ಕರಾವಳಿ

ಅರಮನೆಗಯ: ಅಂಬೇಡ್ಕರ್ ರಕ್ಷಣಾ ಸಮಿತಿಯಿಂದ ಸೇತುವೆ ನಿರ್ಮಿಸುವಂತೆ ಮನವಿ| ತಕ್ಷಣ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ

ಸಮಗ್ರ ನ್ಯೂಸ್: ಜೂ.10ರಂದು ಅಡ್ತಲೆಯಲ್ಲಿ ನಡೆದ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿದ ವೇಳೆ ಶಾಸಕಿ ಭಾಗೀರಥಿ ಮುರುಳ್ಯರವರಿಗೆ ಅರಮನೆಗಯ ಸೇತುವೆ ನಿರ್ಮಿಸುವಂತೆ ಅಂಬೇಡ್ಕರ್ ರಕ್ಷಣಾ ಸಮಿತಿಯಿಂದ ಮನವಿ ನೀಡಲಾಯಿತು ಈ ವೇಳೆ ತಕ್ಷಣ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಸ್ಥಳ ಪರಿಶೀಲನೆ ಮಾಡಿ ಸರಕಾರದಿಂದ ಬರುವ ಮೊದಲ ಅನುದಾನದಲ್ಲಿ ಸೇತುವೆ ನಿರ್ಮಿಸುವ ಭರವಸೆಯನ್ನು ನೀಡಿದರು. ಹಾಗೂ ಈ ವರ್ಷದ ಮಳೆಗಾಲದಲ್ಲಿ ತಾತ್ಕಾಲಿಕವಾಗಿ ದುರಸ್ಥಿ ಕಾರ್ಯವನ್ನು ಪಂಚಾಯತ್ ಮುಖಾಂತರ ಮಾಡಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಬಿ. ಜೆ. ಪಿ. ಮಂಡಲ

ಅರಮನೆಗಯ: ಅಂಬೇಡ್ಕರ್ ರಕ್ಷಣಾ ಸಮಿತಿಯಿಂದ ಸೇತುವೆ ನಿರ್ಮಿಸುವಂತೆ ಮನವಿ| ತಕ್ಷಣ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ ಶಾಸಕಿ ಭಾಗೀರಥಿ ಮುರುಳ್ಯ Read More »

ಮರ್ಕಂಜ: ಗಣಿಗಾರಿಕೆ ಪರವಾನಿಗೆಯನ್ನು ರದ್ದುಗೊಳಿಸಬೇಕಾಗಿ ತಹಶೀಲ್ದಾರಿಗೆ ಮನವಿ

ಸಮಗ್ರ ನ್ಯೂಸ್:‌ ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಅಳವುಪಾರೆ ಎಂಬಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಅಕ್ರಮ ಮತ್ತು ಇದರಿಂದ ಹಲವು ಜನ ಸಾಮನ್ಯರಿಗೆ ತೊಂದರೆ ಉಂಟಾಗುತ್ತಿರುವ ಹಿನ್ನಲೆ ಗಣಿಗಾರಿಕೆ ಪರವಾನಿಗೆಯನ್ನು ರದ್ದುಗೊಳಿಸಬೇಕಾಗಿ ತಹಶೀಲ್ದಾರಿಗೆ ಮರ್ಕಂಜ ಗ್ರಾಮಸ್ಥರು ಜೂ.09 ರಂದು ಮನವಿ ಸಲ್ಲಿಸಿದರು. ಮರ್ಕಂಜ ಪ್ರದೇಶದಲ್ಲಿ ಈಗಾಗಲೇ ಗಣಿ ಇಲಾಖೆಯು ಗಣಿಗಾರಿಕೆಗೆ ಪರವಾನಿಗೆ ನೀಡಿದ್ದು ಈ ಪ್ರದೇಶದ ಆತೀ ಸಮೀಪದಲ್ಲಿ ಸರಕಾರಿ ಶಾಲೆ, ದೇವಸ್ಥಾನ, ಪೋಸ್ಟ್ ಆಫೀಸ್, ಸೊಸೈಟಿ, ಪರಿಶಿಷ್ಟ ಕಾಲೊನಿ, ಜನವಸತಿ, ಮತ್ತು ಸಮೃದ್ಧ ಕೃಷಿ ಪ್ರದೇಶವನ್ನು

