ಕರಾವಳಿ

ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಗ್ರಾಂಡ್ ಪೇರೆಂಟ್ಸ್ ಡೇ ಆಚರಣೆ

ಸಮಗ್ರ ನ್ಯೂಸ್: ಪ್ರತಿಯೊಂದು ಮನೆಯಲ್ಲಿ ಹಿರಿಯರಿದ್ದರೆ ಆ ಮನೆಯ ಸೊಬಗೇ ಚಂದ.ನಮ್ಮ ಸಂಸ್ಕೃತಿಯಲ್ಲಿ ಈ ಹಿರಿಯರ ಸ್ಥಾನವನ್ನು ತುಂಬುವವರು ಅಜ್ಜ ಅಜ್ಜಿ.ಸಂಸಾರದ ದೋಣಿಯನ್ನು ದಡ ಮುಟ್ಟಿಸಿ,ಕುಟುಂಬದ ಜೊತೆ ಕಾಲ ಕಳೆಯುತ್ತಾ ಅವರಿಗೆ ಸರಿಯಾದ ಮಾರ್ಗದರ್ಶನ ಮಾಡುವ ಅಜ್ಜ ಅಜ್ಜಿಯರು ಪ್ರತಿಯೊಂದು ಮನೆಯ ನಿಜವಾದ ಆಸ್ತಿ. ಅಂತಹ ಅರ್ತಗರ್ಭಿತವಾದ ಆಚರಣೆಯನ್ನು ಸೆ. 16ರಂದು ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಹಿರಿಯರಾದ ಚಂದ್ರಶೇಖರ್ ಅವರು ಭಾಗವಹಿಸಿದ್ದರು. ಅದೇ ರೀತಿ ಸಂಸ್ಥೆಯ ಪುಟಾಣಿ ಮಕ್ಕಳ ಅಜ್ಜ

ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಗ್ರಾಂಡ್ ಪೇರೆಂಟ್ಸ್ ಡೇ ಆಚರಣೆ Read More »

ಗಣೇಶ ಚತುರ್ಥಿ ಹಿನ್ನಲೆ| ಕರಾವಳಿ ಜಿಲ್ಲೆಗಳಿಗೆ ಸೆ.19 ರಂದು ರಜೆ ಘೋಷಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ

ಸಮಗ್ರ ನ್ಯೂಸ್: ಗಣೇಶ ಚತುರ್ಥಿಯ ಪ್ರಯುಕ್ತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸೋಮವಾರದ ಬದಲಾಗಿ ಮಂಗಳವಾರ ರಜೆ ನೀಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಮಂಗಳವಾರ ಹಬ್ಬ ಆಚರಿಸುವ ಕಾರಣ ಅದೇ ದಿನ ಸರ್ಕಾರಿ ರಜೆ ನೀಡಬೇಕು ಒತ್ತಡ ಹಾಕಲಾಗಿದ್ದು, ಈ ಬಗ್ಗೆ ಜನಪ್ರತಿನಿಧಿಗಳು ಕೂಡಾ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಯವರಿಗೆ ಸೆ.19ರಂದು ರಜೆ ನೀಡಲು ಪತ್ರ

ಗಣೇಶ ಚತುರ್ಥಿ ಹಿನ್ನಲೆ| ಕರಾವಳಿ ಜಿಲ್ಲೆಗಳಿಗೆ ಸೆ.19 ರಂದು ರಜೆ ಘೋಷಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ Read More »

ಮಲ್ಪೆ‌ ಕಡಲ ತಡಿಯಲ್ಲಿ ಸೌಜನ್ಯ ಪರ ಸಿಂಹ ಘರ್ಜನೆ| ಕತ್ತಲಾದರೂ ನಿಲ್ಲದ ಹೋರಾಟ|

ಸಮಗ್ರ ನ್ಯೂಸ್: ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆ.15 ರಂದು ಮಲ್ಪೆಯಲ್ಲಿ ಸೌಜನ್ಯ ಹೋರಟ ನಡೆದಿದ್ದು. ಇದರಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಯವರು ಹಾಗೂ ಸೌಜನ್ಯ ತಾಯಿ ಕುಸುಮಾವತಿಯವರು ಸಹ ಭಾಗಿಯಾಗಿದ್ದರು ಕಡಲ ತಡಿಯಲ್ಲಿ ಸೌಜನ್ಯ ಹೋರಾಟ ಮತ್ತೆ ಘರ್ಜನೆ ಅಬ್ಬರಿಸಿದೆ. ಸಂಜೆ ಶುರುವಾದ ಸೌಜನ್ಯ ಹೋರಾಟ ಕತ್ತಲಾದರೂ ಕರಗಲಿಲ್ಲ. ಜನರು ಯಾವುದಕ್ಕೂ ಮಿಸುಕದೆ ಕುಳಿತಲ್ಲೇ ಕುಳಿತು ಭಾಷಣ ಕೇಳಿ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ. ಮಲ್ಪೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜನಸ್ತೋಮ ಹರಿದು ಬಂದಿದ್ದು ಮಹೇಶ್ ಶೆಟ್ಟಿ ತಿಮರೋಡಿ ಅವರ

