ಕರಾವಳಿ

‘ಗೃಹಲಕ್ಷ್ಮಿ’ ಯೋಜನೆ ಆ.15ಕ್ಕೆ ಅನುಷ್ಠಾನ – ಸಿಎಂ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ಗ್ಯಾರಂಟಿ ಯೋಜನೆಗಳ ಪೈಕಿ ನಂ.2 ಗೃಹ ಲಕ್ಷ್ಮೀ ಇದನ್ನು ಜಾರಿಗೊಳಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಮಾಹಿತಿ ತಿಳಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಬ್ಯಾಂಕ್ ಅಕೌಂಟ್ಸ್, ಆಧಾರ್ ಕಾರ್ಡ್ ಒದಗಿಸಬೇಕಾಗುತ್ತದೆ. ಯಾರು ಮನೆಯ ಯಜಮಾನಿ ಎಂಬುದು ತೀರ್ಮಾನಿಸಬೇಕಾಗಿದೆ. ನಾವು ಹೇಳಿರುವಂತದ್ದು ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ ಜಮಾ ಮಾಡುತ್ತೇವೆ ಎಂದಿದ್ದೆವು. ಆದ್ದರಿಂದ ಅಕೌಂಟ್ ಮಾಹಿತಿ, ಆಧಾರ್ ಕಾರ್ಡ್, ಅರ್ಜಿ ಸಲ್ಲಿಸಬೇಕು. ಜೂನ್ 15 ರಿಂದ ಜುಲೈ 15ರ ಒಳಗಾಗಿ ಮನೆ ಒಡತಿಯ ಮಾಹಿತಿ ನೀಡಬೇಕು.

‘ಗೃಹಲಕ್ಷ್ಮಿ’ ಯೋಜನೆ ಆ.15ಕ್ಕೆ ಅನುಷ್ಠಾನ – ಸಿಎಂ ಸಿದ್ದರಾಮಯ್ಯ Read More »

ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ – ಸಿಎಂ ಸಿದ್ದರಾಮಯ್ಯ ಘೋಷಣೆ

ಸಮಗ್ರ ನ್ಯೂಸ್: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​​ ಘೋಷಿಸಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಮೊದಲ ಗ್ಯಾರಂಟಿ ಯೋಜನೆಯನ್ನು ಉಚಿತವಾಗಿ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ. ಸಚಿವ ಸಂಪುಟದಲ್ಲಿ ಬಳಿಕ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮತನಾಡಿದ್ದು, ಗೃಹಲಕ್ಷ್ಮೀ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ, ಮಹಿಳೆಯರಿಗೆ ಉಚಿತ ಬಸ್​ ಯೋಜನೆಯ ಯಾವುದೇ ಜಾತಿ, ಧರ್ಮ, ಭಾಷೆ ಇಲ್ಲದೆ ಎಲ್ಲರಿಗೂ ಅನ್ವಯ ಆಗುವ ಹಾಗೆ ಗ್ಯಾರಂಟಿ ಜಾರಿ‌ ಮಾಡುತ್ತೇವೆ ಎಂದು ಹೇಳಿದ್ದಾರೆ. ಮೊದಲ ಗ್ಯಾರಂಟಿಯಾಗಿರುವ, ಗೃಹಜ್ಯೋತಿ ಜಾರಿಗೆ ಸಂಪುಟ ಸಭೆ ನಿರ್ಧರಿಸಿದ್ದು,

ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ – ಸಿಎಂ ಸಿದ್ದರಾಮಯ್ಯ ಘೋಷಣೆ Read More »