ಮರ್ಕಂಜ: ಗಣಿಗಾರಿಕೆ ಪರವಾನಿಗೆಯನ್ನು ರದ್ದುಗೊಳಿಸಬೇಕಾಗಿ ತಹಶೀಲ್ದಾರಿಗೆ ಮನವಿ Read More »

ಪುತ್ತೂರಿನಲ್ಲಿ ಝಳಪಿಸಿದ ತಲ್ವಾರ್|ಶಾಪಿಂಗ್‌ ಮಾಲ್‌ ಸಿಬ್ಬಂದಿಗಳಿಗೆ ಯುವಕನಿಂದ ತಲ್ವಾರ್‍ ತೋರಿಸಿ ಬೆದರಿಕೆ

ಸಮಗ್ರ ನ್ಯೂಸ್ : ಪ್ರತಿಷ್ಟಿತ ಶಾಪಿಂಗ್‌ ಮಾಲ್‌ ಸಿಬ್ಬಂದಿಗೆ ಯುವಕನೋರ್ವ ತಲ್ವಾರ್‍ ತೋರಿಸಿ ಬೆದರಿಕೆ ಹಾಕಿರುವ ಘಟನೆ ಪುತ್ತೂರಿನ ದರ್ಬೆ ಬಳಿ ಬಾರ್‌ ಒಂದರ ಮುಂಭಾಗ ನಡೆದಿದೆ. ತಲ್ವಾರ್ ಝಳಪಿಸಿದ ಯುವಕನನ್ನು ಪ್ರಜ್ವಲ್ ಎಂದು ಗುರುತಿಸಲಾಗಿದೆ. ಶಾಪಿಂಗ್ ಮಾಲ್‌ನಲ್ಲಿ ಕಾರ್ಯ ನಿರ್ವಹಿಸುವ 8 ರಿಂದ 10 ಮಂದಿ ಸಿಬ್ಬಂದಿ ಜೂನ್ 9 ರಂದು ರಾತ್ರಿ ಕೆಲಸ ಮುಗಿಸಿ ಹೋಗುತ್ತಿದ್ದ ವೇಳೆ ಸಿಬ್ಬಂದಿ ಜೊತೆ ಫೋನ್‌ನಲ್ಲಿ ಆರೋಪಿ ಪ್ರಜ್ವಲ್ ಮಾತನಾಡುತ್ತಿದ್ದ. ‌ನಂತರ ಮಾತಿಗೆ ಮಾತು ಬೆಳೆದು ಕ್ಷುಲ್ಲಕ ಕಾರಣಕ್ಕೆ

ಪುತ್ತೂರಿನಲ್ಲಿ ಝಳಪಿಸಿದ ತಲ್ವಾರ್|ಶಾಪಿಂಗ್‌ ಮಾಲ್‌ ಸಿಬ್ಬಂದಿಗಳಿಗೆ ಯುವಕನಿಂದ ತಲ್ವಾರ್‍ ತೋರಿಸಿ ಬೆದರಿಕೆ Read More »

ಮಂಗಳೂರು: ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನ ಬನ್ನಂಜೆ ಕೈ ಸೇರುತ್ತಾ….?

ಸಮಗ್ರ ನ್ಯೂಸ್: ರಾಜ್ಯದಲ್ಲಿ ನೂತನ ಸರಕಾರ ಅಸ್ತಿತ್ವಕ್ಕೆ ಬಂದ ಹಿನ್ನೆಲೆಯಲ್ಲಿ ನಿಗಮ, ಮಂಡಳಿ, ಅಕಾಡೆಮಿಗಳಿಗೆ ಹೊಸ ಅಧ್ಯಕ್ಷರ ನೇಮಕಾತಿ ಆರಂಭವಾಗಲಿದೆ. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷಸ್ಥಾನಕ್ಕೆ ಪತ್ರಕರ್ತ, ಹಿರಿಯ ಸಾಹಿತಿ, ನಾಟಕರಂಗದಲ್ಲಿ ಪಳಗಿರುವ ಹಿರಿಯ ಸಿನಿಮಾ ನಿರ್ದೇಶಕ ಸುಧಾಕರ ಬನ್ನಂಜೆ ಅವರ ಹೆಸರು ಮುಂಚೂಣಿಯಲ್ಲಿದ್ದು ಅವರ ಆಯ್ಕೆಯು ತುಳು ಸಾಹಿತ್ಯ ಅಕಾಡೆಮಿಗೆ ಇನ್ನಷ್ಟು ಗೌರವ ಸಿಕ್ಕಂತಾಗುತ್ತದೆ ಎಂದು ತುಳುವರು ಅಭಿಪ್ರಾಯಪಡುತ್ತಿದ್ದಾರೆ. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಗದ್ದುಗೆಯಲ್ಲಿ ಕುಳಿತುಕೊಳ್ಳಲು ಈಗಾಗಲೇ ಬಿಜೆಪಿ ಬೆಂಬಲಿತ ಅನೇಕ ಮಂದಿ ಪ್ರಯತ್ನ

