ಕರಾವಳಿ

ಮಂಗಳೂರಿನಲ್ಲಿ ಮತ್ತೆ ಮುಂದುವರೆದ ಅನೈತಿಕ ಪೊಲೀಸ್ ಗಿರಿ

ಸಮಗ್ರ ನ್ಯೂಸ್: ಮಂಗಳೂರಿನಲ್ಲಿ ಮತ್ತೆ ಮತ್ತೆ ಮರುಕಳಿಸುತ್ತಿದೆ ಅನೈತಿಕ ಪೊಲೀಸ್ ಗಿರಿ. ಸೋಮೇಶ್ವರ ದೇವಸ್ಥಾನ ಬಳಿ ಮತ್ತೆ ನೈತಿಕ ಪೊಲೀಸ್ ಗಿರಿ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಕೇರಳ ಮೂಲದ ಅನ್ಯಕೋಮಿನ ವಿದ್ಯಾರ್ಥಿಗಳ ತಡೆದ ಹಿಂದೂ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಇಬ್ಬರು ಹಿಂದೂ ಯುವತಿಯರು, ಓರ್ವ ಹಿಂದೂ ಯುವಕ ಮತ್ತು ಓರ್ವ ಮುಸ್ಲಿಂ ಯುವಕ ಮಂಗಳೂರು ಹೊರವಲಯದ ಉಳ್ಳಾಲ ತಾಲೂಕಿನ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಸುತ್ತಮುತ್ತ ಓಡಾಡುತ್ತಿದ್ದರು. ಇದನ್ನ ಗಮನಿಸಿದ ಹಿಂದೂ ಕಾರ್ಯಕರ್ತರು ತಡೆದು ವಿಚಾರಿಸಿದ್ದಾರೆ. ಹಿಂದೂ ಕಾರ್ಯಕರ್ತರು

ಮಂಗಳೂರಿನಲ್ಲಿ ಮತ್ತೆ ಮುಂದುವರೆದ ಅನೈತಿಕ ಪೊಲೀಸ್ ಗಿರಿ Read More »

ಸುಬ್ರಹ್ಮಣ್ಯ:ಅಸ್ವಸ್ಥ ಅಪರಿಚಿತ ವ್ಯಕ್ತಿ ಮೃತ್ಯು; ವಾರಿಸುದಾರರ ಪತ್ತೆಗೆ ಮನವಿ

ಸಮಗ್ರ ನ್ಯೂಸ್: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು, ಮೃತರ ವಾರಿಸುದಾರರು ಇದ್ದಲ್ಲಿ ಸಂಪರ್ಕಿಸುವಂತೆ ಕಡಬ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಡಿ.21ರಂದು ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣ ರೈಲ್ವೇ ಸ್ಟೇಷನ್ ಬಳಿ ಅಪರಿಚಿತ ವ್ಯಕ್ತಿ ಅಸ್ವಸ್ಥನಾಗಿ ಬಿದ್ದುಕೊಂಡಿದ್ದು, ಆ ವ್ಯಕ್ತಿಯನ್ನು 108 ಆಂಬ್ಯುಲೆನ್ಸ್ ವಾಹನದಲ್ಲಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡಿ.22ರಂದು ಬೆಳಗ್ಗೆ ಆ ವ್ಯಕ್ತಿ ಚಿಕಿತ್ಸೆ ಫಲಿಸದೇ ಮೃತರಾಗಿದ್ದು,ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು ಅಂದಾಜು 30-35 ವರ್ಷ ಪ್ರಾಯದ ಅಪರಿಚಿತ

ಸುಬ್ರಹ್ಮಣ್ಯ:ಅಸ್ವಸ್ಥ ಅಪರಿಚಿತ ವ್ಯಕ್ತಿ ಮೃತ್ಯು; ವಾರಿಸುದಾರರ ಪತ್ತೆಗೆ ಮನವಿ Read More »

