ಕರಾವಳಿ

ದ.ಕ ಜಿಲ್ಲಾಧಿಕಾರಿ ಕಚೇರಿ ವಾಹನ ಚಾಲಕ ಆತ್ಮಹತ್ಯೆಗೆ ಶರಣು

ಸಮಗ್ರ ನ್ಯೂಸ್: ದ.ಕ.ಜಿಲ್ಲಾಧಿಕಾರಿ ಕಚೇರಿಯ ವಾಹನ ಚಾಲಕರೋರ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಾಲಕ ಬಾಲಕೃಷ್ಣ (58) ಎಂಬವರು ಗುರುವಾರ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಮಾಲಾಡಿ ಕೋರ್ಟ್‌ ಬಳಿಯ ರಾಘವೇಂದ್ರ ನಿಲಯ ಎಂಬಲ್ಲಿ ವಾಸಿಸುತ್ತಿದ್ದ ಅವರು ಈ ಹಿಂದೆ ಆರೋಗ್ಯ ಇಲಾಖೆಯಲ್ಲಿ ಚಾಲಕರಾಗಿದ್ದರು. ಬಳಿಕ ಅಪರ ಜಿಲ್ಲಾಧಿಕಾರಿಯ ಕಾರಿನ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಹೃದಯ ಹಾಗೂ ಕರುಳಿನ ಸಮಸ್ಯೆಯಿಂದ ಬಾಲಕೃಷ್ಣ ಅವರು ಬಳಲುತ್ತಿದ್ದರು ಎನ್ನಲಾಗಿದೆ. ಅವರು ಇದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ದ.ಕ ಜಿಲ್ಲಾಧಿಕಾರಿ ಕಚೇರಿ ವಾಹನ ಚಾಲಕ ಆತ್ಮಹತ್ಯೆಗೆ ಶರಣು Read More »

ಮಂಗಳೂರು: ಜೂ.11ರಿಂದ ಜಿಲ್ಲೆಯಾದ್ಯಂತ ಚರ್ಮ ಗಂಟು ವಿರುಧ್ಧ ಉಚಿತ ಲಸಿಕಾ ಅಭಿಯಾನ

ಸಮಗ್ರನ್ಯೂಸ್: ಕಳೆದ ಸಾಲಿನ ಮಳೆಗಾಲ ಹಾಗೂ ನಂತರದ ಅವಧಿಯಲ್ಲಿ ಚರ್ಮಗಂಟು ರೋಗವು ಜಾನುವಾರುಗಳಲ್ಲಿ ರಾಜ್ಯಾದಾದ್ಯಂತ, ಅದೇ ರೀತಿ ದ.ಕ ಜಿಲ್ಲೆಯ ಹೆಚ್ಚಿನ ಹಳ್ಳಿಗಳಲ್ಲಿ ಕಾಣಿಸಿಕೊಂಡಿದ್ದು 400ಕ್ಕೂ ಅಧಿಕ ಜಾನುವಾರುಗಳು ಮರಣ ಹೊಂದಿರುತ್ತವೆ ಹಾಗೂ ಒಟ್ಟಾರೆ ಹಾಲಿನ ಇಳುವರಿ ಕೂಡಾ ಗಣನೀಯವಾಗಿ ಕಡಿಮೆಯಾಗಿರುತ್ತದೆ. ಈ ರೋಗವು ನೊಣ, ಸೊಳ್ಳೆ ಹಾಗೂ ಉಣ್ಣೆಗಳಿಂದ ಹಬ್ಬುತ್ತದೆ. ರೋಗ ತಗುಲಿದ ಜಾನುವಾರುಗಳು ಜ್ವರದಿಂದ ಬಳಲಿ ಮೈ ಮೇಲೆ ಗಂಟುಗಳು ಬಂದು, 2 ರಿಂದ 5 ಶೇಕಡಾ ಜಾನುವಾರುಗಳು ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಮಳೆಗಾಲ

ಮಂಗಳೂರು: ಜೂ.11ರಿಂದ ಜಿಲ್ಲೆಯಾದ್ಯಂತ ಚರ್ಮ ಗಂಟು ವಿರುಧ್ಧ ಉಚಿತ ಲಸಿಕಾ ಅಭಿಯಾನ Read More »