ಮಂಗಳೂರು: ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನ ಬನ್ನಂಜೆ ಕೈ ಸೇರುತ್ತಾ….? Read More »

ಏಕಾಏಕಿ ವಿದ್ಯುತ್ ಬಿಲ್ ಡಬ್ಬಲ್| ರಾಜ್ಯ ಸರ್ಕಾರದ ವಿರುದ್ದ ಜನಾಕ್ರೋಶ

ಸಮಗ್ರ ನ್ಯೂಸ್: ಕಾಂಗ್ರೆಸ್ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ ಘೋಷಣೆ ಮಾಡಿದ ಬಳಿಕ, ವಿದ್ಯುತ್ ದರದಲ್ಲಿ ಏರಿಕೆ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ. ವಿದ್ಯುತ್‌ ದರ ಹೆಚ್ಚಳ ಮಾಡಿರುವುದನ್ನು ಸಾರ್ವಜನಿಕರು ಖಂಡಿಸುತ್ತಿದ್ದಾರೆ. ‘ಪ್ರತಿ ತಿಂಗಳು ನಮ್ಮ ಮನೆಗೆ ತಿಂಗಳಿಗೆ 300 ರೂ.ಒಳಗೆ ಕರೆಂಟ್ ಬಿಲ್ ಬರುತ್ತಿತ್ತು. ಈ ತಿಂಗಳು 600 ರೂಪಾಯಿಯಷ್ಟು ಬಿಲ್ ಬಂದಿದೆ’ ಎಂದು ಜನರು ಆರೋಪಿಸುತ್ತಿದ್ದಾರೆ. ಸರ್ಕಾರ ಒಂದೆಡೆ ಉಚಿತ ವಿದ್ಯುತ್‌ ಎಂದು ಘೋಷಣೆ ಮಾಡಿದ್ದು, ಇನ್ನೊಂದೆಡೆ ದರ ಹೆಚ್ಚಿಸುತ್ತದೆ ಎಂದು

ಏಕಾಏಕಿ ವಿದ್ಯುತ್ ಬಿಲ್ ಡಬ್ಬಲ್| ರಾಜ್ಯ ಸರ್ಕಾರದ ವಿರುದ್ದ ಜನಾಕ್ರೋಶ Read More »

ಜೂ.11: ಸುಳ್ಯದ ರಾಮಚಂದ್ರ‌ ಸೇರಿ ಕರಾವಳಿಯ 8 ಮಂದಿ ಕೊರಗರಿಂದ ರಾಷ್ಟ್ರಪತಿ ಭೇಟಿ

ಸಮಗ್ರ ನ್ಯೂಸ್: ನೈಜ ದುರ್ಬಲ ಬುಡಕಟ್ಟು ಸಮುದಾಯಗಳ ಪ್ರತಿನಿಧಿಗಳಿಗೆ ಜೂನ್‌ 11 ಮತ್ತು 12ರಂದು ರಾಷ್ಟ್ರಪತಿ ಭೇಟಿ ಮತ್ತು ದೆಹಲಿ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೊರಗರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರಿನ ಸೂರಸಿದ್ಧ ಹೇರೂರು, ಶಂಕರ ಬೋಳಂಬಳ್ಳಿ, ಹೆಬ್ರಿ ತಾಲ್ಲೂಕಿನ ಪ್ರಿಯದರ್ಶಿನಿ, ಬ್ರಹ್ಮಾವರದ ನೀಲು ಕಳತ್ತೂರು, ದಕ್ಷಿಣ ಕನ್ನಡ ಜಿಲ್ಲೆಯಿಂದ ಮರಕಡದ ಎಂ.ಸುಂದರ, ಸುಳ್ಯ ನೆಲ್ಲೂರು ಕೆಮ್ರಾಜೆಯ ರಾಮಚಂದ್ರ, ಕಂಕನಾಡಿಯ ರತ್ನಾ, ಕಿನ್ನಿಗೋಳಿಯ ಸುಪ್ರಿಯಾ ಅವರು ಜೂನ್ 10ರಂದು

