ಕರಾವಳಿ

ಸುಳ್ಯ: ಬೆಳ್ಳಂಬೆಳಗ್ಗೆ ನ.ಪಂ ಕಾರ್ಯಾಚರಣೆ| ಸೌಜನ್ಯ ಪರ ಹಾಕಲಾಗಿದ್ದ ಬ್ಯಾನರ್ ಗಳ ತೆರವು

ಸಮಗ್ರ ನ್ಯೂಸ್: ಸುಳ್ಯ ನ.ಪಂ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಫೀಲ್ಡ್ ಗಿಳಿದಿದ್ದು, ನಗರದ ಅಲ್ಲಲ್ಲಿ ಅಳವಡಿಸಲಾಗಿದ್ದ ಸೌಜನ್ಯಳ ಪರ ಬ್ಯಾನರ್ ಗಳನ್ನು ತೆರವುಗೊಳಿಸುತ್ತಿದ್ದಾರೆ. ಸುಳ್ಯದಲ್ಲಿ ಇಂದು ಗಾಂಧಿ ಸ್ಮೃತಿ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳು ಸೌಜನ್ಯಳ ನ್ಯಾಯಕ್ಕಾಗಿ ಒತ್ತಾಯಿಸಿ‌ ನಗರದ ಅಲ್ಲಲ್ಲಿ ಬ್ಯಾನರ್ ಹಾಕಿದ್ದು, ಇದಕ್ಕೆ ನ.ಪಂ‌ ಅನುಮತಿ ಪಡೆದುಕೊಂಡಿಲ್ಲ‌ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬ್ಯಾನರ್ ಗಳನ್ನು ನ.ಪಂ ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ ಎಂದು

ಸುಳ್ಯ: ಬೆಳ್ಳಂಬೆಳಗ್ಗೆ ನ.ಪಂ ಕಾರ್ಯಾಚರಣೆ| ಸೌಜನ್ಯ ಪರ ಹಾಕಲಾಗಿದ್ದ ಬ್ಯಾನರ್ ಗಳ ತೆರವು Read More »

ಸುಳ್ಯ: ಗಾಂಧೀಸ್ಮೃತಿ ಕಾರ್ಯಕ್ರಮಕ್ಕೆ ಬಹಿಷ್ಕರಿಸಿ ಸೌಜನ್ಯ ಪರ ಪೋಸ್ಟರ್ ವೈರಲ್!!ವಾಟ್ಸಾಪ್ ನಲ್ಲಿ ವೈರಲ್ ಆಗ್ತಿದೆ ರಾಮರಾಜ್ಯ, ಸ್ತ್ರೀಸ್ವಾತಂತ್ರ್ಯದ ಪರ-ವಿರೋಧ ಚರ್ಚೆ!!

ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮಾಭಿವೃದ್ದಿ‌ ಯೋಜನೆ ಟ್ರಸ್ಟ್ ನೇತೃತ್ವದಲ್ಲಿ ಸುಳ್ಯದಲ್ಲಿ ನಾಳೆ( ಅ.3) ನಡೆಯಲಿರುವ “ಗಾಂಧೀಸ್ಮೃತಿ ಸಮಾವೇಶ ಹಾಗೂ ಜನಜಾಗೃತ ನಡಿಗೆ” ಭರ್ಜರಿ ತಯಾರಿ ನಡೆಯುತ್ತಿದ್ದು ಇದರ ವಿರುದ್ಧ ಜಾಲತಾಣಗಳಲ್ಲಿ ಬಹಿಷ್ಕಾರದ ಪೋಸ್ಟರ್ ಗಳು ವೈರಲ್ ಆಗುತ್ತಿವೆ. ಗಾಂಧೀಜಿ ಆಶಯದ ಕಲ್ಪನೆ “ರಾಮರಾಜ್ಯದ ಕನಸು “. ರಾಮರಾಜ್ಯದಲ್ಲಿ ಸ್ತ್ರೀ ಸ್ವಾತಂತ್ರ್ಯ ಹೇಗೆಂದರೆ ನಡು ರಾತ್ರಿಯಲ್ಲೂ ಓರ್ವ ಸ್ತ್ರೀ ಒಬ್ಬಂಟಿಯಾಗಿ ನಡೆಯುವಂತ ವಾತಾವರಣ. ಗಾಂಧೀಜಿ ಸ್ತ್ರೀ ಸ್ವಾತಂತ್ರ್ಯಕ್ಕೆ ಅಷ್ಟು ಮಹತ್ವ ನೀಡಿದ್ದರು. ಈ ಬಗ್ಗೆ ಗಾಂಧೀಜಿ ನೀಡಿದ ಹೇಳಿಕೆಯ