ವರ್ಕಾಡಿ ಗ್ರಾಮದ ಕಿಶನ್‌ ಕುಮಾರ್‌ ಶೆಟ್ಟಿ ನಾಪತ್ತೆ; ಪತ್ತೆಗಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ವರ್ಕಾಡಿ ಗ್ರಾಮದ ನಿವಾಸಿ ಕಿಶನ್ ಕುಮಾರ್ ಶೆಟ್ಟಿ (29 ವರ್ಷ) ಎಂಬವರು 2023ರ ಮಾ.30ರಿಂದ ಕಾಣೆಯಾಗಿರುವ ಬಗ್ಗೆ ಮಂಗಳೂರಿನ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎತ್ತರ 5.9 ಅಡಿ, ಗೋಧಿ ಮೈ ಬಣ್ಣ, ಕೋಲು ಮುಖ, ಸಾಧಾರಣ ಶರೀರ ಹೊಂದಿರುತ್ತಾರೆ ಹಾಗೂ ಕಪ್ಪು ತಲೆ ಕೊದಲು ಮತ್ತು ಗಡ್ಡ ಬಿಟ್ಟಿರುತ್ತಾರೆ. ಕಾಣೆಯಾದ ದಿನ ಕಪ್ಪು ಮತ್ತು ಬಿಳಿ ಬಣ್ಣದ ಉದ್ದ ತೋಳಿನ ಶರ್ಟ್ ಮತ್ತು ಕಪ್ಪು ಬಣ್ಣದ

ವರ್ಕಾಡಿ ಗ್ರಾಮದ ಕಿಶನ್‌ ಕುಮಾರ್‌ ಶೆಟ್ಟಿ ನಾಪತ್ತೆ; ಪತ್ತೆಗಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು Read More »

ಮಂಗಳೂರು: ಶಾಸನ ಸಭೆಯ ಗೌರವ ಕಾಪಾಡುವಂತೆ  ಸ್ಪೀಕರ್ ಖಾದರ್ ಗೆ ಉಪರಾಷ್ಟ್ರಪತಿ ಸಲಹೆ

ಸಮಗ್ರನ್ಯೂಸ್:‌ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸ್ಪಿಕರ್ ಯು.ಟಿ.ಖಾದರ್ ಅವರು ಇದೇ ಮೊದಲ ಬಾರಿಗೆ ದೆಹಲಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಭೇಟಿ ಮಾಡಿ ಸೌಹಾರ್ದ ಮಾತುಕತೆ ನಡೆಸಿದರು. ಇದೇ ವೇಳೆ ಯು.ಟಿ ಖಾದರ್ ಅವರು ಕರ್ನಾಟಕ ರಾಜ್ಯ ವಿಧಾನಸಭೆಯ ಸ್ಪೀಕರ್ ಹುದ್ದೆಯನ್ನು  ಕಿರಿಯ ವಯಸ್ಸಿನಲ್ಲಿ  ವಹಿಸಿಕೊಂಡಿರುವುದನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.  ಚಿಕ್ಕ ವಯಸ್ಸಿನಲ್ಲೇ ಸಭಾಧ್ಯಕ್ಷರಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ಸುದೈವ. ಸ್ಪೀಕರ್ ಹುದ್ದೆಯಲ್ಲಿ ನಿಮಗೆ ಸಿಗುವ ರಾಜ್ಯ,ರಾಷ್ಟ್ರ ಹಾಗೂ ಅಂತರಾಷ್ಟ್ರೀಯ

ಮಂಗಳೂರು: ಶಾಸನ ಸಭೆಯ ಗೌರವ ಕಾಪಾಡುವಂತೆ  ಸ್ಪೀಕರ್ ಖಾದರ್ ಗೆ ಉಪರಾಷ್ಟ್ರಪತಿ ಸಲಹೆ Read More »