ಧರ್ಮಸ್ಥಳ: ಸೌಜನ್ಯ ಕೊಲೆ ಪ್ರಕರಣ| ಜೂ.16ರಂದು ಸಿಬಿಐ ವಿಶೇಷ ಕೋರ್ಟ್ ನಿಂದ ತೀರ್ಪು ಪ್ರಕಟ

ಸಮಗ್ರ ನ್ಯೂಸ್: ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಧರ್ಮಸ್ಥಳದ ಕಾಲೇಜು ವಿದ್ಯಾರ್ಥಿನಿ ಸೌಜನ್ಯ (17) ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಿದ್ದ ಪ್ರಕರಣದ ತೀರ್ಪು 11 ವರ್ಷಗಳ ಬಳಿಕ ಬೆಂಗಳೂರು ಸಿಬಿಐ ವಿಶೇಷ ಕೋರ್ಟ್ ನಿಂದ ಜೂನ್ 16 ರಂದು ಪ್ರಕಟವಾಗಲಿದೆ. ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಚಂದಪ್ಪ ಗೌಡ ಮತ್ತು ಕುಸುಮಾವತಿ ದಂಪತಿಯ ಎರಡನೇ ಮಗಳು ಸೌಜನ್ಯ (17) ಕಾಲೇಜು ಮುಗಿಸಿ ಮನೆಗೆ ವಾಪಸ್ ಹೋಗುವಾಗ 2012ರ ಅಕ್ಟೋಬರ್ 9ರಂದು ಸಂಜೆ 4:15 ಕ್ಕೆ ನಾಪತ್ತೆಯಾಗಿದ್ದಳು. ಈ ಬಗ್ಗೆ

ಧರ್ಮಸ್ಥಳ: ಸೌಜನ್ಯ ಕೊಲೆ ಪ್ರಕರಣ| ಜೂ.16ರಂದು ಸಿಬಿಐ ವಿಶೇಷ ಕೋರ್ಟ್ ನಿಂದ ತೀರ್ಪು ಪ್ರಕಟ Read More »

ಕಡಬ: ವಿದ್ಯುತ್ ಪ್ರವಹಿಸಿ‌ ಪವರ್ ಮ್ಯಾನ್ ಸಾವು ಪ್ರಕರಣ| ಮೆಸ್ಕಾಂ ಮೇಲಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲು

ಸಮಗ್ರ ನ್ಯೂಸ್: ವಿದ್ಯುತ್ ಕಂಬದಲ್ಲಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದ ಪವರ್ ಮ್ಯಾನ್ ಗೆ ವಿದ್ಯುತ್ ಪ್ರವಹಿಸಿ ಗಂಭೀರ ಗಾಯಗೊಂಡು ಅಸುನೀಗಿದ ಘಟನೆ ಕಡಬ ತಾಲೂಕಿನ ಕುಟ್ರುಪ್ಪಾಡಿ ಎಂಬಲ್ಲಿ ಗುರುವಾರ (ಜೂ 1) ನಡೆದಿದ್ದು, ಈ ಬಗ್ಗೆ ಮೃತಪಟ್ಟ ಯುವಕನ ತಂದೆ ನೀಡಿದ ದೂರಿನ ಅನ್ವಯ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಗಲಕೋಟೆ ಜಿಲ್ಲೆಯ ದ್ಯಾಮಣ್ಣ ದೊಡ್ಮನಿ ಮೃತಪಟ್ಟ ಪವರ್ ಮ್ಯಾನ್. ಕುಟ್ರುಪ್ಪಾಡಿ ಗ್ರಾಮದ ತಲೆಕ್ಕಿ ಸಮೀಪದ ಮುಳಿಮಜಲು ಎಂಬಲ್ಲಿ ವಿದ್ಯುತ್ ಸಂಪರ್ಕ ವ್ಯತ್ಯಯ ಉಂಟಾಗಿತ್ತು. ಇದರ

ಕಡಬ: ವಿದ್ಯುತ್ ಪ್ರವಹಿಸಿ‌ ಪವರ್ ಮ್ಯಾನ್ ಸಾವು ಪ್ರಕರಣ| ಮೆಸ್ಕಾಂ ಮೇಲಾಧಿಕಾರಿಗಳ ವಿರುದ್ಧ ಪ್ರಕರಣ ದಾಖಲು Read More »