ಸುಳ್ಯ: ಗಾಂಧೀಸ್ಮೃತಿ ಕಾರ್ಯಕ್ರಮಕ್ಕೆ ಬಹಿಷ್ಕರಿಸಿ ಸೌಜನ್ಯ ಪರ ಪೋಸ್ಟರ್ ವೈರಲ್!!ವಾಟ್ಸಾಪ್ ನಲ್ಲಿ ವೈರಲ್ ಆಗ್ತಿದೆ ರಾಮರಾಜ್ಯ, ಸ್ತ್ರೀಸ್ವಾತಂತ್ರ್ಯದ ಪರ-ವಿರೋಧ ಚರ್ಚೆ!! Read More »

ಸುಳ್ಯ: ಚಾಲಕನ ಅಜಾಗರೂಕತೆಗೆ ಸರಣಿ ಅಪಘಾತ

ಸಮಗ್ರ ನ್ಯೂಸ್: ಜೀಪು ಚಾಲಕನ ಅಜಾಗರೂಕತೆಗೆ ಸರಣಿ ಅಪಘಾತಗೊಂಡ ಘಟನೆ ಮಾಣಿ ಮೈಸೂರು ಹೆದ್ದಾರಿಯಸುಳ್ಯ ನಗರದ ಜ್ಯೋತಿ ಸರ್ಕಲ್ ಬಳಿ ಆ.2 ರಂದು ಸಂಜೆ ನಡೆದಿದೆ. ಇನೋವಾದವರು ಬೆಂಗಳೂರು ಮೂಲದವರಾಗಿದ್ದು ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದರು ಎಂದು ತಿಳಿದಿದೆ . Triber ಕಾರಿನವರು ಕುಪ್ಪೆಟ್ಟು ಮೂಲದವರಾಗಿದ್ದು ಉಪ್ಪಿನಂಗಡಿಯಿಂದ ಊರಿಗೆ ತೆರಳುತ್ತಿದ್ದರು. ಜೀಪು ಚಾಲಕನು ಕೊಡ್ತುಗುಳಿ ಮುರಳೀಧರ ರವರ ಮಗ ಪೃಥ್ವಿಶ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಎರಡು ಕಾರು ಒಂದು ಜೀಪು ಜಖಂ ಗೊಂಡಿದ್ದು. ಘಟನಾ ಸ್ಥಳಕ್ಕೆ ಸುಳ್ಯ ನಗರದ

ಸುಳ್ಯ: ಚಾಲಕನ ಅಜಾಗರೂಕತೆಗೆ ಸರಣಿ ಅಪಘಾತ Read More »