ವಾರದ ಬಳಿಕ ಕೇರಳ ತಲುಪಿದ ಮುಂಗಾರು|

ಸಮಗ್ರ ನ್ಯೂಸ್: ಸಾಮಾನ್ಯಕ್ಕಿಂತ ಒಂದು ವಾರದ ನಂತರ ನೈಋತ್ಯ ಮಾನ್ಸೂನ್ ಗುರುವಾರ ಕೇರಳದ ರಾಜ್ಯವನ್ನು ಪ್ರವೇಶಿಸಿದೆ ಭಾರತೀಯ ಹವಾಮಾನ ಇಲಾಖೆ (IMD) ಪ್ರಕಟಿಸಿದೆ. ‘ಬೈಪರ್‌ಜೋಯ್’ ಚಂಡಮಾರುತವು ಮಾನ್ಸೂನ್‌ನ ತೀವ್ರತೆಯ ಮೇಲೆ ಪರಿಣಾಮ ಬೀರುತ್ತಿದೆ ಮತ್ತು ಕೇರಳದ ಮೇಲೆ ಅದರ ಆಕ್ರಮಣವು “ಸೌಮ್ಯ” ಆಗಿರುತ್ತದೆ ಎಂದು ಹವಾಮಾನ ಶಾಸ್ತ್ರಜ್ಞರು ಈ ಹಿಂದೆ ಹೇಳಿದ್ದರು. “ನೈಋತ್ಯ ಮಾನ್ಸೂನ್ ಇಂದು ಜೂನ್ 8 ರಂದು ಕೇರಳದಲ್ಲಿ ಆರಂಭವಾಗಿದೆ” ಎಂದು ಭಾರತೀಯ ಹವಾಮಾನ ಇಲಾಖೆ (IMD ಹೇಳಿದೆ. ನೈಋತ್ಯ ಮಾನ್ಸೂನ್ ಸಾಮಾನ್ಯವಾಗಿ ಜೂನ್

ವಾರದ ಬಳಿಕ ಕೇರಳ ತಲುಪಿದ ಮುಂಗಾರು| Read More »

ಮಂಗಳೂರು: ಹೂಡಿಕೆಯ ಆಮಿಷವೊಡ್ಡಿ 1.64 ಲಕ್ಷ ರೂ ವಂಚನೆ

ಸಮಗ್ರ ನ್ಯೂಸ್: ಹಣ ಹೂಡಿಕೆಯ ಆಮಿಷವೊಡ್ಡಿ 1.64ಲಕ್ಷ ಹಣ ವಂಚನೆ ಮಾಡಿರುವ ಘಟನೆ ಮಂಗಳೂರಿನ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡುವುದಾಗಿ ಅಪರಿಚಿತ ವ್ಯಕ್ತಿ ದೂರುದಾರರಿಗೆ ಜೂ.4ರಂದು ಇನ್‌ಸ್ಟಾಗ್ರಾಂ ಮೆಸೆಂಜರ್‌ನಲ್ಲಿ ಸಂದೇಶಮತ್ತು ಲಿಂಕ್ ಕಳುಹಿಸಿದ್ದು, ಆ ಲಿಂಕ್ ಕ್ಲಿಕ್ ಮಾಡಿದಾಗ ಇನ್‌ಸ್ಟಾಗ್ರಾಂ ಖಾತೆಯ ಪೇಜ್ ತೆರೆದುಕೊಂಡಿತ್ತು. ಬಳಿಕ ಅಪರಿಚಿತ ವ್ಯಕ್ತಿ 50,000 ರೂ. ಹೂಡಿಕೆ ಮಾಡಿದರೆ 4,90,000 ರೂ. ಲಾಭಾಂಶ ಸಿಗುವುದಾಗಿ ಹೇಳಿದಾಗ ಅದರಂತೆ 50,000 ರೂ. ಹಣವನ್ನು ವರ್ಗಾಯಿಸಿದರು.

