ಬಡತನವು ಮನುಷ್ಯನಿಗೆ ಮನುಷತ್ವದ ಪಾಠ ಬೋದಿಸುತ್ತದೆ; ಈಶ್ವರ್ ಮಲ್ಪೆ| ತೊಕ್ಕೊಟ್ಟು ಸಾಯಿ ಪರಿವಾರ್ ಟ್ರಸ್ಟ್ ದೀಪಾವಳಿ ಆಹಾರ ಸಾಮಗ್ರಿ ಕಿಟ್ ವಿತರಣೆ ಕಾರ್ಯಕ್ರಮ ಉದ್ಘಾಟನೆ
ಸಮಗ್ರ ನ್ಯೂಸ್: ನಾವು ಮಾಡುತ್ತಿರುವ ಒಳ್ಳೆಯ ಕಾರ್ಯಗಳಿಂದಲೇ ಸಮಾಜ ನಮ್ಮನ್ನು ಪುರಸ್ಕರಿಸುವುದು. ಬಡತನವು ಮನುಷ್ಯನಿಗೆ ಮನುಷತ್ವದ ಪಾಠ ಬೋದಿಸುತ್ತದೆ, ಸಮುದ್ರದಲ್ಲಿ ಈಜಾಡಬೇಡಿ ಎಂದು ಬೋರ್ಡ್ ಹಾಕಿದರೂ ಅದರ ಅಡಿಯಲ್ಲಿಯೇ ಬಟ್ಟೆಕಳಚಿ ಸಮುದ್ರದಲ್ಲಿ ಈಜಾಡುವ ಸಾಹಸದಿಂದ ಸಾವನ್ನಪ್ಪುವುದು ದುರಂತ. ಇದರಿಂದ, ಮನನೊಂದು ಮಾನವನ ಬದುಕನ್ನು ಬದುಕಿಸಬೇಕೆಂಬ ಪಣ ತೊಟ್ಟು 900 ಕ್ಕೂ ಅಧಿಕ ಜೀವಗಳನ್ನು ಉಳಿಸಿದ ಸಾರ್ಥಕತೆ ಇದೆ. ಅದರ ಜೊತೆಯಲ್ಲಿ ಎಷ್ಟೋ ಜೀವಗಳನ್ನು ಉಳಿಸಲಾಗದಂತ ನೋವು ಕೂಡ ಇದೆ ಆದರೂ ದೃತಿಗೆಡದೆ ಸಮಾಜ ಕಾರ್ಯದಲ್ಲಿ ತೊಡಗಿಸಿರುವುದರಿಂದ ಜನರ