ಮಣಿಪಾಲ: ಡಿಜೆ ಪಾರ್ಟಿ-ಇನ್ಸ್ಟಾಗ್ರಾಮ್ ಪೋಸ್ಟ್/ಬಾರ್ ಒಳಗೆ ನುಗ್ಗಿದ ಪೊಲೀಸರು

ಸಮಗ್ರ ನ್ಯೂಸ್: ವೃತ್ತ ನಿರೀಕ್ಷಕ ದೇವರಾಜ್ ನೇತೃತ್ವದ ತಂಡ ಉಡುಪಿ ತಾಲೂಕಿನ ಮಣಿಪಾಲ ಸಮೀಪದ ವಿದ್ಯಾನಗರದಲ್ಲಿರುವ ಎಸ್ ಸ್ಟೇಸಿ ಬಾರ್ ಮೇಲೆ ದಾಳಿ ನಡೆಸಿದ್ದು, ಅನುಮತಿಯಿಲ್ಲದೆ ಡಿಜೆ ಪಾರ್ಟಿ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ಗಮನಿಸಿ ಬಾರ್ ಮೇಲೆ ದಾಳಿ ನಡೆಸಿದ ಮಣಿಪಾಲ ಪೊಲೀಸರು ಬಿರುಸಿನ ಕಾರ್ಯಾಚರಣೆ ನಡನಡೆಸಿದ್ದಾರೆ. ಅನುಮತಿ ಇಲ್ಲದೆ ಡಿಜೆ ಪಾರ್ಟಿ ಮಾಡುತ್ತಿದ್ದ ಮಣಿಪಾಲದ ವಿದ್ಯಾರ್ಥಿಗಳು ಪಾರ್ಟಿ ಮಾಡಿದ ಹಾಗೂ ಹುಕ್ಕಾ, ಮದ್ಯ ಸೇವನೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದರು. ವೀಕೆಂಡ್

ಮಣಿಪಾಲ: ಡಿಜೆ ಪಾರ್ಟಿ-ಇನ್ಸ್ಟಾಗ್ರಾಮ್ ಪೋಸ್ಟ್/ಬಾರ್ ಒಳಗೆ ನುಗ್ಗಿದ ಪೊಲೀಸರು Read More »

ಪುತ್ತೂರು: ಪುತ್ತಿಲ ಪರಿವಾರ ವಾಟ್ಸಾಪ್ ಗ್ರೂಪಿನಲ್ಲಿ ಸದ್ದು ಮಾಡಿದ ಬಿಜೆಪಿ ಕಾರ್ಯಕರ್ತನ ಅರೆನಗ್ನ ಫೋಟೊ

ಸಮಗ್ರ ನ್ಯೂಸ್:‌ ಬಿಜೆಪಿ ಕಾರ್ಯಕರ್ತನೊಬ್ಬ ಮಹಿಳೆಯೊಂದಿಗೆ ರೂಂ ಒಂದರಲ್ಲಿ ತೆಗೆದ ಅರೆನಗ್ನ ಫೋಟೊ ಜಾಲತಾಣದಲ್ಲೆಲ್ಲಾ ಫುಲ್‌ ವೈರಲ್ ಆಗುತ್ತಿದೆ. ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ಮತ್ತು ಬೆಂಗಳೂರಿನ ಉದ್ಯಮಿ ಗುಣರಂಜನ್ ಶೆಟ್ಟಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರೋ, ಬಿಜೆಪಿ ಕಾರ್ಯಕರ್ತ ನವೀನ್ ರೈ ಕೈಕಾರ ಮಹಿಳೆಯೊಂದಿಗಿರೋ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಬೆನ್ನಲ್ಲೇ ಸೆನ್ ಪೊಲೀಸ್ ಠಾಣೆಗೆ ದೂರು ನೀಡದ್ದು ತನ್ನ ಫೋಟೋವನ್ನು ಬೇರೆ ಯುವತಿಯೊಬ್ಬಳ ಜತೆ ಇರುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ

ಪುತ್ತೂರು: ಪುತ್ತಿಲ ಪರಿವಾರ ವಾಟ್ಸಾಪ್ ಗ್ರೂಪಿನಲ್ಲಿ ಸದ್ದು ಮಾಡಿದ ಬಿಜೆಪಿ ಕಾರ್ಯಕರ್ತನ ಅರೆನಗ್ನ ಫೋಟೊ Read More »