ಚಲಿಸುತ್ತಿರುವ ಸ್ಕೂಟರ್ ನಲ್ಲಿ ಗಂಡು ಹೈಕ್ಳ ಡೀಪ್ ಲಿಪ್ ಲಾಕ್| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ

ಸಮಗ್ರ ನ್ಯೂಸ್: ಸೋಷಿಯಲ್ ಮೀಡಿಯಾದಲ್ಲಿ ಪ್ರತಿದಿನ ಒಂದಿಲ್ಲೊಂದು ವಿಡಿಯೋಗಳು ಸಖತ್ ವೈರಲ್ ಆಗುತ್ತಲೇ ಇರುತ್ತೇವೆ. ಸದ್ಯ, ಉತ್ತರ ಪ್ರದೇಶದಲ್ಲಿ ಅಂತಹದ್ದೇ ವಿಡಿಯೋವೊಂದು ಹಲ್ ಚಲ್ಸೃಷ್ಟಿಸಿದ್ದು ಇದನ್ನು ನೋಡಿ, ನೆಟ್ಟಿಗರು ಕಿಡಿಕಾರಿದ್ದು, ಇಂತಹ ಕೆಲಸ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ವಿಡಿಯೋದಲ್ಲಿ ಮೂವರು ಯುವಕರು ಸ್ಕೂಟರ್‌ ಹೋಗುತ್ತಿರುವುದನ್ನು ಕಾಣಬಹುದು. ಹಿಂಬದಿಯ ಇಬ್ಬರು ಸವಾರರು ಪ್ರಪಂಚದ ಪರಿವೇ ಇಲ್ಲವೆಂಬಂತೆ ಲಿಪ್ ಲಾಕ್‌

ಚಲಿಸುತ್ತಿರುವ ಸ್ಕೂಟರ್ ನಲ್ಲಿ ಗಂಡು ಹೈಕ್ಳ ಡೀಪ್ ಲಿಪ್ ಲಾಕ್| ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ವಿಡಿಯೋ Read More »

ಕಡಬ: ಮನೆಯ ಮೇಲ್ಚಾವಣಿಯಿಂದ ಬಿದ್ದು ಯುವಕ ಸಾವು

ಸಮಗ್ರ ನ್ಯೂಸ್: ನಿರ್ಮಾಣ ಹಂತದಲ್ಲಿದ್ದ ಮನೆಯ ಮೇಲ್ಛಾವಣಿಯಿಂದ ಕಾರ್ಮಿಕನೋರ್ವ ಆಯ ತಪ್ಪಿ ಬಿದ್ದು, ಸ್ಥಳದಲ್ಲೇ ಮೃತಪಟ್ಟ ಘಟನೆ ಜೂ. 02 ರಂದು ನೆಟ್ಟಣ ಎಂಬಲ್ಲಿ ನಡೆದಿದೆ. ಮೃತರನ್ನು ಕಡಬ ತಾಲೂಕಿನ ಅಲಂಕಾರು ಗ್ರಾಮದ ಶರವೂರು ನಿವಾಸಿ ಪದ್ಮನಾಭ ಅವರ ಪುತ್ರ ಹರಿಪ್ರಸಾದ್ ಎಂದು ಗುರುತಿಸಲಾಗಿದೆ. ನೆಟ್ಟಣದ ಮೇರೊಂಜಿ ಎಂಬಲ್ಲಿ ಮನೆಯ ಮೇಲ್ಛಾವಣಿಯ ಕೆಲಸ ಮಾಡುತ್ತಿದ್ದ ಸಮಯದಲ್ಲಿ ಹರಿಪ್ರಸಾದ್ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಕಡಬ: ಮನೆಯ ಮೇಲ್ಚಾವಣಿಯಿಂದ ಬಿದ್ದು ಯುವಕ ಸಾವು Read More »