ಮಂಗಳೂರು: ಏಕಾಏಕಿ ವಿಮಾನ ರದ್ದು| ತಡರಾತ್ರಿ ಪರ್ಯಾಯ ವ್ಯವಸ್ಥೆ

ಸಮಗ್ರ ನ್ಯೂಸ್: ಮಂಗಳೂರಿನಿಂದ ಬೆಂಗಳೂರಿಗೆ ಶನಿವಾರ(ಡಿ.23) ರಾತ್ರಿ 8.15ಕ್ಕೆ ತೆರಳಬೇಕಾಗಿದ್ದ ಏರ್ ಇಂಡಿಯಾ ವಿಮಾನ ರದ್ದಾದ ಕಾರಣ ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣದಲ್ಲಿ ತಡರಾತ್ರಿ ವರೆಗೆ ಕಾಯಬೇಕಾದ ಪರಿಸ್ಥಿತಿ ಎದುರಿಸಬೇಕಾಯಿತು. ಶನಿವಾರ ರಾತ್ರಿ 8.15ರ ವಿಮಾನ ಎಷ್ಟು ಕಾದರೂ ಬಾರದೆ ಇದ್ದುದರಿಂದ ಏರ್ ಇಂಡಿಯಾ ಕಚೇರಿಯನ್ನು ಪ್ರಯಾಣಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಿಕೊಡುವಂತೆ ಪ್ರಯಾಣಿಕರು ಒತ್ತಾಯಿಸಿದ್ದಾರೆ. ತಡರಾತ್ರಿ 2.30ಕ್ಕೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಂಗಳೂರು: ಏಕಾಏಕಿ ವಿಮಾನ ರದ್ದು| ತಡರಾತ್ರಿ ಪರ್ಯಾಯ ವ್ಯವಸ್ಥೆ Read More »

ಕುಕ್ಕೆಯಲ್ಲಿಂದು ನೀರು ಬಂಡಿ ಉತ್ಸವ| ಚಂಪಾಷಷ್ಟಿ ಮಹೋತ್ಸವಕ್ಕೆ ತೆರೆ

ಸಮಗ್ರ ನ್ಯೂಸ್: ಮಹತೋಭಾರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಡಿ.24ರಂದು ಕೊಪ್ಪರಿಗೆ ಇಳಿಯುವುದರೊಂದಿಗೆ ಚಂಪಾಷಷ್ಠಿ ಮಹೋತ್ಸವ ಸಮಾಪನಗೊಳ್ಳಲಿದೆ. ರಾತ್ರಿ ನೀರಿನಲ್ಲಿ ಬಂಡಿ ಉತ್ಸವ, ದೈವಗಳ ನಡಾವಳಿ ನಡೆಯಲಿದೆ. ಮದ್ಯಾಹ್ನ ಮಹಾಪೂಜೆ ಬಳಿಕ ದೇಗುಲದ ಹೊರಾಂಗಣದ ಸುತ್ತ ನೀರು ತುಂಬಲಾಗುತ್ತದೆ. ರಾತ್ರಿ ಮಹಾಪೂಜೆ ಬಳಿಕ ತುಂಬಿರುವ ನೀರಿನಲ್ಲಿ ಬಂಡಿ ತೇರನ್ನು ಎಳೆಯಲಾಗುತ್ತದೆ. ವರ್ಷದಲ್ಲಿ ಒಮ್ಮೆ ಈ ಉತ್ಸವ ನಡೆಯುತ್ತದೆ. ಬಳಿಕ ದೀಪಾರಾಧನೆ ಯುಕ್ತ ಪಾಲಕಿ ಉತ್ಸವ, ಕ್ಷೇತ್ರದ ದೈವಗಳಿಗೆ ಗೋಪುರ ನಡಾವಳಿ ನಡೆಯುತ್ತದೆ. ಡಿ.25ರಂದು ಮುಂಜಾನೆ ಪುರುಷರಾಯ ದೈವವು ಕುಮಾರಧಾರ