ಜೂ.11: ಸುಳ್ಯದ ರಾಮಚಂದ್ರ‌ ಸೇರಿ ಕರಾವಳಿಯ 8 ಮಂದಿ ಕೊರಗರಿಂದ ರಾಷ್ಟ್ರಪತಿ ಭೇಟಿ Read More »

ಬಂಟ್ವಾಳ: ಅಡಿಕೆ ಕೀಳುವ ವೇಳೆ‌ ವಿದ್ಯುತ್ ಶಾಕ್ ತಗುಲಿ ಯುವಕ ಸಾವು

ಸಮಗ್ರ ನ್ಯೂಸ್ ಡೆಸ್ಕ್: ಅಡಿಕೆ ತೆಗೆಯುತ್ತಿದ್ದ ವೇಳೆ ವಿದ್ಯುತ್ ಶಾಕ್ ಹೊಡೆದು ಯುವಕನೋರ್ವ ಮೃತಪಟ್ಟ ಘಟನೆ ಬಂಟ್ವಾಳದ ಮಲಾಯಿಬೆಟ್ಟು ಎಂಬಲ್ಲಿ ನಡೆದಿದೆ. ಬೋಳಿಯಾರು ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಶಾಫಿ ಮೃತ ಯುವಕ. ಸಜೀಪ ಮುನ್ನೂರು ಗ್ರಾಮದ ಮೂಸಬ್ಬ ಅವರ ತೋಟದಲ್ಲಿ ಅಡಿಕೆ ತೆಗೆಯುತ್ತಿದ್ದಾಗ ಘಟನೆ ನಡೆದಿದೆ. ರಸ್ತೆಯ ಬದಿಯಲ್ಲಿ ಹಾದು ಹೋಗಿದ್ದ ಎಲ್.ಟಿ. ವಯರಿಗೆ ಫೈಬರ್ ದೋಟಿ ತಾಗಿ, ವಿದ್ಯುತ್ ಶಾಕ್ ಹೊಡೆದಿದೆ ಎಂದು ಹೇಳಲಾಗಿದೆ. ಅಡಿಕೆ ವ್ಯಾಪಾರಿಯಾಗಿರುವ ಶಾಫಿ, ಗಿಡದಿಂದಲೇ ಅಡಿಕೆಯನ್ನು ಕ್ರಯಕ್ಕೆ ಪಡೆದುಕೊಳ್ಳುತ್ತಿದ್ದರು.

ಬಂಟ್ವಾಳ: ಅಡಿಕೆ ಕೀಳುವ ವೇಳೆ‌ ವಿದ್ಯುತ್ ಶಾಕ್ ತಗುಲಿ ಯುವಕ ಸಾವು Read More »

ಮಂಗಳೂರು: ಲೋಕಸಭಾಧ್ಯಕ್ಷ ಓಂ ಬಿರ್ಲಾ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸೌಹಾರ್ದ ಭೇಟಿ