ಸುಬ್ರಹ್ಮಣ್ಯ: ಮಹಿಳೆ ಆತ್ಮಹತ್ಯೆ

ಸಮಗ್ರ ನ್ಯೂಸ್: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯ ಠಾಣೆ ವ್ಯಾಪ್ತಿಯ ಗುತ್ತಿಗಾರು ಗ್ರಾಮದ ವಳಲಂಬೆಯಲ್ಲಿ ಅ.02ರಂದು ನಡೆದಿದೆ. ಇಲ್ಲಿನ ನಿವಾಸಿ ಲಕ್ಷ್ಮಣ ಆಚಾರ್ಯ ಎಂಬವರ ಪತ್ನಿ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಇಂದು ಮುಂಜಾನೆ ಮನೆಯಲ್ಲಿ ತನ್ನ ಮಗಳೊಂದಿಗೆ ಮುನಿಸಿಕೊಂಡ ಅವರು ಮನೆಬಿಟ್ಟು ಹೋಗಿದ್ದು, ಬಳಿಕ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ. ಮೃತರು ಪತಿ ಹಾಗೂ ಮಕ್ಕಳನ್ನು ಅಗಲಿದ್ದಾರೆ. ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸುಬ್ರಹ್ಮಣ್ಯ ‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಬ್ರಹ್ಮಣ್ಯ: ಮಹಿಳೆ ಆತ್ಮಹತ್ಯೆ Read More »

ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮನೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸಂಗೀತ ನಿರ್ದೇಶಕ ಗುರುಕಿರಣ್ ಭೇಟಿ

ಸಮಗ್ರ ನ್ಯೂಸ್:ಟಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಅವರ ಮನೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಭೇಟಿ ನೀಡಿದರು. ಬೆಂಗಳೂರಿನಲ್ಲಿ ಮೊತ್ತಮೊದಲನೇ ಬಾರಿಗೆ ನಡೆಯುವ ಕರಾವಳಿ ಕ್ರೀಡೆ ನಮ್ಮ ಕಂಬಳದ ನೇತೃತ್ವ ವಹಿಸಿರುವ ಅಶೋಕ್ ಕುಮಾರ್ ರೈ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಅ. 2ರಂದು ಟಾಲಿವುಡ್ ನ ಖ್ಯಾತ ನಟಿ ಅನುಷ್ಕಾ ಶೆಟ್ಟಿಯವರ ಇಂದಿರಾ ನಗರದ ನಿವಾಸಕ್ಕೆ ಭೇಟಿ ನೀಡಿದರು. ಅನುಷ್ಕಾ ಶೆಟ್ಟಿಯವರ ತಂದೆ ವಿಠ್ಠಲ್ ಶೆಟ್ಟಿ,

ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮನೆಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಸಂಗೀತ ನಿರ್ದೇಶಕ ಗುರುಕಿರಣ್ ಭೇಟಿ Read More »

ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಗಾಂಧೀ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

ಸಮಗ್ರ ನ್ಯೂಸ್:ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಅ.2 ರಂದು ಪೋಷಕರ ಸಮ್ಮುಖದಲ್ಲಿ ಗಾಂಧೀ ಜಯಂತಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಎಲ್ಲಾ ಪೋಷಕರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಾಂಧೀಜಿಯವರ ಚರಿತ್ರೆ ಮತ್ತು ತತ್ವಗಳಾದ ಸತ್ಯ ಮತ್ತು ಅಹಿಂಸೆ ಬಗ್ಗೆ ಕಥೆಯ ಮುಖಾಂತರ ಸಂಸ್ಥೆಯ ಸಂಚಾಲಕಿ ಗೀತಾಂಜಲಿ ಅವರು ತಿಳಿಸಿಕೊಟ್ಟರು. ಮಕ್ಕಳು ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ವೇಷ ಭೂಷಣ ಧರಿಸಿ ಚರಿತ್ರೆಯ ಬಗ್ಗೆ ತಿಳಿದುಕೊಂಡರು. ಕೊನೆಯಲ್ಲಿ ಗಾಂಧೀಜಿಯವರ ಪ್ರಿಯವಾದ