ಕುಕ್ಕೆಯಲ್ಲಿಂದು ನೀರು ಬಂಡಿ ಉತ್ಸವ| ಚಂಪಾಷಷ್ಟಿ ಮಹೋತ್ಸವಕ್ಕೆ ತೆರೆ Read More »

ಕಡಬ: ಕ್ರೇಟಾ ಮತ್ತು ಓಮ್ನಿ ನಡುವೆ ಅಪಘಾತ| ಓರ್ವ‌ ಸಾವು, ಹಲವರು ಗಂಭೀರ

ಸಮಗ್ರ ನ್ಯೂಸ್: ಕ್ರೆಟಾ ಕಾರು ಹಾಗೂ ಮಾರುತಿ ಓಮ್ನಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಸಾವನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡ ಘಟನೆ ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಮರ್ಧಾಳ ಸಮೀಪದ ಶನಿವಾರ(ಡಿ.23) ಮಧ್ಯಾಹ್ನ ನಡೆದಿದೆ. ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಓಮ್ನಿ ಹಾಗೂ ವಿರುದ್ಧ ದಿಕ್ಕಿನಿಂದ ತೆರಳುತ್ತಿದ್ದ ಕ್ರೆಟಾ ನಡುವೆ ಮರ್ಧಾಳ ಸಮೀಪದ ಅಳೇರಿ ಎಂಬಲ್ಲಿ ತಿರುವಿನಲ್ಲಿ ಅಪಘಾತ ಸಂಭವಿಸಿದ್ದು, ಮೃತರನ್ನು ಓಮ್ನಿ ಚಲಾಯಿಸುತ್ತಿದ್ದ ಸೋಮವಾರ ಪೇಟೆಯ ಚೌಡ್ಲು ಗ್ರಾಮದ ಕೆಂಚುಮನೆ ನಿವಾಸಿ ರವಿ

ಕಡಬ: ಕ್ರೇಟಾ ಮತ್ತು ಓಮ್ನಿ ನಡುವೆ ಅಪಘಾತ| ಓರ್ವ‌ ಸಾವು, ಹಲವರು ಗಂಭೀರ Read More »

ಶ್ರೀ ಪರಿವಾರ ಪಂಚಲಿಂಗೇಶ್ವರ ಪಂಜ ದೇಗುಲದ ಜಾತ್ರೋತ್ಸವ ಸಭೆ

ಸಮಗ್ರ ನ್ಯೂಸ್: ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ಜಾತ್ರೋತ್ಸವ ಸಭೆಯು ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಡಾ. ದೇವಿ ಪ್ರಸಾದ್ ಕಾನತ್ತೂರ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ದೇಗುಲದ ಆಡಳಿತಾಧಿಕಾರಿ ಸುಳ್ಯ ತಹಸೀಲ್ದಾರ್ ಮಂಜುನಾಥ್ ರವರು ಉಪಸ್ಥಿತರಿದ್ದು, ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ರಜಿತ್ ಭಟ್ ಪಂಜಬೀಡು, ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು ಸದಸ್ಯರು ಊರ ಭಕ್ತಾಭಿಮಾನಿಗಳು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ಕಲ್ಮಡ್ಕ ಗ್ರಾಮ

ಶ್ರೀ ಪರಿವಾರ ಪಂಚಲಿಂಗೇಶ್ವರ ಪಂಜ ದೇಗುಲದ ಜಾತ್ರೋತ್ಸವ ಸಭೆ Read More »