ಸಮಗ್ರನ್ಯೂಸ್: ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಯು.ಟಿ.ಖಾದರ್ ಅವರು, ಲೋಕಸಭಾಧ್ಯಕ್ಷ ಓಂ ಬಿರ್ಲಾ ಅವರನ್ನು ಅವರ ಅಧಿಕೃತ ನಿವಾಸದಲ್ಲಿ ಜೂ.8ರಂದು ಸೌಹಾರ್ದತವಾಗಿ ಭೇಟಿ ಮಾಡಿ ಚರ್ಚಿಸಿದರು. ಚರ್ಚೆಯ ಸಂದರ್ಭದಲ್ಲಿ ಲೋಕಸಭಾಧ್ಯಕ್ಷರು ಸದನಗಳಲ್ಲಿ ನಿಯಮಾವಳಿಗಳಂತೆ ಚರ್ಚೆಗೆ ಅವಕಾಶ ನೀಡಿ, ಧರಣಿ ಮತ್ತು ಗದ್ದಲಗಳಿಗೆ ಮುಕ್ತಿ ಕೊಟ್ಟು ಕಾರ್ಯಕಲಾಪಗಳು ಸುಗಮವಾಗಿ Perfectly ಪರಂಪರೆಯನ್ನು ಬೆಳೆಸೋಣ ಎಂಬ ಸಲಹೆಯನ್ನು ನೀಡಿದರು. ಚರ್ಚೆಯು ಅತ್ಯಂತ ಸೌಹಾರ್ದಯುತವಾಗಿತ್ತು ಎಂದು ಸ್ಪೀಕರ್ ಯು.ಟಿ.ಖಾದರ್ ತಿಳಿಸಿದ್ದಾರೆ.

ಮಂಗಳೂರು: ಲೋಕಸಭಾಧ್ಯಕ್ಷ ಓಂ ಬಿರ್ಲಾ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಸೌಹಾರ್ದ ಭೇಟಿ Read More »

ಕರಾವಳಿಗರೇ ಎಚ್ಚರ… ಅಪ್ಪಳಿಸಲಿದೆ ಬಿಪರ್ ಜೋಯ್| ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಸಮಗ್ರ ನ್ಯೂಸ್: ಬಿಪರ್‌ಜೋಯ್‌ ಚಂಡಮಾರುತದ ಹಿನ್ನೆಲೆಯಲ್ಲಿ ಮುಂದಿನ ಮೂರು ಗಂಟೆಗಳಲ್ಲಿ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆಯನ್ನು ನೀಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಮೂಲ್ಕಿ, ಬೆಳ್ತಂಗಡಿ, ಪುತ್ತೂರು ಮುಂತಾದ ಕಡೆಗಳಲ್ಲಿ ಮುಂಜಾನೆಯಿಂದಲೇ ಬಾರೀ ಮಳೆ ಸುರಿಯುತ್ತಿದೆ. ಮಂಗಳೂರು ನಗರದಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಣ್ಣನೆಯ ವಾತಾವರಣ ಸೃಷ್ಟಿಯಾಗಿದೆ. ಇನ್ನು ಉಡುಪಿ ಜಿಲ್ಲೆಯ ಕುಂದಾಪುರ, ಉಡುಪಿ, ಕಾಪು, ಕಾರ್ಕಳ, ಬೈಂದೂರು

ಕರಾವಳಿಗರೇ ಎಚ್ಚರ… ಅಪ್ಪಳಿಸಲಿದೆ ಬಿಪರ್ ಜೋಯ್| ಭಾರೀ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ Read More »

ಹವಾಮಾನ ವರದಿ| ಕರಾವಳಿಯಲ್ಲಿಂದು ಗುಡುಗು ಮಿಂಚಿನ ಜೊತಗೆ ಮಳೆ‌ ಸಾಧ್ಯತೆ| ರಾಜ್ಯಾದ್ಯಂತ ಅಬ್ಬರಿಸಲಿದ್ದಾನೆ ವರುಣ

ಸಮಗ್ರ ನ್ಯೂಸ್: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಎದ್ದಿದ್ದು, ಇದರ ಪ್ರಭಾವದಿಂದ ರಾಜ್ಯದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ, ಬೀದರ್‌, ಗದಗ ಹಾಗೂ ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿಯಲ್ಲಿ ಸಾಧಾರಣ ಮಳೆಯಾಗಲಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು, ಚಾಮರಾಜನಗರ ಹಾಗೂ ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನದಲ್ಲಿ

ಹವಾಮಾನ ವರದಿ| ಕರಾವಳಿಯಲ್ಲಿಂದು ಗುಡುಗು ಮಿಂಚಿನ ಜೊತಗೆ ಮಳೆ‌ ಸಾಧ್ಯತೆ| ರಾಜ್ಯಾದ್ಯಂತ ಅಬ್ಬರಿಸಲಿದ್ದಾನೆ ವರುಣ Read More »