ಮಲ್ಪೆ‌ ಕಡಲ ತಡಿಯಲ್ಲಿ ಸೌಜನ್ಯ ಪರ ಸಿಂಹ ಘರ್ಜನೆ| ಕತ್ತಲಾದರೂ ನಿಲ್ಲದ ಹೋರಾಟ| Read More »

ಮಂಗಳೂರು: ನಾಗರ ಹಾವಿಗೆ ಡೀಸೆಲ್ ಎರಚಿದ ವ್ಯಕ್ತಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು

ಸಮಗ್ರ ನ್ಯೂಸ್: ನಾಗರಹಾವಿಗೆ ಡೀಸೆಲ್‌ ಎರಚಿದಾತ ಅಸ್ವಸ್ಥಗೊಂಡು ತಾನೂ ಆಸ್ಪತ್ರೆಗೆ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯಲ್ಲಿ ನಡೆದಿದೆ. ಕಿನ್ನಿಗೋಳಿ ಬಹುಮಹಡಿ ಕಟ್ಟಡದ ಸಮೀಪ ಕಳೆದ ವಾರ ನಾಗರ ಹಾವೊಂದು ಕಂಡುಬಂದಿದ್ದು, ಇದನ್ನು ಕಂಡ ಕಟ್ಟಡದ ಕಾವಲುಗಾರ ಉತ್ತರ ಕರ್ನಾಟಕ ಮೂಲದ ವ್ಯಕ್ತಿ ನಾಗರ ಹಾವಿಗೆ ಡೀಸೆಲ್‌ ಎರಚಿದ್ದ. ಉರಿಯಿಂದ ನಾಗರ ಹಾವು ಒದ್ದಾಡಿತ್ತು. ಸ್ಥಳೀಯರು ಇದನ್ನು ಕಂಡು ಉರಗ ರಕ್ಷಕ ಯತೀಶ್‌ ಕಟೀಲು ಅವರಿಗೆ ತಿಳಿಸಿದ್ದು, ಅವರು ಸ್ಥಳಕ್ಕೆ ಆಗಮಿಸಿ ಹಾವನ್ನು ರಕ್ಷಣೆ ಮಾಡಿ

ಮಂಗಳೂರು: ನಾಗರ ಹಾವಿಗೆ ಡೀಸೆಲ್ ಎರಚಿದ ವ್ಯಕ್ತಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲು Read More »

ಕದ್ರಿ ಮಂಜುನಾಥ ದೇವಾಲಯ ಟಾರ್ಗೆಟ್ ಮಾಡಿದ್ದ ಉಗ್ರ| ಎನ್ಐಎ ಬಲೆಗೆ ಬಿದ್ದ ಅರಾಫತ್ ಅಲಿ ಬಳಿ ಸ್ಪೋಟಕ ಮಾಹಿತಿ

ಸಮಗ್ರ ನ್ಯೂಸ್: ಶಿವಮೊಗ್ಗದಲ್ಲಿ ಐಎಸ್ ಐಎಸ್ ನಿಂದ ಟ್ರಯಲ್ ಬ್ಲಾಸ್ಟ್ ಪ್ರಕರಣ, ಕರ್ನಾಟಕದಲ್ಲಿ ಭಯೋತ್ಪಾದನಾ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡಿದ್ದ ಕಿಂಗ್ ಪಿನ್ ಅರಾಫತ್ ಅಲಿಯನ್ನು ಗುರುವಾರ ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎನ್ ಐಎ ಪೊಲೀಸರು ಬಂಧಿಸಿದ್ದಾರೆ‌ ಅರಾಫತ್ ಅಲಿಯನ್ನು ತನಿಖೆಗೊಳಪಡಿಸುವ ವೇಳೆ ಸ್ಪೋಟಕ ಮಾಹಿತಿಯೊಂದು ಬಯಲಾಗಿದ್ದು, ಬೆಚ್ಚಿ ಬೀಳಿಸುವಂತಿದೆ. ಕದ್ರಿ ಮಂಜುನಾಥನ ದೇವಾಲಯವೇ ಉಗ್ರ ಅರಾಫತ್ ಅಲಿಯ ಟಾರ್ಗೆಟ್ ಆಗಿತ್ತು ಎಂಬ ಸ್ಪೋಟಕ ಸತ್ಯ ಬಯಲಾಗಿದೆ. ಆರೋಪಿಗಳು ಮಂಗಳೂರಿನಲ್ಲಿರುವ ಕದ್ರಿ ಮಂಜುನಾಥನ ದೇವಾಲಯವನ್ನು ಸ್ಪೋಟಿಸುವ ಗುರಿ