ನಾಗನಕಟ್ಟೆ ಪರಿವಾರ ದೈವಗಳಾದ ರಕ್ತೇಶ್ವರಿ ಗುಳಿಗ ಪಂಜುರ್ಲಿ ಕಟ್ಟೆಗಳ ಶಿಲನ್ಯಾಸ

ಸಮಗ್ರ ನ್ಯೂಸ್:ಕುತ್ಕುಂಜ ಶ್ರೀ ಶಂಕರನಾರಾಯಣ ದೇವಾಲಯದ ಜೀರ್ಣೋದ್ಧಾರ ಆಗುತ್ತಿದ್ದು ಇಲ್ಲಿನ ನಾಗನಕಟ್ಟೆ ಪರಿವಾರ ದೈವಗಳಾದ ರಕ್ತೇಶ್ವರಿ ಗುಳಿಗ ಪಂಜುರ್ಲಿ ಕಟ್ಟೆಗಳ ಶಿಲನ್ಯಾಸ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷೆ ಪ್ರಭಾವತಿ ಹೆಗಡೆ, ವಾಸ್ತುಶಿಲ್ಪಿ ಮಹೇಶ್ ಮನಿಯಂಗಳ, ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇಗುಲದ ಉತ್ಸವ ಸಮಿತಿ ಅಧ್ಯಕ್ಷ ಡಾ| ದೇವಿ ಪ್ರಸಾದ್ ಕಾಣತ್ತೂರ್, ದೇಗುಲದ ಜೀರ್ಣೋದ್ಧಾರ ಅಧ್ಯಕ್ಷ ಕಾರ್ಯಪ್ಪ ಗೌಡ ಚಿದ್ಗಲ್ ಆಡಳಿತ ಮಂಡಳಿ ಕಾರ್ಯದರ್ಶಿ ಶಿವರಾಮಯ್ಯ ಕರ್ಮಜೆ, ಸದಸ್ಯರಾದ ವೆಂಕಟೇಶ್ವರ ಜೋಯ್ಸ್ಯ,

ನಾಗನಕಟ್ಟೆ ಪರಿವಾರ ದೈವಗಳಾದ ರಕ್ತೇಶ್ವರಿ ಗುಳಿಗ ಪಂಜುರ್ಲಿ ಕಟ್ಟೆಗಳ ಶಿಲನ್ಯಾಸ Read More »

ಮಂಗಳೂರು: ಅನ್ಯಕೋಮಿನ ಜೋಡಿ ಮೇಲೆ‌ ಹಿಂದೂ ಕಾರ್ಯಕರ್ತರಿಂದ ದಾಳಿ

ಸಮಗ್ರ ನ್ಯೂಸ್: ಕರಾವಳಿಯಲ್ಲಿ ಮತ್ತೆ ನೈತಿಕ ಪೊಲೀಸ್​ಗಿರಿ ನಡೆದಿದೆ. ಅನ್ಯಕೋಮಿನ ಜೋಡಿ ಮೇಲೆ ಹಿಂದೂ ಕಾರ್ಯಕರ್ತರು ದಾಳಿ ಮಾಡಿರುವ ಘಟನೆ ಮಂಗಳೂರಿನ ಹಂಪನಕಟ್ಟೆಯ ಮಿಲಾಗ್ರಿಸ್ ಬಳಿ ನಡೆದಿದೆ. ಅನ್ಯಕೋಮಿನ ಯುವಕನ ಜತೆ ಮಿಲಾಗ್ರಿಸ್ ಬಳಿ ಯುವತಿ ನಿಂತಿದ್ದಾಳೆ. ಈ ವೇಳೆ ಹಿಂದೂ ಕಾರ್ಯಕರ್ತರು ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದು, ಹಲ್ಲೆಗೆ ಯತ್ನಿಸಿದ್ದಾರೆ. ಸ್ಥಳಕ್ಕೆ ಬಂದರು ಠಾಣೆ ಪೊಲೀಸರು ಆಗಮಿಸುತ್ತಿದ್ದಂತೆ ಜೋಡಿ ಮೇಲೆ ಹಲ್ಲೆಗೆ ಯತ್ನಿಸಿದ ಕಾರ್ಯಕರ್ತರು ಸ್ಥಳದಿಂದ ಪರಾರಿ ಆಗಿದ್ದಾರೆ. ಬಂದರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು: ಅನ್ಯಕೋಮಿನ ಜೋಡಿ ಮೇಲೆ‌ ಹಿಂದೂ ಕಾರ್ಯಕರ್ತರಿಂದ ದಾಳಿ Read More »

