕೆ ಕಾಡಾನೆಗಳ ಹಿಂಡೊಂದು ಅಚಾನಕ್ಕಾಗಿ ಬಿದ್ದಿತ್ತು. ಈ ಆನೆಗಳ ಹಿಂಡಿನಲ್ಲಿ ನಾಲ್ಕು ಆನೆಗಳಿದ್ದು, ಎರಡು ದೊಡ್ಡ ಆನೆ ಹಾಗೂ ಸುಮಾರು ಒಂದು ವರ್ಷ ಪ್ರಾಯದ ಆನೆ ಹಾಗೂ ಮೂರು ತಿಂಗಳ ಮರಿ ಕೂಡಾ‌ ಸೇರಿದ್ದವು. ಯಶಸ್ವಿ ಕಾರ್ಯಾಚರಣೆ ಬಳಿಕ ಎರಡು‌ ಆನೆಗಳು ಕೆರೆಯಿಂದ ಮೇಲೇರಿ ಬಂದಿದ್ದವು. ಆದರೆ ಮರಿಯಾನೆ ಮೇಲೆ ಬರಲಾಗದ ಕಾರಣ

ಸುಳ್ಯ: ತನ್ನವರ ಸೇರುವ ತವಕದಲ್ಲಿ ಒಂಟಿ ಮರಿಯಾನೆ| ಅಜ್ಜಾವರದಲ್ಲೊಂದು ಕರುಳು ಹಿಂಡುವ ಕಥೆ| ಬಿಟ್ಯಾಕೋದೇ…ನನ್ನಾ…! Read More »

ಹವಾಮಾನ ವರದಿ| ಕರಾವಳಿಯಲ್ಲಿ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಎ.15 ರಿಂದ 18ರ ವರೆಗೆ ಮಳೆಯ ನಿರೀಕ್ಷೆ ಇದೆ. ನಾಲ್ಕು ದಿನಗಳ ಕಾಲ ಕರಾವಳಿ ಭಾಗದಲ್ಲಿ ಎಲ್ಲೋ ಅಲರ್ಟ್‌ ಘೊಷಿಸಲಾಗಿದೆ. ಶುಕ್ರವಾರ ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ದಿನವಿಡೀ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಕರಾವಳಿ ಕರ್ನಾಟಕದ ಭಾಗಗಳಾದ, ಹೊನ್ನಾವರ 34.1, ಕಾರವಾರ 35.7, ಶಿರಾಲಿ 35.9 ಮಂಗಳೂರು ವಿಮಾನ ನಿಲ್ದಾಣದಲ್ಲಿ

ಹವಾಮಾನ ವರದಿ| ಕರಾವಳಿಯಲ್ಲಿ ಮಳೆ ಮುನ್ಸೂಚನೆ Read More »

ಸುಳ್ಯ: ಬಿ ಫಾರಂ ಹಂಚಿಕೆ ಪೆಂಡಿಂಗ್| ಮತ್ತೊಂದು ಸರ್ವೆ ರೆಡಿ ಮಾಡಲು ಡಿಕೆಶಿ ಸೂಚನೆ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಬಿ ಫಾರಂ ಹಂಚಿಕೆ ಮಾಡುತ್ತಿದ್ದು, ಸುಳ್ಯ ವಿಧಾನಸಭಾ ಕ್ಷೇತ್ರದ ಬಿ ಫಾರಂ ಅನ್ನು ಪಕ್ಷದ ಅಭ್ಯರ್ಥಿ ಕೃಷ್ಣಪ್ಪ ಜಿ ಇವರಿಗೆ ನೀಡದೇ‌ ಪೆಂಡಿಂಗ್ ಇರಿಸಲಾಗಿದೆ. ಕ್ಷೇತ್ರದಲ್ಲಿ ಮತ್ತೊಂದು ಸರ್ವೆ ನಡೆಸಿ ವರದಿ ಬಳಿಕ ಬಿ ಫಾರಂ ನೀಡಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತೀರ್ಮಾನಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ನಡೆದ ಸಭೆಯ ಬಳಿಕ ಟಿಕೆಟ್ ಆಕಾಂಕ್ಷಿ ನಂದಕುಮಾರ್ ಹಾಗೂ ಅಧಿಕೃತ ಅಭ್ಯರ್ಥಿ ‌ಜಿ. ಕೃಷ್ಣಪ್ಪ ಜೊತೆ ಅವರು ಮಾತುಕತೆ ನಡೆಸಿದರು.