ಕದ್ರಿ ಮಂಜುನಾಥ ದೇವಾಲಯ ಟಾರ್ಗೆಟ್ ಮಾಡಿದ್ದ ಉಗ್ರ| ಎನ್ಐಎ ಬಲೆಗೆ ಬಿದ್ದ ಅರಾಫತ್ ಅಲಿ ಬಳಿ ಸ್ಪೋಟಕ ಮಾಹಿತಿ Read More »

ಮೂಡುಬಿದಿರೆ: ಅ.6 ಮತ್ತು 7 ರಂದು ‘ಆಳ್ವಾಸ್ ಪ್ರಗತಿ -2023’ ಉದ್ಯೋಗ ಮೇಳ| ಪ್ರತಿಭಾನ್ವಿತರಿಗೆ ಸಿಗಲಿದೆ ಹಲವು ಉದ್ಯೋಗ

ಸಮಗ್ರ ನ್ಯೂಸ್: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಅಕ್ಟೋಬರ್‌ 6 ಮತ್ತು 7ರಂದು ‘ಆಳ್ವಾಸ್‌ ಪ್ರಗತಿ 2023’ ಉದ್ಯೋಗ ಮೇಳ ಮೂಡಬಿದಿರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಕಾಲೇಜಿನಲ್ಲಿ ನಡೆಯಲಿದೆ. ‌ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಈ ಮಾಹಿತಿ ನೀಡಿದ ಕಾಲೇಜಿನ ಪ್ರಾಂಶುಪಾಲ ಕುರಿಯನ್‌, ‘ಗ್ರಾಮೀಣ ಭಾಗದ ಪ್ರತಿಭಾನ್ವಿತ ಯುವಕರಿಗೆ ಉತ್ತಮ ವೇದಿಕೆ ಕಲ್ಪಿಸಿಕೊಡುವ ಉದ್ದೇಶದಿಂದ ಪ್ರತಿಷ್ಠಾನವು ಉದ್ಯೋಗ ಮೇಳ ಆಯೋಜಿಸುತ್ತಾ ಬಂದಿದೆ.ಈ ವರ್ಷ 13ನೇ ಆವೃತ್ತಿಯ ಮೇಳ ನಡೆಯಲಿದೆ’ ಎಂದು ತಿಳಿಸಿದರು. ‘ಐಟಿ, ತಯಾರಿಕೆ, ಮಾರಾಟ, ಚಿಲ್ಲರೆ ವ್ಯಾಪಾರ,

ಮೂಡುಬಿದಿರೆ: ಅ.6 ಮತ್ತು 7 ರಂದು ‘ಆಳ್ವಾಸ್ ಪ್ರಗತಿ -2023’ ಉದ್ಯೋಗ ಮೇಳ| ಪ್ರತಿಭಾನ್ವಿತರಿಗೆ ಸಿಗಲಿದೆ ಹಲವು ಉದ್ಯೋಗ Read More »

ದ.ಕ ಜಿಲ್ಲೆಯಾದ್ಯಂತ ಸೆ.19ಕ್ಕೆ ಗಣೇಶ ಚತುರ್ಥಿ ರಜೆ

ಸಮಗ್ರ ನ್ಯೂಸ್: ದ.ಕ. ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ಸೆ.18ರ ಬದಲು ಸೆ.19ರಂದು ರಜೆ ಘೋಷಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಎಂಎಲ್ಸಿ ಕೆ.ಪ್ರತಾಪಸಿಂಹ ನಾಯಕ್ ಅವರ ಪತ್ರದೊಂದಿಗೆ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿದ ಟಿಪ್ಪಣಿಯಲ್ಲಿ, ಮಂಗಳವಾರ ರಜೆ ಘೋಷಿಸುವುದರಿಂದ ಈ ಪ್ರದೇಶವು ಹಬ್ಬವನ್ನು ಆಚರಿಸಲು ಸಹಾಯ ಮಾಡುತ್ತದೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ದ.ಕ. ಜಿಲ್ಲೆಯಾದ್ಯಂತ ಸರಕಾರಿ ರಜೆಯನ್ನು ಸೆ. 18ರ ಬದಲು 19ರಂದು ನೀಡಲು ಅಗತ್ಯ

ದ.ಕ ಜಿಲ್ಲೆಯಾದ್ಯಂತ ಸೆ.19ಕ್ಕೆ ಗಣೇಶ ಚತುರ್ಥಿ ರಜೆ Read More »