ಮಂಗಳೂರು: ಹೂಡಿಕೆಯ ಆಮಿಷವೊಡ್ಡಿ 1.64 ಲಕ್ಷ ರೂ ವಂಚನೆ Read More »

ಐವರ್ನಾಡಿನಲ್ಲಿ ರಬ್ಬರ್ ಟ್ರೇಡಿಂಗ್ ಶುಭಾರಂಭ

ಸಮಗ್ರ ನ್ಯೂಸ್:ಐವರ್ನಾಡಿನ ನೆಕ್ರಪ್ಪಾಡಿ ಕಾಂಪ್ಲೆಕ್ಸ್ ನಲ್ಲಿ ಶರೀಫ್ ನಿಡುಬೆ ಮತ್ತು ಅಬ್ಬಾಸ್ ಪೈಚಾರ್ ಇವರ ಮಾಲಕತ್ವದಲ್ಲಿ ಐವರ್ನಾಡು ರಬ್ಬರ್ ಟ್ರೇಡಿಂಗ್ ಜೂ.8 ರಂದು ಶುಭಾರಂಭಗೊಂಡಿದೆ‌. ಈ ಸಂಧರ್ಭದಲ್ಲಿ ಪ್ರಾ.ಕೃ.ಪ.ಸ.ಸಂಘ.ನಿ. ಅಧ್ಯಕ್ಷರಾದ ಎಸ್.ಎನ್.ಮನ್ಮಥ,ಗ್ರಾಂ.ಪಂ.ಅಧ್ಯಕ್ಷರಾದ ಬಾಲಕೃಷ್ಣ ಕೀಲಾಡಿ,ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ,ಶ್ರೀನಿವಾಸ ಮಡ್ತಿಲ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು. ಇಲ್ಲಿ ರಬ್ಬರ್,ಅಡಿಕೆ,ತೆಂಗಿನಕಾಯಿ, ಬಾಳೆಗೊನೆ,ಕೊಕ್ಕೋ,ಕಾಳುಮೆಣಸು, ಕಾಫಿ ಬೀಜ ಇನ್ನಿತರ ವಸ್ತುಗಳನ್ನು ಉತ್ತಮ ದರದಲ್ಲಿ ಖರೀದಿಸಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

ಐವರ್ನಾಡಿನಲ್ಲಿ ರಬ್ಬರ್ ಟ್ರೇಡಿಂಗ್ ಶುಭಾರಂಭ Read More »

ಉಳ್ಳಾಲ: 24 ಪುಟಗಳ ಡೆತ್ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ|ನೂತನ ಮನೆ ಖರೀದಿಸಿದ ಐದೇ ದಿನದಲ್ಲಿ ಏನಾಯಿತು ಈಕೆಗೆ..?| ಇದಕ್ಕೆಲ್ಲ ಕಾರಣ ಬ್ಯಾಂಕ್ ಅಧಿಕಾರಿಗಳ..!

ಸಮಗ್ರ ನ್ಯೂಸ್: ಯುವತಿಯೋರ್ವಳು 24 ಪುಟಗಳ ಡೆತ್ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮ ಹತ್ಯೆಗೈದ ಘಟನೆ ಕುಂಪಲ ಚಿತ್ರಾಂಜಲಿ ನಗರದಲ್ಲಿ ನಡೆದಿದೆ. ಮೂಲತ: ಫರಂಗಿಪೇಟೆಯ ಸದ್ಯ ಕುಂಪಲ ಚಿತ್ರಾಂಜಲಿ ನಗರದ ನಿವಾಸಿಯಾಗಿದ್ದ ಅಶ್ವಿನಿ ಬಂಗೇರ(25)ಆತ್ಮ ಹತ್ಯೆಗೈದ ಯುವತಿ.ನಿನ್ನೆ ರಾತ್ರಿ ಅಶ್ವಿನಿ ತನ್ನ‌ ಸ್ನೇಹಿತೆ ಜೊತೆ ಚಾಟ್ ಮಾಡಿದ್ದಲೆನ್ನಲಾಗಿದ್ದು ಸ್ನೇಹಿತೆ ಬೆಳಿಗ್ಗೆ ಬಂದು ಕೋಣೆಯ ಬಾಗಿಲು ಒಡೆದು ನೋಡಿದಾಗ ಅಶ್ವಿನಿ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದು ಆತ್ಮ ಹತ್ಯೆಗೈದಿದ್ದು ಬೆಳಕಿಗೆ ಬಂದಿದೆ. ಅಶ್ವಿನಿ ಬರೆದ 24 ಪುಟಗಳ ಡೆತ್