ಸುಳ್ಯ: ಬಿ ಫಾರಂ ಹಂಚಿಕೆ ಪೆಂಡಿಂಗ್| ಮತ್ತೊಂದು ಸರ್ವೆ ರೆಡಿ ಮಾಡಲು ಡಿಕೆಶಿ ಸೂಚನೆ Read More »

ಮಂಗಳೂರು: ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನಾ ಸಮಾರಂಭ| 9 ದಿನ ನಡೆಯಲಿದೆ ವಿವಿಧ ಕಲಾತ್ಮಕ ಕಾರ್ಯಕ್ರಮ

ಸಮಗ್ರ ನ್ಯೂಸ್: ಸ್ವರ ಮಾಧುರ್ಯ ಬಳಗ ಪುತ್ತೂರು ಇದರ ವತಿಯಿಂದ ಲಯನ್ಸ್ ಕ್ಲಬ್ ಮಂಗಳೂರು ಸ್ಮಾರ್ಟ್ ಸಿಟಿ, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಮಂಗಳೂರು ಬಿಗ್ ಸಿಟಿ ಇದರ ಸಹಯೋಗದಲ್ಲಿ ಮಂಗಳೂರು ಆಫೀಸರ್ ಕ್ಲಬ್ ಹ್ಯಾಟ್ ಹಿಲ್ ನಲ್ಲಿ ಕಲಿಯೋಣ ಬನ್ನಿ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮಾ.14ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾ

ಮಂಗಳೂರು: ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನಾ ಸಮಾರಂಭ| 9 ದಿನ ನಡೆಯಲಿದೆ ವಿವಿಧ ಕಲಾತ್ಮಕ ಕಾರ್ಯಕ್ರಮ Read More »

ಜೆಡಿಎಸ್ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ| ಕೈ ಕೊಟ್ಟು ತೆನೆ ಹೊತ್ತ ದಿವ್ಯಪ್ರಭಾಗೆ ಪುತ್ತೂರು ಟಿಕೆಟ್

ಸಮಗ್ರ ನ್ಯೂಸ್: ಜೆಡಿಎಸ್ ಪಕ್ಷದ 49 ಕ್ಷೇತ್ರಗಳ ಎರಡನೇ ಪಟ್ಟಿಯನ್ನು ಮಾ.14 ರಂದು ಬಿಡುಗಡೆ ಮಾಡಿದೆ. ಬೆಂಗಳೂರಿನ‌ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಜೆಡಿಎಸ್ ಪಕ್ಷದ 49 ಕ್ಷೇತ್ರಗಳಿಗೆ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದರು. ಇಂದು ಮುಂಜಾನೆಯಷ್ಟೇ ಜೆಡಿಎಸ್ ಗೆ ಸೇರ್ಪಡೆಗೊಂಡ ಪುತ್ತೂರು ಕಾಂಗ್ರೆಸ್ ಮುಖಂಡೆ ಹಾಗೂ ಸಮಾಜ ಕಲ್ಯಾಣ ಮಂಡಳಿ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕಗೆ ಪುತ್ತೂರು ಟಿಕೆಟ್ ನೀಡಿದ್ದು, ಉಳಿದಂತೆ ವಿವಿಧ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ

ಜೆಡಿಎಸ್ ಪಕ್ಷದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ| ಕೈ ಕೊಟ್ಟು ತೆನೆ ಹೊತ್ತ ದಿವ್ಯಪ್ರಭಾಗೆ ಪುತ್ತೂರು ಟಿಕೆಟ್ Read More »