ಮಂಗಳೂರು: ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್ಟೇಬಲ್

ಸಮಗ್ರ ನ್ಯೂಸ್: .ಮಂಗಳೂರು ನಗರ ಪೊಲೀಸ್ ಸೇವೆಯಲ್ಲಿದ್ದ ಉತ್ತರ ಕರ್ನಾಟಕದ ಪೊಲೀಸ್ ಕಾನ್ಸ್‌ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸವದತ್ತಿಯ ಮಹೇಶ್ (31) ಜೀವಾಂತ್ಯ ಮಾಡಿಕೊಂಡ ಪೊಲೀಸ್ ಸಿಬ್ಬಂದಿಯಾಗಿದ್ದಾರೆ. ನಗರದ ದಕ್ಷಿಣ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕೌಟುಂಬಿಕ ಕಲಹವೇ ಮಹೇಶ್ ಆತ್ಮಹತ್ಯೆಗೆ ಕಾರಣವೆಂದು ಶಂಕಿಸಲಾಗಿದೆ. ಒಂದುವರೆ ತಿಂಗಳ ಹಿಂದೆಯಷ್ಟೇ ಮಹೇಶ್ ವಿವಾಹವಾಗಿದ್ದರು ಎನ್ನಲಾಗಿದ್ದು ಕಪಿತಾನಿಯೋ ಬಳಿಯ ಮನೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಆತ್ಮಹತ್ಯೆಗೆ ಶರಣಾದ ಪೊಲೀಸ್ ಕಾನ್ಸ್ಟೇಬಲ್ Read More »

ಮಂಗಳೂರು: ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ; ಮತ್ತಿಬ್ಬರು ಗಂಭೀರ

ಸಮಗ್ರ ನ್ಯೂಸ್: ಬೈಕ್ ಅಪಘಾತದಿಂದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಮಂಗಳೂರು ನಗರದ ಹೊರ ವಲಯದ ಪಡೀಲ್ ಅಂಡರ್ ಪಾಸ್‌ ಬಳಿ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದು ಮತ್ತೆ ಇಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮೃತಪಟ್ಟ ವಿದ್ಯಾರ್ಥಿಯನ್ನು ಬಜಾಲ್ ಸಮೀಪದ ಪಲ್ಲಕೆರೆಯ ನಿವಾಸಿ, ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ಓದುತ್ತಿದ್ದ ಭವಿನ್ ರಾಜ್(20) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಡ್ವಿನ್ (19) ಮತ್ತು ಆಶಿತ್ (17) ಎಂಬವರು ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಭವಿನ್‌

ಮಂಗಳೂರು: ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ; ಮತ್ತಿಬ್ಬರು ಗಂಭೀರ Read More »

ಧರ್ಮಸ್ಥಳ: ಹಾಡಹಗಲೇ ಪ್ರತ್ಯಕ್ಷಗೊಂಡ ಕಾಡಾನೆ ಹಿಂಡು

ಸಮಗ್ರ ನ್ಯೂಸ್: ಧರ್ಮಸ್ಥಳದ ನೇರ್ತನೆ ಪ್ರದೇಶದಲ್ಲಿ ಗುರುವಾರ ಹಗಲು ಹೊತ್ತಿನಲ್ಲಿಯೇ ಕಾಡಾನೆಗಳ ಹಿಂಡು ಕಾಣಿಸಿಕೊಂಡಿದ್ದು ನಾಗರಿಕರಲ್ಲಿ ಭಯ ಮೂಡಿಸಿದೆ. ಒಂದು ಮರಿಯಾನೆ ಹಾಗೂ ಎರಡು ದೊಡ್ಡ ಆನೆಗಳು ಈ ಗುಂಪಿನಲ್ಲಿ ಇದ್ದು ನೇರ್ತನೆ ಅರಣ್ಯದಿಂದ ಹೊರ ಬಂದು ಜನವಸತಿ ಪ್ರದೇಶಗಳ ಮೂಲಕ ಒಂದೆರಡು ಕಿ.ಮೀ ಕೃಷಿಗಳನ್ನು ನಾಶಮಾಡುತ್ತಾ ಮುಂದುವರಿದಿದೆ. ಪೊಸಳಿಕೆ ಸಮೀಪ ಕೃಷಿಯಿಲ್ಲದೆ ಕಾಡು ಬೆಳೆದಿರುವ ಖಾಸಗಿ ಜಾಗದಲ್ಲಿ ಬುಧವಾರ ಆನೆಗಳು ಕಾಣಿಸಿಕೊಂಡಿದೆ. ಅದೇ ಪರಿಸರದಲ್ಲಿ ಆನೆಗಳು ತಿರುಗಾಟ ನಡಸುತ್ತಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಕಳೆದ ಎರಡು ಮೂರು

ಧರ್ಮಸ್ಥಳ: ಹಾಡಹಗಲೇ ಪ್ರತ್ಯಕ್ಷಗೊಂಡ ಕಾಡಾನೆ ಹಿಂಡು Read More »