ಉಳ್ಳಾಲ: 24 ಪುಟಗಳ ಡೆತ್ನೋಟ್ ಬರೆದಿಟ್ಟು ಯುವತಿ ಆತ್ಮಹತ್ಯೆ|ನೂತನ ಮನೆ ಖರೀದಿಸಿದ ಐದೇ ದಿನದಲ್ಲಿ ಏನಾಯಿತು ಈಕೆಗೆ..?| ಇದಕ್ಕೆಲ್ಲ ಕಾರಣ ಬ್ಯಾಂಕ್ ಅಧಿಕಾರಿಗಳ..! Read More »

ಸುಳ್ಯ: ಶ್ರೀ ಕಾಟೂರ್ ಮೆನ್ಸ್ ಫ್ಯಾಷನ್ ಶುಭಾರಂಭ

ಸಮಗ್ರ ನ್ಯೂಸ್: ಸುಳ್ಯದಲ್ಲಿ ಶ್ರೀ ಕಾಟೂರು ಮೆನ್ಸ್ ಫ್ಯಾಷನ್ಸ್ ಜೂನ್ 7ರಂದು ದ್ವಾರಕ ಹೊಟೇಲ್ ಬಳಿ ಇರುವ ರಾಜಶ್ರೀ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿದೆ. ಈ ಸಂದರ್ಭದಲ್ಲಿ ದೀಪ ಬೆಳಗಿ ಉದ್ಘಟಿಸಿದ ತಂದೆ ಹೊನ್ನಪ್ಪ ಕಾಟೂರು ಮತ್ತು ಮನೆಯವರು, ಕಟ್ಟಡ ಮಾಲೀಕರು ಕೃಷ್ಣ ಇಂಜಿನಿಯರ್, ಪಿ. ಡಬ್ಲ್ಯೂ. ಡಿ ಗುತ್ತಿಗೆದಾರರು ವೆಂಕಪ್ಪ ಗೌಡ ನೆಕ್ರಾಜೆ , ಪದ್ಮನಾಭ ನೆಕ್ರಾಜೆ , ಬೋಸ್ ಮೀಡಿಯಾ ದೇವಿಪ್ರಸಾದ್ ಉಪಸ್ಥಿತರಿದ್ದರು. ಇಲ್ಲಿ ಉತ್ತಮ ಗುಣಮಟ್ಟದ ಬ್ರಾಂಡೆಡ್ ಜೀನ್ಸ್, ಕ್ಯಾಶುವಲ್ಸ್, ಫಾರ್ಮಲ್ಸ್ ಟೀ-ಶರ್ಟ್, ಕಾರ್ಗ್ಸೋ,

ಸುಳ್ಯ: ಶ್ರೀ ಕಾಟೂರ್ ಮೆನ್ಸ್ ಫ್ಯಾಷನ್ ಶುಭಾರಂಭ Read More »

ಕಾಣಿಯೂರು: ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬ ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಗೊನೆ ಮುಹೂರ್ತ

ಸಮಗ್ರ ನ್ಯೂಸ್: ಪುಣ್ಚತ್ತಾರು ಕರಿಮಜಲು ಶ್ರೀ ವಿಷ್ಣುಮೂರ್ತಿ ಮತ್ತು ಶ್ರೀ ಕಾಳಿಕಾಂಬ ದೇವಸ್ಥಾನದಲ್ಲಿ ಜೂ 11ರಿಂದ ಜೂ 13ರವರೆಗೆ ನಡೆಯಲಿರುವ ಕ್ಷೇತ್ರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಗೊನೆ ಮೂಹೂರ್ತವು ಜೂ 5ರಂದು ಬೆಳಗ್ಗೆ ನಡೆಯಿತು. ಈ ಸಂದರ್ಭದಲ್ಲಿ ಕ್ಷೇತ್ರದ ಮೊಕ್ತೇಸರರು, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು.

ಕಾಣಿಯೂರು: ಶ್ರೀ ವಿಷ್ಣುಮೂರ್ತಿ ದೈವಸ್ಥಾನ ಮತ್ತು ಶ್ರೀ ಕಾಳಿಕಾಂಬ ದೇವಿ ದೇವಸ್ಥಾನದಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಗೊನೆ ಮುಹೂರ್ತ Read More »