ಕಡಬ: ಮುನಿಸು ಮರೆತು ಒಂದಾದ ಕಾಂಗ್ರೆಸ್ ನಾಯಕರು| ಕಾರ್ಯಕರ್ತರಲ್ಲಿ ಹುಟ್ಟಿದೆ ಹೊಸ ಹುರುಪು

ಸಮಗ್ರ ನ್ಯೂಸ್: ಕಡಬ ಬ್ಲಾಕ್ ಕಾಂಗ್ರೆಸ್ ನ ಸಮಿತಿ ಸಭೆಯು ಡಿ.13 ರಂದು ನಡೆದಿದ್ದು, ಇದರಲ್ಲಿ ಹಲವು ನಾಯಕರುತಮ್ಮೊಳಗಿನ ಮುನಿಸು ಮರೆತು ಒಂದಾಗಿದ್ದಾರೆ. ಕಳೆದ ವಿಧಾನಸಭೆ ಚುಣಾವಣೆಯ ನಂತರ ಬಣಗಳಾಗಿ ಮುಸುಕಿನ ಗುದ್ದಾಟಗಳು ಬಹಿರಂಗವಾಗಿತ್ತು. ನಂತರ ಕೆಪಿಸಿಸಿ ಯಿಂದ ಹೊಸ ಉಸ್ತೂವಾರಿಗಳಾದ ಮಮತಾ ಗಟ್ಟಿ ಯವರನ್ನು ಕಳಿಸಿ ಮುನಿಸು ಶಮನಗೊಳಿಸಲು ಸೂಚಿಸಿದ್ದರು. ಮಮತಾ ಗಟ್ಟಿಯವರ ಸತತ ಪ್ರಯತ್ನದ ನಂತರ ಕಾಂಗ್ರೆಸ್ಸಿನ ಬಣಗಳು ಒಂದಾಗಿವೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆದ ಕಡಬ

ಕಡಬ: ಮುನಿಸು ಮರೆತು ಒಂದಾದ ಕಾಂಗ್ರೆಸ್ ನಾಯಕರು| ಕಾರ್ಯಕರ್ತರಲ್ಲಿ ಹುಟ್ಟಿದೆ ಹೊಸ ಹುರುಪು Read More »

ಸುಳ್ಯ: ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾರ್ಷಿಕೋತ್ಸವ ಸಂಭ್ರಮ

ಸಮಗ್ರ ನ್ಯೂಸ್: ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾರ್ಷಿಕೋತ್ಸವವು ಡಿ.20 ರಂದು ನಡೆಯಿತು. ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಪುತ್ತೂರು ಫಿಲೋಮಿನ ಕಾಲೇಜು ಕ್ಯಾಂಪಸ್ ನಿರ್ದೇಶಕ ರೆ.ಪಾ ಸ್ಟಾನಿಪಿಂಟೋ ಉದ್ಘಾಟಿಸಿ ಮಾತನಾಡಿದರು. ಸುಳ್ಯ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಮಕ್ಕಳ ಅರೋಗ್ಯ ಮತ್ತು ಮಕ್ಕಳ ಸುರಕ್ಷತೆ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಸೈಂಟ್ ಜೋಸೆಫ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಪಾ ವಿಕ್ಟ‌ರ್ ಡಿಸೋಜ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸುಳ್ಯ ನಗರ ಪಂಚಾಯತ್ ಸದಸ್ಯ ಡೇವಿಡ್

ಸುಳ್ಯ: ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾರ್ಷಿಕೋತ್ಸವ ಸಂಭ್ರಮ Read More »