ಸಂಪಾಜೆ ಅಪಘಾತ; ಆರಕ್ಕೆ ಏರಿದ ಸಾವಿನ ಸಂಖ್ಯೆ

ಸಮಗ್ರ ನ್ಯೂಸ್: ಕಾರು ಮತ್ತು ಬಸ್ ನಡುವೆ ಸಂಪಾಜೆಯಲ್ಲಿ ನಡೆದ ಭೀಕರ ಅಪಘಾತದಲ್ಲಿ ಸಾವಿನ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿ ಪೈಕಿ ಇಬ್ಬರು ಮಹಿಳೆಯರು ಮತ್ತು ಮೂವರು ಮಕ್ಕಳು ಹಾಗೂ ಓರ್ವ ಗಂಡಸು ಉಸಿರು ಚೆಲ್ಲಿದ್ದಾರೆ ಎಂದು ತಿಳಿದು ಬಂದಿದೆ. ಕಾರಿನಲ್ಲಿ ಚಾಲಕ ಸೇರಿದಂತೆ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ನಾಲ್ವರು ಗಂಭೀರ ಗಾಯವಾಗಿದ್ದು, ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಾಗಲೇ ಅವರೆಲ್ಲರೂ ಮೃತಪಟ್ಟಿದ್ದಾರೆ ಎಂದು

ಸಂಪಾಜೆ ಅಪಘಾತ; ಆರಕ್ಕೆ ಏರಿದ ಸಾವಿನ ಸಂಖ್ಯೆ Read More »

ಸುಳ್ಯ: ಮತ್ತೆ ಸಕ್ರಿಯ ರಾಜಕಾರಣಕ್ಕೆ “ಎಸ್” ಎಂದ‌‌ ಅಂಗಾರ| ರಾಜಕೀಯ ‌ನಿವೃತ್ತಿ‌ ತಕ್ಷಣದ ನೋವಷ್ಟೇ ಎಂದು ವರಸೆ ಬದಲಿಸಿದ ಸಚಿವ!!

ಸಮಗ್ರ ನ್ಯೂಸ್: 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಘೋಷಣೆಯಾದ ಬೆನ್ನಲ್ಲೇ ಮಾಧ್ಯಮಗಳ ಮುಂದೆ ಅಲವತ್ತುಕೊಂಡಿದ್ದ ಸುಳ್ಯ ಶಾಸಕ ಎಸ್.ಅಂಗಾರ ನಿವೃತ್ತಿಯ ಮಾತುಗಳನ್ನಾಡಿದ್ದರು. ಆದರೆ ಇಂದು ವರಸೆ ಬದಲಿಸಿದ ಸಚಿವ ಎಸ್.ಅಂಗಾರ, ಮೊನ್ನೆ ದಿನ ನಾನು ರಾಜಕೀಯ ನಿವೃತ್ತಿಯ ಹೇಳಿಕೆ ನೀಡಿದ್ದೆ. ಅದು ತತ್‌ಕ್ಷಣದ ನೋವಾಗಿತ್ತು. ಇದೀಗ ನನ್ನ ಹೇಳಿಕೆಯನ್ನು ನಾನು ಹಿಂಪಡೆಯುತ್ತಿದ್ದು, ರಾಜಕೀಯದಲ್ಲಿ ಈ ಹಿಂದಿನಂತೆ ಸಕ್ರಿಯನಾಗಿರುತ್ತೇನೆ.‌ ಜತೆಗೆ ನಮ್ಮ ಅಭ್ಯರ್ಥಿ ಭಾಗೀರಥಿಯವರ ಗೆಲುವಿನ ಜವಾಬ್ದಾರಿ ನಾನೇ ತೆಗೆದುಕೊಳ್ಳವುದಾಗಿ ಎಂದು‌ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯದಲ್ಲಿ

ಸುಳ್ಯ: ಮತ್ತೆ ಸಕ್ರಿಯ ರಾಜಕಾರಣಕ್ಕೆ “ಎಸ್” ಎಂದ‌‌ ಅಂಗಾರ| ರಾಜಕೀಯ ‌ನಿವೃತ್ತಿ‌ ತಕ್ಷಣದ ನೋವಷ್ಟೇ ಎಂದು ವರಸೆ ಬದಲಿಸಿದ ಸಚಿವ!! Read More »