ಸುಳ್ಯ: ರಾಮಭಕ್ತ ಕರಸೇವಕಬಾಲಚಂದ್ರ ವಳಲಂಬೆ ಇನ್ನಿಲ್ಲ

ಸಮಗ್ರ ನ್ಯೂಸ್: ರಾಮಭಕ್ತ, ಅಯೋಧ್ಯೆ ಕರಸೇವಕ ಎಂದೇ ಗುರುತಿಸಿಕೊಂಡಿದ್ದ ಬಾಲಚಂದ್ರ ವಳಲಂಬೆ ಇಂದು(ಜೂ.2) ನಿಧನರಾಗಿದ್ದಾರೆ. ಮೂಲತಃ ದಿವಂಗತ ವಿಟ್ಲ ರಾಮಣ್ಣ ಗೌಡ ಎಂಬವರ ಪುತ್ರ ವಳಲಂಬೆ ನಿವಾಸಿಯಾಗಿದ್ದ ಬಾಲಚಂದ್ರ ಅನೇಕ ಬಾರಿ ಅಯೋದ್ಯೆ ಕರಸೇವೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು, ಹಲವು ಬಾರಿ ಬಂಧನಕ್ಕೊಳಗಾಗಿದ್ದರು. ಅಯೋಧ್ಯಾ ವಿವಾದ ತಾರಕಕ್ಕೇರಿ ತುರ್ತು ಪರಿಸ್ಥಿತಿಯ ಸಂದರ್ಭಗಳಲ್ಲಿ ಗಸ್ತು ನಿರತ ಸಶಸ್ತ್ರ ಸೇನಾ ಸಿಬ್ಬಂದಿಗಳ ಲಾಠಿಯೇಟಿಗೂ ಜಗ್ಗದೆ ರಾಮಭಕ್ತನಾಗಿ ಕರಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದನ್ನು ಇಂದಿಗೂ ಅನೇಕರು ನೆನಪಿಸಿಕೊಳ್ಳುತಿದ್ದಾರೆ. ಬಾಲಚಂದ್ರರು ತನ್ನ ತಂದೆ, ತಾಯಿ ಮತ್ತು

ಸುಳ್ಯ: ರಾಮಭಕ್ತ ಕರಸೇವಕಬಾಲಚಂದ್ರ ವಳಲಂಬೆ ಇನ್ನಿಲ್ಲ Read More »

ಹವಾಮಾನ ವರದಿ| ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸಮಗ್ರ ನ್ಯೂಸ್: ಕರ್ನಾಟಕದ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನೈಋತ್ಯ ಮಾನ್ಸೂನ್ ಪ್ರತಿ ಬಾರಿ ಜೂನ್ 1 ರಂದು ಕೇರಳ ಪ್ರವೇಶಿಸುತ್ತದೆ ಮತ್ತು ಸುಮಾರು ಒಂದು ವಾರ ಏರುಪೇರು ಆಗುವ ಸಾಧ್ಯತೆಯೂ ಇರುತ್ತದೆ.ಈ ವರ್ಷ ಕೇರಳದ ಮೇಲೆ ನೈರುತ್ಯ ಮುಂಗಾರು ಪ್ರಾರಂಭವಾಗುವುದು ಸ್ವಲ್ಪ ವಿಳಂಬವಾಗುವ ಸಾಧ್ಯತೆಯಿದೆ. ಈ ಬಾರಿ 4 ದಿನ ವಿಳಂಬವಾಗಿ ಜೂನ್ 4 ರಂದು ಕೇರಳ ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ

ಹವಾಮಾನ ವರದಿ| ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ Read More »

ಕಡಬ: ಪಿನಾಯಿಲ್ ಕುಡಿದು ಪತ್ರಕರ್ತ ಆತ್ಮಹತ್ಯೆಗೆ ಯತ್ನ!?