ಅಂಜಲಿ ಮೊಂಟೆಸ್ಸರಿ ಸ್ಕೂಲ್ ನಲ್ಲಿ ಗಾಂಧೀ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ Read More »

ಕಡಬ: ಸ್ಕೂಟರ್ ಡಿಕ್ಕಿ; ಪಾದಚಾರಿ ಮಹಿಳೆ ಸಾವು

ಸಮಗ್ರ ನ್ಯೂಸ್:- ಸ್ಕೂಟರ್ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಮಹಿಳೆಯೋರ್ವರು ಮೃತಪಟ್ಟ ಘಟನೆ ಕಡಬ ತಾಲೂಕಿನ ಮರ್ಧಾಳ ಸಮೀಪದ ನೆಕ್ಕಿತ್ತಡ್ಕ ಎಂಬಲ್ಲಿ ಆ .1 ರಂದು ರಾತ್ರಿ ನಡೆದಿದೆ. ಮೃತ ಮಹಿಳೆ ಮರ್ಧಾಳ ನಿವಾಸಿ ದಿವಂಗತ ಅಬೂಬಕ್ಕರ್ ಎಂಬವರ ಪತ್ನಿ ಅವ್ವಮ್ಮ ಎಂದು ತಿಳಿದಿದ್ದು, ಇವರು ಭಾನುವಾರ ರಾತ್ರಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಸ್ಕೂಟರ್ ಢಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಭೀರ ಗಾಯಗೊಂಡ ಮಹಿಳೆಯನ್ನು ಕಡಬ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ

ಕಡಬ: ಸ್ಕೂಟರ್ ಡಿಕ್ಕಿ; ಪಾದಚಾರಿ ಮಹಿಳೆ ಸಾವು Read More »

ಮಂಗಳೂರು: ಮಹೇಶ್ ಖಾಸಗಿ ಬಸ್ ಗಳ ಮಾಲೀಕ ಪ್ರಕಾಶ್ ಆತ್ಮಹತ್ಯೆಗೆ ಶರಣು

ಸಮಗ್ರ ನ್ಯೂಸ್: ಮಂಗಳೂರಿನ ಖಾಸಗಿ ಬಸ್ ಕ್ಷೇತ್ರದಲ್ಲಿ ಬಹಳಷ್ಟು ಹೆಸರುವಾಸಿಯಾದ ಮಹೇಶ್ ಬಸ್ ಮಾಲಕ ತಾನು ವಾಸಿಸುವ ಅಪಾರ್ಟ್ ಮೆಂಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಮಹೇಶ್ ಬಸ್ ಮಾಲೀಕ ಜಯರಾಮ ಶೇಖ ಎಂಬವರ ಪುತ್ರ ಪ್ರಕಾಶ್ ಶೆಟ್ಟಿ ಎಂದು ಗುರುತಿಸಲಾಗಿದೆ. ಖಾಸಗಿ ಬಸ್ ಕ್ಷೇತ್ರದಲ್ಲಿ ತುಳುನಾಡಿನಲ್ಲಿ ಹೆಸರುವಾಸಿಯಾದ ಮಹೇಶ್ ಬಸ್ ನೂರಾರು ಬಸ್ ಗಳನ್ನು ಹೊಂದಿದೆ. ಅವರು ಕದ್ರಿ ಕಂಬಳ ಸಮೀಪ ಇರುವ ಮೊರಿಸ್ಕಾ ಅಪಾರ್ಟ್ ಮೆಂಟ್ ನಿಂದ ನೇಣು ಬಿಗಿದು ಆತ್ಮಹತ್ಯೆಗೈದುಕೊಂಡಿದ್ದಾರೆ.

ಮಂಗಳೂರು: ಮಹೇಶ್ ಖಾಸಗಿ ಬಸ್ ಗಳ ಮಾಲೀಕ ಪ್ರಕಾಶ್ ಆತ್ಮಹತ್ಯೆಗೆ ಶರಣು Read More »