ಸಮಗ್ರ ನ್ಯೂಸ್: ಪಿನಾಯಿಲ್ ಕುಡಿದು ಪತ್ರಕರ್ತನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಿಂದ ವರದಿಯಾಗಿದೆ. ಆತ್ಮಹತ್ಯೆಗೆ ಯತ್ನಿಸಿದ‌ವರನ್ನು ವೆಬ್ ನ್ಯೂಸ್ ಒಂದರ ಸಂಪಾದಕ ಗಣೇಶ್ ಇಡಾಳ(28) ಎಂದು ಗುರುತಿಸಲಾಗಿದೆ. ಈತ ಮೇ 30 ರಂದು ತನ್ನ ಮನೆಯಲ್ಲಿ ಶೌಚಾಲಯ ಶುಚಿಗೊಳಿಸುವ ಫಿನಾಯಿಲ್ ಎಂಬ ರಾಸಾಯನಿಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಹೇಳಲಾಗಿದೆ. ಮನೆಯಲ್ಲಿಯೇ ಫಿನಾಯಿಲ್ ಕುಡಿದು ಅಸ್ವಸ್ಥನಾಗಿ ಬಿದ್ದಿದ್ದ ಈತನನ್ನು ಕೂಡಲೇ ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಂತರ ಆರೋಗ್ಯ

ಕಡಬ: ಪಿನಾಯಿಲ್ ಕುಡಿದು ಪತ್ರಕರ್ತ ಆತ್ಮಹತ್ಯೆಗೆ ಯತ್ನ!? Read More »

ಕಳಸ: ಆಪರೇಷನ್ ಮಾಡ್ಬೇಕಾದ ಡಾಕ್ಟ್ರು ಫುಲ್ ಟೈಟು| ಅಮಾನತಿಗೆ ಆದೇಶಿಸಿದ ಸಚಿವ ದಿನೇಶ್ ಗುಂಡೂರಾವ್

ಸಮಗ್ರ ನ್ಯೂಸ್: ಆಪರೇಷನ್‌ ಥಿಯೇಟರ್‌ನಲ್ಲಿ ವೈದ್ಯನೊಬ್ಬ ಕುಡಿದು ಮಲಗಿದ ಘಟನೆ ಕಳಸದಲ್ಲಿ ನಡೆದಿದೆ. ವೈದ್ಯೋ ನಾರಾಯಣ ಎಂಬ ಮಾತಿಗೆ ಈ ಮೂಲಕ ವೈದ್ಯ ಮಸಿ ಬಳಿದಿದ್ದಾನೆ. ಸಂತಾನಹರಣ ಆಪರೇಷನ್‌ ಕ್ಯಾಂಪ್‌ನಲ್ಲಿ ವೈದ್ಯ ಈ ರೀತಿ ಮಾಡಿದ್ದಾನೆ. ವೈದ್ಯನ ಈ ರೀತಿಯ ವರ್ತನೆಯಿಂದ ಕಳಸ ಸರ್ಕಾರಿ ಆಸ್ಪತ್ರೆಗೆ ಬಂದ ಮಹಿಳೆಯರು ಪರದಾಡುವಂತೆ ಆಯಿತು. ಅಲ್ಲದೇ ವೈದ್ಯನ ಈ ಕೃತ್ಯಕ್ಕೆ ಸಿಬ್ಬಂದಿ ಸಹ ಸಾಥ್‌ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಕರಣದ ಕುರಿತಂತೆ ಮಾಹಿತಿ ಪಡೆದುಕೊಂಡ ಆರೋಗ್ಯ ಸಚಿವ ದಿನೇಶ್‌

ಕಳಸ: ಆಪರೇಷನ್ ಮಾಡ್ಬೇಕಾದ ಡಾಕ್ಟ್ರು ಫುಲ್ ಟೈಟು| ಅಮಾನತಿಗೆ ಆದೇಶಿಸಿದ ಸಚಿವ ದಿನೇಶ್ ಗುಂಡೂರಾವ್ Read More »